ವಿಮಾನ ಹಾರಿಸುವುದು ತನಗಾಗಿ, ಬಸ್ ಓಡಿಸುವುದು ಅಪ್ಪನಿಗಾಗಿ: ಹೀಗೊಬ್ಬ ಅಪರೂಪದ ಪೈಲೆಟ್

ಶಾಲಾ ದಿನಗಳಲ್ಲಿ ಪೈಲಟ್ ಆಗುವುದು ನಮ್ಮಲ್ಲಿ ಅನೇಕ ಕನಸಾಗಿತ್ತು. ಸಾಕಷ್ಟು ಸಮರ್ಪಣೆ ಮತ್ತು ಶ್ರಮವನ್ನು ಹಾಕುವ ಕೆಲವೇ ಜನರು ಪೈಲಟ್ ಆಗುವ ಕನಸನ್ನು ಈಡೇರಿಸಿಕೊಳ್ಳುತ್ತಾರೆ. ಕೇರಳದ ಪೈಲಟ್ ಒಬ್ಬರು ರಜೆ ದಿನದಲ್ಲಿ ಬಸ್ ಓಡಿಸುತ್ತಾರೆ.

ಈ ಪೈಲಟ್‌ (Pilot) ವೀಡಿಯೊವನ್ನು ಮೀಡಿಯಾ ಮಲಯಾಳಂ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಪೈಲಟ್‌ನ ಹೆಸರು ಶ್ರೀಹರಿ, ಇವರು ಕೇರಳದ ಕಾಸರಗೋಡು ಜಿಲ್ಲೆಯವರು. ಶ್ರೀಹರಿಗೆ ಚಿಕ್ಕಂದಿನಲ್ಲಿ ವಾಹನಗಳ ಕ್ರೇಜ್ ಇತ್ತು. ಶ್ರೀಹರಿ ನಾಲ್ಕನೇ ತರಗತಿಯಲ್ಲಿ ಓದುತ್ತಿದ್ದಾಗ ಕಾರು ಓಡಿಸುವುದನ್ನು ಕಲಿತಿದ್ದರು. ಇನ್ನು ಕೇವಲ ಏಳನೇ ತರಗತಿಯಲ್ಲಿ ಬಸ್ ಓಡಿಸುವುದನ್ನೂ ಕಲಿತರು.

Pilot Who Is Also A Bus Driver

ಶ್ರೀಹರಿಯವರ ತಾಯಿ ಶಾಲಾ ಶಿಕ್ಷಕಿ, ಮತ್ತು ಅವರ ತಂದೆ 'ವರದಾಯಿನಿ' ಹೆಸರಿನ ಖಾಸಗಿ ಬಸ್ ಅನ್ನು ಹೊಂದಿದ್ದಾರೆ. ಶ್ರೀಹರಿ ಚಿಕ್ಕವನಿದ್ದಾಗ ಡ್ರೈವರ್ ಸೀಟಿನ ಬಳಿಯೇ ಕೂರುತ್ತಿದ್ದರು. ಸದಾ ವಾಹನಗಳ ಬಗ್ಗೆ ಕುತೂಹಲವಿದ್ದ ಆತ, ಬಸ್ಸು ಡ್ರೈವರ್ (Bus Driver) ಓಡಿಸುವಾಗ ಕಿಟಕಿಯಿಂದ ಹೊರಗೆ ನೋಡುತ್ತಾ ಮುಂದೊಂದು ದಿನ ಪೈಲಟ್ ಆಗುವ ಕನಸು ಕಾಣುತ್ತಿದ್ದ. ಅಲ್ಲದೇ ಶ್ರೀಹರಿ ಪೈಲಟ್ ಆಗುವ ಕನಸನ್ನು ಈಡಿರಿಸಲು ಶ್ರಮ ಪ್ರಾರಂಭಿಸಿದ್ದರು.

ಅವರು ಪದವಿ ಶಿಕ್ಷಣವನ್ನು ಮುಗಿಸಿ ಇಂದಿರಾ ಗಾಂಧಿ ರಾಷ್ಟ್ರೀಯ ಯುರಾನ್ ಅಕಾಡೆಮಿ, ರಾಯಬರೇಲಿಗೆ ಹೋದರು ಮತ್ತು 22 ನೇ ವಯಸ್ಸಿನಲ್ಲಿ ಅವರು ಕಮರ್ಷಿಯಲ್ ಪೈಲಟ್ ಪರವಾನಗಿ ಪಡೆದರು. ಅವರು ಏರ್‌ಬಸ್ 320 ಅನ್ನು ಹಾರಿಸಲು ತಯಾರಿ ನಡೆಸುತ್ತಿದ್ದರು, ಆದರೆ ದುಃಖಕರವೆಂದರೆ, ಕೋವಿಡ್ -19 ಕಾರಣ, ಅವರ ಕೆಲಸಕ್ಕೆ ಸೇರಲು ಸಾಧ್ಯವ್ಚಾಗಲಿಲ್ಲ. ತನ್ನ ಮೊದಲ ವಿಮಾನವನ್ನು ಹಾರಿಸಲು ಅವರು ಇನ್ನೂ ಒಂದೂವರೆ ವರ್ಷ ಕಾಯಬೇಕಾಯಿತು.

Pilot Who Is Also A Bus Driver

ಅವರು ದೇಶೀಯ ಸೇವೆಗಳೊಂದಿಗೆ (ದೆಹಲಿ-ಬೆಂಗಳೂರು) ಪ್ರಾರಂಭಿಸಿದರು. ಅವರು ಏರ್ ಏಷ್ಯಾದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ ಅವರು ವಿಸ್ತಾರ ಕಂಪನಿಯನ್ನು ಸೇರಿಕೊಂಡರು. ಶ್ರೀಹರಿ ಅವರು ದೇಶೀಯ ಮತ್ತು ಅಂತರಾಷ್ಟ್ರೀಯ ವಿಮಾನಗಳಲ್ಲಿ ಹಾರಾಟ ನಡೆಸುತ್ತಿದ್ದಾರೆ. ಅವರು ಪ್ರಸ್ತುತ ವಿಸ್ತಾರಾದೊಂದಿಗೆ ಫ್ಲೈಟ್ ಕ್ಯಾಪ್ಟನ್ ಆಗಿದ್ದಾರೆ.

ಅವರು ಪೈಲಟ್‌ ಆಗಿ ದೆಹಲಿ, ರಾಂಚಿ, ಕೊಚ್ಚಿ, ಬೆಂಗಳೂರು, ಸಿಂಗಾಪುರ್ ಮತ್ತು ಇನ್ನೂ ಅನೇಕ ಸ್ಥಳಗಳಿಗೆ ವಿಮಾನ ಹಾರಿದ್ದಾರೆ. ಶ್ರೀಹರಿಯವರ ಮೊದಲ ಅಂತಾರಾಷ್ಟ್ರೀಯ ವಿಮಾನ ಸೌದಿ ಅರೇಬಿಯಾ ಆಗಿದೆ. ಅಲ್ಲಿ ಅವರು ಭಾರತದಿಂದ ಹಜ್ ಯಾತ್ರಿಕರನ್ನು ಹೊತ್ತೊಯ್ದರು ಎಂದು ಹೇಳಿದ್ದಾರೆ. ಶ್ರೀಹರಿ ಅವರು ರಜೆಯಲ್ಲಿ ಬಂದಾಗ ಅಪ್ಪನ ಖಾಸಗಿ ಬಸ್ಸನ್ನು ಡ್ರೈವ್ ಮಾಡುತ್ತಾರೆ.

ಬೈಕ್, ಕಾರು, ಆಟೋರಿಕ್ಷಾ, ಬಸ್ ಓಡಿಸಲು, ಕ್ರೇನ್ ಓಡಿಸಲು, ಕೊನೆಗೆ ಏರೋಪ್ಲೇನ್ ಓಡಿಸಲು ಲೈಸನ್ಸ್ ಅನ್ನು ಹೊಂದಿದ್ದಾರೆ. ಶ್ರೀಹರಿಯ ಬಗ್ಗೆ ತಿಳಿದುಕೊಳ್ಳಲು ವೀಡಿಯೊಗಳನ್ನು ಆನ್‌ಲೈನ್‌ನಲ್ಲಿ ಹುಡುಕಿದ್ದೇವೆ. ಆದರೆ ಹೆಚ್ಚಿನ ವಿಡಿಯೋಗಳು ಲಭಿಸಿಲ್ಲ. ಶ್ರೀಹರಿಯವರು ಕಾರುಗಳ ಬಗ್ಗೆ ಅವರ ಆಸಕ್ತಿಯ ಬಗ್ಗೆ ಹೆಚ್ಚಿನದನ್ನು ಹೇಳುವುದಿಲ್ಲ.

Pilot Who Is Also A Bus Driver

ಶ್ರೀಹರಿಯವರ ಯಾವುದೇ ದುಬಾರಿ ಕಾರುಗಳನ್ನು ಹೊಂದಿಲ್ಲ. ಕನಸಿನೊಂದಿಗೆ ತಮ್ಮ ವ್ಯವಹಾರವನ್ನು ಪ್ರಾರಂಭಿಸಿದ ಯಶಸ್ವಿ ಉದ್ಯಮಿಗಳ ಬಗ್ಗೆ ನಾವು ಹಲವಾರು ಕಥೆಗಳನ್ನು ನೋಡಿದ್ದೇವೆ. ಪೈಲಟ್ ಆಗುವುದು ಅಂದರೆ ಯಾವುದೇ ರೀತಿಯಲ್ಲಿ ಸುಲಭದ ಕೆಲಸವಲ್ಲ. ಕನಸು ಕಂಡರೆ, ಅದಕ್ಕಾಗಿ ಶ್ರಮಿಸಿದರೆ ಸಾಧಿಸಬಹುದು ಎಂಬುದನ್ನು ಶ್ರೀಹರಿ ಅವರು ಸಾಬೀತುಪಡಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.

Article Published On: Wednesday, October 25, 2023, 15:15 [IST]
English summary
Pilot who is also a private bus driver in kerala details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+