ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮರಾಗಿಂತ ನಿಖರ ಈ ನಾಯಿ ನೀಡುವ ಸಂಕೇತ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾ ಟ್ವಿಟರ್ ನಲ್ಲಿ ಸಕ್ರಿಯರಾಗಿರುತ್ತಾರೆ.ಸದಾ ಒಂದಿಲ್ಲೊಂದು ವೀಡಿಯೊಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.

ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮರಾಗಿಂತ ನಿಖರ ಈ ನಾಯಿ ನೀಡುವ ಸಂಕೇತ

ಈ ಬಾರಿ ನಾಯಿಗೆ ಸಂಬಂಧಿಸಿದ ವೀಡಿಯೊವೊಂದನ್ನು ಶೇರ್ ಮಾಡಿದ್ದಾರೆ. ಈ ವೀಡಿಯೊದಲ್ಲಿರುವ ಸಾಕು ನಾಯಿಗೆ ಅದರ ಮಾಲೀಕರು ಉತ್ತಮ ತರಬೇತಿಯನ್ನು ನೀಡಿದ್ದಾರೆ. ಕಾರನ್ನು ಪಾರ್ಕ್ ಮಾಡುವಾಗ ಕಾರಿನ ಹಿಂಭಾಗದಲ್ಲಿ ಕುಳಿತಿರುವ ನಾಯಿ ಕಾರು ಇನ್ನೇನು ಗೋಡೆಗೆ ಗುದಿಯಬೇಕು ಎನ್ನುವಾಗ ಕಾರನ್ನು ನಿಲ್ಲಿಸುವಂತೆ ತನ್ನ ಮಾಲೀಕನಿಗೆ ಸಂಕೇತ ನೀಡುವುದನ್ನು ಈ ವೀಡಿಯೊದಲ್ಲಿ ಕಾಣಬಹುದು.

ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮರಾಗಿಂತ ನಿಖರ ಈ ನಾಯಿ ನೀಡುವ ಸಂಕೇತ

ನಾವು ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮೆರಾದ ಬಗ್ಗೆ ಸಂಶೋಧನೆ ನಡೆಸುತ್ತಿದ್ದೇವೆ. ಆದರೆ ಈ ಡಾಗ್ ಕ್ಯಾಮೆರಾ ಹೆಚ್ಚು ಪರಿಣಾಮಕಾರಿ ಎಂದು ತೋರುತ್ತದೆ ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮರಾಗಿಂತ ನಿಖರ ಈ ನಾಯಿ ನೀಡುವ ಸಂಕೇತ

ತಂತ್ರಜ್ಞಾನದ ಆಗಮನದ ನಂತರವೂ ಮಾನವ ಮೌಲ್ಯಗಳು ಹಾಗೂ ಅನುಭವಗಳ ಪ್ರಾಮುಖ್ಯತೆ ಕಡಿಮೆಯಾಗಿಲ್ಲಎಂದು ಅವರು ಹೇಳಿದ್ದಾರೆ. ಈ ವೀಡಿಯೊವನ್ನು ಹಲವಾರು ಬಾರಿ ರಿಟ್ವೀಟ್ ಮಾಡಲಾಗಿದ್ದು, 1 ಸಾವಿರಕ್ಕೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ.

ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮರಾಗಿಂತ ನಿಖರ ಈ ನಾಯಿ ನೀಡುವ ಸಂಕೇತ

ಇತ್ತೀಚೆಗಷ್ಟೇ ಆನಂದ್ ಮಹೀಂದ್ರಾ ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ ಚಿತ್ರವೊಂದನ್ನು ಟ್ವಿಟರ್ ನಲ್ಲಿ ಶೇರ್ ಮಾಡಿದ್ದರು. ಈ ಚಿತ್ರದಲ್ಲಿ ಹೆಲಿಕಾಪ್ಟರ್ ಮಹೀಂದ್ರಾ ಟ್ರ್ಯಾಕ್ಟರ್ ಅನ್ನು ಹೊತ್ತು ಹಾರಾಟ ನಡೆಸುತ್ತಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮರಾಗಿಂತ ನಿಖರ ಈ ನಾಯಿ ನೀಡುವ ಸಂಕೇತ

ಈ ಚಿತ್ರವನ್ನು ಶೇರ್ ಮಾಡಿದ್ದ ಆನಂದ್ ಮಹೀಂದ್ರಾ ಅವರು ಕೇವಲ ಮಹೀಂದ್ರಾ ಟ್ರಾಕ್ಟರ್ ಮಾತ್ರ 11 ಸಾವಿರ ಅಡಿ ಎತ್ತರದಲ್ಲಿ ಹಾರಬಲ್ಲ ಶಕ್ತಿಯನ್ನು ಹೊಂದಿದೆ ಎಂದು ಹೇಳಿದ್ದರು.

ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮರಾಗಿಂತ ನಿಖರ ಈ ನಾಯಿ ನೀಡುವ ಸಂಕೇತ

ಭಾರತೀಯ ವಾಯುಪಡೆ ಹಾಗೂ ಮಹೀಂದ್ರಾ ಕಂಪನಿ ಮಾತ್ರ ಯಾವಾಗಲೂ ಮುಂಚೂಣಿಯಲ್ಲಿ ಉಳಿಯುವ ಕೆಲಸ ಮಾಡುತ್ತವೆ ಎಂದು ಅವರು ಹೇಳಿದ್ದರು. ಈ ಚಿತ್ರವು 100ಕ್ಕೂ ಹೆಚ್ಚು ರಿಟ್ವೀಟ್‌ ಹಾಗೂ 2.5 ಸಾವಿರಕ್ಕೂ ಹೆಚ್ಚು ಲೈಕ್‌ಗಳನ್ನು ಪಡೆದಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಲಡಾಖ್, ಕಾಶ್ಮೀರ, ಹಿಮಾಚಲ ಪ್ರದೇಶ ಹಾಗೂ ಅರುಣಾಚಲ ಪ್ರದೇಶದ ಸಾವಿರಾರು ಅಡಿ ಎತ್ತರದಲ್ಲಿರುವ ಹೊರಠಾಣೆಗಳಿಗೆ ಪ್ರಯಾಣಿಸಲು ಭಾರತೀಯ ವಾಯುಪಡೆಯು ಹೆಲಿಕಾಪ್ಟರ್‌ಗಳನ್ನು ಬಳಸುತ್ತದೆ. ಅಂತಹ ಸ್ಥಳಗಳಲ್ಲಿ ವಾಯುಪಡೆಯು ಭಾರೀ ಸರಕುಗಳನ್ನು ಸಾಗಿಸಲು ಟ್ರಾಕ್ಟರುಗಳನ್ನು ಬಳಸುತ್ತದೆ.

ರಿವರ್ಸ್ ಪಾರ್ಕಿಂಗ್ ರೇರ್ ಕ್ಯಾಮರಾಗಿಂತ ನಿಖರ ಈ ನಾಯಿ ನೀಡುವ ಸಂಕೇತ

ಇದರ ಜೊತೆಗೆ ಆನಂದ್ ಮಹೀಂದ್ರಾರವರು ಇತ್ತೀಚಿಗೆ 3 ಕಿ.ಮೀ ಉದ್ದದ ಕಾಲುವೆ ತೋಡಿದ್ದ ಬಿಹಾರದ ರೈತನಿಗೆ ಟ್ರಾಕ್ಟರ್ ಅನ್ನು ಉಡುಗೊರೆಯಾಗಿ ನೀಡಿದ್ದರು. ತನ್ನ ಹಳ್ಳಿಯ ಕೃಷಿ ಸಮಸ್ಯೆಯನ್ನು ನಿವಾರಿಸಲು ಆ ರೈತ 30 ವರ್ಷಗಳ ಕಠಿಣ ಪರಿಶ್ರಮದಿಂದ 3 ಕಿಲೋಮೀಟರ್ ಉದ್ದದ ಕಾಲುವೆಯನ್ನು ನಿರ್ಮಿಸಿದ್ದರು.

Most Read Articles

Kannada
English summary
Pet dog helps owner to park his car video shared by Anand Mahindra. Read in Kannada.
Story first published: Tuesday, November 10, 2020, 20:06 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X