ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ಭಾರತದಲ್ಲಿ ವೇಗವಾಗಿ ಹರಡುತ್ತಿರುವ ಕರೋನಾ ವೈರಸ್‌ ಎರಡನೇ ಅಲೆಯನ್ನು ನಿಯಂತ್ರಿಸಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆದರೆ ಕರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಆಸ್ಪತ್ರೆಗಳಲ್ಲಿ ಬೆಡ್'ಗಳು ಸಿಗದೇ ಜನರು ಪರದಾಡುವಂತಾಗಿದೆ.

ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಆಕ್ಸಿಜನ್ ಸಿಗದೇ ಜನರು ಸಾವನ್ನಪ್ಪುತ್ತಿರುವ ಹಲವು ಘಟನೆಗಳು ವರದಿಯಾಗುತ್ತಿವೆ. ಇನ್ನೂ ಕೆಲವು ಸೋಂಕಿತರು ಆಂಬ್ಯುಲೆನ್ಸ್‌ಗಳಲ್ಲಿ, ಆಸ್ಪತ್ರೆಗಳ ಹೊರಗೆ, ಮರದ ಕೆಳಗೆ ಚಿಕಿತ್ಸೆ ಪಡೆಯುತ್ತಿರುವ ಘಟನೆಗಳು ವರದಿಯಾಗುತ್ತಿವೆ.

ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ಈಗ ಅನಾರೋಗ್ಯ ಪೀಡಿತರನ್ನು ಕರೆ ತರುತ್ತಿದ್ದ ಏರ್ ಆಂಬ್ಯುಲೆನ್ಸ್ ಸ್ವಲ್ಪದರಲ್ಲಿಯೇ ಭಾರೀ ಅಪಘಾತಕ್ಕೀಡಾಗುವುದರಿಂದ ಪಾರಾದ ಘಟನೆ ವರದಿಯಾಗಿದೆ. ಈ ಏರ್ ಆಂಬ್ಯುಲೆನ್ಸ್'ನಲ್ಲಿ ಒಬ್ಬ ರೋಗಿ, ಒಬ್ಬರು ವೈದ್ಯರು, ಒಬ್ಬರು ಪ್ಯಾರಾ ಮೆಡಿಕಲ್ ಸಿಬ್ಬಂದಿ, ಇಬ್ಬರು ವಿಮಾನದ ಸಿಬ್ಬಂದಿ ಸೇರಿದಂತೆ ಒಟ್ಟು ಐದು ಜನರಿದ್ದರು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ಮೆಡಿಕಲ್ ಎಮರ್ಜೆನ್ಸಿ ಹಿನ್ನೆಲೆಯಲ್ಲಿ ಈ ಏರ್ ಆಂಬ್ಯುಲೆನ್ಸ್ ಮೇ 5ರ ರಾತ್ರಿ ಮಹಾರಾಷ್ಟ್ರದ ನಾಗ್ಪುರದಿಂದ ಹೈದರಾಬಾದ್‌ಗೆ ಹೊರಟಿತ್ತು. ಈ ಏರ್ ಆಂಬ್ಯುಲೆನ್ಸ್'ನಲ್ಲಿದ್ದ ರೋಗಿ ಕರೋನಾ ವೈರಸ್ ಸೋಂಕಿಗೆ ಒಳಗಾಗಿದ್ದಾರೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ಜೆಟ್ ಸರ್ವ್ ಏವಿಯೇಷನ್‌ ಕಂಪನಿಗೆ ಸೇರಿದ ಈ ಏರ್ ಆಂಬುಲೆನ್ಸ್‌ನ ಹೆಸರು ಸಿ -90 ಏರ್‌ಕ್ರಾಫ್ಟ್ ವಿಟಿ-ಜಿಐಎಲ್ ಎಂದು ತಿಳಿದು ಬಂದಿದೆ. ನಾಗ್ಪುರ ವಿಮಾನ ನಿಲ್ದಾಣದಲ್ಲಿ ರನ್ ವೇ ನಂ 32ರಿಂದ ಏರ್ ಆಂಬುಲೆನ್ಸ್ ಟೇಕಾಫ್ ಆಗುತ್ತಿದ್ದ ವೇಳೆ ಅದರ ಮುಂಭಾಗದ ಚಕ್ರವು ಇದ್ದಕ್ಕಿದ್ದಂತೆ ರನ್ ವೇಯಿಂದ ಕೆಳಗಿಳಿದಿದೆ.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ಈ ವಿಷಯ ತಿಳಿದ ಪೈಲಟ್ ವಿಮಾನವನ್ನು ಮುಂಬಯಿಯ ಛತ್ರಪತಿ ಶಿವಾಜಿ ಮಹಾರಾಜ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಲು ನಿರ್ಧರಿಸಿದ್ದಾರೆ. ಚಕ್ರಗಳಲ್ಲಿ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಈ ವಿಮಾನವನ್ನು ಬೆಲ್ಲಿ ಲ್ಯಾಂಡಿಂಗ್ ಮೋಡ್‌ನಲ್ಲಿ ಇಳಿಸಲು ನಿರ್ಧರಿಸಲಾಗಿದೆ.

ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ಚಕ್ರಗಳಿಲ್ಲದೆ ವಿಮಾನದ ಬಾಡಿಯ ಭಾಗದೊಂದಿಗೆ ವಿಮಾನ ಇಳಿಸುವುದನ್ನು ಬೆಲ್ಲಿ ಲ್ಯಾಂಡಿಂಗ್ ಎಂದು ಕರೆಯಲಾಗುತ್ತದೆ. ಈ ರೀತಿ ಇಳಿಯುವಾಗ ವಿಮಾನಕ್ಕೆ ಬೆಂಕಿ ತಗುಲುವ ಸಾಧ್ಯತೆಗಳಿರುವುದರಿಂದ ಮುಂಬೈ ವಿಮಾನ ನಿಲ್ದಾಣದ ಸಿಬ್ಬಂದಿ ಜಾಗರೂಕರಾಗಿದ್ದರು.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ಮುನ್ನೆಚ್ಚರಿಕೆ ಕ್ರಮವಾಗಿ ರನ್ ವೇಯಲ್ಲಿ ಫೋಮ್‌ ಸಿಂಪಡಿಸಲಾಗಿತ್ತು. ಇಂತಹ ಸಂದರ್ಭಗಳಲ್ಲಿ ಪೈಲಟ್‌ಗಳ ಕೌಶಲ್ಯವು ಸಹ ಮುಖ್ಯವಾಗಿರುತ್ತದೆ. ಈ ಏರ್ ಆಂಬ್ಯುಲೆನ್ಸ್ ಚಾಲನೆ ಮಾಡುತ್ತಿದ ಪೈಲಟ್ ಜಾಗರೂಕತೆಯಿಂದ ವಿಮಾನವನ್ನು ಇಳಿಸಿದ್ದಾರೆ. ವಿಮಾನದಲ್ಲಿದ್ದ ಅನಾರೋಗ್ಯ ಪೀಡಿತರು ಸೇರಿದಂತೆ ಎಲ್ಲಾ ಐದು ಜನರು ಸುರಕ್ಷಿತವಾಗಿದ್ದಾರೆ.

ಪೈಲಟ್ ಚಾಣಾಕ್ಷತನದಿಂದ ಭಾರೀ ಅನಾಹುತದಿಂದ ಪಾರಾದ ಏರ್ ಆಂಬ್ಯುಲೆನ್ಸ್

ವಿಮಾನವನ್ನು ಜಾಗರೂಕತೆಯಿಂದ ಇಳಿಸಿದ ಪೈಲಟ್ ಕೇಸರಿ ಸಿಂಗ್ ಅವರನ್ನು ನಾಗರಿಕ ವಿಮಾನಯಾನ ಇಲಾಖೆಯು ಶ್ಲಾಘಿಸಿದೆ. ಈ ಘಟನೆಯು ಮುಂಬೈ ವಿಮಾನ ನಿಲ್ದಾಣದಲ್ಲಿ ಯಾವುದೇ ಬದಲಾವಣೆಗಳಾಗಲಿಲ್ಲ. ಯೋಜನೆಯಂತೆಯೇ ಎಲ್ಲಾ ವಿಮಾನಗಳು ಕಾರ್ಯಾಚರಣೆ ನಡೆಸಿದವು. ಆದರೆ ಕೆಲ ಕಾಲ ಇಡೀ ಮುಂಬೈ ವಿಮಾನ ನಿಲ್ದಾಣದಲ್ಲಿ ಗೊಂದಲ ಉಂಟಾಗಿತ್ತು.

Most Read Articles

Kannada
English summary
Pilot lands air ambulance safely at Mumbai airport after nose wheel break. Read in Kannada.
Story first published: Friday, May 7, 2021, 18:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X