ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಖ್ಯಾತ ಡಿಜಿಟಲ್ ಪೇಮೆಂಟ್ ಪ್ಲಾಟ್ ಫಾರಂಗಳಲ್ಲಿ ಒಂದಾದ PayTm ದೇಶಾದ್ಯಂತ FASTag ಆಧಾರಿತ ಪಾರ್ಕಿಂಗ್ ಸೇವೆಗಳನ್ನು ಆರಂಭಿಸಲಿದೆ. PayTm ನ ಹಣಕಾಸು ಸೇವಾ ಸಂಸ್ಥೆಯಾಗಿರುವ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ದೆಹಲಿ ಮೆಟ್ರೋ ರೈಲು ಕಾರ್ಪೊರೇಷನ್ (ಡಿಎಂಆರ್‌ಸಿ) ಸಹಭಾಗಿತ್ವದಲ್ಲಿ ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನು ಆರಂಭಿಸಿದೆ. ದೆಹಲಿಯ ಕಾಶ್ಮೀರೆ ಗೇಟ್ ಮೆಟ್ರೋ ನಿಲ್ದಾಣದಲ್ಲಿ ಈ ಪಾರ್ಕಿಂಗ್ ಸೌಲಭ್ಯವನ್ನು ಆರಂಭಿಸಲಾಗಿದೆ.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಕ್ಯಾಸ್ ಲೆಸ್ ಪಾರ್ಕಿಂಗ್ ಶುಲ್ಕ ಪಾವತಿ

ಈ ಸಂದರ್ಭದಲ್ಲಿ ಮಾಹಿತಿ ನೀಡಿರುವ ಕಂಪನಿಯು ಡಿಜಿಟಲ್ ಇಂಡಿಯಾ ಅಭಿಯಾನದ ಅಡಿಯಲ್ಲಿ, ನಾವು ದೇಶದಲ್ಲಿ ಪೇಮೆಂಟ್ ಗಳಿಗಾಗಿ ಡಿಜಿಟಲ್ ಸೇವೆಗಳನ್ನು ಉತ್ತೇಜಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳಿದೆ. ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಪರಿಚಯದೊಂದಿಗೆ ಇನ್ನು ಮುಂದೆ ವಾಹನ ಸವಾರರು ಪಾರ್ಕಿಂಗ್ ಶುಲ್ಕ ಪಾವತಿಸಲು ಕೌಂಟರ್‌ನಲ್ಲಿ ಕಾಯುವ ಅಗತ್ಯವಿರುವುದಿಲ್ಲ. ಇದರಿಂದ ಸಮಯವನ್ನು ಉಳಿಸಬಹುದು.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಮೆಟ್ರೋ ಪಾರ್ಕಿಂಗ್ ಸ್ಥಳದಲ್ಲಿ ಫಾಸ್ಟ್‌ಟ್ಯಾಗ್ ಸ್ಟಿಕ್ಕರ್ ಹೊಂದಿರುವ ಕಾರುಗಳಿಂದ ಕ್ಯಾಶ್ ಲೆಸ್ ವಹಿವಾಟುಗಳನ್ನು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಮಾಡಲಿದೆ. ಪಾರ್ಕಿಂಗ್‌ಗಳಿಗಾಗಿ ಬರುವ ದ್ವಿಚಕ್ರ ವಾಹನಗಳು ಪಾರ್ಕಿಂಗ್ ಶುಲ್ಕವನ್ನು ಯುಪಿಐ ಆಧಾರಿತ ಪಾವತಿಯ ಮೂಲಕ ಪಾವತಿಸಬಹುದು.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಪೇಟಿಎಂ ಈಗ ದೇಶಾದ್ಯಂತ ಹಲವಾರು ಮುನ್ಸಿಪಲ್ ಕಾರ್ಪೊರೇಶನ್‌ಗಳೊಂದಿಗೆ ಫಾಸ್ಟ್‌ಟ್ಯಾಗ್ ಆಧಾರಿತ ಪಾರ್ಕಿಂಗ್ ಸೌಲಭ್ಯಗಳನ್ನು ಒದಗಿಸಲು ಕೆಲಸ ಮಾಡುತ್ತಿದೆ. ಇದರ ಜೊತೆಗೆ ದೇಶದ ಶಾಪಿಂಗ್ ಮಾಲ್‌ಗಳು, ಆಸ್ಪತ್ರೆಗಳು ಹಾಗೂ ವಿಮಾನ ನಿಲ್ದಾಣಗಳಲ್ಲಿ ಡಿಜಿಟಲ್ ಪಾವತಿ ಪರಿಹಾರಗಳನ್ನು ಜಾರಿಗೆ ತರಲು ವಿವಿಧ ಮಧ್ಯಸ್ಥಗಾರರೊಂದಿಗೆ ಚರ್ಚೆ ನಡೆಸುತ್ತಿದೆ.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಈ ಬಗ್ಗೆ ಮಾತನಾಡಿದ PayTm ಕಂಪನಿಯ ಎಂಡಿ ಹಾಗೂ ಸಿಇಒ ಸತೀಶ್ ಗುಪ್ತಾರವರು ದೇಶದ ಪಾರ್ಕಿಂಗ್ ಸೇವಾ ಕಂಪನಿಗಳೊಂದಿಗೆ ನಿಕಟವಾಗಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು. ಮುಂಬರುವ ಕೆಲವು ವರ್ಷಗಳಲ್ಲಿ ಕ್ಯಾಶ್ ಲೆಸ್ ಪಾರ್ಕಿಂಗ್ ಅನ್ನು ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಅಳವಡಿಸಲಾಗುವುದು ಎಂದು ಅವರು ಹೇಳಿದ್ದಾರೆ.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಈ ವರ್ಷದ ಜೂನ್ ತಿಂಗಳಿನಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ 10 ದಶಲಕ್ಷಕ್ಕೂ ಹೆಚ್ಚು ಫಾಸ್ಟ್ ಟ್ಯಾಗ್‌ಗಳನ್ನು ವಿತರಿಸಿದ ದೇಶದ ಮೊದಲ ಕಂಪನಿ ಎಂಬ ಹಿರಿಮೆಗೆ ಪಾತ್ರವಾಗಿದೆ. ನ್ಯಾಷನಲ್ ಪೇಮೆಂಟ್ ಕಾರ್ಪೊರೇಷನ್ ಆಫ್ ಇಂಡಿಯಾ (ಎನ್‌ಪಿ‌ಸಿ‌ಐ) ವರದಿಗಳ ಪ್ರಕಾರ, ಈ ವರ್ಷ ಜೂನ್ ಅಂತ್ಯದವರೆಗೆ ದೇಶದಲ್ಲಿ 3.47 ಕೋಟಿಗೂ ಹೆಚ್ಚು ಫಾಸ್ಟ್ ಟ್ಯಾಗ್ ಗಳನ್ನು ವಿತರಿಸಲಾಗಿದೆ.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಫಾಸ್ಟ್ ಟ್ಯಾಗ್ ಆಧಾರಿತ ಟೋಲ್ ಶುಲ್ಕ ಪಾವತಿ ವ್ಯವಸ್ಥೆಯನ್ನು ಡಿಜಿಟಲ್ ಮಾಧ್ಯಮದ ಮೂಲಕ ಟೋಲ್ ಸಂಗ್ರಹಕ್ಕೆ ಬಳಸಲಾಗುತ್ತದೆ. ಫಾಸ್ಟ್ ಟ್ಯಾಗ್ ಅಳವಡಿಸಿರುವ ವಾಹನಗಳು ಟೋಲ್ ಪ್ಲಾಜಾಗಳಲ್ಲಿ ನಿಂತು ಟೋಲ್ ಶುಲ್ಕ ಪಾವತಿಸುವ ಅಗತ್ಯವಿಲ್ಲ. ಟೋಲ್ ಶುಲ್ಕ ಸಂಗ್ರಹ ಪ್ರಕ್ರಿಯೆಯನ್ನು ವೇಗವಾಗಿ ಹಾಗೂ ಸುಗಮವಾಗಿ ಮಾಡುವುದು ಮತ್ತು ಟೋಲ್ ಪಾವತಿಸಲು ಕಾಯುವ ಸಮಯವನ್ನು ಕಡಿಮೆ ಮಾಡುವುದು ಫಾಸ್ಟ್ ಟ್ಯಾಗ್ ಗಳನ್ನು ಅಳವಡಿಕೆಯ ಹಿಂದಿನ ಉದ್ದೇಶವಾಗಿದೆ.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಫಾಸ್ಟ್ ಟ್ಯಾಗ್ ಎನ್ನುವುದು ವಾಹನಗಳ ಮುಂಭಾಗದ ಗ್ಲಾಸಿನ ಮೇಲೆ ಅಳವಡಿಸುವ ಸ್ಟಿಕ್ಕರ್ ಆಗಿದೆ. ಫಾಸ್ಟ್ ಟ್ಯಾಗ್ ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (ಆರ್‌ಎಫ್‌ಐ‌ಡಿ) ತಂತ್ರಜ್ಞಾನದ ಮೂಲಕ ಕಾರ್ಯ ನಿರ್ವಹಿಸುತ್ತದೆ. ಫಾಸ್ಟ್ ಟ್ಯಾಗ್ ಹೊಂದಿರುವ ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದು ಹೋದಾಗ, ಫಾಸ್ಟ್‌ಟ್ಯಾಗ್‌ಗೆ ಲಿಂಕ್ ಮಾಡಿದ ಬ್ಯಾಂಕ್ ಅಥವಾ ಪ್ರಿಪೇಯ್ಡ್ ಖಾತೆಯಿಂದ ಟೋಲ್ ಶುಲ್ಕ ಆಟೋಮ್ಯಾಟಿಕ್ ಆಗಿ ಕಡಿತಗೊಳ್ಳುತ್ತದೆ.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಈ ಸಿಸ್ಟಂ ಟೋಲ್ ಶುಲ್ಕ ಪಾವತಿಸಲು ವಾಹನಗಳನ್ನು ಟೋಲ್ ಪ್ಲಾಜಾಗಳಲ್ಲಿ ನಿಲ್ಲಿಸುವ ಅಗತ್ಯವನ್ನು ಇಲ್ಲವಾಗಿಸುತ್ತದೆ. ಎಲ್ಲಾ ಪ್ರಯಾಣಿಕ ನಾಲ್ಕು ಚಕ್ರ ವಾಹನಗಳು, ಬಸ್‌ಗಳು, ಟ್ರಕ್‌ಗಳು, ಲಾರಿಗಳು ಹಾಗೂ ನಿರ್ಮಾಣ ಕಾರ್ಯದಲ್ಲಿ ಬಳಸುವ ವಾಣಿಜ್ಯ ವಾಹನಗಳಿಗೆ ಫಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವಾಗಿದೆ. ದ್ವಿಚಕ್ರ ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಸುವುದು ಕಡ್ಡಾಯವಲ್ಲ ಎಂಬುದು ಗಮನಾರ್ಹ.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಕೇಂದ್ರ ಸಾರಿಗೆ ಇಲಾಖೆಯು ವಾಹನಗಳಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆಗೆ ಕಳೆದ ವರ್ಷದವರೆಗೂ ಗಡುವು ನೀಡಿತ್ತು. ಕೊನೆಗೆ ಈ ವರ್ಷದ ಆರಂಭದವರೆಗೂ ಗಡುವನ್ನು ವಿಸ್ತರಿಸಲಾಗಿತ್ತು. ಕೊನೆಗೆ ಈ ವರ್ಷದ ಫೆಬ್ರವರಿ ತಿಂಗಳಿನಲ್ಲಿ ಫಾಸ್ಟ್ ಟ್ಯಾಗ್ ಅಳವಡಿಕೆಯನ್ನು ಕಡ್ಡಾಯಗೊಳಿಸಲಾಯಿತು. ಫಾಸ್ಟ್ ಟ್ಯಾಗ್ ಹೊಂದಿಲ್ಲದ ವಾಹನಗಳು ಟೋಲ್ ಪ್ಲಾಜಾ ಮೂಲಕ ಹಾದು ಹೋಗುವಾಗ ದುಪ್ಪಟ್ಟು ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ದೇಶದ ಮೊದಲ ಫಾಸ್ಟ್ ಟ್ಯಾಗ್ ಆಧಾರಿತ ಕ್ಯಾಶ್ ಲೆಸ್ ಪಾರ್ಕಿಂಗ್ ಸೌಲಭ್ಯವನ್ನಾರಂಭಿಸಿದ PayTm

ಇನ್ನು ಮುಂದೆ ಮಾರಾಟ ಮಾಡುವ ಎಲ್ಲಾ ವಾಹನಗಳಲ್ಲೂ ಫಾಸ್ಟ್ ಟ್ಯಾಗ್ ಗಳನ್ನು ಕಡ್ಡಾಯವಾಗಿ ಅಳವಡಿಸಿ ಮಾರಾಟ ಮಾಡುವಂತೆ ಕೇಂದ್ರ ಸಾರಿಗೆ ಇಲಾಖೆಯು ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಿದೆ. ಫಾಸ್ಟ್ ಟ್ಯಾಗ್ ಗಳನ್ನು ಆನ್ ಲೈನ್ ಮೂಲಕ ಹಾಗೂ ಆಫ್ ಲೈನ್ ಮೂಲಕವೂ ಖರೀದಿಸಬಹುದು. ಫಾಸ್ಟ್ ಟ್ಯಾಗ್ ಖರೀದಿಸುವಾಗ ವಾಹನ ಸಂಬಂಧಿತ ದಾಖಲೆಗಳ ಪ್ರತಿಗಳನ್ನು ನೀಡಬೇಕಾಗುತ್ತದೆ.

Most Read Articles

Kannada
English summary
Paytm starts country s first cashless parking facility details
Story first published: Monday, September 13, 2021, 20:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X