ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಸಾಕುಪ್ರಾಣಿಗಳನ್ನು ಹೊಂದಿರುವವರು ಪ್ರತಿ ಬಾರಿ ಪ್ರವಾಸವನ್ನು ಯೋಜಿಸಿದಾಗಲೆಲ್ಲಾ ತಮ್ಮ ನಾಯಿ, ಬೆಕ್ಕುಗಳನ್ನು ಬಿಟ್ಟೊಗುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ತಮ್ಮೊಂದಿಗೆ ಕರೆದೊಯ್ಯಲು ಮನಸ್ಸಿದ್ದರೂ ಸಾರಿಗೆ ಸಂಸ್ಥೆಗಳು ಇದಕ್ಕೆ ಒಪ್ಪುವುದಿಲ್ಲ.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಅನೇಕರು ಆರ್ಥಿಕ ಹೊರೆಯಾದರೂ ಕೆಲವೊಮ್ಮೆ ಕಾರುಗಳನ್ನು ಬುಕ್ ಮಾಡಿಕೊಂಡು ತಮ್ಮ ಸಾಕುಪ್ರಾಣಿಗಳನ್ನು ಕರೆದೊಯ್ಯುತ್ತಾರೆ. ಆದರೆ ಹಣ್ಣವಿಲ್ಲದೇ, ರೈಲು ಬಿಟ್ಟರೇ ನಮಗೆ ಬೇರೆ ಆಯ್ಕೆ ಇಲ್ಲವೆಂದು ಚಿಂತಿಸುವವರು ಇನ್ನು ಮುಂದೆ ಚಿಂತಿಸಬೇಕಾಗಿಲ್ಲ, ಏಕೆಂದರೆ ಭಾರತೀಯ ರೈಲ್ವೇಯು ಸಾಕುಪ್ರಾಣಿಗಳನ್ನು ಹೊಂದಿರುವವರಿಗೆ ಒಂದೊಳ್ಳೆ ಸೌಲಭ್ಯವನ್ನು ಒದಗಿಸಿದೆ.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಸಾಕುಪ್ರಾಣಿಗಳಾದ ನಾಯಿ ಮತ್ತು ಬೆಕ್ಕುಗಳನ್ನು ಈಗ ರೈಲುಗಳಲ್ಲಿ ಕರೆದೊಯ್ಯಬಹುದು. ನಿಮ್ಮ ಸಾಕುಪ್ರಾಣಿಗಳನ್ನು ನೂರಾರು ಕಿ.ಮೀಗಳ ದೂರದವರೆಗೆ ಸಾಗಿಸಲು ರೈಲುಗಳು ಸುರಕ್ಷಿತವಾಗಿರುವುದಲ್ಲದೇ, ಕೈಗೆಟುಕುವ ದರ, ಹೆಚ್ಚು ಆರಾಮದಾಯಕ ಪ್ರಯಾಣಕ್ಕೂ ಸಹಕಾರಿಯಾಗಿದೆ. ಈ ಲೇಖನದಲ್ಲಿ ಈ ಬಗ್ಗೆ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳಬಹುದು.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ನೀವು ಅನುಸರಿಸಬೇಕಾದ ನಿಯಮಗಳು:

ಎಸಿ ಸ್ಲೀಪರ್ ಕೋಚ್‌ಗಳು, ಎರಡನೇ ದರ್ಜೆಯ ಕೋಚ್‌ಗಳು ಮತ್ತು ಎಸಿ ಚೇರ್ ಕಾರ್ ಕೋಚ್‌ಗಳಲ್ಲಿ ಯಾವುದೇ ಸಾಕುಪ್ರಾಣಿಗಳನ್ನು ಅನುಮತಿಸಲಾಗುವುದಿಲ್ಲ. ಆದರೆ ಎರಡು ಪ್ರಯಾಣ ಆಯ್ಕೆಗಳು ಲಭ್ಯವಿದೆ. ನೀವು 4 ಆಸನಗಳನ್ನು ಹೊಂದಿರುವ ಕ್ಯಾಬಿನ್ ಅಥವಾ ನಿಮ್ಮ ಅವಶ್ಯಕತೆಗೆ ಅನುಗುಣವಾಗಿ 2 ಆಸನಗಳ ಮೊದಲ ದರ್ಜೆಯ AC ಟಿಕೆಟ್‌ಗಳನ್ನು ಬುಕ್ ಮಾಡಬಹುದು.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಒಮ್ಮೆ ನಿಮ್ಮ ಟಿಕೆಟ್‌ಗಳನ್ನು ದೃಢೀಕರಿಸಿದ ನಂತರ, ನಿಮ್ಮ ಟಿಕೆಟ್‌ನ ನಕಲನ್ನು ಪಡೆಯಿರಿ. ನಿಮ್ಮ ಸಾಕುಪ್ರಾಣಿಗಳೊಂದಿಗೆ ಪ್ರಯಾಣಿಸಲು ಕಾರಣ ಕುರಿತು ಮುಖ್ಯ ವಾಣಿಜ್ಯ ಅಧಿಕಾರಿಗೆ ಅರ್ಜಿಯನ್ನು ಬರೆಯಿರಿ. ಇದು ನಿಮಗೆ ಯಾವುದೇ ಸಾಮಾನ್ಯ ಬರ್ತ್ ಅನ್ನು ಮಂಜೂರು ಮಾಡಿಲ್ಲ ಎಂದು ಖಚಿತಪಡಿಸುತ್ತದೆ.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ತಮ್ಮ ಸಾಕುಪ್ರಾಣಿಗಳಿಗೆ ಕೊರಳಪಟ್ಟಿಗಳು ಮತ್ತು ಸರಪಳಿಗಳನ್ನು ಒಯ್ಯುವುದು ಮಾಲೀಕರ ಜವಾಬ್ದಾರಿಯಾಗಿದೆ. ಜೊತೆಗೆ, ಸಾಕುಪ್ರಾಣಿಗಳ ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡಬೇಕು. ನಿಮ್ಮ ನಾಯಿ ಅಥವಾ ಬೆಕ್ಕು ಎಲ್ಲಾ ವ್ಯಾಕ್ಸಿನೇಷನ್‌ಗಳನ್ನು ಪೂರ್ಣಗೊಳಿಸಿದೆ ಎಂದು ಖಚಿತಪಡಿಸಿರುವ ವ್ಯಾಕ್ಸಿನೇಷನ್ ಕಾರ್ಡ್ ಅನ್ನು ಸಿದ್ಧಪಡಿಸಿಕೊಳ್ಳಬೇಕು.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಸಾಧ್ಯವಾದರೆ, ವೆಟರ್ನರಿ ಆಸ್ಪತ್ರೆಯಿಂದ ನಿಮ್ಮ ಸಾಕುಪ್ರಾಣಿಗಳ ಫಿಟ್‌ನೆಸ್ ಪ್ರಮಾಣಪತ್ರವನ್ನು ಸಹ ಪಡೆಯಿರಿ. ಇನ್ನು ಪ್ರಯಾಣಕ್ಕೆ ಹೊರಡುವ ಸಮಯಕ್ಕಿಂತ ಸುಮಾರು 4 ಗಂಟೆಗಳ ಮೊದಲು ನಿಮ್ಮ ಕ್ಯಾಬಿನ್ ದೃಢೀಕರಣವನ್ನು ನೀವು ಪಡೆಯುತ್ತೀರಿ.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಒಮ್ಮೆ ನಿಮ್ಮ ಕ್ಯಾಬಿನ್ ಅಥವಾ ಕೂಪೆಯನ್ನು ದೃಢೀಕರಿಸಿದ ನಂತರ, ರೈಲು ಹೊರಡುವ ಕನಿಷ್ಠ 2 ಗಂಟೆಗಳ ಮುನ್ನವೇ ನಿಲ್ದಾಣವನ್ನು ತಲುಪಿ. ನಂತರ ಪಾರ್ಸೆಲ್ ಕಚೇರಿಗೆ ಹೋಗಿ ಅವರಿಗೆ ನಿಮ್ಮ ಟಿಕೆಟ್‌ಗಳು, ನಿಮ್ಮ ಸಾಕುಪ್ರಾಣಿಗಳ ಫಿಟ್‌ನೆಸ್ ಪ್ರಮಾಣಪತ್ರ ಮತ್ತು ವ್ಯಾಕ್ಸಿನೇಷನ್ ಕಾರ್ಡ್‌ಗಳನ್ನು ತೋರಿಸಿ.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ನಿಮ್ಮ ಎಲ್ಲಾ ದಾಖಲೆಗಳ ಫೋಟೋ ಪ್ರತಿಗಳು, ನಿಮ್ಮ ಟಿಕೆಟ್ ಮತ್ತು ಒಂದು ಫೋಟೋ ಐಡಿ ಪುರಾವೆಗಳನ್ನು ಒಯ್ಯಲು ಮರೆಯದಿರಿ. ನಂತರ, ನಿಮ್ಮ ಸಾಕುಪ್ರಾಣಿಗಳನ್ನು ಕಾಯ್ದಿರಿಸಲು ಸಂಬಂಧಿಸಿದ ಅಧಿಕಾರಿಗಳ ಬಳಿ ಮಾತನಾಡಿದರೆ, ಅವರು ನಿಮ್ಮ ಸಾಕುಪ್ರಾಣಿಗಳ ಭಾರವನ್ನು ಪರಿಶೀಲಿಸಿ ಶುಲ್ಕವನ್ನು ವಿಧಿಸಲಾಗುತ್ತದೆ.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಸಾಕುಪ್ರಾಣಿಗಳು ಪ್ರಯಾಣಿಸುವಾಗ ಪ್ರತಿ ಕೆಜಿಗೆ ರೂ. 30 ಶುಲ್ಕ ವಿಧಿಸಲಾಗುತ್ತದೆ. ಉದಾಹರಣೆಗೆ, ನಿಮ್ಮ ಸಾಕುಪ್ರಾಣಿ ನಾಯಿ ಎಂದುಕೊಳೋಣ ಅದರ ತೂಕ ಸುಮಾರು 4 ಕೆ.ಜಿ ಎಂದು ಭಾವಿಸೋಣ. ನಾಯಿಯನ್ನು ಸಾಗಿಸಲು ರೂ. 120 ಶುಲ್ಕ ಪಾವತಿಸಬೇಕಾಗುತ್ತದೆ.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಸಾಕುಪ್ರಾಣಿಗಳು ಸಾಮಾನ್ಯವಾಗಿ ಪ್ರಯಾಣದ ಸಮಯದಲ್ಲಿ ಒತ್ತಡಕ್ಕೆ ಒಳಗಾಗುತ್ತವೆ. ಅವು ಹೆಚ್ಚು ಕುಡಿಯುವುದಿಲ್ಲ ಅಥವಾ ತಿನ್ನುವುದಿಲ್ಲ. ಆದರೂ ಅವು ಸುತ್ತಮುತ್ತಲಿನ ಜಾಗವನ್ನು ಕೊಳಕು ಮಾಡಬಹುದು ಆದ್ದರಿಂದ ರೈಲು ಕೆಲವೊಮ್ಮೆ ದೀರ್ಘ ಸಮಯ ನಿಲುಗಡೆ ಮಾಡುವ ನಿಲ್ದಾಣಗಳಲ್ಲಿ ಹೊರ ಕರೆದೊಯ್ಯಬಹುದು.

ಇನ್ಮುಂದೆ ರೈಲಿನಲ್ಲಿ ಸಾಕು ಪ್ರಾಣಿಗಳನ್ನು ಕರೆದೊಯ್ಯಬಹುದು: ದರ, ಬುಕಿಂಗ್ ವಿಧಾನ ಕುರಿತ ಮಾಹಿತಿ...

ಭಾರತದ ರೈಲ್ವೇ ಸಚಿವಾಲಯವು ಈಗ ಈ ಶ್ವಾನ ವಿಭಾಗದ ಸೌಲಭ್ಯವನ್ನು ಕೆಲವು ರೈಲುಗಳಲ್ಲಿ ಮಾತ್ರ ಒದಗಿಸಿದೆ. ರಾಜಧಾನಿ ಮತ್ತು ಶತಾಬ್ದಿ ಸೇರಿದಂತೆ ಕೆಲವು ರೈಲುಗಳಲ್ಲಿ ಮಾತ್ರ ನಾಯಿ ಕಂಪಾರ್ಟ್‌ಮೆಂಟ್ ಸೌಲಭ್ಯವಿದೆ.

Most Read Articles

Kannada
English summary
Pets can now be taken on trains information on fares booking procedures
Story first published: Monday, September 5, 2022, 17:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X