ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮುಂದುವರಿದಿದೆ. ಶುಕ್ರವಾರ ಸತತ ನಾಲ್ಕನೇ ದಿನ ಇಂಧನ ದರವನ್ನು ಹೆಚ್ಚಿಸಲಾಗಿದೆ. ಶುಕ್ರವಾರ ಪೆಟ್ರೋಲ್ ಬೆಲೆಯಲ್ಲಿ 30 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಬೆಲೆಯಲ್ಲಿ 35 ಪೈಸೆ ಹೆಚ್ಚಳ ಮಾಡಲಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಿಂದಾಗಿ ಇಂಧನಗಳ ಬೆಲೆಯನ್ನು ಹೆಚ್ಚಿಸಲಾಗಿದೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಇತ್ತೀಚಿನ ಬೆಲೆ ಏರಿಕೆಯ ನಂತರ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದ ರೂ. 103.54 ಗಳಾದರೆ ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ ರೂ. 109.54 ಗಳಿಗೆ ಏರಿಕೆಯಾಗಿದೆ. ಈ ಎರಡು ನಗರಗಳಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ ಕ್ರಮವಾಗಿ ರೂ. 92.12 ಹಾಗೂ ರೂ. 99.92 ಗಳಾಗಿದೆ. ಕಚ್ಚಾ ತೈಲ ರಫ್ತು ಮಾಡುವ ಒಪೆಕ್ ದೇಶಗಳು ಕಚ್ಚಾ ತೈಲ ಉತ್ಪಾದನೆಯನ್ನು ಹೆಚ್ಚಿಸದಿರಲು ನಿರ್ಧರಿಸಿವೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಈ ಕಾರಣದಿಂದಾಗಿ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್‌ಗೆ 82 ಡಾಲರ್ ಗಳಿಗೆ ಏರಿಕೆಯಾಗಿದೆ. ಒಂದು ತಿಂಗಳ ಹಿಂದೆ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಬ್ಯಾರೆಲ್ ಕಚ್ಚಾ ತೈಲದ ಬೆಲೆ 72 ಡಾಲರ್ ಗಳಾಗಿತ್ತು. ಈ ಬೆಲೆ ಏರಿಕೆಯಿಂದಾಗಿ ದೇಶದಲ್ಲೂ ಇಂಧನಗಳ ಬೆಲೆಗಳು ಏರಿಕೆಯಾಗಿವೆ. ಭಾರತದ ಒಟ್ಟು ಇಂಧನ ಬೇಡಿಕೆಯ 85% ನಷ್ಟು ಇಂಧನವನ್ನು ವಿದೇಶದಿಂದ ಆಮದು ಮಾಡಿಕೊಳ್ಳಲಾಗುತ್ತದೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಇದರಿಂದ ಅಂತರ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯಲ್ಲಿ ಏರಿಕೆಯಾದರೆ ದೇಶದಲ್ಲಿಯೂ ಇಂಧನದ ಬೆಲೆ ಏರಿಕೆಯಾಗುತ್ತದೆ. ಇತ್ತೀಚಿನ ಬೆಲೆ ಏರಿಕೆಯ ನಂತರ ಪ್ರಮುಖ ನಗರಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಎಷ್ಟು ಎಂಬುದನ್ನು ನೋಡೋಣ. ಇಂದು ಬೆಂಗಳೂರು, ದೆಹಲಿ, ಕೋಲ್ಕತಾ, ಮುಂಬೈ ಹಾಗೂ ಚೆನ್ನೈ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಗಳು ಈ ಕೆಳಗಿನಂತಿವೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಪೆಟ್ರೋಲ್ ದರ (ಪ್ರತಿ ಲೀಟರ್‌)

ಬೆಂಗಳೂರು - ರೂ. 107.46

ದೆಹಲಿ - ರೂ. 103.54

ಮುಂಬೈ - ರೂ. 109.54

ಚೆನ್ನೈ - ರೂ. 101.01

ಕೋಲ್ಕತಾ - ರೂ. 104.23

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಡೀಸೆಲ್ ದರ (ಪ್ರತಿ ಲೀಟರ್‌)

ಬೆಂಗಳೂರು - ರೂ. 98.15

ದೆಹಲಿ - ರೂ. 92.12

ಮುಂಬೈ - ರೂ. 99.92

ಚೆನ್ನೈ - ರೂ. 96.60

ಕೋಲ್ಕತಾ - ರೂ. 95.23

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಹೆಚ್ಚು ತೆರಿಗೆ ವಿಧಿಸುತ್ತಿರುವುದರಿಂದ ಇವುಗಳ ಬೆಲೆ ಹೆಚ್ಚಾಗುತ್ತಿದೆ. ಇದಲ್ಲದೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೆಚ್ಚಿಸುವ ಇತರ ಅಂಶಗಳಲ್ಲಿ ರಾಜ್ಯ ಸರ್ಕಾರಗಳು ವಿಧಿಸುವ ವ್ಯಾಟ್, ಡೀಲರ್ ಕಮಿಷನ್, ಸರಕು ಶುಲ್ಕ ಇತ್ಯಾದಿಗಳು ಸೇರಿವೆ. ಕಳೆದ ಎರಡು ವರ್ಷಗಳಿಂದ ಇಂಧನದ ಮೇಲಿನ ಅಬಕಾರಿ ಸುಂಕ ಗಮನಾರ್ಹವಾಗಿ ಹೆಚ್ಚಾಗಿದೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಇದು ಸಹ ಇಂಧನಗಳ ಬೆಲೆ ನಿರಂತರ ಏರಿಕೆಗೆ ಕಾರಣವಾಗಿದೆ. ಈ ವರ್ಷದ ಆರಂಭದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿತ್ತು. ಈ ಕಾರಣದಿಂದಾಗಿ ಮೊದಲ ಬಾರಿಗೆ ದೇಶದ ಹಲವು ನಗರಗಳಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ ರೂ. 100 ಗಳ ಗಡಿ ದಾಟಿತ್ತು. ಡೀಸೆಲ್ ಬೆಲೆಯಲ್ಲೂ ಇದೇ ರೀತಿಯ ಏರಿಕೆ ಕಂಡುಬಂದಿದೆ. ಹಲವು ನಗರಗಳಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ ರೂ. 100 ಗಳ ಸಮೀಪದಲ್ಲಿದೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಪೆಟ್ರೋಲ್, ಡೀಸೆಲ್ ಬೆಲೆಗಳು ಗಮನಾರ್ಹವಾಗಿ ಕಡಿಮೆಯಾಗುತ್ತವೆ. ಆದರೆ ಆದಾಯದ ನಷ್ಟ ಅನುಭವಿಸಬೇಕಾಗುತ್ತದೆ ಎಂಬ ಕಾರಣಕ್ಕೆ ಹಲವು ರಾಜ್ಯ ಸರ್ಕಾರಗಳು ಇಂಧನದ ಬೆಲೆಯನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದನ್ನು ವಿರೋಧಿಸುತ್ತಿವೆ. ಮತ್ತೊಂದೆಡೆ ಕೇಂದ್ರ ಸರ್ಕಾರವು ಇಂಧನದ ಮೇಲಿನ ಅಬಕಾರಿ ಸುಂಕವನ್ನು ಕಡಿಮೆ ಮಾಡುವುದಿಲ್ಲವೆಂದು ತಿಳಿಸಿದೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಪ್ರಪಂಚದಲ್ಲಿ ಪೆಟ್ರೋಲ್, ಡೀಸೆಲ್‌ ದುಬಾರಿಯಾಗಿರುವ ದೇಶಗಳಲ್ಲಿ ಭಾರತವು ಸಹ ಸೇರಿದೆ. ಭಾರತದಲ್ಲಿ ಪೆಟ್ರೋಲ್, ಡೀಸೆಲ್ ಮೇಲೆ ಹೆಚ್ಚಿನ ತೆರಿಗೆ ವಿಧಿಸುವುದೇ ಇದಕ್ಕೆ ಪ್ರಮುಖ ಕಾರಣ. ಮದುವೆ ಹಾಗೂ ಇನ್ನಿತರ ಶುಭ ಸಮಾರಂಭಗಳಲ್ಲಿ ಉಡುಗೊರೆಯಾಗಿ ಪೆಟ್ರೋಲ್ ಅಥವಾ ಡೀಸೆಲ್ ನೀಡುವ ಹಲವು ವಿಲಕ್ಷಣ ಘಟನೆಗಳು ಭಾರತದಲ್ಲಿ ನಡೆದಿವೆ, ನಡೆಯುತ್ತಿವೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಇದರ ಜೊತೆಗೆ ಆಗಾಗ್ಗೆ ಪೆಟ್ರೋಲ್, ಡೀಸೆಲ್ ಕಳ್ಳತನಕ್ಕೆ ಸಂಬಂಧಿಸಿದ ಘಟನೆಗಳು ವರದಿಯಾಗುತ್ತವೆ. ಪೆಟ್ರೋಲ್, ಡೀಸೆಲ್ ಕಳ್ಳತನದ ಘಟನೆಗಳು ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ ಹಲವು ದೇಶಗಳಲ್ಲಿ ನಡೆಯುತ್ತಿವೆ. ಇದೇ ರೀತಿಯ ಘಟನೆಯೊಂದು ಇತ್ತೀಚಿಗೆ ದೂರದ ಇಂಗ್ಲೆಂಡಿನಿಂದ ವರದಿಯಾಗಿತ್ತು. ಈಗ ಇಂಗ್ಲೆಂಡಿನಲ್ಲಿ ಇಂಧನದ ಕೊರತೆ ಎದುರಾಗಿದೆ. ಇಂಧನ ಸಾಗಿಸುವ ಟ್ಯಾಂಕರ್ ಗಳಿಗೆ ಸಾಕಷ್ಟು ಸಂಖ್ಯೆಯಲ್ಲಿ ಚಾಲಕರು ಲಭ್ಯವಾಗದಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಸತತ ನಾಲ್ಕನೇ ದಿನವೂ ಏರಿಕೆಯಾದ ಪೆಟ್ರೋಲ್, ಡೀಸೆಲ್ ದರ

ಚಾಲಕರ ಕೊರತೆಯಿಂದಾಗಿ ಇಂಧನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿ ಇಂಧನದ ಕೊರತೆ ಎದುರಾಗಿದೆ. ಇದರಿಂದಾಗಿ ಇಂಗ್ಲೆಂಡಿನಲ್ಲಿ ಪೆಟ್ರೋಲ್ ಬಂಕ್ ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿವೆ. ಇದರ ಜೊತೆಗೆ ವಾಹನ ಸವಾರರ ನಡುವೆ ಮಾತಿನ ಚಕಮಕಿ, ಜಗಳಗಳು ಏರ್ಪಡುತ್ತಿವೆ. ಇಂತಹ ಸನ್ನಿವೇಶದಲ್ಲಿಯೇ ಇಂಗ್ಲೆಂಡಿನಲ್ಲಿ ಇಂಧನ ಇಂಧನ ಕಳ್ಳತನದ ಘಟನೆ ವರದಿಯಾಗಿದೆ. ಇಂಗ್ಲೆಂಡ್‌ನಲ್ಲಿರುವ ಪೋರ್ಟ್ಸ್‌ಮೌತ್‌ ಎಂಬ ಪಾರ್ಕಿಂಗ್ ಸ್ಥಳದಿಂದ ರೂ. 45 ಲಕ್ಷ ಮೌಲ್ಯದ ಸುಮಾರು 30,000 ಲೀಟರ್ ಇಂಧನ ಕಳುವು ಮಾಡಿರುವ ಬಗ್ಗೆ ವರದಿಯಾಗಿದೆ.

Most Read Articles

Kannada
English summary
Petrol diesel price increases for the fourth consecutive day details
Story first published: Saturday, October 9, 2021, 13:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X