ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ದೇಶದಲ್ಲೆಡೆ ಕೊರೋನಾ ಎರಡನೇ ಅಲೆಯು ರಣಕೇಕೆ ಹಾಕುತ್ತಿದ್ದರೆ ಜನರು ಅಸಹಾಯಕತೆಯಿಂದ ನೋಡುವಂತಾಗಿದೆ. ಕೊರೋನಾದಿಂದ ಮೃತಪಟ್ಟವರ ಮೃತದೇಹದತ್ತ ರಕ್ತಸಂಭಂಧಿಗಳು, ಸ್ನೇಹಿತರು ಕೂಡ ಸುಳಿಯದಂತ ಅನೇಕ ಅಮಾನವೀಯ ಘಟನೆಗಳು ವರದಿಯಾಗುತ್ತಿದೆ.

ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ಇದೇ ರೀತಿ ವೃದ್ಧರೊಬ್ಬರು ಮೃತಪಟ್ಟ ಸಂದರ್ಭದಲ್ಲಿ ಆತನ ಅಂತ್ಯಕ್ರಿಯೆ ನಡೆಸಲು ಯಾರು ಮುಂದೆ ಬಾರದ ಘಟನೆಯೊಂದು ವರದಿಯಾಗಿದೆ. ನಂತರ ಪಿಎಫ್​ಐ ಸಂಘಟನೆಯ ಯುವಕರು ಬೈಕ್ ನಲ್ಲಿಯೇ ಮೃತದೇಹ ಹೊತ್ತೊಯ್ದು ಶವ ಸಂಸ್ಕಾರ ನೆರವೇರಿಸಿದ ಘಟನೆಯು ಬೆಳಕಿಗೆ ಬಂದಿದೆ. ಪಿಎಫ್‌ಐ ಯುವಕರ ತಂಡದ ಮಾನವೀಯತೆಯ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ‌ ಆಲದಹಳ್ಳಿಯ ಗ್ರಾಮದ ವೃದ್ಧ ಮಾದೇವ ಎಂಬುವರು ಸಾವನ್ನಪ್ಪಿದ್ದರು. ಹೆಂಡತಿ- ಮಕ್ಕಳಿಲ್ಲದ ಮಾದೇವ ಅವರು ತಮ್ಮ ಮನೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ಆದರೆ ದುರ್ದೈವ ಎಂದರೆ ನೆರಮನೆಯವರು ಈ ವೃದ್ಧ ಕೊರೋನಾದಿಂದ ಮೃತಪಟ್ಟಿರಬಹುದು ಎಂದು ಶಂಕಿಸಿ ಅಂತ್ಯ ಸಂಸ್ಕಾರಕ್ಕೂ ಸಹಾಯ ಮಾಡಲು ಹಿಂದೇಟು ಹಾಕಿದರು. ನಂತರ ಮೃತ ವೃದ್ಧನ ಅಣ್ಣನ ಮಗ ಗ್ರಾಮದ ಮುಖಂಡನ ಸಹಾಯದಿಂದ ಕೊಳ್ಳೇಗಾಲ ಪಿಎಫ್‌ಐ ಯುವಕರಿಗೆ ಕರೆ ಮಾಡಿ ಅಂತ್ಯ ಸಂಸ್ಕಾರಕ್ಕೆ ನೆರವಾಗುವಂತೆ ಕೇಳಿಕೊಳ್ಳುತ್ತಾನೆ.

ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ಕೂಡಲೇ ಸ್ಥಳಕ್ಕೆ 8 ಮಂದಿ ಪಿಎಫ್​ಐ ಸಂಘಟನೆಯ ಯುವಕರ ತಂಡದ ಸ್ಥಳಕ್ಕೆ ದೌಡಾಯಿಸುತ್ತಾರೆ. ಶವ ಸಾಗಿಸಲು ಆ ಗ್ರಾಮದ ಯಾರೊಬ್ಬರೂ ವಾಹನ ನೀಡಿಲ್ಲ. ಕೊನೆಗೆ ಪಿಎಫ್‌ಐ ಸಂಘಟನೆ ಕಾರ್ಯಕರ್ತರು ದ್ವಿಚಕ್ರ ವಾಹನದಲ್ಲಿ ಒಂದು ಏಣಿ ಸಹಾಯದಿಂದ ಶವವನ್ನು ಹೊತ್ತೊಯ್ಯಲು ಮುಂದಾಗುತ್ತಾರೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ಪಿಎಫ್​ಐ ಸಂಘಟನೆ ಕಾರ್ಯಕರ್ತರು ಮಣ್ಣು ಮಾಡಲು ಸ್ಮಶಾನ ತೋರಿಸಿ ಎಂದಾಗ ಯಾರೊಬ್ಬರೂ ಮುಂದೆ ಬರದೆ ನಮ್ಮ ಊರಿನಲ್ಲಿ ಮಣ್ಣು ಮಾಡಬೇಡಿ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ಈ ವಿಚಾರ ತಿಳಿದ ಗ್ರಾಮಾಂತರ ಠಾಣೆ ಪೋಲಿಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಿ, ಶವ ಹೂಳಲು ಗೋಮಾಳದಲ್ಲಿ ಜಾಗ‌ ತೋರಿದ್ದರು. ನಂತರ ಪಿಎಫ್ಐ ಸಂಘಟನೆಯ ನೂರ್ ಮೊಹಲ್ಲಾ ನಿವಾಸಿಗಳಾದ ಮತೀನ್, ಆಸಿಫ್, ನಯೀಮ್ ಜಿಯಾವುಲ್ಲಾ, ಸಿದ್ದಿಕ್, ಮತ್ತಿತ್ತರರು ವೃದ್ಧನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.

ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ಸ್ಥಳೀಯರು ಯಾರೂ ಕೂಡ ಸಹಾಯ ಮಾಡದೆ ಅಮಾನವೀಯತೆ ಮೆರೆದಿದ್ದಾರೆ. ಅಷ್ಟೇ ಅಲ್ಲದೇ ಜಮೀನಿನಲ್ಲೂ ಮಣ್ಣು ಮಾಡಲು ಅವಕಾಶ ನೀಡಿಲ್ಲ. ಕ್ರೂರಿ ಕೊರೋನಾ ಆತಂಕಕ್ಕೆ ಜನರಲ್ಲಿ ಮಾನವೀಯತೆಯೇ ಮಾಯವಾಗುತ್ತಿದೆ.

ಗ್ರಾಮಸ್ಥರ ಅಮಾನವೀಯ ವರ್ತನೆಯ ನಡುವೆಯೂ ಅಂತ್ಯಕ್ರಿಯೆ ನೆರವೇರಿಸಿ ಮಾನವೀಯತೆ ಮೆರೆದ ಸಂಘಟನೆ

ಕರೋನಾದಿಂದ ಮೃತಪಟ್ಟವರ ಕೆಲವು ಸಂಬಂಧಿಕರಿಗೆ ಮೃತ ದೇಹಗಳೇ ಬೇಡವಾಗಿರುವುದು ವಿಪರ್ಯಾಸ. ಕರೋನಾ ಸೋಂಕಿನಿಂದ ಸಾವಿಗೀಡಾದ ಮೃತದೇಹ ಪಡೆಯಲು ಸಂಬಂಧಿಕರ ಹಿಂದೇಟು ಹಾಕುತ್ತಿರುವಾಗ ಕೆಲವು ಸ್ವಯಂ ಸೇವಕ ಸಂಘಟನೆಗಳು ಮುಂದೆ ಬಂದು ಮೃತದೇಹಗಳ ಅಂತ್ಯಕ್ರಿಯೆ ನಡೆಸುತ್ತಿರುವುದು ಮಾನವೀಯತೆಗೆ ಸಾಕ್ಷಿಯಾಗಿದೆ

Most Read Articles

Kannada
English summary
Pfi Workers Carries Dead Bodyo Of Oldman. Read In Kananda.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X