ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಮನುಷ್ಯ ಎಷ್ಟೇ ದೊಡ್ಡ ವ್ಯಕ್ತಿಯಾದರೂ ಆತನಲ್ಲಿ ಇನ್ನೂ ಸ್ವಲ್ಪ ಮಟ್ಟದ ಬಾಲಿಶತನವಿರುತ್ತದೆ. ಇಂತಹ ಜನರು ತಮ್ಮ ಬಾಲಿಶ ವರ್ತನೆಯಿಂದಾಗಿಯೇ ಕಾಲ ಕಾಲಕ್ಕೆ ಕೆಲವು ಸಮಸ್ಯೆಗಳನ್ನು ಎದುರಿಸ ಬೇಕಾಗುತ್ತದೆ. ಇದಕ್ಕೆ ಪುಷ್ಟಿ ನೀಡುವಂತಹ ಘಟನೆಯೊಂದು ಇತ್ತೀಚಿಗೆ ಕೆನಡಾದಲ್ಲಿ ನಡೆದಿದೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಕೆನಡಾ ವಿಶ್ವದ ಅತಿ ದೊಡ್ಡ ದೇಶಗಳಲ್ಲಿ ಒಂದು. ಆದರೆ ಈ ದೇಶದ ಗಾತ್ರಕ್ಕೆ ತಕ್ಕಂತೆ ಜನಸಂಖ್ಯೆಯಿಲ್ಲ. ಜನಸಂಖ್ಯೆಯ ಕೊರತೆಯಿಂದಾಗಿ ಕೆನಡಾದಲ್ಲಿ ಜನಸಂಖ್ಯಾ ಸಾಂದ್ರತೆ ಕಡಿಮೆಯಾಗಿದೆ. ಆದರೂ ಕೆನಡಾದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚಿನ ಸಂಖ್ಯೆಯಲ್ಲಿಯೇ ಇದೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಹೆಲಿಕಾಪ್ಟರ್ ಪೈಲಟ್ ಒಬ್ಬ ಸಾರ್ವಜನಿಕರ ಸ್ಥಳದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ. ಜನರು ನೀಡಿದ ದೂರಿನ ಆಧಾರದ ಮೇಲೆಪೊಲೀಸರು ಹೆಲಿಕಾಪ್ಟರ್ ಪೈಲಟ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅಂದ ಹಾಗೆ ಡಿಸ್ಟಿಲ್ ಕೆನಡಾದ ಪ್ರಮುಖ ನಗರಗಳಲ್ಲಿ ಒಂದು.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಈ ನಗರದಲ್ಲಿ ಸುಮಾರು 3,000 ಜನರು ವಾಸಿಸುತ್ತಿದ್ದಾರೆ. ಈ ನಗರದಲ್ಲಿ ಇತ್ತೀಚಿಗೆ ಕೆಂಪು ಬಣ್ಣದ ಹೆಲಿಕಾಪ್ಟರ್ ಒಂದು ಯಾವುದೇ ಮುನ್ನೆಚ್ಚರಿಕೆಗಳಿಲ್ಲದೆ ಏಕಾ ಏಕಿ ನಗರದ ಹೃದಯ ಭಾಗದಲ್ಲಿ ಬಂದಿಳಿದಿದೆ. ಅಚಾನಕ್ ಆಗಿ ನಡೆದ ಈ ಘಟನೆಯಿಂದ ಅಲ್ಲಿನ ಜನರಿಗೆ ಏನು ನಡೆಯುತ್ತಿದೆ ಎಂದು ಅರ್ಥವಾಗಿಲ್ಲ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಹೆಲಿಕಾಪ್ಟರ್ ಒಂದು ಇದ್ದಕ್ಕಿದ್ದಂತೆ ಭೂ ಸ್ಪರ್ಶ ಮಾಡಿದ ಕಾರಣಕ್ಕೆ ಅಲ್ಲಿನ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ಇನ್ನು ಕೆಲವರು ಈ ಘಟನೆಯನ್ನು ಮೊಬೈಲ್‌ ಫೋನ್‌ಗಳಲ್ಲಿ ರೆಕಾರ್ಡ್ ಮಾಡಲು ಶುರು ಮಾಡಿದ್ದಾರೆ. ಕೆನಡಾದ ಈ ಪ್ರಾಂತ್ಯದಲ್ಲಿ ವೈದ್ಯಕೀಯ ಏರ್ ಆಂಬ್ಯುಲೆನ್ಸ್‌ಗಳಿಗೆ ಈ ರೀತಿಯ ಕೆಂಪು ಬಣ್ಣವನ್ನು ನೀಡಲಾಗುತ್ತದೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಹೀಗಾಗಿ ಅಲ್ಲಿನ ನಿವಾಸಿಗಳು ಬಹುಶಃ ಈ ಹೆಲಿಕಾಪ್ಟರ್ ತುರ್ತು ವೈದ್ಯಕೀಯ ಸಂದರ್ಭಕ್ಕಾಗಿ ಭೂ ಸ್ಪರ್ಶ ಮಾಡಿರಬಹುದು ಎಂದು ಭಾವಿಸಿದ್ದರು. ಹೆಲಿಕಾಪ್ಟರ್ ಭೂ ಸ್ಪರ್ಶ ಮಾಡುವ ಸಂದರ್ಭದಲ್ಲಿ ಆ ಪ್ರದೇಶದಲ್ಲಿ ವಿಪರೀತ ಧೂಳು ಉಂಟಾಗಿದೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಸಮೀಪದಲ್ಲಿಯೇ ಶಾಲೆ ಇದ್ದ ಕಾರಣ ಅಲ್ಲಿನ ನಿವಾಸಿಗಳು ತಕ್ಷಣವೇ ಈ ಘಟನೆಯ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಿ ಯಾವುದಾದರೂ ವೈದ್ಯಕೀಯ ತುರ್ತು ಸೇವೆಗಾಗಿ ಹೆಲಿಕಾಪ್ಟರ್ ಅನ್ನು ಡಿಸ್ಟಿಲರಿಗೆ ಕಳುಹಿಸಲಾಗಿದೆಯೇ ಎಂದು ವಿಚಾರಿಸಿದ್ದಾರೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಆದರೆ ಕಂಟ್ರೋಲ್ ರೂಂ ಸಿಬ್ಬಂದಿ ಆ ರೀತಿ ಯಾವುದೇ ಆಂಬ್ಯುಲೆನ್ಸ್ ಅನ್ನು ಕಳುಹಿಸಿಲ್ಲವೆಂದು ಮಾಹಿತಿ ನೀಡಿದ್ದಾರೆ. ಇದರಿಂದ ಎಚ್ಚೆತ್ತ ಪೊಲೀಸರು ತಮ್ಮ ವಾಹನದಲ್ಲಿ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಅಲ್ಲಿಗೆ ತೆರಳಿದ ನಂತರ ಆಂಬ್ಯುಲೆನ್ಸ್ ತುರ್ತು ಭೂ ಸ್ಪರ್ಶ ಮಾಡಿರುವ ಘಟನೆಯ ಬಗ್ಗೆ ತಿಳಿದು ಬಂದಿದೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಹೆಲಿಕಾಪ್ಟರ್ ಚಾಲನೆ ಮಾಡುತ್ತಿದ್ದ 34 ವರ್ಷದ ಪೈಲಟ್ ಐಸ್ ಕ್ರೀಮ್ ತಿನ್ನಲು ಬಯಸಿದ್ದರಿಂದ ಯಾವುದೇ ಮುನ್ಸೂಚನೆ ನೀಡದೇ ಹೆಲಿಕಾಪ್ಟರ್ ಅನ್ನು ಲ್ಯಾಂಡ್ ಮಾಡಿದ್ದಾನೆ ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಇದರ ಬೆನ್ನಲ್ಲೇ ಪೊಲೀಸರು ಪೈಲಟ್ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಸೆಪ್ಟೆಂಬರ್ 7 ರೊಳಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆ. ಹೆಲಿಕಾಪ್ಟರ್ ಚಾಲನೆ ಮಾಡಲು ಪೈಲಟ್ ಚಾಲಕ ಪರವಾನಗಿ ಹೊಂದಿದ್ದಾನೆ. ಆದರೆ ಐಸ್ ಕ್ರೀಮ್ ತಿನ್ನುವ ಸಲುವಾಗಿ ಪಾರ್ಕಿಂಗ್ ಇಲ್ಲದ ಸ್ಥಳದಲ್ಲಿ ಹೆಲಿಕಾಪ್ಟರ್ ಅನ್ನು ಲ್ಯಾಂಡಿಂಗ್ ಮಾಡಿದ್ದಾನೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ವೈದ್ಯಕೀಯ ತುರ್ತು ಪರಿಸ್ಥಿತಿಗಳಲ್ಲಿ ಈ ರೀತಿ ಲ್ಯಾಂಡಿಂಗ್ ಮಾಡಿದರೆ ಪರವಾಗಿಲ್ಲ, ಆದರೆ ಐಸ್ ಕ್ರೀಂ ತಿನ್ನುವುದು ತುರ್ತು ಸನ್ನಿವೇಶಕ್ಕೆ ಸೇರುವುದಿಲ್ಲವೆಂದು ಪೊಲೀಸರು ತಿಳಿಸಿದ್ದಾರೆ. ಐಸ್ ಕ್ರೀಮ್ ತಿನ್ನುವ ಸಲುವಾಗಿ ಅವಾಂತರ ಸೃಷ್ಟಿಸಿದ ಪೈಲಟ್ ಬಗ್ಗೆ ಪೊಲೀಸರು ಹೆಚ್ಚಿನ ವಿವರಗಳನ್ನು ಬಿಡುಗಡೆ ಮಾಡಿಲ್ಲ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ತುರ್ತು ಭೂ ಸ್ಪರ್ಶ ಮಾಡಿದ ಹೆಲಿಕಾಪ್ಟರ್ ಖಾಸಗಿಯವರಿಗೆ ಸೇರಿದ್ದೇ, ಅಥವಾ ಜನರು ತಿಳಿದಿರುವಂತೆ ತುರ್ತು ವೈದ್ಯಕೀಯ ಸೇವೆಗಳಿಗೆ ಬಳಸುವ ಹೆಲಿಕಾಪ್ಟರ್ ಆಗಿದೆಯೇ ಎಂಬುದು ತಿಳಿದು ಬಂದಿಲ್ಲ. ಬಹುಶಃ ಈ ಹೆಲಿಕಾಪ್ಟರ್ ಸರ್ಕಾರಕ್ಕೆ ಸೇರಿರುವ ಸಾಧ್ಯತೆಗಳಿವೆ. ಈ ಕಾರಣಕ್ಕೆ ಪೊಲೀಸರು ಪೈಲಟ್ ಬಗೆಗಿನ ವಿವರಗಳನ್ನು ರಹಸ್ಯವಾಗಿಟ್ಟಿದ್ದಾರೆ.

ಐಸ್ ಕ್ರೀಮ್ ತಿನ್ನುವ ಸಲುವಾಗಿ ನಗರದ ಮಧ್ಯಭಾಗದಲ್ಲಿ ಹೆಲಿಕಾಪ್ಟರ್ ಲ್ಯಾಂಡಿಂಗ್ ಮಾಡಿದ ಪೈಲಟ್

ಹೆಲಿಕಾಪ್ಟರ್ ಅನ್ನು ಶಾಲಾ ಮೈದಾನದಲ್ಲಿ ಅಪಾಯಕಾರಿಯಾಗಿ ಲ್ಯಾಂಡಿಂಗ್ ಮಾಡಿ ಐಸ್ ಕ್ರೀಮ್ ತಿನ್ನಲು ಹೋದ ಪೈಲಟ್ ವೈದ್ಯಕೀಯ ಸೇವಾ ತಂಡದ ಉದ್ಯೋಗಿ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಪೈಲಟ್ ಐಸ್ ಕ್ರೀಮ್ ತಿನ್ನುವ ಬಯಕೆಯಿಂದ ಹೆಲಿಕಾಪ್ಟರ್ ಅನ್ನು ನಗರದ ಮಧ್ಯದಲ್ಲಿ ಇಳಿಸಿ ಇಡೀ ನಗರದ ಜನರನ್ನು ಆತಂಕಕ್ಕೆ ದೂಡಿದ್ದ.

ಗಮನಿಸಿ: ಈ ಲೇಖನದಲ್ಲಿ ಕೆಲವು ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Pilot lands helicopter in city center to have ice cream details
Story first published: Monday, August 16, 2021, 10:26 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X