ಬಸ್‌ಗಳಿಗಿಂತಲೂ ಕಡೆಯಾಗ್ತಿವೆ ವಿಮಾನಗಳು! ಪ್ರಯಾಣಿಕರ ವರ್ತನೆಗೆ ವಿಮಾನಯಾನ ಸಂಸ್ಥೆಗಳು ಸುಸ್ತು!

ಇತ್ತೀಚೆಗೆ ವಿಮಾನಗಳಲ್ಲಿ ನಡೆಯುತ್ತಿರುವ ಘಟನೆಗಳು ಸಖತ್ ಆಶ್ಚರ್ಯಕ್ಕೆ ಗುರಿಪಡಿಸುತ್ತಿವೆ. ಕೆಲ ಪ್ರಯಾಣಿಕರ ತೀರಾ ಕೆಳಮಟ್ಟದ ವರ್ತನೆಯು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುವ ಮೂಲಕ ವಿಮಾನಯಾನ ಸಂಸ್ಥೆಗಳನ್ನು ಟ್ರೋಲ್ ಮಾಡಲಾಗುತ್ತಿದೆ. ಇದೀಗ ಪ್ರಯಾಣಿಕನೊಬ್ಬ ಹಾರುವ ವಿಮಾನದಿಂದ ಬಾಗಿಲು ತೆರೆಯಲು ಪ್ರಯತ್ನಿಸಿ ಇತರ ಪ್ರಯಾಣಿಕರಿಂದ ಥಳಿಸಿಕೊಂಡಿದ್ದಾನೆ.

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ಈ ಕುರಿತ ವೀಡಿಯೊದಲ್ಲಿ ವ್ಯಕ್ತಿಯೊಬ್ಬ ತನ್ನ ಸೀಟ್‌ನಿಂದ ಹೊರಬಂದು ತನ್ನ ಸನ್‌ಗ್ಲಾಸ್ ಅನ್ನು ತೆಗೆದು ಬಿಸಾಡಿ ಇತರರಿಗೆ ಹುಚ್ಚುಚ್ಚಾಗಿ ಸನ್ನೆ ಮಾಡಿದ್ದಾನೆ. ಬಳಿಕ ಬಾಗಿಲು ತೆರೆಯಿರಿ ಎಂದು ಪದೇ ಪದೇ ಕೂಗುತ್ತಾ ಬಾಗಿಲನ್ನು ತೆರೆಯಲು ಬಾಗಿಲಿನತ್ತ ಓಡುವುದನ್ನು ವಿಡಿಯೋದಲ್ಲಿ ನೋಡಬಹುದು. ಬಳಿಕ ಇಬ್ಬರು ಪ್ರಯಾಣಿಕರು ಆತನನ್ನು ತಡೆದು ನೆಲಕ್ಕುರುಳಿಸಿದ್ದಾರೆ.

Ryanair Flight To London

ಈ ವಿಡಿಯೋವನ್ನು ಪ್ರಯಾಣಿಕರೊಬ್ಬರು ರೆಕಾರ್ಡ್ ಮಾಡಿ ಟಿಕ್‌ಟಾಕ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಸೋಷಿಯಲ್ ಮೀಡಿಯಾ, ಜಗಳ, ಹಿಂಸಾಚಾರ, ಹತ್ಯೆ ಮತ್ತು ದ್ವೇಷದ ದೃಶ್ಯಗಳ ತುಂಬಿಹೋಗಿದೆ. ಇವೆಲ್ಲವೂ ನಿಧಾನವಾದ ಆಧ್ಯಾತ್ಮಿಕ ಮತ್ತು ಮಾನಸಿಕ ವಿನಾಶಕ್ಕೆ ಕಾರಣವಾಗುತ್ತವೆ ಎಂದು ನಟ್ಟಿಗರು ವಿಡಿಯೋ ಕುರಿತು ಕಮೆಂಟ್ ಮಾಡುತ್ತಿದ್ದಾರೆ.

ಮಗಳನ್ನು ಮುಟ್ಟಿದ್ದಕ್ಕೆ ಜಗಳ: ಇತ್ತಿಚೆಗೆ ವಿಸ್ತಾರಾ ವಿಮಾನದಲ್ಲಿ ಮಗಳನ್ನು ಮುಟ್ಟಿದ್ದಾನೆ ಎಂದು ಆರೋಪಿಸಿ ತಂದೆಯೊಬ್ಬರು ಆಗ್ರಹಿಸಿ ಆತನನ್ನು ಹೊಡೆಯಲೆಂದು ಮುನ್ನುಗ್ಗಲು ಯತ್ನಿಸಿದದ್ದರು. ವಿಮಾನದ ಬಲ ಭಾಗದಲ್ಲಿ ತಂದೆ ಮತ್ತ ತಾಯಿ ಕುಳಿತಿದ್ದರೇ ಮಗಳು ಎಡ ಭಾಗದ ಸೀಟಿನಲ್ಲಿ ಕುಳಿತಿದ್ದರು. ಆಕೆಯ ಪಕ್ಕದಲ್ಲೇ ಮತ್ತೊಬ್ಬ ಯುವಕ ಕುಳಿತ್ತಿದ್ದ.

ಅಲ್ಲಿ ನಿಖರವಾಗಿ ಏನಾಗಿದೆ ಎಂಬುದರ ಬಗ್ಗೆ ಮಾಹಿತಿಯಿಲ್ಲ. ಆದ್ರೆ ಆತ ಯುವತಿಯನ್ನು ಮುಟ್ಟಿದ್ದಾನೆ ಎಂದು ಆರೋಪಿಸಿ ಏರಿರುವುದು ಬಸ್ಸಿನಲ್ಲಿ ಎಂಬಂತೆ ಜಗಳ ಮಾಡಿದ್ದರು. ಕೆಲವೊಮ್ಮೆ ಅಚಾನಕ್ಕಾಗಿ ಕೈ ತಗುಲಿರಬಹುದು, ಸತ್ಯಾಂಶ ತಿಳಿದು ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ರೆ ಕ್ರಮ ತೆಗೆದುಕೊಳ್ಳುತ್ತಾರೆ. ಆದ್ರೆ ಅದನ್ನು ಬಿಟ್ಟು ವಿಮಾನದಲ್ಲಿ ಈ ರೀತಿ ಜಗಳ ಮಾಡಿದ್ದು ತುಂಬಾ ಚರ್ಚೆಯಾಗಿತ್ತು.

ಮಗುವಿನ ಮೇಲೆ ಕೋಪ: ಇತ್ತೀಚೆಗೆ ಸೌತ್‌ವೆಸ್ಟ್ ಏರ್‌ಲೈನ್ಸ್ ವಿಮಾನದಲ್ಲಿ ಮಗುವಿನಿಂದ ವ್ಯಕ್ತಿಯೊಬ್ಬ ತನ್ನ ಶಾಂತತೆಯನ್ನು ಕಳೆದುಕೊಂಡು ಆತ ವರ್ತಸಿದ ರೀತಿಯನ್ನು ಕಂಡು ಹಲವರು ಗಾಬರಿಗೊಂಡಿದ್ದರು. ಮಗುವೊಂದು ವಿಮಾನದಲ್ಲಿ ಅಳುತ್ತಿರುವದನ್ನು ಕಂಡು ಕೋಪಗೊಂಡ ವ್ಯಕ್ತಿಯಿಂದ ವಿಮಾನ ಸಿಬ್ಬಂದಿಯೊಂದಿಗೆ ಘರ್ಷಣೆಗೆ ಕಾರಣವಾಗಿತ್ತು.

ಈ ಘಟನೆಗಳು ಪ್ರಯಾಣಿಕರ ನಡವಳಿಕೆ ಮತ್ತು ವಿಮಾನಗಳಲ್ಲಿ ಸುರಕ್ಷತಾ ಕ್ರಮಗಳ ಅಗತ್ಯತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿರುವುದಂತು ನಿಜ. ಒಂದು ಕಾಲದಲ್ಲಿ ಶ್ರೀಮಂತರಿಗೆ ಮಾತ್ರ ಎಂಬಂತಿದ್ದ ವಿಮಾನಗಳು ಎಲ್ಲರೂ ಪ್ರಯಾಣಿಸುವ ಬೆಲೆಯಲ್ಲಿ ಲಭ್ಯವಿವೆ. ಆದ್ದರಿಂದಲೇ ಬಸ್‌ ಹಾಗೂ ವಿಮಾನಕ್ಕೆ ವ್ಯತ್ಯಾಸ ತಿಳಿಯದೇ ಪ್ರಯಾಣಿಕರು ಹೀಗೆ ವರ್ತಿಸುತ್ತಾರೆ ಎಂದು ಹಲವರು ಕಮೆಂಟ್ ಮಾಡುತ್ತಿದ್ದಾರೆ. ಈ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಮೆಂಟ್‌ನಲ್ಲಿ ತಿಳಿಸಿ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ.

Article Published On: Sunday, July 9, 2023, 13:00 [IST]
English summary
Passenger tried open door while flight mid air
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+