ಪ್ರಯಾಣಿಕನ ಮೂಲಕ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ಪಡೆದ ಕ್ಯಾಬ್ ಡ್ರೈವರ್

ಉಬರ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಹೆಲಿಕಾಪ್ಟರ್'ನಲ್ಲಿ ಪ್ರಯಾಣಿಸುವ ಅವಕಾಶ ಸಿಕ್ಕಿದೆ. ಉಬರ್ ಕ್ಯಾಬ್'ನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರ ಮೂಲಕ ಆತನಿಗೆ ಈ ಅವಕಾಶ ದೊರೆತಿದೆ. ಡ್ಯಾರೆನ್ ಎಂಬಾತನೇ ಈ ಅವಕಾಶ ಪಡೆದ ಅದೃಷ್ಟವಂತ.

ಪ್ರಯಾಣಿಕನ ಮೂಲಕ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ಪಡೆದ ಕ್ಯಾಬ್ ಡ್ರೈವರ್

ಅವರು ಉಬರ್ ಟ್ಯಾಕ್ಸಿಯಲ್ಲಿ ಅರೆಕಾಲಿಕ ಉದ್ಯೋಗಿಯಾಗಿದ್ದಾರೆ. ಅವರು ಯೂಟ್ಯೂಬ್ ಚಾನೆಲ್ ಒಂದನ್ನು ನಡೆಸುತ್ತಿದ್ದಾರೆ. ಆ ಚಾನೆಲ್‌ನಲ್ಲಿ ಅವರು ತಮ್ಮೊಂದಿಗೆ ಸವಾರಿ ಮಾಡುವ ಜನರ ವೀಡಿಯೊವನ್ನು ಅಪ್ ಲೋಡ್ ಮಾಡುತ್ತಾರೆ.

ಪ್ರಯಾಣಿಕನ ಮೂಲಕ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ಪಡೆದ ಕ್ಯಾಬ್ ಡ್ರೈವರ್

ರೈಡ್ ಬುಕ್ಕಿಂಗ್ ಮಾಡಿ, ಪ್ರಯಾಣ ಮಾಡುವಾಗ ಮೋಜು ಮಸ್ತಿ ಮಾಡುವ ಜನರ ಬಗ್ಗೆ ಮಾತ್ರ ಅವರು ಯೂಟ್ಯೂಬ್ ಚಾನೆಲ್‌ನಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುತ್ತಾರೆ. ಇತ್ತೀಚಿಗೆ ಅವರ ಕ್ಯಾಬ್'ನಲ್ಲಿ ಈಡ್ ಎಂಬುವವರು ಪ್ರಯಾಣಿಸಿದ್ದರು.

ಪ್ರಯಾಣಿಕನ ಮೂಲಕ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ಪಡೆದ ಕ್ಯಾಬ್ ಡ್ರೈವರ್

ಆತನ ಮೂಲಕವೇ ಡ್ಯಾರೆನ್‌ರವರಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುವ ಅವಕಾಶ ದೊರೆತಿದೆ. ಒಂದು ದಿನ ಬೆಳಿಗ್ಗೆ 6 ಗಂಟೆಗೆ ಡ್ಯಾರೆನ್ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರನ್ನು ಪಿಕ್ ಅಪ್ ಮಾಡಲು ತೆರಳಿದ್ದರು.

ಪ್ರಯಾಣಿಕನ ಮೂಲಕ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ಪಡೆದ ಕ್ಯಾಬ್ ಡ್ರೈವರ್

ಆಗ ಈಡ್'ನ ಪರಿಚಯವಾಗಿದೆ. ಈ ಪ್ರಯಾಣದಲ್ಲಿ ಇವರಿಬ್ಬರು ಹಲವು ಸಂಗತಿಗಳ ಬಗ್ಗೆ ಮಾತನಾಡಿದ್ದಾರೆ. ಈ ವೇಳೆ ಈಡ್ ತಾವು ಹೆಲಿಕಾಪ್ಟರ್ ಪೈಲಟ್ ಎಂದು ಹೇಳಿದ್ದಾರೆ. ತಾವು ಚಿಕ್ಕ ವಯಸ್ಸಿನಲ್ಲಿ ಬ್ಯಾಟ್‌ಮ್ಯಾನ್ ಚಿತ್ರದ ಅಪಾರ ಅಭಿಮಾನಿಯಾಗಿದ್ದ ಕಾರಣಕ್ಕೆ ಪೈಲಟ್‌ ಕೆಲಸಕ್ಕೆ ಸೇರಿಕೊಂಡೆ ಎಂದು ಹೇಳಿದ್ದಾರೆ.

ಪ್ರಯಾಣಿಕನ ಮೂಲಕ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ಪಡೆದ ಕ್ಯಾಬ್ ಡ್ರೈವರ್

ಹೀಗೆ ಮಾತನಾಡುವ ಸಂದರ್ಭದಲ್ಲಿ ಈಡ್ ಡ್ಯಾರೆನ್‌ನನ್ನು ಒಂದು ದಿನ ಹೆಲಿಕಾಪ್ಟರ್'ನಲ್ಲಿ ಪ್ರಯಾಣಿಸುವಂತೆ ಆಹ್ವಾನ ನೀಡಿದ್ದಾರೆ. ಡ್ಯಾರೆನ್ ಆರಂಭದಲ್ಲಿ ಈ ಆಹ್ವಾನವನ್ನು ನಿರಾಕರಿಸಿದ್ದಾರೆ.

ಪ್ರಯಾಣಿಕನ ಮೂಲಕ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ಪಡೆದ ಕ್ಯಾಬ್ ಡ್ರೈವರ್

ಈಡ್'ನ ಒತ್ತಾಯಕ್ಕೆ ಮಣಿದು ಆಹ್ವಾನವನ್ನು ಒಪ್ಪಿಕೊಂಡಿದ್ದಾರೆ. ಡ್ಯಾರೆನ್'ಗೆ ಕರೆ ಮಾಡಿದ್ದ ಈಡ್ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಲು ಎಲ್ಲಾ ಸೌಲಭ್ಯಗಳನ್ನು ನೀಡಲು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಈಡ್ ಆಹ್ವಾನದಂತೆ ಡ್ಯಾರೆನ್, ಈಡ್ ಜೊತೆಗೆ ಹೆಲಿಕಾಪ್ಟರ್'ನಲ್ಲಿ ಪ್ರಯಾಣ ಬೆಳೆಸಿದ್ದಾರೆ. ಉಬರ್ ಚಾಲಕ ಡ್ಯಾರೆನ್ ತಾನು ಹೆಲಿಕಾಪ್ಟರ್‌ನಲ್ಲಿ ಹಾರಾಟ ನಡೆಸುತ್ತಿರುವ ವೀಡಿಯೊವನ್ನು ತನ್ನ ಯೂಟ್ಯೂಬ್ ಚಾನೆಲ್'ನಲ್ಲಿ ಪೋಸ್ಟ್ ಮಾಡಿದ್ದಾರೆ.

ಪ್ರಯಾಣಿಕನ ಮೂಲಕ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ಪಡೆದ ಕ್ಯಾಬ್ ಡ್ರೈವರ್

ನನ್ನ ಉಬರ್ ಪ್ರಯಾಣಿಕರೊಂದಿಗೆ ಹೆಲಿಕಾಪ್ಟರ್'ನಲ್ಲಿ ಹಾರಾಟ ನಡೆಸುವ ಅವಕಾಶ ನನಗೆ ಸಿಕ್ಕಿತು ಎಂದು ಡ್ಯಾರೆನ್ ತನ್ನ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಪೋಸ್ಟ್'ಗೆ ಸಾವಿರಾರು ಮಂದಿ ಕಾಮೆಂಟ್ ಮಾಡಿ ಡ್ಯಾರೆನ್'ರನ್ನು ಅಭಿನಂದಿಸಿದ್ದಾರೆ.

ಚಿತ್ರಕೃಪೆ: ಡ್ಯಾರೆನ್ ಲೆವಿ ಆಫೀಷಿಯಲ್

Most Read Articles

Kannada
English summary
Passenger invites Uber driver for a helicopter ride. Read in Kannada.
Story first published: Saturday, July 17, 2021, 19:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X