YouTube

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಭಾರತದ ಬಹುತೇಕ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ನೂರು ರೂಪಾಯಿ ಗಡಿ ದಾಟಿದೆ. ಇದರಿಂದ ವಾಹನ ಸವಾರರು ಪರದಾಡುವಂತಾಗಿದೆ. ಬೆಲೆ ಏರಿಕೆಯು ಉತ್ತರ ಪ್ರದೇಶ - ಮಧ್ಯಪ್ರದೇಶ ಗಡಿಯಲ್ಲಿರುವ ಪೆಟ್ರೋಲ್ ಬಂಕ್ ಮಾಲೀಕರಿಗೆ ವಿವಿಧ ಸಮಸ್ಯೆಗಳನ್ನು ತಂದಿಟ್ಟಿದೆ.

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಉತ್ತರ ಪ್ರದೇಶ, ಮಧ್ಯಪ್ರದೇಶ ಎರಡು ಅಕ್ಕ ಪಕ್ಕದ ರಾಜ್ಯಗಳಾಗಿವೆ. ಮಧ್ಯಪ್ರದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿ ಗಡಿ ದಾಟಿದೆ. ಆದರೆ ಉತ್ತರಪ್ರದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 100 ರೂಪಾಯಿಗಳಿಗಿಂತ ಕಡಿಮೆಯಿದೆ. ಉತ್ತರ ಪ್ರದೇಶಕ್ಕಿಂತ ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಬೆಲೆ ಹೆಚ್ಚು.

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಇದರಿಂದ ಮಧ್ಯ ಪ್ರದೇಶದ ಗಡಿ ಪ್ರದೇಶಗಳಲ್ಲಿ ವಾಸಿಸುವ ಜನರು ಉತ್ತರ ಪ್ರದೇಶಕ್ಕೆ ತೆರಳಿ ಪೆಟ್ರೋಲ್ ಖರೀದಿಸುತ್ತಿದ್ದಾರೆ. ಕಳೆದ ಭಾನುವಾರ ಉತ್ತರ ಪ್ರದೇಶದ ಮಹೋಬಾ ಪ್ರದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.93.48ಗಳಾಗಿತ್ತು.

MOST READ: ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಆ ದಿನ ಮಧ್ಯಪ್ರದೇಶದ ಚಟ್ಟರ್‌ಪುರ ಪ್ರದೇಶದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ರೂ.106.3ಗಳಾಗಿತ್ತು. ಈ ಎರಡು ಪ್ರದೇಶಗಳಲ್ಲಿ ಮಾರಾಟವಾಗುವ ಪೆಟ್ರೋಲ್ ಬೆಲೆಯಲ್ಲಿ ಸುಮಾರು ರೂ.13ಗಳಷ್ಟು ವ್ಯತ್ಯಾಸವಿತ್ತು. ಈ ಕಾರಣಕ್ಕೆ ಮಧ್ಯಪ್ರದೇಶದ ಜನರು ಉತ್ತರ ಪ್ರದೇಶಕ್ಕೆ ತೆರಳಿ ಪೆಟ್ರೋಲ್ ತರುತ್ತಿದ್ದಾರೆ.

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಈ ಬಗ್ಗೆ ಮಾತನಾಡಿರುವ ಮಧ್ಯಪ್ರದೇಶದ ವ್ಯಕ್ತಿಯೊಬ್ಬರು, ನಾನು ಮಧ್ಯಪ್ರದೇಶದವನು. ಆದರೆ ಉತ್ತರ ಪ್ರದೇಶದ ಮಹೋಬಾ ನನ್ನ ಮನೆಯಿಂದ 15 ಕಿ.ಮೀ ದೂರದಲ್ಲಿದೆ. ಈ ಕಾರಣಕ್ಕೆ ನಾನು ನನ್ನ ವಾಹನದಲ್ಲಿ ಅಲ್ಲಿಗೆ ಹೋದಾಗ ಫುಲ್ ಟ್ಯಾಂಕ್ ಪೆಟ್ರೋಲ್ ತುಂಬಿಸುತ್ತೇನೆ ಎಂದು ಹೇಳಿದ್ದಾರೆ.

MOST READ: ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಇದರಿಂದ ಪ್ರತಿ ತಿಂಗಳು ಸಾಕಷ್ಟು ಹಣ ಉಳಿಸಬಹುದು ಎಂದು ಅವರು ಹೇಳಿದ್ದಾರೆ. ಈ ಕಾರಣಕ್ಕೆ ಮಧ್ಯಪ್ರದೇಶ ರಾಜ್ಯದ ಮಧ್ಯ ಭಾಗದಲ್ಲಿ ವಾಸಿಸುವವರು ಗಡಿಯಲ್ಲಿ ವಾಸಿಸುವ ನಮ್ಮ ಬಗ್ಗೆ ಅಸೂಯೆ ಪಡುತ್ತಿದ್ದಾರೆ ಎಂದು ಅವರು ಗೇಲಿ ಮಾಡಿದರು.

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಮಧ್ಯಪ್ರದೇಶದ ಜನರು ಪೆಟ್ರೋಲ್'ಗಾಗಿ ಉತ್ತರ ಪ್ರದೇಶಕ್ಕೆ ತೆರಳುತ್ತಿರುವುದರಿಂದ ಮಧ್ಯಪ್ರದೇಶದ ಗಡಿ ಭಾಗದಲ್ಲಿ ಪೆಟ್ರೋಲ್ ಬಂಕ್ ಹೊಂದಿರುವವರು ವಹಿವಾಟುನಡೆಯದೇ ನಷ್ಟ ಅನುಭವಿಸುತ್ತಿದ್ದಾರೆ. ಇದರಿಂದ ನಾವು ಭಾರೀ ಪರಿಣಾಮವನ್ನು ಎದುರಿಸುತ್ತಿದ್ದೇವೆ ಎಂದು ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ತಿಳಿಸಿದ್ದಾರೆ.

MOST READ: ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಕಳೆದ ವರ್ಷ ಲಾಕ್‌ಡೌನ್ ಅವಧಿಯಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟವು ಕುಸಿದಿತ್ತು. ಈಗ ಮಾರಾಟವು 50%ಗಿಂತಲೂ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ. ಮಧ್ಯಪ್ರದೇಶ ಸರ್ಕಾರವು ರಾಜ್ಯದಲ್ಲಿ ಮಾರಾಟವಾಗುವ ಪ್ರತಿ ಲೀಟರ್ ಪೆಟ್ರೋಲ್‌ ಮೇಲೆ ರೂ.27.75 ತೆರಿಗೆ ವಿಧಿಸುತ್ತದೆ.

ಪೆಟ್ರೋಲ್ ಖರೀದಿಗೆ ಅನ್ಯ ರಾಜ್ಯಗಳತ್ತ ತೆರಳುತ್ತಿರುವ ಗಡಿ ಭಾಗದ ಜನ

ಇನ್ನು ಪ್ರತಿ ಲೀಟರ್ ಡೀಸೆಲ್ ಬೆಲೆ ರೂ.18.75 ತೆರಿಗೆ ವಿಧಿಸಲಾಗುತ್ತದೆ. ತೆರಿಗೆ ಪ್ರಮಾಣವು ಅಧಿಕವಾಗಿದ್ದು ಕೂಡಲೇ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕ್ರಮಕೈಗೊಳ್ಳಬೇಕೆಂದು ವಾಹನ ಸವಾರರು ಹಾಗೂ ಪೆಟ್ರೋಲ್ ಬಂಕ್ ಮಾಲೀಕರು ಒತ್ತಾಯಿಸುತ್ತಿದ್ದಾರೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
People residing at Madhya Pradesh border going to Uttar Pradesh for cheaper petrol. Read in Kannada.
Story first published: Wednesday, June 9, 2021, 20:02 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X