ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಕೆಲವರು ಸಾಕು ಪ್ರಾಣಿಗಳನ್ನು ತಮ್ಮ ಕುಟುಂಬದ ಸದಸ್ಯರಂತೆಯೇ ಪೋಷಿಸುತ್ತಾರೆ. ಇನ್ನೂ ಕೆಲವರು ಅವುಗಳನ್ನು ಮಕ್ಕಳಂತೆಯೇ ಬೆಳೆಸುತ್ತಾರೆ. ಇನ್ನು ಸಾಕು ಪ್ರಾಣಿಗಳು ಸಹ ತಮ್ಮ ಮಾಲೀಕರ ಮೇಲೆ ಅತೀವ ಪ್ರೀತಿಯನ್ನು ತೋರುತ್ತವೆ. ತಾವು ಸಾಯುವವರೆಗೂ ತಮ್ಮ ಮಾಲೀಕರಿಗೆ ನಿಷ್ಠೆಯಿಂದ ಇರುತ್ತವೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಗ್ರಾಮೀಣ ಪ್ರದೇಶಗಳಿಗಿಂತ ಹೆಚ್ಚಾಗಿ ನಗರ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳನ್ನು ಮುತುವರ್ಜಿಯಿಂದ ಪಾಲನೆ ಪೋಷಣೆ ಮಾಡಲಾಗುತ್ತದೆ. ಮನುಷ್ಯರು ಸಾಕು ಪ್ರಾಣಿಗಳ ಬಗ್ಗೆ ಅದರಲ್ಲೂ ವಿಶೇಷವಾಗಿ ನಾಯಿಗಳ ಬಗ್ಗೆ ತುಂಬಾ ಹೆಚ್ಚು ಪ್ರೀತಿ ತೋರಲು ಹಾಗೂ ಕಾಳಜಿ ವಹಿಸಲು ಹಲವಾರು ಕಾರಣಗಳಿವೆ. ನಾಯಿಗಳು ತಮ್ಮ ಮಾಲೀಕರಿಗೆ ತೋರುವ ನಿಷ್ಠೆ ಅವುಗಳ ಬಗ್ಗೆ ಜನರು ಹೆಚ್ಚು ಕಾಳಜಿ ತೋರಲು ಪ್ರಮುಖ ಕಾರಣವಾಗಿದೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇತ್ತೀಚಿಗೆ ನಡೆದಿದೆ. ಈ ಘಟನೆಯಲ್ಲಿ ನಾಯಿಯೊಂದು ಪ್ರವಾಹದಲ್ಲಿ ಸಿಲುಕಿದ್ದ ಕಾರನ್ನು ಮುಂದಕ್ಕೆ ಚಲಿಸಲು ಸಾಧ್ಯವಾಗದೇ ಪರದಾಡುತ್ತಿದ್ದ ತನ್ನ ಯಜಮಾನಿಗೆ ನೆರವಾಗಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಜನರ ಗಮನ ಸೆಳೆಯುತ್ತಿದೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ನಿರ್ದಿಷ್ಟವಾಗಿ ಹೇಳುವುದಾದರೆ ಈ ಘಟನೆ ಸಾಕು ಪ್ರಾಣಿಗಳನ್ನು ಹೊಂದಿರುವವರ ಬಗ್ಗೆ ಸಾರ್ಥಕ ಭಾವನೆ ಮೂಡುವಂತೆ ಮಾಡುತ್ತದೆ. ಈ ಘಟನೆ ಸ್ಕಾಟ್ಲೆಂಡ್ ದೇಶದಲ್ಲಿ ನಡೆದಿದೆ ಎಂದು ವರದಿಯಾಗಿದೆ. ಪ್ರಪಂಚದ ಹಲವು ದೇಶಗಳಲ್ಲಿ ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮಳೆಯಾಗುತ್ತಿದೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಅಂದ ಹಾಗೆ ಇತ್ತೀಚೆಗೆ ಚೀನಾ ದೇಶವು ಭಾರೀ ಮಳೆಯಿಂದ ಪ್ರವಾಹ ಪರಿಸ್ಥಿತಿಯನ್ನು ಎದುರಿಸಿತ್ತು. ಸ್ಕಾಟ್ಲೆಂಡ್ ದೇಶವು ಸಹ ಇದೇ ರೀತಿಯ ಪ್ರವಾಹದಿಂದ ತತ್ತರಿಸುತ್ತಿದೆ. ಆ ದೇಶದ ವಿವಿಧ ಭಾಗಗಳಲ್ಲಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಈ ಸನ್ನಿವೇಶದಲ್ಲಿ ತಮ್ಮ ಕುಟುಂಬದೊಂದಿಗೆ ಕಾರಿನಲ್ಲಿ ಬಂದ ವ್ಯಕ್ತಿಯೊಬ್ಬರು ಕಾರನ್ನು ಚಾಲನೆ ಮಾಡಲು ಸಾಧ್ಯವಾಗದೆ ಮಳೆಯಲ್ಲಿ ಸಿಲುಕಿಕೊಂಡಿದ್ದಾರೆ. ಬಹಳ ಸಮಯದ ನಂತರವೂ ಕಾರು ಮುಂದಕ್ಕೆ ಚಲಿಸಲು ಸಾಧ್ಯವಾಗದ ಕಾರಣ ಕಾರಿನ ಮಾಲೀಕರು ಇಳಿದು ಕಾರನ್ನು ತಳ್ಳಲು ಆರಂಭಿಸಿದ್ದಾರೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಅವರ ಜೊತೆಯಲ್ಲಿಯೇ ಬಂದ ಅವರ ಸಾಕು ನಾಯಿ ಕಾರು ತಳ್ಳಲು ಕಷ್ಟಪಡುತ್ತಿದ್ದ ತನ್ನ ಮಾಲೀಕರಿಗೆ ಸಹಾಯ ಮಾಡಲು ಮುಂದಾಗಿದೆ. ಆ ವ್ಯಕ್ತಿಯು ಕಾರನ್ನು ತಳ್ಳಲು ಕಷ್ಟಪಡುತ್ತಿದ್ದಾಗ ನಾಯಿಯೂ ಸಹ ತನ್ನ ಮುಂಭಾಗದ ಕಾಲುಗಳಿಂದ ಕಾರನ್ನು ಮುಂದಕ್ಕೆ ತಳ್ಳಲು ಸಹಾಯ ಮಾಡಿದೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಮೊದಲೇ ಕಾರಿನಿಂದ ಕೆಳಗಿಳಿದ ನಾಯಿ ತನ್ನ ಸುತ್ತಲೂ ಇದ್ದ ನೀರಿನಲ್ಲಿ ಈಜುತ್ತಿತ್ತು. ತರುವಾಯ ತನ್ನ ಮಾಲೀಕರಿಗೆ ಕಾರನ್ನು ತಳ್ಳುವುದು ಕಷ್ಟವಾಗುತ್ತಿದೆ ಎಂದು ಅರಿತು ತಾನು ಸಹ ಕಾರು ತಳ್ಳಲು ಸಹಾಯ ಮಾಡಿದೆ. ಆ ಸಾಕು ನಾಯಿಯ ಯಜಮಾನಿ ಕಾರಿನಿಂದ ಇಳಿದು ಕಾರನ್ನು ತಳ್ಳಿದ್ದಾರೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಇದರ ಜೊತೆಗೆ ಆ ಮಹಿಳೆಯೊಬ್ಬರೇ ಕಾರ್ ಆನ್ನು ಮುಂದಕ್ಕೆ ತಳ್ಳುತ್ತಿದ್ದರು. ಆ ಸಾಕು ನಾಯಿ ಅಸಾಧ್ಯವಾದರೂ ಸಹ ಕಾರ್ ಅನ್ನು ಮುಂದಕ್ಕೆ ತಳ್ಳಲು ತನ್ನ ಯಜಮಾನಿಗೆ ನೆರವು ನೀಡಿದೆ. ಸಾಕು ನಾಯಿಯ ಈ ಕೃತ್ಯ ಜನರ ಗಮನವನ್ನು ತನ್ನತ್ತ ಸೆಳೆದಿದೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ವೀಡಿಯೊ ನೋಡಿರುವವರು ಸಾಕು ನಾಯಿಯ ಈ ಕೃತ್ಯಕ್ಕೆ ಬಹು ಪರಾಕ್ ಹೇಳಿದ್ದಾರೆ. ಗಿಲ್ಲೀಸ್ ಎಂಬ ವ್ಯಕ್ತಿ ತಮ್ಮ ಮನೆಯ ಟೆರೇಸ್ ಮೇಲೆ ನಿಂತು ಮೊಬೈಲ್ ಫೋನ್ ಮೂಲಕ ಈ ಘಟನೆಯನ್ನು ರೆಕಾರ್ಡ್ ಮಾಡಿ, ಆ ವೀಡಿಯೊವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಮಳೆ ನೀರಿನಿಂದ ಉಂಟಾದ ಪ್ರವಾಹದಿಂದ ಸಾಕು ನಾಯಿ ತನ್ನ ಯಜಮಾನಿಯ ನೆರವಿಗೆ ಧಾವಿಸಿದೆ ಎಂದು ಬರೆದು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಈ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಪೋಸ್ಟ್ ಮಾಡಿದ ಕೆಲವೇ ಗಂಟೆಗಳಲ್ಲಿ 5,000 ಕ್ಕೂ ಹೆಚ್ಚು ಜನರು ಈ ವೀಡಿಯೊವನ್ನು ಶೇರ್ ಮಾಡಿದ್ದಾರೆ.

ಇನ್ನು ನಾಲ್ಕು ಸಾವಿರಕ್ಕೂ ಹೆಚ್ಚು ಜನರು ಲೈಕ್‌ ಮಾಡಿದ್ದಾರೆ. ಈ ವೀಡಿಯೊ ಮೂಲಕ ಸಾಕು ನಾಯಿ ಇಂಟರ್ ನೆಟ್ ನಲ್ಲಿ ಸದ್ದು ಮಾಡುತ್ತಿದೆ. ಸಾಕು ನಾಯಿಗಳು ತಮ್ಮ ಯಜಮಾನರಿಗೆ ಆಪ್ತ ಸ್ನೇಹಿತರಾಗಿ ವರ್ತಿಸುತ್ತಿರುವುದು ಇದೇ ಮೊದಲಲ್ಲ. ಭಾರತದಲ್ಲೂ ಈ ರೀತಿಯ ಹಲವು ಘಟನೆಗಳು ನಡೆದಿವೆ. ಸಾಕು ನಾಯಿಗಳು ಹಾವಿನಿಂದ ಮಗುವನ್ನು ರಕ್ಷಿಸುವಂತಹ, ಮಹಿಳೆಯನ್ನು ಕಳ್ಳನಿಂದ ರಕ್ಷಿಸುವಂತಹ ಹಲವು ವಿಸ್ಮಯಕಾರಿ ಕಾರ್ಯಗಳನ್ನು ಮಾಡಿವೆ.

ಮಳೆ ನೀರಿನಲ್ಲಿ ನಿಂತಿದ್ದ ಕಾರನ್ನು ಮುಂದಕ್ಕೆ ತಳ್ಳಲು ಯಜಮಾನಿಗೆ ನೆರವಾದ ಸಾಕು ನಾಯಿ

ಇಂತಹ ಕಾರ್ಯಗಳಲ್ಲಿ ತೊಡಗುವುದರಿಂದಲೇ ಜನರು ನಾಯಿಗಳನ್ನು ಮಕ್ಕಳಂತೆ ಸಾಕುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಮನುಷ್ಯರು ನಾಯಿಗಳ ಮೇಲೆ ಹೊಂದಿರುವದೃಷ್ಟಿಕೋನಕ್ಕೆ ಪುಷ್ಟಿ ನೀಡುವಂತಹ ಈ ಘಟನೆ ನಡೆದಿದೆ. ಈ ಘಟನೆ ನಾಯಿಗಳ ಬಗ್ಗೆ ಮನುಷ್ಯರಲ್ಲಿ ಮತ್ತಷ್ಟು ಪ್ರೀತಿ ಹುಟ್ಟುವಂತೆ ಮಾಡುವುದು ಸುಳ್ಳಲ್ಲ.

Most Read Articles

Kannada
English summary
Pet dog helps woman to push car stuck in rain water video details
Story first published: Thursday, August 12, 2021, 20:41 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X