ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ರಸ್ತೆ ಅಪಘಾತಕ್ಕೀಡಾಗುವವರಿಗೆ ಸಹಾಯ ಮಾಡುವವರಿಗೆ ನಗದು ಬಹುಮಾನ ನೀಡಲು ಮುಂದಾಗಿದೆ. ರಸ್ತೆ ಅಪಘಾತಕ್ಕೀಡಾಗುವವರಿಗೆ ನೆರವು ನೀಡುವ ಜನರಿಗೆ ಉತ್ತೇಜನ ನೀಡುವ ಸಲುವಾಗಿ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಈ ಯೋಜನೆಗೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಈ ಯೋಜನೆಯ ಅನ್ವಯ ಅಪಘಾತದ ಸಂತ್ರಸ್ತರಿಗೆ ಗೋಲ್ಡನ್ ಅವರ್ ಎಂದು ಪರಿಗಣಿಸಲಾಗುವ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯಲು ನೆರವು ನೀಡುವವರಿಗೆ ರೂ. 5,000 ನಗದು ಬಹುಮಾನ ನೀಡಲಾಗುತ್ತದೆ. ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಇಲಾಖೆಯು ಎಲಾ ರಾಜ್ಯಗಳ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸಾರಿಗೆ ಇಲಾಖೆಗಳ ಕಾರ್ಯದರ್ಶಿಗಳಿಗೆ ಪತ್ರ ಬರೆದಿದೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಈ ಯೋಜನೆಯು ಅಕ್ಟೋಬರ್ 15 ರಿಂದ ಜಾರಿಗೆ ಬರಲಿದ್ದು, 2026ರ ಮಾರ್ಚ್ 31 ರವರೆಗೆ ಜಾರಿಯಲ್ಲಿರಲಿದೆ. ಈ ಯೋಜನೆಯ ಮಾರ್ಗಸೂಚಿಗಳನ್ನು ಸಹ ಪ್ರಕಟಿಸಲಾಗಿದೆ. ಅದರಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿದವರನ್ನು ರಕ್ಷಿಸುವ ಹಾಗೂ ಗೋಲ್ಡನ್ ಅವರ್ ಸಂದರ್ಭದಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಜನರಿಗೆ ಬಹುಮಾನಗಳನ್ನು ನೀಡಲಾಗುವುದು ಎಂದು ತಿಳಿಸಲಾಗಿದೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಭಾರತದಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡಲು ಯಾರು ಮುಂದೆ ಬರುವುದಿಲ್ಲ. ಒಂದು ವೇಳೆ ನೆರವಾದರೆ ಕೋರ್ಟ್, ಕಚೇರಿ ಎಂದು ಅಲೆದಾಡ ಬೇಕಾಗುತ್ತದೆ ಎಂಬ ಕಾರಣಕ್ಕೆ ಜನರು ಅಪಘಾತಕ್ಕೆ ಸಿಲುಕುವವರಿಗೆ ನೆರವಾಗಲು ಮುಂದೆ ಬರುತ್ತಿಲ್ಲ. ಈ ಕಾರಣಕ್ಕೆ ತಕ್ಷಣವೇ ಚಿಕಿತ್ಸೆಯ ಅಗತ್ಯವಿರುವವರಿಗೆ ಸಕಾಲಕ್ಕೆ ವೈದ್ಯಕೀಯ ಚಿಕಿತ್ಸೆ ದೊರಕದೆ ಮೃತ ಪಡುತ್ತಿದ್ದಾರೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ರಸ್ತೆ ಅಪಘಾತಗಳಲ್ಲಿ ಸಿಲುಕುವವರಿಗೆ ನೆರವಾಗುವ ಜನರಿಗೆ ಯಾವುದೇ ತೊಂದರೆ ನೀಡದಂತೆ ಸಂಬಂಧ ಪಟ್ಟವರಿಗೆ ಸೂಚಿಸಲಾಗಿದೆ. ಆದರೂ ಜನರು ರಸ್ತೆ ಅಪಘಾತಗಳಲ್ಲಿ ಸಿಲುಕುವವರಿಗೆ ಸಹಾಯ ಮಾಡಲು ಹಿಂಜರಿಯುತ್ತಾರೆ. ಈ ಹಿನ್ನೆಲೆಯಲ್ಲಿ ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾಗಲು ಜನರು ಮುಂದೆ ಬರುವಂತೆ ಮಾಡಲು ಈ ಯೋಜನೆಯನ್ನು ಪರಿಚಯಿಸಲಾಗುತ್ತಿದೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ಸಹಾಯ ಮಾಡುವವರಿಗೆ ನಗದು ಬಹುಮಾನ ಮಾತ್ರವಲ್ಲದೇ ಪ್ರಶಂಸನಾ ಪತ್ರವನ್ನೂ ನೀಡಲಾಗುತ್ತದೆ. ಹಾಗಾಗಿ ಇನ್ನು ಮುಂದೆ ರಸ್ತೆ ಅಪಘಾತಗಳಲ್ಲಿ ಸಿಲುಕುವವರಿಗೆ ನೆರವಾಗಲು ಜನರು ಮುಂದೆ ಬರುವ ನಿರೀಕ್ಷೆಗಳಿವೆ. ಇದರಿಂದ ಅಪಘಾತಗಳಿಂದ ಸಂಭವಿಸುವ ಸಾವಿನ ಸಂಖ್ಯೆಯೂ ಕಡಿಮೆಯಾಗುವ ಸಾಧ್ಯತೆಗಳಿವೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಈ ನಗದು ಬಹುಮಾನ ಹಾಗೂ ಪ್ರಮಾಣ ಪತ್ರದ ಜೊತೆಗೆ ರಾಷ್ಟ್ರ ಮಟ್ಟದಲ್ಲಿ 10 ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪ್ರತಿ ವರ್ಷ ನಗದು ಬಹುಮಾನ ಹಾಗೂ ಪ್ರಮಾಣ ಪತ್ರ ಪಡೆವ 10 ಜನರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾಗುವ ಪ್ರತಿಯೊಬ್ಬರಿಗೂ ರೂ. 1 ಲಕ್ಷ ನಗದು ಬಹುಮಾನವನ್ನು ಸಹ ನೀಡಲಾಗುವುದು ಎಂಬುದು ಗಮನಾರ್ಹ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಇತ್ತೀಚೆಗಷ್ಟೇ 2020 ರಲ್ಲಿ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳನ್ನು ಬಹಿರಂಗಪಡಿಸಲಾಗಿತ್ತು. ಈ ಅಂಕಿ ಅಂಶಗಳು ವಾಹನ ಸವಾರರನ್ನು ಬೆಚ್ಚಿ ಬೀಳಿಸುತ್ತವೆ. ಕರೋನಾ ವೈರಸ್ ಹರಡ ಬಾರದು ಎಂಬ ಕಾರಣಕ್ಕೆ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ಜಾರಿಗೊಳಿಸಲಾಗಿತ್ತು.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಲಾಕ್ ಡೌನ್ ಸಂದರ್ಭದಲ್ಲಿ ಬಹುತೇಕ ರಸ್ತೆಗಳು ನಿರ್ಜನವಾಗಿದ್ದವು. ಆದರೂ ಕಳೆದ ವರ್ಷ ಸುಮಾರು 1.20 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸಂಗತಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಕರ್ಫ್ಯೂ ಜಾರಿಯಲ್ಲಿದ್ದ ಸಂದರ್ಭದಲ್ಲಿಯೇ ಇತರ ಸಂದರ್ಭಗಳಿಗಿಂತ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಕೇಂದ್ರ ಸರ್ಕಾರವು ಅಧಿಕೃತವಾಗಿ ಬಿಡುಗಡೆಗೊಳಿಸಿರುವ ಈ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಭಾರತದಲ್ಲಿ ಪ್ರತಿ ದಿನ ಸರಾಸರಿ 328 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 3.92 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತಿಳಿಸಿದೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

ಈ ರಸ್ತೆ ಅಪಘಾತಗಳಿಗೆ ರಸ್ತೆಗಳು ಹಾಗೂ ವಾಹನಗಳ ಗುಣಮಟ್ಟ ಮಾತ್ರವಲ್ಲದೆ ವಾಹನ ಸವಾರರ ನಿರ್ಲಕ್ಷ್ಯವೂ ಕಾರಣವಾಗಿದೆ. ಕಳೆದ ವರ್ಷ ನಡೆದ ಒಟ್ಟು ರಸ್ತೆಅಪಘಾತಗಳಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳ ಸಂಖ್ಯೆಯೇ 41,000 ಗಳಷ್ಟಿದೆ. ಅಂದರೆ ಪ್ರತಿ ದಿನ ಸರಾಸರಿ 112 ಹಿಟ್ ಅಂಡ್ ರನ್ ಪ್ರಕರಣಗಳು ಸಂಭವಿಸಿವೆ. ಈ ರಸ್ತೆ ಅಪಘಾತಗಳಲ್ಲಿ ಗಂಭೀರ ಗಾಯಗಳೊಂದಿಗೆ ಬದುಕುಳಿದವರ ಸಂಖ್ಯೆ 85,920 ಗಳಾಗಿದೆ.

ರಸ್ತೆ ಅಪಘಾತದಲ್ಲಿ ಸಿಲುಕಿರುವವರಿಗೆ ನೆರವಾದರೆ ಸಿಗಲಿದೆ ನಗದು ಬಹುಮಾನ

2018 ಹಾಗೂ 2019 ರಲ್ಲಿ ಈ ಸಂಖ್ಯೆ 1 ಲಕ್ಷದ ಗಡಿ ದಾಟಿತ್ತು. ಕಳೆದ ವರ್ಷ ಅಜಾಗರೂಕತೆಯಿಂದ ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ವೇಳೆ 52 ಜನರು ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ಪ್ರಮುಖ ಕಾರಣವೆಂದು ಹಲವು ಬಾರಿ ಸಾಬೀತಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳನ್ನು ಹಾಗೂ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವಿನ ಸಂಖ್ಯೆಯನ್ನು ಕಡಿಮೆ ಮಾಡಲು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.

ಗಮನಿಸಿ: ಈ ಚಿತ್ರಗಳನ್ನು ರೆಫರೆನ್ಸ್'ಗಾಗಿ ಬಳಸಲಾಗಿದೆ.

Most Read Articles

Kannada
English summary
People who help accident victims will be awarded with rs 5000 cash details
Story first published: Wednesday, October 6, 2021, 13:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X