ರೋಲ್ಸ್, ಪೋರ್ಷೆ, ಬೆಂಟ್ಲಿ, ಬೆಂಝ್ ಕಾರುಗಳು ಬೆಂಕಿಗಾಹುತಿ
ವಾಹನ ನಿಲುಗಡೆ ಪ್ರದೇಶವೊಂದರಲ್ಲಿ ಅತಿ ದುಬಾರಿ ಕಾರುಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಆದರೆ ಆಕಸ್ಮಾತ್ ಬೆಂಕಿ ಹೊತ್ತಿಕೊಂಡಿದ್ದರ ಪರಿಣಾಮ ಐಷಾರಾಮಿ ಕಾರುಗಳು ಬೆಂಕಿಗಾಹುತಿಯಾಗಿರುವ ಘಟನೆ ವರದಿಯಾಗಿದೆ.
ರಷ್ಯಾದ ಮಾಸ್ಕೋ ವಾಹನ ನಿಲುಗಡೆ ಪ್ರದೇಶದಲ್ಲಿ ಈ ಘಟನೆ ವರದಿಯಾಗಿದ್ದು, ರೋಲ್ಸ್ ರಾಯ್ಸ್, ಬೆಂಟ್ಲಿ, ಪೋರ್ಷೆ ಹಾಗೂ ಮರ್ಸಿಡಿಸ್ ಬೆಂಝ್‌ಗಳಂತಹ ಅತಿ ದುಬಾರಿ ಕಾರುಗಳು ಭಸ್ಮವಾಗಿದೆ.
ಈ ಅನಾಹುತದಿಂದಾಗಿ ಒಟ್ಟು 20,35,77,000 ರುಪಾಯಿಗಳ ನಷ್ಟ ಅಂದಾಜಿಸಲಾಗಿದೆ. ಈ ಎಲ್ಲ ವಾಹನಗಳು ಸೈನಸ್ ನಿರ್ಮಾಣ ಸಂಸ್ಥೆಗೆ ಸೇರಿದ ಕಾರುಗಳಾಗಿವೆ.
ಅಷ್ಟಕ್ಕೂ ಬೆಂಕಿ ಹೊತ್ತಿಕೊಂಡಿರುವ ನಿಖರ ಕಾರಣಗಳು ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸ್ ಇಲಾಖೆ ಪ್ರಕರಣ ಕೈಗೆತ್ತಿಕೊಂಡಿದ್ದು, ತನಿಖೆ ಆರಂಭಿಸಿದೆ.
ಸದ್ಯ ಐಷಾರಾಮಿ ಕಾರುಗಳು ಭಸ್ಮವಾಗಿರುವ ರೋಚಕ ವೀಡಿಯೋವನ್ನು ಇಲ್ಲಿ ನೋಡಿರಿ...


Click it and Unblock the Notifications








