ಚಕ್ರ ಮುರಿದು 10 ಕಿ.ಮೀ ಓಡಿದ ರೈಲು... ಸಮಯಪ್ರಜ್ಞೆಯಿಂದ ತಮ್ಮನ್ನು ತಾವೇ ರಕ್ಷಿಸಿಕೊಂಡ ಪ್ರಯಾಣಿಕರು!

ಇತ್ತೀಚೆಗಷ್ಟೇ ಭಾರೀ ರೈಲು ದುರಂತ ಕಂಡ ರೈಲ್ವೆ ಇಲಾಖೆ ಮತ್ತೊಂದು ದುರಂತಕ್ಕೆ ಸ್ವಲ್ಪದರಲ್ಲೇ ತಪ್ಪಿಸಿಕೊಂಡಿದೆ. ಚಕ್ರ ಮುರಿದರು ಬರೋಬ್ಬರಿ 10 ಕಿ.ಮೀ ಓಡಿದ ರೈಲು ಯಾವುದೇ ಅನಾಹುತಕ್ಕೆ ಕಾರಣವಾಗದೇ ಚಲಿಸಿದೆ. ಮುರಿದ ಚಕ್ರದ ಶಬ್ದಕ್ಕೆ ಗಾಬರಿಯಾದ ಪ್ರಯಾಣಿಕರು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ ಬಳಿಕ ವಿಷಯ ಬೆಳಕಿಗೆ ಬಂದಿದೆ.

ಜೂನ್ 2 ರಂದು ಬಾಲಸೋರ್ ರೈಲು ಅಪಘಾತದ ಒಂದು ತಿಂಗಳ ನಂತರ ಇದೀಗ ಈ ಘಟನೆ ನಡೆದಿದೆ. ಎರಡು ಪ್ಯಾಸೆಂಜರ್ ರೈಲುಗಳು ಸೇರಿದಂತೆ ಮೂರು ರೈಲುಗಳ ಭೀಕರ ಅಪಘಾತದಲ್ಲಿ 300ಕ್ಕೂ ಹೆಚ್ಚು ಜನರ ಸಾವು ಮತ್ತು 1,000ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಈ ದುರ್ಘಟನೆಯು ಕಳೆದ ಎರಡು ದಶಕಗಳಲ್ಲೇ ಅತ್ಯಂತ ಭೀಕರ ರೈಲು ಅಪಘಾತ ಎಂದು ಪರಿಗಣಿಸಲಾಗಿದೆ.

pawan-express-muzaffarpur-mumbai-train-wheel-broke

ಇದೀಗ ವರದಿಯಾಗಿರುವ ಸುದ್ದಿಯು ಮತ್ತೊಮ್ಮೆ ರೈಲ್ವೆಯನ್ನು ಗಾಬರಿಗೊಳಿಸಿದೆ. ಬಿಹಾರದ ಮುಜಾಫರ್‌ಪುರದಿಂದ ಮುಂಬೈಗೆ ಪವನ್ ಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಪವಾಡದ ರೀತಿಯಲ್ಲಿ ಪಾರಾಗಿದ್ದಾರೆ. ಐಎಎನ್‌ಎಸ್‌ನ ವರದಿಯ ಪ್ರಕಾರ, ಬಿಹಾರದ ಮುಜಾಫರ್‌ಪುರ ಜಿಲ್ಲೆಯಲ್ಲಿ ಮುಂಬೈಗೆ ತೆರಳುತ್ತಿದ್ದ ಪವನ್ ಎಕ್ಸ್‌ಪ್ರೆಸ್ ರೈಲು 10 ಕಿ.ಮೀ ಮುರಿದ ಚಕ್ರದೊಂದಿಗೆ ಓಡಿದೆ.

ರೈಲು ಚಕ್ರ ಮುರಿತದ ಬಗ್ಗೆ ಪ್ರಯಾಣಿಕರ ಸಮಯಪ್ರಜ್ಞೆಯಿಂದ ಅವಘಡವನ್ನು ತಪ್ಪಿಸಲಾಗಿದೆ ಎಂದು ವರದಿಯಾಗಿದೆ. ಕಳೆದ ಭಾನುವಾರ ತಡರಾತ್ರಿ ಭಗವಾನ್‌ಪುರ ರೈಲಿನಲ್ಲಿ ಮುಜಾಫರ್ ಪುರ- ಹಾಜಿಪುರ ರೈಲು ವಿಭಾಗದಲ್ಲಿ ಈ ಘಟನೆ ನಡೆದಿದ್ದು, ಚಕ್ರ ಮುರಿದಿದ್ದರೂ ರೈಲು ಬರೋಬ್ಬರಿ 10 ಕಿ.ಮೀ ಓಡಿದೆ ಎನ್ನಲಾಗಿದೆ.

pawan-express-muzaffarpur-mumbai-train-wheel-broke

ಮುಂಬೈಗೆ ತೆರಳುತ್ತಿದ್ದ ಪವನ್ ಎಕ್ಸ್‌ಪ್ರೆಸ್ ಬಿಹಾರದ ಮುಜಾಫರ್ ಪುರ ಜಿಲ್ಲೆಯಲ್ಲಿ ಚಕ್ರ ಮುರಿದುಕೊಂಡು 10 ಕಿ.ಮೀ ಓಡಿದ್ದು, ರೈಲು ಭಗವಾನ್‌ಪುರ ರೈಲು ನಿಲ್ದಾಣದಿಂದ ಹೊರಟಾಗ, ಪ್ರಯಾಣಿಕರು ಚೈನ್ ಎಳೆದು ನಿಲ್ಲಿಸಿರುವುದಾಗಿ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಬಳಿಕ ಈ ಶಬ್ದದ ಬಗ್ಗೆ ಪ್ರಯಾಣಿಕರು ರೈಲಿನ ಚಾಲಕ ಮತ್ತು ಸಿಬ್ಬಂದಿಗೆ ಮಾಹಿತಿ ನೀಡಿದ್ದರು.

ಪ್ರಯಾಣಿಕರನ್ನು ತುಂಬಿಕೊಂಡು ಮುಜಾಫರ್ ಪುರ ರೈಲು ನಿಲ್ದಾಣದಿಂದ ರೈಲು ಹೊರಡುತ್ತಿದ್ದಂತೆಯೇ ಪ್ರಯಾಣಿಕರಿಗೆ ಎಸ್ 11 ಕೋಚ್‌ನಲ್ಲಿ ದೊಡ್ಡ ಶಬ್ದ ಕೇಳಿಸಿದೆ. ಆದರೆ, ವೇಗವಾಗಿ ಚಲಿಸುತ್ತಿದ್ದ ರೈಲು ಭಗವಾನ್‌ಪುರ ರೈಲು ನಿಲ್ದಾಣವನ್ನು ತಲುಪಿದರೂ ಸಮಸ್ಯೆಯನ್ನು ಗುರುತಿಸಲು ಯಾವುದೇ ಪ್ರಯತ್ನಗಳು ನಡೆದಿಲ್ಲ ಎಂದು ಹೇಳಲಾಗುತ್ತಿದೆ.

ಬಳಿಕ ಪ್ರಯಾಣಿಕರು ಮಾಹಿತಿ ನೀಡಿದ ಬೆನ್ನಲ್ಲೇ ರೈಲ್ವೆ ಇಂಜಿನಿಯರ್‌ಗಳು ಹಾಗೂ ನೌಕರರು ನಿಲ್ದಾಣಕ್ಕೆ ಆಗಮಿಸಿದ್ದಾರೆ. ತಪಾಸಣೆಯ ವೇಳೆ ಎಸ್ 11 ಬೋಗಿಯ ಚಕ್ರ ಮುರಿದು ಬಿದ್ದಿರುವುದು ಕಂಡು ಬಂದಿದೆ. ನಮ್ಮ ತಂಡವು ಘಟನಾ ಸ್ಥಳಕ್ಕೆ ತಲುಪಿ ದೋಷವನ್ನು ಸರಿಪಡಿಸಿದೆ ಎಂದು ಪೂರ್ವ ಮಧ್ಯ ರೈಲ್ವೆ ಹಾಜಿಪುರದ ಸಿಪಿಆರ್ಒ ವೀರೇಂದ್ರ ಕುಮಾರ್ ಮಾಹಿತಿ ನೀಡಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, July 3, 2023, 18:37 [IST]
English summary
Pawan express muzaffarpur mumbai train wheel broke
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+