ADAS ಅಲರ್ಟ್ ವೈಶಿಷ್ಟ್ಯಗಳೊಂದಿಗೆ ಅಗ್ಗದ ಹೊಸ ಡ್ಯಾಶ್‌ಕ್ಯಾಮ್ ಬಿಡುಗಡೆ: ವಿಶೇಷತೆಗಳೇನು?

ಪಯೋನಿಯರ್ ಇಂಡಿಯಾ ತನ್ನ ಹೊಸ ಶ್ರೇಣಿಯ ಮೇಡ್-ಇನ್-ಇಂಡಿಯಾ ಡ್ಯಾಶ್‌ಕ್ಯಾಮ್‌ಗಳನ್ನು ಬಿಡುಗಡೆ ಮಾಡಿದ್ದು, VREC-H120SC, VREC-H320SC, VREC-H520DC ಮತ್ತು VREC-Z820DC ಎಂಬ ನಾಲ್ಕು ಮಾದರಿಗಳನ್ನು ಪರಿಚಯಿಸಿದೆ. ರೂ. 5,399 ರಿಂದ ಬೆಲೆಗಳು ಆರಂಭವಾಗುತ್ತವೆ. ಉನ್ನತ ಡ್ಯಾಶ್ ಕ್ಯಾಮೆರಾ ಮಾದರಿಯು ಉತ್ತಮ ಗುಣಮಟ್ಟ ಮತ್ತು AI ನೈಟ್ ವಿಷನ್, ADAS ಅಲರ್ಟ್ ಮತ್ತು ವರ್ಧಿತ ಪಾರ್ಕಿಂಗ್ ಮಾನಿಟರಿಂಗ್‌ನಂತಹ ಅತ್ಯುತ್ತಮ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಈ ಕ್ಯಾಮೆರಾಗಳನ್ನು ಬ್ರ್ಯಾಂಡ್‌ನ 'ಮೊಬಿಲಿಟಿ AI' ಪೋರ್ಟ್‌ಫೋಲಿಯೊ ಅಡಿಯಲ್ಲಿ ಪರಿಚಯಿಸಲಾಗಿದೆ, ಇದನ್ನು ವಿಶೇಷವಾಗಿ ಭಾರತಕ್ಕಾಗಿ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ತಿಳಿಸಿದೆ.

ಕ್ಯಾಮರಾಗಳನ್ನು ಕಾನ್ಫಿಗರ್ ಮಾಡಬಹುದು ಮತ್ತು ಬ್ಲೂಟೂತ್ ಮೂಲಕ ಅಪ್ಲಿಕೇಶನ್ ಅನ್ನು ತೆರೆಯಬಹುದು. ಕ್ಯಾಮೆರಾದ ವೈ-ಫೈ ನೆಟ್‌ವರ್ಕ್ ಮೂಲಕ ಡ್ಯಾಶ್ ಕ್ಯಾಮೆರಾವನ್ನು ಸಂಪರ್ಕಿಸಲು, ರೆಕಾರ್ಡ್ ಮಾಡಿದ ವೀಡಿಯೊಗಳನ್ನು ವೀಕ್ಷಿಸಲು ಮತ್ತು ಟೈಮ್‌ಲ್ಯಾಪ್‌ಗಳನ್ನು ರಚಿಸಲು ಬಳಕೆದಾರರಿಗೆ ಅಪ್ಲಿಕೇಶನ್ ಸಪೋರ್ಟ್ ಮಾಡುತ್ತದೆ.

pioneer-india-launched-dashcam-with-adas-alerts

ಪಯೋನಿಯರ್ ಡ್ಯಾಶ್‌ಕ್ಯಾಮ್ VREC-H120SC: ಈ ಮಾದರಿಯು ಕೇವಲ ರೂ. 5,399 ರಿಂದ ಪ್ರಾರಂಭವಾಗುವ ಕೈಗೆಟುಕುವ ಡ್ಯಾಷ್‌ಕ್ಯಾಮ್ ಆಗಿದೆ. ಇದು 1.5k ವೀಡಿಯೋ ರೆಕಾರ್ಡಿಂಗ್ ಮತ್ತು 139 ಡಿಗ್ರಿಗಳ ಬದಲಿಗೆ 120-ಡಿಗ್ರಿ ಕ್ಯಾಮರಾ ಕ್ಷೇತ್ರದ ವೀಕ್ಷಣೆಯಂತಹ ಪ್ರಮುಖ ವೈಶಿಷ್ಟ್ಯಗಳನ್ನು ಪಡೆದಿದೆ. ಈ ಮಾದರಿಯು ಒಂದೇ ಮೈಕ್ರೋ SD ಕಾರ್ಡ್‌ನ 128 ಗಿಗಾಬೈಟ್‌ಗಳವರೆಗೆ ಮಾತ್ರ ಸಪೋರ್ಟ್ ಮಾಡುತ್ತದೆ.

ಪಯೋನಿಯರ್ ಡ್ಯಾಶ್‌ಕ್ಯಾಮ್ VREC-H320SC: ಈ ಡ್ಯಾಷ್ ಕ್ಯಾಮ್ ಮಾದರಿಯು ರೂ. 11,399 ಬೆಲೆಯಿದ್ದು, 7.6 cm IPS ಡಿಸ್ಪ್ಲೇ ಮತ್ತು ಪೂರ್ಣ HD ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿರುವ ಮಧ್ಯಮ ಶ್ರೇಣಿಯ ಮಾದರಿಯಾಗಿದೆ. 1296p ನಲ್ಲಿ ಕಾಂಪ್ಯಾಕ್ಟ್ ಡ್ಯಾಶ್‌ಕ್ಯಾಮ್ ರೆಕಾರ್ಡಿಂಗ್ ಸಾಮರ್ಥ್ಯವನ್ನು ಹೊಂದಿದೆ. ಆಡಿಯೋ ADAS ಅಲರ್ಟ್ ಮತ್ತು ಡ್ಯುಯಲ್ ಚಾನಲ್ ಇನ್‌ಪುಟ್ ಸ್ಲಾಟ್‌ಗಳನ್ನು ಹೊಂದಿದೆ.

ಪಯೋನಿಯರ್ ಡ್ಯಾಶ್‌ಕ್ಯಾಮ್ VREC-H520DC: ಈ ಮಾದರಿಯ ಬೆಲೆಯು ರೂ. 18,499 ಇದೆ. VREC-H520DC ಕ್ಯಾಮರಾ ದೊಡ್ಡದಾದ 7.6 cm IPS ಡಿಸ್ಪ್ಲೇ, 2K ರೆಕಾರ್ಡಿಂಗ್ ಸಾಮರ್ಥ್ಯ, 512 GB ಸಂಗ್ರಹಣೆ, ಲೂಪ್ ರೆಕಾರ್ಡಿಂಗ್ ಮತ್ತು ADAS ಎಚ್ಚರಿಕೆಗಳನ್ನು ಬೆಂಬಲಿಸುವ ಮೈಕ್ರೋ SD ಸ್ಲಾಟ್ ಜೊತೆಗೆ ಪ್ರೀಮಿಯಂ ಕೊಡುಗೆಯಾಗಿದೆ.

ಪಯೋನಿಯರ್ ಡ್ಯಾಶ್‌ಕ್ಯಾಮ್ VREC-Z820DC: ಟಾಪ್-ಆಫ್-ಲೈನ್ ಕೊಡುಗೆಯು ಡ್ಯುಯಲ್-ಚಾನೆಲ್ ಮಾಡೆಲ್ ಆಗಿದ್ದು, ರೂ. 23,499 ಬೆಲೆ ಹೊಂದಿದೆ. ಇದು ರೀಡ್ ಕ್ಯಾಮೆರಾದೊಂದಿಗೆ ಬರುತ್ತದೆ, 4K ವೀಡಿಯೋ ರೆಕಾರ್ಡಿಂಗ್, 7.2 cm ಅಗಲದ ಡಿಸ್ಪ್ಲೇ, ADAS ವೈಶಿಷ್ಟ್ಯಗಳು ಮತ್ತು AI- ಆಧಾರಿತ ರಾತ್ರಿ ದೃಷ್ಟಿ (ನೈಟ್ ವಿಷನ್) ವರ್ಧನೆಯನ್ನು ನೀಡುತ್ತದೆ.

ಇದು ಜಿಪಿಎಸ್ ಡೇಟಾವನ್ನು ಲಾಗ್ ಮಾಡುವುದರ ಜೊತೆಗೆ ಲೂಪ್‌ನಲ್ಲಿ ನಿರಂತರವಾಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಬಹುದು. ಈ ಮಾದರಿಯು 1 TB ವರೆಗಿನ ಮೈಕ್ರೋ SD ಕಾರ್ಡ್ ಅನ್ನು ಬೆಂಬಲಿಸುತ್ತದೆ. ಹಾಗೆಯೇ HDR ಸಾಮರ್ಥ್ಯದೊಂದಿಗೆ Sony Starvis ಕ್ಯಾಮರಾ ಸೆನ್ಸಾರ್‌ಗಳ ಜೊತೆಗೆ ಬರುತ್ತದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Wednesday, August 28, 2024, 14:55 [IST]
English summary
Pioneer india launched dashcam with adas alerts
Read more on offbeat india new launches
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+