ಪಿಟಾಪುರಂನಲ್ಲಿ ಗೆದ್ದ ಪವನ್ ಕಲ್ಯಾಣ್: ಶಾಸಕರ ಅಧಿಕೃತ ಚಾಲಕನ ಕೈಯಲ್ಲಿ 2 ಕೋಟಿಯ ಕಾರು!

ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರು ಮೊದಲ ಬಾರಿಗೆ ಶಾಸಕರಾಗಿ ಆಂಧ್ರಪ್ರದೇಶ ವಿಧಾನಸಭೆ ಪ್ರವೇಶಿಸಲು ಸಜ್ಜಾಗಿದ್ದಾರೆ. ಅವರ ಜನಸೇನಾ ಪಕ್ಷವು ಈ ಚುನಾವಣೆಯಲ್ಲಿ ಶೇ100 ರಷ್ಟು ಸ್ಟ್ರೈಕ್ ರೇಟ್‌ನೊಂದಿಗೆ ಗೆದ್ದಿದೆ. ಟಿಡಿಪಿ ಮತ್ತು ಬಿಜೆಪಿಯೊಂದಿಗೆ ಸಮ್ಮಿಶ್ರ ಸರ್ಕಾರ ಅಧಿಕಾರಕ್ಕೆ ಬರುವ ಮೂಲಕ ಪವನ್ ಕಲ್ಯಾಣ್ ಆಂಧ್ರಪ್ರದೇಶದ ಚುನಾವಣೆಯಲ್ಲಿ ಹೊಸ ಅಲೆ ಎಬ್ಬಿಸಿದ್ದಾರೆ. ಈ ಸಮ್ಮಿಶ್ರ ಸರ್ಕಾರದ ಯಶಸ್ಸಿನಲ್ಲಿ ಪವರ್ ಸ್ಟಾರ್ ಅವರು ಕೂಡ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರು ನಿಜ ಜೀವನದಲ್ಲಿ ಅಪರೂಪದ ಐಷಾರಾಮಿ ಕಾರೊಂದನ್ನು ಹೊಂದಿದ್ದಾರೆ. ಅದರ ಬಗ್ಗೆ ಈ ಲೇಖನದಲ್ಲಿ ವಿವರವಾಗಿ ನೋಡೋಣ.

ಪವನ್ ಕಲ್ಯಾಣ್ ಕಳೆದ ವರ್ಷ 'ವಾರಾಹಿ' ಎಂಬ ಚುನಾವಣಾ ಪ್ರಚಾರ ವಾಹನವನ್ನು ಖರೀದಿಸಿದ ನಂತರ ಹೆಚ್ಚು ಸುದ್ದಿಯಾದರು. ಆಧುನಿಕ ಸೌಲಭ್ಯಗಳೊಂದಿಗೆ ಕಸ್ಟಮೈಸ್ ಮಾಡಲಾದ ಬೃಹತ್ ನೋಟದ ಟ್ರಕ್ ಇದಾಗಿದ್ದು, ಆಲಿವ್ ಗ್ರೀನ್ ಬಣ್ಣದಲ್ಲಿದ್ದ ಕಾರಣ ಸಾಕಷ್ಟು ಟೀಕೆಗೆ ಒಳಗಾಯಿತು, ಏಕೆಂದರೆ ಇದು ಸಾಮಾನ್ಯವಾಗಿ ಮಿಲಿಟರಿ ಸಿಬ್ಬಂದಿಗೆ ಮೀಸಲಾಗಿರುತ್ತದೆ. ಟೀಕೆಗಳನ್ನು ಎದುರಿಸಿದ ನಂತರ, ಆ ಟ್ರಕ್ ಅನ್ನು ಡಾರ್ಕ್ ಗ್ರೀನ್ ಬಣ್ಣಕ್ಕೆ ಮರು ನೋಂದಾಯಿಸಿದರು.

pithapuram-mla-pawan-kalyan-car-collection-details

ಟೊಯೊಟಾ ಲ್ಯಾಂಡ್ ಕ್ರೂಸರ್: ಪವನ್‌ ಕಲ್ಯಾನ್ ಅವರು ತಮ್ಮ ವೈಯಕ್ತಿಕ ಕೆಲಸಗಳಿಗೆ ಬಳಸುವ ಒಂದಷ್ಟು ಕಾರುಗಳು ಇದ್ದರೂ, ಟೊಯೋಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ 300 ಎಸ್‌ಯುವಿಗೆ ಮಾತ್ರ ವಿಶೇಷ ಸ್ಥಾನವಿದೆ. ಪವನ್ ಕಲ್ಯಾಣ್ ಅವರು ಲ್ಯಾಂಡ್ ಕ್ರೂಸರ್ ಎಲ್‌ಸಿ 300 ಅನ್ನು ಕಳೆದ ವರ್ಷ ಖರೀದಿಸಿದ್ದರು. ಇದು ಪ್ರಸ್ತುತ ಭಾರತದಲ್ಲಿ ಮಾರಾಟವಾಗುವ ಅತ್ಯಂತ ದುಬಾರಿ ಟೊಯೊಟಾ ಕಾರಾಗಿದೆ.

ಇದರ ಬೆಲೆಯು ಭಾರತದ ಎಕ್ಸ್ ಶೋರೂಂ ದರದಂತೆ ರೂ.2.10 ಕೋಟಿಗಳಾಗಿದೆ. ಅತ್ಯಂತ ದುಬಾರಿ ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ 300 ಅನ್ನು ಮನೆಗೆ ತಂದ ಮೊದಲ ಸೆಲೆಬ್ರಿಟಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದರು. ಇದೇ ಕಾರಿನ ಸುತ್ತಾ ಸ್ಕಾರ್ಪಿಯೋ ಎಸ್‌ಯುವಿಗಳ ಬೆಂಗಾವಲು ಪಡೆಯನ್ನು ಹೊಂದಿರುವ ಫೋಟೋಗಳು ಈಗ ತುಂಬಾ ವೈರಲ್ ಆಗುತ್ತಿವೆ.

pithapuram-mla-pawan-kalyan-car-collection-details

ಎಸ್‌ಯುವಿ ಕುರಿತ ಹೆಚ್ಚಿನ ವಿವರಗಳು: ಟೊಯೊಟಾ ಲ್ಯಾಂಡ್ ಕ್ರೂಸರ್ ಎಲ್‌ಸಿ 300 ಹಲವಾರು ಪ್ರೀಮಿಯಂ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಆಲ್ ಎಲ್ಇಡಿ ಹೆಡ್‌ಲ್ಯಾಂಪ್‌ಗಳು, 12.3 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಂ, ಲೆದರ್ ಅಪ್ ಹೋಲ್ಸ್ಟರಿ, 14 ಸ್ಪೀಕರ್ ಜೆಬಿಎಲ್ ಆಡಿಯೊ ಸಿಸ್ಟಂ ಮತ್ತು ಇತ್ಯಾದಿಗಳನ್ನು ಹೊಂದಿದೆ.

ಇದು ಸ್ಟ್ಯಾಂಡರ್ಡ್ ವೈಶಿಷ್ಟ್ಯವಾಗಿ 4×4 ನೊಂದಿಗೆ ಲಭ್ಯವಿದ್ದು, ಸಾಮಾನ್ಯ ಕಾರುಗಳಂತಲ್ಲದೇ ಇದರ ಸಸ್ಪೆಂಷನ್ ತಂತ್ರಜ್ಞಾನ ವಿಭಿನ್ನವಾಗಿರುತ್ತದೆ. ಈ ಎಸ್‌ಯುವಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿದೆ. ಆದಾಗ್ಯೂ, ಭಾರತದಲ್ಲಿ ಕೇವಲ ಡೀಸೆಲ್ ಆವೃತ್ತಿ ಮಾತ್ರ ಖರೀದಿಗೆ ಲಭ್ಯವಿದೆ.

pithapuram-mla-pawan-kalyan-car-collection-details

ಈ ಎಸ್‌ಯುವಿ 3.3 ಲೀ. ವಿ-6 ಟರ್ಬೊ ಡೀಸೆಲ್ ಎಂಜಿನ್ ಹೊಂದಿದೆ. 309 ಬಿಹೆಚ್‌ಪಿ ಪವರ್ ಹಾಗೂ 700 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್‌ನೊಂದಿಗೆ 10-ಸ್ಪೀಡ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಅನ್ನು ಅಳವಡಿಸಲಾಗಿದೆ. ಈ ಎಸ್‌ಯುವಿಯು ಪ್ರೆಸಿಯಸ್ ವೈಟ್ ಪರ್ಲ್, ಸೂಪರ್ ವೈಟ್, ಡಾರ್ಕ್ ರೆಡ್ ಮೈಕಾ ಮೆಟಾಲಿಕ್, ಆಟಿಟ್ಯೂಡ್ ಬ್ಲ್ಯಾಕ್ ಮತ್ತು ಡಾರ್ಕ್ ಬ್ಲೂ ಮೈಕಾ ಬಣ್ಣಗಳಲ್ಲಿ ಲಭ್ಯವಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

More from DriveSpark

Article Published On: Wednesday, June 5, 2024, 16:32 [IST]
English summary
Pithapuram mla pawan kalyan car collection details
Read more on off beat india
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+