Viral video: ವಿಮಾನ ತಡವಾಯಿತೆಂದು ಹಾರಾಟದಲ್ಲಿದ್ದಾಗಲೇ ಬಾಗಿಲು ತೆರೆದ ಪ್ರಯಾಣಿಕ

ವಿಮಾನ ಹಾರಾಟದಲ್ಲಿದ್ದಾಗಲೇ ಬಾಗಿಲು ತೆರೆದ ವಿಡಿಯೋವೊಂದು ಕೇವಲ ಒಂದೇ ದಿನದಲ್ಲಿ ವಿಶ್ವದಾದ್ಯಂತ ಭಾರೀ ವೈರಲ್ ಆಗಿದೆ. ಈ ವಿಡಿಯೋವನ್ನು ಅದೇ ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ಸೆರೆಹಿಡಿದಿದ್ದಾರೆ. ಮೂಲಗಳ ಪ್ರಕಾರ ಘಟನೆಯು ಕಳೆದ ಶುಕ್ರವಾರ (ನಿನ್ನೆ) ದಕ್ಷಿಣ ಕೊರಿಯಾದ ಏಷಿಯಾನಾ ಏರ್‌ಲೈನ್ಸ್ ವಿಮಾನದಲ್ಲಿ ನಡೆದಿದೆ.

ವಿಮಾನದಲ್ಲಿ ಪ್ರಯಾಣಿಕನೊಬ್ಬ ಬಾಗಿಲು ತೆರೆಯುವ ಮೂಲಕ ಗೊಂದಲವನ್ನುಂಟುಮಾಡಿದ್ದ, ಈ ವೇಳೆ 12 ಪ್ರಯಾಣಿಕರು ಉಸಿರಾಟದ ತೊಂದರೆಯಿಂದಾಗಿ ಚಿಕಿತ್ಸೆ ಪಡೆದಿರುವುದಾಗಿ ವರದಿಯಾಗಿದೆ. ವಿಮಾನವು ದಕ್ಷಿಣ ದ್ವೀಪವಾದ ಜೆಜುನಿಂದ ಸುಮಾರು ಒಂದು ಗಂಟೆ ದೂರದಲ್ಲಿರುವ ಡೇಗು ನಗರಕ್ಕೆ ಪ್ರಯಾಣಿಸುತ್ತಿದ್ದಾಗ ವ್ಯಕ್ತಿಯು ಬಾಗಿಲು ತೆರೆದಿರುವುದಾಗಿ ತಿಳಿದುಬಂದಿದೆ. ಘಟನೆ ಬಳಿಕ ವಿಮಾನವು ಡೇಗುನಲ್ಲಿ ಸುರಕ್ಷಿತವಾಗಿ ಇಳಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

flight

ಈ ವ್ಯಕ್ತಿಯು ಬಾಗಿಲನ್ನು ತೆರೆಯಲು ಮುಂದಾದಾಗ ಫ್ಲೈಟ್ ಅಟೆಂಡೆಂಟ್‌ಗಳು ತಡೆಯಲು ಪ್ರಯತ್ನಿಸಿದ್ದರು. ಆದರೆ ಆತನನ್ನು ತಡೆಯಲಾಗದೇ ಪುರುಷ ಪ್ರಯಾಣಿಕರಿಂದ ಸಹಾಯಕ್ಕಾಗಿ ಕೂಗಿದ್ದು, ಸುತ್ತಮುತ್ತಲಿನ ಪ್ರಯಾಣಿಕರು ಆತನನ್ನು ತಡೆದಿದ್ದರು. ಆದರೂ ಆತ ಬಾಗಿಲು ತೆರೆದ ಬಳಿಕ ವಿಮಾನದಲ್ಲಿ ಆಘಾತಕಾರಿ ವಾತಾವರಣ ಸೃಷ್ಟಿಯಾಗಿತ್ತು ಎಂದು ಯೋನ್‌ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ.

ಒಮ್ಮೆಲೆ ವಿಮಾನದ ಬಾಗಿಲು ತೆರೆದುಕೊಂಡ ತಕ್ಷಣ "ವಿಮಾನವು ಸ್ಫೋಟಗೊಳ್ಳಲಿದೆ ಎಂದು ನಾನು ಭಾವಿಸಿದೆ. ತೆರೆದ ಬಾಗಿಲಿನ ಪಕ್ಕದಲ್ಲಿದ್ದ ಪ್ರಯಾಣಿಕರು ಮೂರ್ಛೆ ಹೋಗುತ್ತಿರುವಂತೆ ಕಂಡಿತ್ತು," ಎಂದು ಪ್ರಯಾಣಿಕರೊಬ್ಬರು ಯೋನ್‌ಹಾಪ್ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ. ವಿಮಾನದಲ್ಲಿ ಉಸಿರಾಟ ತೊಂದರೆ ಅನುಭವಿಸಿದ ಹನ್ನೆರಡು ಪ್ರಯಾಣಿಕರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಯಾವುದೇ ದೊಡ್ಡ ಗಾಯಗಳಾಗಿಲ್ಲ ಎಂದು ಅಲ್ಲಿನ ಸಾರಿಗೆ ಸಚಿವಾಲಯ ತಿಳಿಸಿದೆ.

flight

ಬಾಗಿಲು ತೆರೆದಿರುವ 33 ವರ್ಷದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಯೋನ್‌ಹಾಪ್ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ವ್ಯಕ್ತಿ ಬಾಗಿಲು ತೆರೆದಿದ್ದನ್ನು ಒಪ್ಪಿಕೊಂಡಿದ್ದಾನೆ. ಸದ್ಯ ವಿಮಾನಯಾನ ಸುರಕ್ಷತಾ ಕಾನೂನುಗಳನ್ನು ಉಲ್ಲಂಘಿಸಿದ್ದಕ್ಕಾಗಿ ಆತ 10 ವರ್ಷಗಳ ಜೈಲು ಶಿಕ್ಷೆ ಎದುರಿಸಬೇಕಾಗುತ್ತದೆ ಎಂದು ಹೇಳಲಾಗುತ್ತಿದೆ. ಕೊರಿಯಾ ವಾಯುಯಾನ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಘಟನೆ ನಡೆದಿರುವುದಾಗಿ ಅಲ್ಲಿನ ಸಾರಿಗೆ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮಾನ ತಡವಾಗಿದ್ದೇ ಕಾರಣ: ಇತ್ತೀಚೆಗೆ ಕೆಲಸ ಕಳೆದುಕೊಂಡು ಒತ್ತಡದಲ್ಲಿದ್ದ ವ್ಯಕ್ತಿ, ವಿಮಾನವು ಸೇರಬೇಕಾದ ಸಮಯಕ್ಕಿಂತ ಹೆಚ್ಚು ಸಮಯ ತೆಗೆದುಕೊಂಡಿದೆ. ಅಲ್ಲದೇ ಕ್ಯಾಬಿನ್ ಒಳಗೆ ಉಸಿರುಗಟ್ಟುವಂತಾಗುತ್ತಿತ್ತು. ಹಾಗಾಗಿ ವಿಮಾನದಿಂದ ಬೇಗ ಹೊರಬರಲು ಯತ್ನಿಸಿ ಬಾಗಿಲನ್ನು ತೆರೆಯಲು ಮುಂದಾಗಿದ್ದೆ ಎಂದು ಡೇಗು ಪೊಲೀಸರ ಬಳಿ ವಿಚಾರಣೆಯಲ್ಲಿ ಆತ ತಿಳಿಸಿದ್ದಾನೆ ಎಂದು ತಿಳಿದುಬಂದಿದೆ.

ವಿಮಾನವು ಹಾರಾಟದಲ್ಲಿರುವಾಗ ಗಾಳಿಯ ಒತ್ತಡದಿಂದಾಗಿ ಬಾಗಿಲುಗಳನ್ನು ತೆರೆಯುವುದು ತುಂಬಾ ಕಷ್ಟ. ಮುಚ್ಚಿದ ಬಾಗಿಲುಗಳು ಮತ್ತು ತುರ್ತು ನಿರ್ಗಮನಗಳು ಕ್ಯಾಬಿನ್ ಅನ್ನು ಎತ್ತರದಲ್ಲಿದ್ದಾಗ ಒತ್ತಡದಲ್ಲಿರಿಸುತ್ತವೆ. ಕ್ಯಾಬಿನ್ ಒತ್ತಡವಿಲ್ಲದೆ, ಪ್ರಯಾಣಿಕರು ಸಾಕಷ್ಟು ಆಮ್ಲಜನಕವನ್ನು ಪಡೆಯಲು ಸಾಧ್ಯವಾಗುವುದಿಲ್ಲ, ಪ್ರಜ್ಞೆಯನ್ನು ಕಳೆದುಕೊಳ್ಳಬಹುದು. ಕಡಿಮೆ ಎತ್ತರದಲ್ಲಿ, ವಿಮಾನದ ಒಳ ಮತ್ತು ಹೊರಭಾಗದ ನಡುವಿನ ಒತ್ತಡವು ಕಡಿಮೆಯಾಗುತ್ತದೆ. ಇದೇ ಸಂಧರ್ಭದಲ್ಲಿ ಆತ ಕೂಡ ಬಾಗಿಲು ತೆರೆದಿರಬಹುದು ಎನ್ನಲಾಗಿದೆ.

ಡ್ರೈವ್‌ ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.

Article Published On: Saturday, May 27, 2023, 17:31 [IST]
English summary
Passenger opens flight door while flying
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+