ಕುಸಿದು ಬಿದ್ದ ಯಜಮಾನಿಯ ನೆರವಿಗೆ ಧಾವಿಸಿದ ಸಾಕು ನಾಯಿ

ವಾಕಿಂಗ್ ಮಾಡುತ್ತಿದ್ದ ವೇಳೆ ಕುಸಿದು ಬಿದ್ದ ತನ್ನ ಯಜಮಾನಿಗೆ ಸಹಾಯ ಪಡುವ ಸಲುವಾಗಿ ಸಾಕು ನಾಯಿಯೊಂದು ವಾಹನವೊಂದನ್ನು ಅಡ್ಡಗಟ್ಟಿದ ಘಟನೆ ವರದಿಯಾಗಿದೆ. ವಾಹನ ತಡೆದು ಯಜಮಾನಿಗೆ ನೆರವಾದ ಸಾಕು ನಾಯಿಯನ್ನು ಹೀರೋ ಎಂದು ಪ್ರಶಂಸಿಸಲಾಗುತ್ತಿದೆ.

ಕುಸಿದು ಬಿದ್ದ ಯಜಮಾನಿಯ ನೆರವಿಗೆ ಧಾವಿಸಿದ ಸಾಕು ನಾಯಿ

ಹ್ಯಾಲೆ ಮೂರ್ ಎಂಬುವವರು ಕಳೆದ ವಾರ ತಮ್ಮ ಒಂದೂವರೆ ವರ್ಷದ ಕ್ಲೋವರ್ ಎಂಬ ಸಾಕು ನಾಯಿಯ ಜೊತೆಗೆ ವಾಕಿಂಗ್ ಹೋಗಿದ್ದರು. ಹೀಗೆ ವಾಕಿಂಗ್ ಮಾಡುವಾಗ ಹ್ಯಾಲೆ ಮೂರ್ ಇದ್ದಕ್ಕಿದ್ದಂತೆ ಕುಸಿದು ಬಿದ್ದರು.

ಕುಸಿದು ಬಿದ್ದ ಯಜಮಾನಿಯ ನೆರವಿಗೆ ಧಾವಿಸಿದ ಸಾಕು ನಾಯಿ

ಹ್ಯಾಲೆ ಮೂರ್ ಕುಸಿದು ಬಿದ್ದಿರುವುದನ್ನು ಗಮನಿಸಿದ ಕ್ಲೋವರ್'ಗೆ ತನ್ನ ಯಜಮಾನಿಗೆ ನೆರವಿನ ಅಗತ್ಯವಿರುವುದು ಕಂಡು ಬಂದಿದೆ. ತಕ್ಷಣವೇ ಕ್ಲೋವರ್ ರಸ್ತೆಯಲ್ಲಿ ನಿಂತು ವಾಹನವನ್ನು ಅಡ್ಡಗಟ್ಟಿದೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

ಕುಸಿದು ಬಿದ್ದ ಯಜಮಾನಿಯ ನೆರವಿಗೆ ಧಾವಿಸಿದ ಸಾಕು ನಾಯಿ

ವಾಹನದಲ್ಲಿದ್ದವರು ವಾಹನದಿಂದ ಕೆಳಗಿಳಿದು ಹ್ಯಾಲೆ ಮೂರ್'ರವರ ಬಳಿ ನೆರವಾಗಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ಇದು ನಿಜಕ್ಕೂ ಅದ್ಭುತವಾದ ಸಂಗತಿಯಾಗಿದೆ. ನಾಯಿ ನನ್ನ ವಾಹನವನ್ನು ಅಡ್ಡಗಟ್ಟಿದ ಕಾರಣಕ್ಕೆ ನಾನು ಹ್ಯಾಲೆ ಮೂರ್'ರವರ ನೆರವಿಗೆ ಧಾವಿಸಿದೆ.

ಕುಸಿದು ಬಿದ್ದ ಯಜಮಾನಿಯ ನೆರವಿಗೆ ಧಾವಿಸಿದ ಸಾಕು ನಾಯಿ

ನಾನು ಅವರನ್ನು ಪರೀಕ್ಷಿಸುತ್ತಿರುವ ವೇಳೆ ಕ್ಲೋವರ್ ನನ್ನನ್ನೇ ನೋಡುತ್ತಿತ್ತು. ಹ್ಯಾಲೆ ಮೂರ್'ರವರಿಗೆ ಯಾವುದೇ ತೊಂದರೆಯಾಗಿಲ್ಲವೆಂಬುದನ್ನು ಖಚಿತ ಪಡಿಸಿಕೊಂಡ ನಂತರ ಸಮಾಧಾನ ಪಟ್ಟುಕೊಂಡಿತು ಎಂದು ಆ ಟ್ರಕಿನ ಚಾಲಕ ಡ್ರೈಡನ್ ಓಟ್ವೇ ಸಿಟಿವಿ ನ್ಯೂಸ್'ಗೆ ಮಾಹಿತಿ ನೀಡಿದ್ದಾರೆ.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

ಕುಸಿದು ಬಿದ್ದ ಯಜಮಾನಿಯ ನೆರವಿಗೆ ಧಾವಿಸಿದ ಸಾಕು ನಾಯಿ

ಇಷ್ಟ್ರಕ್ಕೆ ಸುಮ್ಮನಾಗದ ಕ್ಲೋವರ್ ಬೇರೆಯವರ ಸಹಾಯವನ್ನು ಸಹ ಪಡೆದಿದೆ. ಈ ಬಗ್ಗೆ ಮಾತನಾಡಿರುವ ಡೇನಿಯಲ್ ಪಿಲಾನ್ ಎಂಬುವವರು ನಾನು ಜೀಪಿನಿಂದ ಇಳಿದು ಎಲ್ಲವೂ ಸರಿಯಾಗಿದೆಯೇ ಎಂದು ನಾನು ಡ್ರೈಡನ್ ಅವರನ್ನು ಕೇಳಿದೆ. ಅವರು ಸರಿಯಾಗಿ ಗೊತ್ತಿಲ್ಲವೆಂದರು ಎಂದು ಹೇಳಿದರು.

ಕುಸಿದು ಬಿದ್ದ ಯಜಮಾನಿಯ ನೆರವಿಗೆ ಧಾವಿಸಿದ ಸಾಕು ನಾಯಿ

ನಂತರ ಡೇನಿಯಲ್ ಪಿಲಾನ್, ಕ್ಲೋವರ್ ಜೊತೆಗೆ ಹ್ಯಾಲೆ ಮೂರ್'ರವರ ಮನೆಗೆ ತೆರಳಿ ಅವರ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಕ್ಲೋವರ್ ಹಾಗೂ ಹ್ಯಾಲೆ ಮೂರ್ ಕುಟುಂಬದವರು ಬಂದಾಗ ಅವರು ಆಂಬುಲೆನ್ಸ್‌ನಲ್ಲಿದ್ದರು.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

ನನಗೆ ಎಚ್ಚರವಾದಾಗ ನಾನು ಆಂಬ್ಯುಲೆನ್ಸ್‌ನಲ್ಲಿದ್ದೆ. ನಿಜವಾಗಿಯೂ ಏನು ನಡೆಯುತ್ತಿದೆ ಎಂಬುದು ತಿಳಿಯದೆ ಗೊಂದಲಕ್ಕೀಡಾಗಿದ್ದೆ ಎಂದು ಹ್ಯಾಲೆ ಮೂರ್ ಹೇಳಿದರು. ಘಟನೆಯಲ್ಲಿ ಹ್ಯಾಲಿ ಮೂರ್'ರವರಿಗೆ ಗಂಭೀರವಾದ ಗಾಯಗಳಾಗಿಲ್ಲ. ಅವರು ಯಾವ ಕಾರಣಕ್ಕೆ ಕುಸಿದು ಬಿದ್ದರು ಎಂಬುದನ್ನು ವೈದ್ಯರು ಪತ್ತೆಹಚ್ಚುತ್ತಿದ್ದಾರೆ.

ಕುಸಿದು ಬಿದ್ದ ಯಜಮಾನಿಯ ನೆರವಿಗೆ ಧಾವಿಸಿದ ಸಾಕು ನಾಯಿ

ತಮ್ಮ ಮುದ್ದಿನ ನಾಯಿ ತಮ್ಮನ್ನು ರಕ್ಷಿಸಿದ ಬಗ್ಗೆ ಖುಷಿಯಾಗಿರುವ ಹ್ಯಾಲೆ ಮೂರ್, ಕ್ಲೋವರ್ ತನ್ನ ಜೊತೆಗಿರುವಾಗ ನಾನು 10 ಪಟ್ಟು ಸುರಕ್ಷಿತಳೆಂದು ಭಾವಿಸುತ್ತೇನೆ ಎಂದು ಹೇಳಿದರು.

ಮೂಲ: ಸಿಟಿವಿ ನ್ಯೂಸ್/ಯೂಟ್ಯೂಬ್

Most Read Articles

Kannada
English summary
Pet Dog stops vehicle to get help for master. Read in Kannada.
Story first published: Monday, March 29, 2021, 17:24 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X