Paytm FASTag: ಪೇಟಿಎಂ ಫಾಸ್ಟ್‌ಟ್ಯಾಗ್ ಬಳಕೆದಾರರ ಗಮನಕ್ಕೆ.. ಈಗಾಗಲೇ ಈ ಕೆಲಸ ಮಾಡಿ
ಪೇಟಿಎಂ ಫಾಸ್ಟ್‌ಟ್ಯಾಗ್ (Paytm FASTag) ಬಳಕೆದಾರರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮಹತ್ವದ ಸೂಚನೆ ನೀಡಿದೆ. ಈ ಬಗ್ಗೆ ಬುಧವಾರ ಅಧಿಕೃತ ಹೇಳಿಕೆ ಬಿಡುಗಡೆಗೊಳಿಸಿದ್ದು, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸುಗಮವಾಗಿ ಸಂಚರಿಸಲು ಮಾರ್ಚ್ 15ಕ್ಕೆ ಮೊದಲು ಪೇಟಿಎಂ ಫಾಸ್ಟ್‌ಟ್ಯಾಗ್ ಬಳಕೆದಾರರು, ಇನ್ನೊಂದು ಬ್ಯಾಂಕ್‌ನಿಂದ ಹೊಸ ಫಾಸ್ಟ್‌ಟ್ಯಾಗ್ ಪಡೆದುಕೊಳ್ಳುವಂತೆ ತಿಳಿಸಿದೆ.
ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವಾಗ ದಂಡ ಅಥವಾ ಹೆಚ್ಚಿನ ಟೋಲ್ ಶುಲ್ಕ ಕಟ್ಟುವುದನ್ನು ತಪ್ಪಿಸಲು ನೆರವಾಗುತ್ತದೆ ಎಂದು ಎನ್ಎಚ್ಎಐ ಹೇಳಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ (Paytm Payments Bank)ಗೆ ಸಂಬಂಧಿಸಿದ ನಿರ್ಬಂಧಗಳ ಕುರಿತು ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಯನ್ನು ಅನುಸರಿಸಿ, ಎನ್ಎಚ್ಎಐ ಈ ಸಲಹೆಯನ್ನು ನೀಡಿದೆ.

ಪೇಟಿಎಂ ಫಾಸ್ಟ್‌ಟ್ಯಾಗ್ ಬಳಕೆದಾರರು, ಮಾರ್ಚ್ 15ರ ನಂತರ ತಮ್ಮ ಬ್ಯಾಲೆನ್ಸ್ ರೀಚಾರ್ಜ್ (ಹೊಸದಾಗಿ ಠೇವಣಿ ಮೊತ್ತ ಸೇರಿಸುವುದು) ಮಾಡಲು ಅವಕಾಶವಿರುವುದಿಲ್ಲ. ಆದರೂ ತಮ್ಮ ಖಾತೆಯಲ್ಲಿ ಬಾಕಿ ಉಳಿದಿರುವ ಹಣವನ್ನು ಟೋಲ್ ಶುಲ್ಕ ಪಾವತಿಸಲು ಉಪಯೋಗ ಮಾಡಬಹುದು. ಈ ಸಂಬಂಧ ಯಾವುದೇ ಗೊಂದಲಗಳಿದ್ದರೂ ಇಂಡಿಯನ್ ಹೈವೇ ಮ್ಯಾನೇಜ್‌ಮೆಂಟ್ ಕಂಪನಿ ಲಿಮಿಟೆಡ್ (IHMCL) ವೆಬ್‌ಸೈಟ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಬಹುದು.
ದೇಶಾದ್ಯಂತ 39 ಬ್ಯಾಂಕ್ ಮತ್ತು ಎನ್‌ಬಿಎಫ್‌ಸಿ (ಬ್ಯಾಂಕೇತರ ಹಣಕಾಸು ಸಂಸ್ಥೆಗಳು)ಗಳಿಂದ ವಾಹನ ಮಾಲೀಕರು ಫಾಸ್ಟ್‌ಟ್ಯಾಗ್ ತೆಗೆದುಕೊಳ್ಳಬಹುದು. ಅವುಗಳಲ್ಲಿ ಏರ್‌ಟೆಲ್ ಪೇಮೆಂಟ್ಸ್ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಲಿಮಿಟೆಡ್, ಬಂಧನ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ, ಕೆನರಾ ಬ್ಯಾಂಕ್, ಎಚ್‌ಡಿಎಫ್‌ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್, ಐಡಿಎಫ್‌ಸಿ ಫಸ್ಟ್ ಬ್ಯಾಂಕ್, ಇಂಡಸ್‌ಇಂಡ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೆಸ್ ಬ್ಯಾಂಕ್ ಸೇರಿದೆ.

ಇನ್ನುಳಿದಂತೆ ಅಲಹಾಬಾದ್ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಸಿಟಿ ಯೂನಿಯನ್ ಬ್ಯಾಂಕ್ ಲಿಮಿಟೆಡ್, ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್, ಫೆಡರಲ್ ಬ್ಯಾಂಕ್, ಇಂಡಿಯನ್ ಬ್ಯಾಂಕ್, ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಕರ್ಣಾಟಕ ಬ್ಯಾಂಕ್, ಕರೂರ್ ವೈಶ್ಯ ಬ್ಯಾಂಕ್, ಪಂಜಾಬ್ ಮಹಾರಾಷ್ಟ್ರ ಬ್ಯಾಂಕ್, ಸಾರಸ್ವತ್ ಬ್ಯಾಂಕ್, ಸೌತ್ ಇಂಡಿಯನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಜಲಗಾಂವ್ ಪೀಪಲ್ಸ್ ಕೋ-ಆಪ್ ಬ್ಯಾಂಕ್ ಕೂಡ ಪಟ್ಟಿಯಲ್ಲಿದೆ.
ಕಳೆದ ತಿಂಗಳು ಭಾರತೀಯ ರಿಸರ್ವ್ ಬ್ಯಾಂಕ್ (RBI), ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಗ್ರಾಹಕರು ಮಾರ್ಚ್ 15ರೊಳಗೆ ತಮ್ಮ ಖಾತೆಯನ್ನು ಇತರೆ ಬ್ಯಾಂಕ್‌ಗಳಿಗೆ ಬದಲಾಯಿಸುವಂತೆ ತಿಳಿಸಿತ್ತು. ಈ ಗಡುವಿನ ನಂತರ ಕೆಲವು ಸೇವೆಗಳು ಲಭ್ಯವಿದ್ದರೆ, ಒಂದಷ್ಟು ಸೇವೆಗಳು ನಿಲ್ಲಲ್ಲಿವೆ. ಮಾರ್ಚ್ 15ರ ಬಳಿಕವು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಿಂದ ಹಣವನ್ನು ಡ್ರಾ ಮಾಡಿಕೊಳ್ಳಬಹುದು.

ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಿಂದ ಯುಪಿಐ (ಏಕೀಕೃತ ಪಾವತಿ ವ್ಯವಸ್ಥೆ) ಹಾಗೂ ಐಎಂಪಿಎಸ್ (ತಕ್ಷಣದ ಪಾವತಿ ಸೇವೆ) ಉಪಯೋಗಿಸಿ ಹಣವನ್ನು ಹಿಂಪಡೆಯುಬಹುದು. ಗಡುವು ಮುಗಿದ ಮೇಲೆ ಪೇಟಿಎಂ ಬ್ಯಾಂಕ್ ಖಾತೆಗೆ ಬೇರೆ ಖಾತೆಯಿಂದ ಹಣ ಸ್ವೀಕರಿಸಲು ಸಾಧ್ಯವಾಗುವುದಿಲ್ಲ. ವೇತನವನ್ನು ಪಾವತಿಸಲು ಆಗುವುದಿಲ್ಲ. ಯುಪಿಐ (UPI) ಅಥವಾ ಐಎಂಪಿಎಸ್ (IMPS) ಬಳಸಿ, ಪೇಮೆಂಟ್ಸ್ ಬ್ಯಾಂಕ್‌ಗೆ ಹಣ ವರ್ಗಾವಣೆ ಅಸಾಧ್ಯ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications