ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ಎಲೆಕ್ಟ್ರಿಕ್ ವಾಹನಗಳಿಗೆ ದಿನೇ ದಿನೇ ಬೇಡಿಕೆ ಹೆಚ್ಚುತ್ತಿದೆ. ಸಾರ್ವಜನಿಕರು ಮಾತ್ರವಲ್ಲದೆ ಸರ್ಕಾರಿ ಇಲಾಖೆಗಳು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮುಂದಾಗಿವೆ. ಇದಕ್ಕಾಗಿಯೇ ದೇಶದ ವಿವಿಧ ರಾಜ್ಯ ಸರ್ಕಾರಗಳು ತಮ್ಮಲ್ಲಿರುವ ಸಾರ್ವಜನಿಕ ಸಾರಿಗೆ ವಾಹನಗಳನ್ನು ಎಲೆಕ್ಟ್ರಿಕ್ ವಾಹನಗಳಿಗೆ ಬದಲಿಸುತ್ತಿವೆ.

ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ಸಾರ್ವಜನಿಕ ಬಸ್ಸುಗಳಿಂದ ಹಿಡಿದು ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನಗಳವರೆಗೆ ಎಲ್ಲವನ್ನೂ ಎಲೆಕ್ಟ್ರಿಕ್ ವಾಹನಗಳಿಗೆ ಬದಲಿಸಲಾಗುತ್ತಿದೆ. ಮುಂಬೈ ನಗರ ಪೊಲೀಸರು ಗಸ್ತು ತಿರುಗಲು ವಿಶಿಷ್ಟ ಎಲೆಕ್ಟ್ರಿಕ್ ವಾಹನಗಳನ್ನು ಖರೀದಿಸಿದ್ದಾರೆ. ಮುಂಬೈ ಪೊಲೀಸರು ಖರೀದಿಸಿರುವ ಈ ವಾಹನಗಳನ್ನು ಸೆಗ್‌ವೇ ಎಂದು ಕರೆಯಲಾಗುತ್ತದೆ.

ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ಈ ಎಲೆಕ್ಟ್ರಿಕ್ ವಾಹನಗಳನ್ನು ಇತ್ತೀಚಿನ ತಂತ್ರಜ್ಞಾನದಿಂದ ತಯಾರಿಸಲಾಗಿದೆ. ಇದರಿಂದ ಈ ವಾಹನವು ಯಾವುದೇ ಅಡೆತಡೆಯಿಲ್ಲದೇ ಚಲಿಸಲು ಸಾಧ್ಯವಾಗಲಿದೆ. ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್‌ಮುಖ್‌ರವರು ಶನಿವಾರ ಪೊಲೀಸರ ಬಳಕೆಗಾಗಿ ಇವುಗಳನ್ನು ಲೋಕಾರ್ಪಣೆ ಮಾಡಿದರು.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ಸೆಗ್‌ವೇ ಎಲೆಕ್ಟ್ರಿಕ್ ವಾಹನವು ಸ್ಕೂಟರ್ ಮಾದರಿಯಲ್ಲಿದ್ದು, ಇದನ್ನು ಮುಂಬೈ ಕರಾವಳಿ ಪೊಲೀಸರು ಬಳಸುತ್ತಿದ್ದಾರೆ. ಇವುಗಳನ್ನು ಕರಾವಳಿಯಲ್ಲಿ ಗಸ್ತು ತಿರುಗಲು ಬಳಸಲಾಗುತ್ತದೆ. ಈ ಉದ್ದೇಶಕ್ಕೆ ಸದ್ಯಕ್ಕೆ 50 ಸೆಗ್‌ವೇ ವಾಹನಗಳನ್ನು ಖರೀದಿಸಲಾಗಿದೆ.

ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ಈ ವಾಹನಗಳನ್ನು ಜನರು ಸಾಮಾಜಿಕ ಅಂತರವನ್ನು ಪಾಲಿಸುತ್ತಿದ್ದಾರೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸಲು ಬಳಸಲಾಗುತ್ತದೆ. ಪೆಟ್ರೋಲ್ ವೆಚ್ಚವನ್ನು ಸಾಧ್ಯವಾದಷ್ಟು ಮಟ್ಟಿಗೆ ಕಡಿಮೆಗೊಳಿಸುವ ಉದ್ದೇಶದಿಂದ ಈ ವಾಹನಗಳನ್ನು ಬಳಸಲಾಗುತ್ತಿದೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ಇದೇ ರೀತಿಯ ಸೆಗ್‌ವೇ ವಾಹನಗಳನ್ನು ಕೆಲವು ತಿಂಗಳ ಹಿಂದೆ ಚೆನ್ನೈ ಪೊಲೀಸರಿಗೆ ನೀಡಲಾಗಿತ್ತು. ಈ ವಾಹನಗಳನ್ನು ಟೆಸ್ಟ್ ಡ್ರೈವ್‌ಗಾಗಿ ಸೀಮಿತ ಸಂಖ್ಯೆಯಲ್ಲಿ ಖರೀದಿಸಲಾಗಿತ್ತು. ಈಗ ಮುಂಬೈ ಪುರಸಭೆ, ಸೆಗ್‌ವೇ ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಖರೀದಿಸಿದೆ.

ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ಎಲೆಕ್ಟ್ರಿಕ್ ವಾಹನಗಳನ್ನು ಈ ರೀತಿ ಸಾರ್ವಜನಿಕ ವಲಯದಲ್ಲಿ ಬಳಸುವುದರಿಂದ ಅನಗತ್ಯ ವೆಚ್ಚವನ್ನು ಕಡಿಮೆಗೊಳಿಸುವುದರ ಜೊತೆಗೆ, ಪರಿಸರಕ್ಕೆ ಹಾನಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ಸಾರ್ವಜನಿಕರು ಸಹ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಮುಂದಾಗುತ್ತಾರೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ವಿಶ್ವಾಸದ ಕೊರತೆಯಿಂದಾಗಿ ಸಾರ್ವಜನಿಕರು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಹಾಗೂ ಸರ್ಕಾರಿ ಇಲಾಖೆಗಳು ಸಾರ್ವಜನಿಕರಲ್ಲಿ ವಿಶ್ವಾಸ ತುಂಬುವುದು ಅವಶ್ಯವಾಗಿದೆ.

ಪೊಲೀಸರ ಗಸ್ತು ತಿರುಗಾಟಕ್ಕೆ ಬಂತು ಹೊಸ ಎಲೆಕ್ಟ್ರಿಕ್ ವಾಹನ

ಇದರ ಜೊತೆಗೆ ಭಾರತದಲ್ಲಿ ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡುವ ಎಲೆಕ್ಟ್ರಿಕ್ ಸ್ಟೇಷನ್‌ಗಳು ಕಡಿಮೆ ಸಂಖ್ಯೆಯಲ್ಲಿವೆ. ಈ ಮೂಲಸೌಕರ್ಯ ಕೊರತೆಯಿಂದಾಗಿ ಜನರು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿಲ್ಲ. ಚಾರ್ಜಿಂಗ್ ಸ್ಟೇಷನ್‌ಗಳು ಹೆಚ್ಚಾದಂತೆಲ್ಲಾ ಎಲೆಕ್ಟ್ರಿಕ್ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಬಹುದು.

Article Published On: Monday, June 15, 2020, 10:30 [IST]
English summary
Personal Segway for Mumbai Police at Marine Drive to monitor social distancing. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+