Just In
- 47 min ago
6 ಏರ್ಬ್ಯಾಗ್ ಜೊತೆ ಅತ್ಯಂತ ಕೈಗೆಟುಕುವ ಬೆಲೆಯಲ್ಲಿ ಖರೀದಿಗೆ ಸಿಗುವ ಟಾಪ್ 5 ಕಾರುಗಳು
- 1 hr ago
ಎಲೆಕ್ಟ್ರಿಕ್ ಬಳಿಕ ಸಿಎನ್ಜಿ ಕಾರುಗಳ ವಿಭಾಗದಲ್ಲೂ ಪಾರುಪತ್ಯ ಸಾಧಿಸಲು ಸಜ್ಜಾಗುತ್ತಿದೆ ಟಾಟಾ
- 1 hr ago
ಹೊಸ ಮಹೀಂದ್ರಾ ಎಲೆಕ್ಟ್ರಿಕ್ XUV700 ಟೀಸರ್ ಬಿಡುಗಡೆ... ಫೆ.10 ರಂದು BE ಸರಣಿ SUV ಗಳ ಪ್ರದರ್ಶನ
- 2 hrs ago
ಭಾರತದಲ್ಲಿ ಬಿಡುಗಡೆಯಾಗಲಿವೆ ಹೋಂಡಾದ 3 ಕಾರುಗಳು: ಇವು ಬಂದ್ರೆ...!
Don't Miss!
- News
ರಾಯಚೂರು: ಶಿವರಾಜ್ ಪಾಟೀಲ್ ಪ್ರಾಬಲ್ಯ ಕೊನೆಗೊಳಿಸಲು ವಿಪಕ್ಷಗಳ ತಂತ್ರ
- Movies
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
- Sports
ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಘೋಷಿಸಿದ 2007ರ ವಿಶ್ವಕಪ್ ಹೀರೋ ಜೋಗಿಂದರ್ ಶರ್ಮಾ
- Technology
ಅರ್ಧಕೋಟಿಗೂ ಅಧಿಕ ಬೆಲೆಯಲ್ಲಿ ಈ ಹಳೇ ಐಫೋನ್ ಮಾರಾಟ!..ಅದ್ಹೇಗೆ ಸಾಧ್ಯ ಅಂತೀರಾ!?
- Finance
ಅಮುಲ್ ಹಾಲಿನ ದರ ಮತ್ತೆ 3 ರೂ ಏರಿಕೆ, ನೂತನ ದರ ಪರಿಶೀಲಿಸಿ
- Lifestyle
Maha Shivratri 2023 : ಮಹಾಶಿವರಾತ್ರಿ ದಿನಾಂಕ, ಪೂಜಾ ಮುಹೂರ್ತ, ಮಹತ್ವ, ಆಚರಣೆ ಹಿನ್ನೆಲೆ ಏನು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಭಾರತದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ ಎನ್ನುವವರು ಈ 10 ದೇಶಗಳಲ್ಲಿನ ಬೆಲೆಯನ್ನೊಮೆ ನೋಡಿ...
ಪ್ರಪಂಚದಾದ್ಯಂತ ಪೆಟ್ರೋಲ್ ಸರಾಸರಿ ಬೆಲೆಯು ಪ್ರತಿ ಲೀಟರ್‌ಗೆ 1.29 U.S. ಡಾಲರ್ ಇದೆ. ವಿವಿಧ ದೇಶಗಳ ನಡುವೆ ಈ ಬೆಲೆಗಳಲ್ಲಿ ಗಣನೀಯ ವ್ಯತ್ಯಾಸವಿರುತ್ತದೆ. ಶ್ರೀಮಂತ ರಾಷ್ಟ್ರಗಳು ಹೆಚ್ಚಿನ ಬೆಲೆಗಳನ್ನು ಹೊಂದಿದ್ದರೆ, ಬಡ ದೇಶಗಳು ಮತ್ತು ತೈಲವನ್ನು ಉತ್ಪಾದಿಸುವ ಮತ್ತು ರಫ್ತು ಮಾಡುವ ದೇಶಗಳು ಗಣನೀಯವಾಗಿ ಕಡಿಮೆ ಬೆಲೆಗಳನ್ನು ಹೊಂದಿರುತ್ತವೆ.

ಒಂದು ಗಮನಾರ್ಹವಾದ ವಿಶಯವೆಂದರೆ ಅಮೆರಿಕಾ ಆರ್ಥಿಕವಾಗಿ ಮುಂದುವರಿದ ದೇಶವಾಗಿದ್ದರೂ ಕಡಿಮೆ ಬೆಲೆಗಳನ್ನು ಹೊಂದಿದೆ. ಏಕೆಂದರೆ ಎಲ್ಲಾ ದೇಶಗಳಾದ್ಯಂತ ಬೆಲೆಗಳಲ್ಲಿನ ವ್ಯತ್ಯಾಸಗಳು ವಿವಿಧ ತೆರಿಗೆಳ ಮೇಲೆ ಆಧಾರಿತವಾಗಿರುತ್ತದೆ.

ಎಲ್ಲಾ ದೇಶಗಳು ಅಂತರಾಷ್ಟ್ರೀಯ ಮಾರುಕಟ್ಟೆಗಳ ಒಂದೇ ಪೆಟ್ರೋಲಿಯಂ ಬೆಲೆಗಳನ್ನು ಹೊಂದಿರುತ್ತವೆ. ಆನಂತರದ ವಿವಿಧ ತೆರಿಗೆಗಳ ಪರಿಣಾಮವಾಗಿ ಬೆಲೆಗಳು ಬದಲಾಗುತ್ತವೆ. ಹಾಗಾಗಿ ವಿಭಿನ್ನ ತೆರಿಗೆ ರಚನೆಗಳಿಂದಾಗಿ ಲೀಟರ್ ಪೆಟ್ರೋಲ್‌ಗೆ ಪಾವತಿಸುವ ಬೆಲೆ ಪ್ರಪಂಚದಾದ್ಯಂತ ಒಂದೇ ಆಗಿರುವುದಿಲ್ಲ. ಹಾಗದ್ರೆ ಅತಿ ಹೆಚ್ಚು ಇಂಧನ ಬೆಲೆ ಹೊಂದಿರುವ ಟಾಪ್ 10 ದೇಶಗಳನ್ನು ಇಲ್ಲಿ ನೋಡೋಣ.

1. ಸ್ವೀಡನ್ (ರೂ. 160.9 / ಲೀಟರ್)
ಸ್ವೀಡನ್ ಸ್ಕ್ಯಾಂಡಿನೇವಿಯಾದ ನಾರ್ಡಿಕ್ ದೇಶವಾಗಿದೆ. ಅನೇಕ ನಾರ್ಡಿಕ್ ದೇಶಗಳಂತೆ, ಇತರ ಯುರೋಪಿಯನ್ ದೇಶಗಳಿಗೆ ಹೋಲಿಸಿದರೆ ಸ್ವೀಡನ್‌ನಲ್ಲಿ ವಾಸಿಸುವುದು ದುಬಾರಿಯಾಗಿದೆ. ಅದೇ ರೀತಿ ಇಲ್ಲಿನ ಪೆಟ್ರೋಲ್ ಬೆಲೆ ಕೂಡ ಹೆಚ್ಚು, ಸ್ವೀಡನ್ ನಲ್ಲಿ ಪ್ರತಿ ಲೀಟರ್‌ಗೆ 160.9 ರೂ. ಪಾವತಿಸಬೇಕು.

2. ಗ್ರೀಸ್ (ರೂ. 166.5 / ಲೀಟರ್)
ಗ್ರೀಸ್ ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ಹೊಂದಿರುವ ಆಗ್ನೇಯ ಯುರೋಪಿಯನ್ ದೇಶವಾಗಿದೆ. ಇದನ್ನು ಹೆಚ್ಚಾಗಿ ಪಾಶ್ಚಿಮಾತ್ಯ ನಾಗರಿಕತೆಯ ತೊಟ್ಟಿಲು ಎಂದು ಪರಿಗಣಿಸಲಾಗುತ್ತದೆ. ಈ ದೇಶವು ಆರ್ಥಿಕ ಸಂಕಷ್ಟಗಳಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ದೇಶಗಳಲ್ಲಿ ಒಂದಾಗಿದೆ. ಈ ದೇಶದಲ್ಲಿ ಪ್ರತಿ ಲೀಟರ್‌ಗೆ 166.5 ರೂ. ಪಾವತಿಸಬೇಕು.

3. ನೆದರ್ಲ್ಯಾಂಡ್ಸ್ (ರೂ. 166.8 / ಲೀಟರ್)
ನೆದರ್ಲ್ಯಾಂಡ್ಸ್ ದೇಶವು 2-ಬಾರಿ ಫಾರ್ಮುಲಾ 1 ವಿಶ್ವ ಚಾಂಪಿಯನ್ ಆಗಿ ಗುರ್ತಿಸಿಕೊಂಡಿರುವ ಮ್ಯಾಕ್ಸ್ ವರ್ಸ್ಟಪ್ಪೆನ್ ಅವರ ತವರಾಗಿದೆ. ನೆದರ್ಲ್ಯಾಂಡ್ಸ್ ವಿಶ್ವದಲ್ಲೇ ಅತ್ಯಂತ ದಟ್ಟವಾದ ರಸ್ತೆ ಜಾಲಗಳಲ್ಲಿ ಒಂದಾಗಿದೆ. ಈ ದೇಶದಲ್ಲಿನ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ 166.8 ರೂ. ಇದೆ.

4. ಬಾರ್ಬಡೋಸ್ (ರೂ. 169.1 / ಲೀಟರ್)
ಬಾರ್ಬಡೋಸ್ ವೆಸ್ಟ್ ಇಂಡೀಸ್‌ನ ಲೆಸ್ಸರ್ ಆಂಟಿಲೀಸ್‌ನಲ್ಲಿರುವ ಒಂದು ದ್ವೀಪ ರಾಷ್ಟ್ರವಾಗಿದೆ. ಈ ಕೆರಿಬಿಯನ್ ಪ್ರದೇಶದಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 169.1 ರೂ. ಇದೆ. ಈ ದೇಶದಲ್ಲಿ ಅತಿ ಹೆಚ್ಚು ಬೆಲೆಗಳನ್ನು ಹೊಂದಿರುವ ದ್ರವಗಳಲ್ಲಿ ಪೆಟ್ರೋಲ್ ಕೂಡ ಒಂದಾಗಿದೆ.

5. ಫಿನ್‌ಲ್ಯಾಂಡ್ (ರೂ. 169.5 / ಲೀಟರ್)
ಫಿನ್‌ಲ್ಯಾಂಡ್ ದೇಶವು ಸ್ವೀಡನ್, ನಾರ್ವೆ ಮತ್ತು ರಷ್ಯಾದಂತಹ ದೇಶಗಳ ಗಡಿಯಲ್ಲಿರುವ ನಾರ್ಡಿಕ್ ದೇಶವಾಗಿದೆ. ಇದಲ್ಲದೆ, ಫಿನ್‌ಲ್ಯಾಂಡ್‌ನಲ್ಲಿ ಪೆಟ್ರೋಲ್‌ನ ಬೆಲೆಗಳು ಮೊದಲಿನಿಂದಲೂ ಹೆಚ್ಚಾಗಿವೆ. ಪ್ರಸ್ತುತ ಬೆಲೆಗಳು ಪ್ರತಿ ಲೀಟರ್ ಪೆಟ್ರೋಲ್‌ಗೆ ರೂ. 169.5 ರಷ್ಟಿದೆ.

6. ಡೆನ್ಮಾರ್ಕ್ (ರೂ. 170.8 / ಲೀಟರ್)
ಸ್ಕ್ಯಾಂಡನೇವಿಯನ್ ದೇಶಗಳಲ್ಲಿ ಒಂದಾದ ಡೆನ್ಮಾರ್ಕ್ ದೇಶವು ದಕ್ಷಿಣ ಭಾಗದಲ್ಲಿದೆ. ಈ ದೇಶವು ಶೀತ ಮತ್ತು ಜನನಿಬಿಡವಾಗಿರುವುದರಿಂದ ಇಲ್ಲಿಗೆ ಪೆಟ್ರೋಲ್ ಸರಬರಾಜು ಅತಿ ವಿರಳ ಹಾಗೂ ಕಡಿಮೆಯಾಗಿ ಸಪ್ಲೈ ಆಗುತ್ತದೆ. ಇಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 170.8 ರೂ. ಇದೆ.

7. ನಾರ್ವೆ (ರೂ. 177.6 / ಲೀಟರ್)
ನಾರ್ವೆ ಉತ್ತರ ಯುರೋಪಿನ ದೇಶವಾಗಿದ್ದು, ಆರ್ಕ್ಟಿಕ್ ಪ್ರದೇಶಕ್ಕೆ ಬಹಳ ಹತ್ತಿರದಲ್ಲಿದೆ. ಡೆನ್ಮಾರ್ಕ್‌ನಂತೆ, ಶೀತ ಹವಾಮಾನ ಪರಿಸ್ಥಿತಿಗಳಿರುವುದರಿಂದ ಸರಕುಗಳ ಸಾಗಣೆಯು ಸುಲಭದ ಕೆಲಸವಲ್ಲ. ಹಾಗಾಗಿ ಪೆಟ್ರೋಲ್ ಬೆಲೆಗಳು ಹೆಚ್ಚಾಗಿರುತ್ತವೆ. ಪ್ರಸ್ತುತ ಬೆಲೆಯು ಲೀಟರ್‌ಗೆ 177.6 ರೂ. ಇದೆ.

8. ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ (ರೂ. 185.8 / ಲೀಟರ್)
ಸೆಂಟ್ರಲ್ ಆಫ್ರಿಕನ್ ರಿಪಬ್ಲಿಕ್ ದೇಶವು ಚಾಡ್, ಸುಡಾನ್, ಸೌತ್ ಸುಡಾನ್, ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ರಿಪಬ್ಲಿಕ್ ಆಫ್ ಕಾಂಗೋ ಮತ್ತು ಕ್ಯಾಮರೂನ್ ಸೇರಿದಂತೆ 6 ಇತರ ದೇಶಗಳಿಂದ ಸುತ್ತುವರಿದ ಭೂಕುಸಿತ ದೇಶವಾಗಿದೆ. ದೇಶದ ಅಸ್ಥಿರತೆ ಮತ್ತು ಅಂತರ್ಯುದ್ಧಗಳ ಸರಣಿಯಿಂದಾಗಿ ಪೆಟ್ರೋಲ್ ಬೆಲೆಯು ಪ್ರತಿ ಲೀಟರ್‌ಗೆ 185.8 ರೂ. ಆಗಿದೆ.

9. ಐಸ್ಲ್ಯಾಂಡ್ (ರೂ. 186.7 / ಲೀಟರ್)
ಐಸ್ಲ್ಯಾಂಡ್ ಉತ್ತರ ಅಟ್ಲಾಂಟಿಕ್ ಸಾಗರ ಮತ್ತು ಆರ್ಕ್ಟಿಕ್ ಮಹಾಸಾಗರದಲ್ಲಿ ನೆಲೆಗೊಂಡಿರುವ ನಾರ್ಡಿಕ್ ದ್ವೀಪ ದೇಶವಾಗಿದೆ. ವಿಶ್ವದ ಅತ್ಯಂತ ಶೀತ ದೇಶಗಳಲ್ಲಿ ಇದು ಕೂಡ ಒಂದು. ಅದರಂತೆ, ಈ ಪ್ರದೇಶದಲ್ಲಿ ಏನನ್ನಾದರೂ ಸಂಗ್ರಹಿಸುವುದು ಮತ್ತು ಪೂರೈಸುವುದು ಸಾಹಸ ಮಾಡಿದಷ್ಟೇ ಕಷ್ಟ. ಅಂದಹಾಗೆ, ಐಸ್‌ಲ್ಯಾಂಡ್‌ನಲ್ಲಿ ಪೆಟ್ರೋಲ್ ಬೆಲೆ ಪ್ರಸ್ತುತ ಪ್ರತಿ ಲೀಟರ್‌ಗೆ 186.7 ರೂ.ಇದೆ.

10. ಹಾಂಗ್ ಕಾಂಗ್ (ರೂ. 242.5 / ಲೀಟರ್)
ಹಾಂಗ್ ಕಾಂಗ್ ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ. ವಿಶ್ವದ ಅತಿ ಹೆಚ್ಚು ಪೆಟ್ರೋಲ್ ಬೆಲೆಯನ್ನು ಹೊಂದಿರುವ ದೇಶ ಕೂಡ ಇದಾಗಿದೆ. ಪ್ರತಿ ಲೀಟರ್‌ಗೆ ರೂ. 242.5 ಇದೆ. ಇದು ನಾವು ಒಂದು ಲೀಟರ್ ಪೆಟ್ರೋಲ್‌ಗೆ ಭಾರತದಲ್ಲಿ ಪಾವತಿಸುವುದಕ್ಕಿಂತ ಎರಡು ಪಟ್ಟು ಹೆಚ್ಚು.