ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

ವಿಪತ್ತುಗಳು ಎದುರಾದಾಗ ಜನರ ನಿಜವಾದ ಗುಣ ಗೊತ್ತಾಗುತ್ತದೆ ಎಂದು ಹೇಳಲಾಗುತ್ತದೆ. ಕೆಲವು ವರ್ಷಗಳ ಹಿಂದೆ ಪ್ರವಾಹ ಪರಿಸ್ಥಿತಿ ಉಂಟಾದಾಗ ಹಲವಾರು ಜನರು ಮುಂದೆ ಬಂದು ನೊಂದವರಿಗೆ ನೆರವಾಗಿದ್ದರು.

ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

ಭಾರತೀಯರು ಸಂಕಷ್ಟ ಪರಿಸ್ಥಿತಿಗಳಿಗೆ ಸದಾ ಸ್ಪಂದಿಸುತ್ತಾ ಬಂದಿದ್ದಾರೆ. ಈಗ ಕರೋನಾ ವೈರಸ್ ಸಾಂಕ್ರಾಮಿಕದಿಂದ ಉಂಟಾಗಿರುವ ಸಂಕಷ್ಟ ಪರಿಸ್ಥಿತಿಯಲ್ಲಿಯೂ ಹಲವಾರು ಕಂಪನಿಗಳು ಜನರಿಗೆ ನೆರವಾಗಲು ಸರ್ಕಾರದ ಜೊತೆಗೆ ಕೈಜೋಡಿಸಿವೆ. ಇನ್ನೂ ಕೆಲವು ಕಂಪನಿಗಳು ಜನರಿಗೆ ನೇರವಾಗಿ ನೆರವಾಗುತ್ತಿವೆ. ಹಲವಾರು ಜನರು ಸಹ ಸೋಂಕಿತರಿಗೆ ನೆರವಾಗುತ್ತಿದ್ದಾರೆ.

ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

ಅಂತಹವರಲ್ಲಿ ಕೇರಳದ ಪಯನೂರಿನ 51 ವರ್ಷದ ಆಟೋ ಚಾಲಕರಾದ ಬ್ರಹ್ಮಚಂದ್ರನ್ ಸಹ ಒಬ್ಬರು. ಜನರನ್ನು ಆಸ್ಪತ್ರೆಗೆ ಕರೆದೊಯ್ಯಲು ಅವರು ತಮ್ಮ ಆಟೋ ರಿಕ್ಷಾವನ್ನು ಮಿನಿ ಆಂಬ್ಯುಲೆನ್ಸ್ ಆಗಿ ಬದಲಿಸಿದ್ದಾರೆ.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

ಇದುವರೆಗೆ ಬ್ರಹ್ಮಚಂದ್ರನ್ ತಮ್ಮ ಆಟೋ ರಿಕ್ಷಾದಲ್ಲಿ ಕರೋನಾ ವೈರಸ್ ರೋಗಲಕ್ಷಣಗಳನ್ನು ಹೊಂದಿರುವ ಸುಮಾರು 500 ಜನರನ್ನು ವಿವಿಧ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ ಎಂದು ವರದಿಯಾಗಿದೆ.

ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

ಹೀಗೆ ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ದ ಪ್ರತಿ ಟ್ರಿಪ್‌ನ ನಂತರ ಅವರು ಮಿನಿ ಆಂಬ್ಯುಲೆನ್ಸ್ ಆಗಿ ಬದಲಾಗಿರುವ ತಮ್ಮ ಆಟೋ ರಿಕ್ಷಾವನ್ನು ಸ್ವಚ್ಛಗೊಳಿಸುತ್ತಾರೆ. ಪ್ರಯಾಣಿಕರನ್ನು ಪ್ರತ್ಯೇಕಿಸಲು ಹಿಂಭಾಗದ ಸೀಟಿನ ಪ್ರದೇಶವನ್ನು ಗ್ಲಾಸ್ ಪಾಲಿಥೀನ್ ಕವರ್‌ಗಳಿಂದ ಮುಚ್ಚಲಾಗಿದೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

ಗರ್ಭಿಣಿ ಮಹಿಳೆಯರು ಹಾಗೂ ಕೋವಿಡ್ 19 ಸೋಂಕಿತರನ್ನು ಆಸ್ಪತ್ರೆಗೆ ಕರೆದೊಯ್ಯಲು ಆಟೋ ರಿಕ್ಷಾವನ್ನು ಆಂಬ್ಯುಲೆನ್ಸ್ ಆಗಿ ಬದಲಿಸಲಾಗಿದೆ ಎಂದು ಬ್ರಹ್ಮಚಂದ್ರನ್ ಹೇಳಿದ್ದಾರೆ.

ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

ಈ ಸೇವೆಯನ್ನು ಆರಂಭಿಸಿದ ನಂತರ ಹಲವಾರು ಜನರು ತಮಗೆ ಕರೆ ಮಾಡಿ ಈ ಸೇವೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು. ಲಾಕ್‌ಡೌನ್ ವಿಧಿಸಿರುವ ಈ ಸಂದರ್ಭದಲ್ಲಿ ಆಶಾ ಕಾರ್ಯಕರ್ತರು ಹಾಗೂ ಸ್ಥಳೀಯ ಅಧಿಕಾರಿಗಳು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ ಎಂದು ಬ್ರಹ್ಮಚಂದ್ರನ್ ಹೇಳಿದರು.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

ಕರೋನಾ ಸೋಂಕಿತರನ್ನು ಕಂಡರೆ ಓಡಿ ಹೋಗುವ ಸಂದರ್ಭದಲ್ಲಿ ತಮ್ಮ ಜೀವನಾಧಾರವಾಗಿರುವ ಆಟೋ ರಿಕ್ಷಾವನ್ನು ಆಂಬ್ಯುಲೆನ್ಸ್ ಆಗಿ ಬದಲಿಸಿ ಸೋಂಕಿತರನ್ನು ಧೈರ್ಯದಿಂದ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ಬ್ರಹ್ಮಚಂದ್ರನ್ ಅವರ ಕಾರ್ಯ ನಿಜಕ್ಕೂ ಶ್ಲಾಘನೀಯ.

ಕರೋನಾ ಸೋಂಕಿತರ ಪಾಲಿಗೆ ಆಪದ್ಭಾಂದವನಾದ ಆಟೋ ಚಾಲಕ

30 ವರ್ಷಗಳಿಂದ ಆಟೋ ರಿಕ್ಷಾ ಚಾಲನೆ ಮಾಡುತ್ತಿದ್ದರೂ ಈಗ ನೀಡುತ್ತಿರುವ ಪ್ರತಿಯೊಂದು ಸವಾರಿ ಮರೆಯಲಾಗದ ಅನುಭವವಾಗಿದ್ದು, ಒಂದು ರೀತಿಯ ತೃಪ್ತಿಯನ್ನು ನೀಡುತ್ತಿದೆ ಎಂದು ಬ್ರಹ್ಮಚಂದ್ರನ್‌ ಹೇಳಿದ್ದಾರೆ.

Most Read Articles

Kannada
English summary
Payyannur auto driver converts his auto rickshaw into mini ambulance to help Covid 19 patients. Read in Kannada.
Story first published: Tuesday, May 25, 2021, 12:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X