ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಭಾರತದ ನೀರಜ್ ಚೋಪ್ರಾ ಟೋಕಿಯೊ ಒಲಂಪಿಕ್ಸ್ ನಲ್ಲಿ ಜಾವೆಲಿನ್ ಥ್ರೋದಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರಿಗೆ ಎಲ್ಲೆಡೆಯಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಜೊತೆಗೆ ಹಲವಾರು ಕಡೆಗಳಿಂದ ಉಡುಗೊರೆಗಳು ಸಹ ದೊರೆಯುತ್ತಿವೆ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಮಹೀಂದ್ರಾ ಅಂಡ್ ಮಹೀಂದ್ರಾ ಕಂಪನಿಯ ಅಧ್ಯಕ್ಷರಾದ ಆನಂದ್ ಮಹೀಂದ್ರಾರವರು ನೀರಜ್ ಚೋಪ್ರಾರವರಿಗೆ ಶೀಘ್ರದಲ್ಲಿಯೇ ಬಿಡುಗಡೆಯಾಗಲಿರುವ ಎಕ್ಸ್‌ಯು‌ವಿ 700 ಕಾರ್ ಅನ್ನು ಉಡುಗೊರೆಯಾಗಿ ನೀಡುವುದಾಗಿ ಘೋಷಿಸಿದ್ದಾರೆ. ನೀರಜ್ ಚೋಪ್ರಾ ಅವರ ಗೆಲುವನ್ನು ಭಾರತೀಯರು ತಮ್ಮ ಗೆಲುವಿನಂತೆ ಸಂಭ್ರಮಿಸುತ್ತಿದ್ದಾರೆ. ಈಗ ಗುಜರಾತಿನ ಪೆಟ್ರೋಲ್ ಬಂಕ್ ಮಾಲೀಕರೊಬ್ಬರು ನೀರಜ್ ಚೋಪ್ರಾರವರ ಗೆಲುವನ್ನು ವಿಭಿನ್ನ ರೀತಿಯಲ್ಲಿ ಆಚರಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಗುಜರಾತಿನ ಬರೂಚ್ ಬಳಿಯಿರುವ ನೀತ್ರಾಂಗ್ ನಲ್ಲಿ ಎಸ್‌ಪಿ ಎಂಬ ಹೆಸರಿನ ಪೆಟ್ರೋಲ್ ಬಂಕ್ ಇದೆ. ಈ ಪೆಟ್ರೋಲ್ ಬಂಕ್ ಮಾಲೀಕರ ಹೆಸರು ಅಯೂಬ್ ಪಠಾಣ್. ನೀರಜ್ ಚೋಪ್ರಾ ಗೆಲುವನ್ನು ಅವರು ವಿಭಿನ್ನ ರೀತಿಯಲ್ಲಿ ಆಚರಿಸಿದ್ದಾರೆ. ನೀರಜ್ ಹೆಸರನ್ನು ಹೊಂದಿರುವವರಿಗೆ ಅವರು ರೂ. 501 ಬೆಲೆಯ ಪೆಟ್ರೋಲ್ ಆನ್ನು ಉಚಿತವಾಗಿ ನೀಡಿದ್ದಾರೆ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಈ ಕೊಡುಗೆಯನ್ನು ಅವರು ಕೇವಲ ಒಂದು ದಿನ ಅಂದರೆ ಆಗಸ್ಟ್ 9 ರಂದು ತಮ್ಮ ಎಸ್‌ಪಿ ಪೆಟ್ರೋಲ್ ಬಂಕ್'ನಲ್ಲಿ ನೀಡಿದರು. ಈ ಬಗ್ಗೆ ಮಾಹಿತಿ ಪಡೆದ ನೀರಜ್ ಎಂಬ ಹೆಸರಿನ ಹಲವಾರು ಜನರು ಎಸ್‌ಪಿ ಪೆಟ್ರೋಲ್ ಬಂಕಿಗೆ ತೆರಳಿ ಉಚಿತ ಪೆಟ್ರೋಲ್ ಪಡೆದಿದ್ದಾರೆ. ತಮ್ಮ ಹೆಸರು ನೀರಜ್ ಎಂದು ಸಾಬೀತುಪಡಿಸಲು ಅವರು ಯಾವುದಾದರೂ ದಾಖಲೆಗಳನ್ನು ತೋರಿಸಬೇಕಾಗಿತ್ತು.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಈ ಹಿನ್ನೆಲೆಯಲ್ಲಿ ಹಲವಾರು ಜನರು ಆಧಾರ್ ಕಾರ್ಡ್ ನಂತಹ ದಾಖಲೆಗಳನ್ನು ತೋರಿಸುವ ಮೂಲಕ ಉಚಿತವಾಗಿ ರೂ. 501 ಬೆಲೆಯ ಪೆಟ್ರೋಲ್ ಪಡೆದಿದ್ದಾರೆ. ವರದಿಗಳ ಪ್ರಕಾರ, ನೀರಜ್ ಹೆಸರಿನ 30 ಕ್ಕೂ ಹೆಚ್ಚು ಜನರು ಸರಿಯಾದ ದಾಖಲೆಗಳನ್ನು ತೋರಿಸಿ ಉಚಿತವಾಗಿ ರೂ. 501 ಗಳ ಪೆಟ್ರೋಲ್ ಪಡೆದಿದ್ದಾರೆ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಈ ಮೂಲಕ ಎಸ್‌ಪಿ ಪೆಟ್ರೋಲ್ ಬಂಕ್ ಮಾಲೀಕ ಅಯೂಬ್ ಪಠಾಣ್ ಎಲ್ಲರ ಗಮನ ಸೆಳೆದಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಯೂಬ್ ಪಠಾಣ್, ಭಾರತವನ್ನು ಹೆಮ್ಮೆ ಪಡುವಂತೆ ಮಾಡಿದ ನೀರಜ್ ಚೋಪ್ರಾರವರಿಗೆ ಗೌರವ ಸಲ್ಲಿಸುವುದು ನನ್ನ ಉದ್ದೇಶ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಅದರಂತೆ ನೀರಜ್ ಹೆಸರಿನವರಿಗೆ ನಾನು ರೂ. 501 ಗಳ ಉಚಿತ ಪೆಟ್ರೋಲ್ ನೀಡಲು ನಿರ್ಧರಿಸಿದ್ದೇನೆ. ಈ ಕೊಡುಗೆಯಿಂದ ಪ್ರಯೋಜನ ಪಡೆದ ಪ್ರತಿಯೊಬ್ಬರೂ ಉತ್ಸುಕರಾಗಿದ್ದಾರೆ ಎಂದು ಹೇಳಿದ್ದಾರೆ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಈ ಪೆಟ್ರೋಲ್ ಬಂಕ್ ನಲ್ಲಿ ರೂ. 501 ಗಳ ಉಚಿತ ಪೆಟ್ರೋಲ್ ಪಡೆದ ನೀರಜ್ ಎಂಬ ವ್ಯಕ್ತಿ, ಈ ಮಾಹಿತಿಯ ಬಗ್ಗೆ ನನಗೆ ಸಂಬಂಧಿಕರ ಮೂಲಕ ತಿಳಿಯಿತು. ಮೊದಲಿಗೆ ಇದು ಸುಳ್ಳು ಎಂದು ಭಾವಿಸಿದ್ದೆ. ನಂತರ ನನ್ನ ಹೆಸರನ್ನು ಹೊಂದಿರುವ ದಾಖಲೆಗಳೊಂದಿಗೆ ಆ ಪೆಟ್ರೋಲ್ ಬಂಕಿಗೆ ಹೋದೆ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಅಲ್ಲಿ ಅವರು ನನ್ನ ದಾಖಲೆಗಳನ್ನು ಪರಿಶೀಲಿಸಿ, ನನಗೆ ರೂ. 501 ಗಳ ಪೆಟ್ರೋಲ್ ಅನ್ನು ಉಚಿತವಾಗಿ ನೀಡಿದರು ಎಂದು ಹೇಳಿದರು. ಭಾರತದಲ್ಲಿ ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದರೂ ಸಹ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಕೀರ್ತಿ ತಂದ ನೀರಜ್ ಚೋಪ್ರಾರವರಿಗೆ ಗೌರವ ಸಲ್ಲಿಸಲು ಅಯೂಬ್ ಪಠಾಣ್ ಈ ಕಾರ್ಯಕ್ಕೆ ಮುಂದಾಗಿದ್ದಾರೆ ಎಂಬುದು ಗಮನಾರ್ಹ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಭಾರತದಲ್ಲಿ ಪೆಟ್ರೋಲ್ ಬೆಲೆಯ ಜೊತೆಗೆ ಡೀಸೆಲ್ ಬೆಲೆಯು ಸಹ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಇಂತಹ ಸನ್ನಿವೇಶದಲ್ಲಿ ರೂ. 501 ಗಳ ಪೆಟ್ರೋಲ್ ಅನ್ನು ಉಚಿತವಾಗಿ ನೀಡುವುದು ನಿಜಕ್ಕೂ ದೊಡ್ಡ ವಿಷಯವಾಗಿದೆ. ಭಾರತದಲ್ಲಿ ಪೆಟ್ರೋಲ್‌ ಅನ್ನು ಹಲವು ವಸ್ತುಗಳ ಜೊತೆಗೆ ಉಚಿತವಾಗಿ ನೀಡುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಈ ಹಿಂದೆ ಕೇಕ್ ಖರೀದಿಸಿದರೆ ಪೆಟ್ರೋಲ್ ಉಚಿತ ಹಾಗೂ ಬಿರಿಯಾನಿ ಖರೀದಿಸಿದರೆ ಪೆಟ್ರೋಲ್ ಉಚಿತ ಎಂಬ ವಿವಿಧ ಕೊಡುಗೆಗಳನ್ನು ಘೋಷಿಸಲಾಗಿತ್ತು. ಪೆಟ್ರೋಲ್ ಬೆಲೆ ಏರಿಕೆಯಾಗುತ್ತಿದ್ದಂತೆ ಈ ರೀತಿಯ ಕೊಡುಗೆಗಳನ್ನು ನೀಡಲಾಗುತ್ತಿದೆ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಮದುವೆ ಸಮಾರಂಭಗಳಲ್ಲಿ ಕೆಲವರು ವಧು ವರರಿಗೆ ಉಡುಗೊರೆಯಾಗಿ ಪೆಟ್ರೋಲ್ ಹಾಗೂ ಡೀಸೆಲ್ ನೀಡುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ವಿರೋಧಿಸಿ ದೇಶದ ವಿವಿಧೆಡೆ ಪ್ರತಿಭಟನೆಗಳು ಸಹ ನಡೆದಿವೆ. ಸದ್ಯಕ್ಕೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುವ ಯಾವುದೇ ಲಕ್ಷಣಗಳಿಲ್ಲ.

ನೀರಜ್ ಹೆಸರಿನ ವ್ಯಕ್ತಿಗಳಿಗೆ ಉಚಿತವಾಗಿ ರೂ.501 ಬೆಲೆಯ ಪೆಟ್ರೋಲ್ ನೀಡಿದ ಪೆಟ್ರೋಲ್ ಬಂಕ್ ಮಾಲೀಕ

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಕುಸಿತವಾಗುತ್ತಿದ್ದರೂ ಅದರ ಸಂಪೂರ್ಣ ಪ್ರಯೋಜನಗಳು ಭಾರತೀಯ ವಾಹನ ಸವಾರರಿಗೆ ಲಭ್ಯವಾಗುತ್ತಿಲ್ಲ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಧಿಸುತ್ತಿರುವ ದುಬಾರಿ ತೆರಿಗೆಗಳೇ ಕಾರಣವಾಗಿದೆ. ಇದರಿಂದ ಭಾರತೀಯರು ಎಲೆಕ್ಟ್ರಿಕ್ ವಾಹನಗಳ ಖರೀದಿಗೆ ಮುಂದಾಗುತ್ತಿದ್ದಾರೆ.

Most Read Articles

Kannada
English summary
Petrol bunk owner gives free fuel to people who has the name neeraj details
Story first published: Tuesday, August 10, 2021, 21:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X