ಪ್ರಧಾನಿ ಮೋದಿ ಬಳಸುವ ಬುಲೆಟ್ ಪ್ರೊಫ್ ರೇಂಜ್ ರೋವರ್ ಕಾರಿನ ಬೆಲೆ 10 ಕೋಟಿ ರೂಪಾಯಿ: ವಿಶೇಷತೆಗಳೇನು?

ದೆಹಲಿಯಲ್ಲಿ ನಡೆದ 75 ನೇ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಆಗಮಿಸಿದ ರೇಂಜ್ ರೋವರ್ (Range Rover) ಕಾರು ಎಲ್ಲರ ಗಮನ ಸೆಳೆಯಿತು. ಈ ಎಸ್‌ಯುವಿ ಸಂಪೂರ್ಣ ಸುರಕ್ಷಿತವಾಗಿದ್ದು, 10 ಕೋಟಿ ರೂಪಾಯಿ ಬೆಲೆಯನ್ನು ಹೊಂದಿದೆ.

ಯುಕೆಯಲ್ಲಿರುವ ಲ್ಯಾಂಡ್ ರೋವರ್ (Land Rover) ಕಂಪನಿಯ ಸ್ಪೆಷಲ್ ವೆಹಿಕಲ್ ಆಪರೇಷನ್ (SVO) ವಿಭಾಗವು ಈ ಕಾರನ್ನು ವಿನ್ಯಾಸಗೊಳಿಸಿದೆ. ಕಾರಿನ ಗ್ಲಾಸ್‌ಗಳನ್ನು ಗುಂಡಿನ ದಾಳಿಯನ್ನು ತಡೆಗಟ್ಟುವಂತೆ ಸಿದ್ದಪಡಿಸಲಾಗಿದ್ದು, ಸ್ಫೋಟಕ ಹಾಗೂ ರಾಸಾಯನಿಕ ದಾಳಿಗಳನ್ನು ಕೂಡ ನಿಭಾಯಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಜೊತೆಗೆ ಅತ್ಯಾಧುನಿಕ ಟೈರ್‌ಗಳನ್ನು ಒಳಗೊಂಡಿದೆ.

PM Modis Bulletproof Range Rover Car Price Rs 10 Crores: What Are the Features?

ಪ್ರಧಾನಿ ನರೇಂದ್ರ ಮೋದಿ ಅವರು ಉಪಯೋಗ ಮಾಡುವ ಈ ರೇಂಜ್ ರೋವರ್ ಕಾರು, 33 - ಪೌಂಡ್ ತೂಕದ ಬಾಂಬ್ ಸ್ಫೋಟವನ್ನು ಪ್ರತಿರೋಧಿಸುತ್ತದೆ. ಜೊತೆಗೆ ಎಕೆ 47 ಬಂದೂಕಿನ ಗುಂಡಿನ ದಾಳಿಯನ್ನು ತಡೆಗಟ್ಟುತ್ತದೆ. ಈ ಕಾರು, ರನ್- ಪ್ಲಾಟ್ ಟೈರ್‌ಗಳು ಹೊಂದಿದ್ದು, ಪಂಕ್ಚರ್ ಆದರೂ ಗಂಟೆಗೆ 50 ರಿಂದ 80 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚರಿಸುತ್ತದೆ.

ಈ ಕಾರಿನಲ್ಲಿ ಡ್ರೈವರ್ ಭಾಗದಲ್ಲಿರುವ ಕಿಟಕಿ (ವಿಂಡೋ)ಯನ್ನು ಮಾತ್ರ ತೆರೆಯಲು ಸಾಧ್ಯವಿದ್ದು, ಪ್ರಮುಖ ದಾಖಲೆಗಳನ್ನು ವಿನಿಮಯ ಮಾಡಿಕೊಳ್ಳುವಾಗ ಸೇರಿದಂತೆ ವಿವಿಧ ಸಂದರ್ಭದಲ್ಲಿ ಬಳಕೆ ಮಾಡಲಾಗುತ್ತದೆ. ಇದು ಸಾಕಷ್ಟು ಅತ್ಯಾಕರ್ಷಕ ವೈಶಿಷ್ಟ್ಯಗಳನ್ನು ಹೊಂದಿದೆ. ಪ್ರಮುಖವಾಗಿ ಟಚ್ ಪ್ರೊ ಡ್ಯುಯೊ ಇನ್ಫೋಟೈನ್ಮೆಂಟ್ ಸಿಸ್ಟಮ್, ನ್ಯಾವಿಗೇಶನ್ ಮತ್ತು ಕ್ಲೇಮೇಟ್ ಫೀಚರ್ಸ್ ಅನ್ನು ಒಳಗೊಂಡಿದೆ.

ರೇಂಜ್ ರೋವರ್ (Range Rover) ಕಾರು, 5.0 - ಲೀಟರ್ ವಿ8 ಸೂಪರ್ಚಾರ್ಜ್ಡ್ ಪೆಟ್ರೋಲ್ ಎಂಜಿನ್ ಹೊಂದಿದ್ದು, ಗರಿಷ್ಠ 374 bhp ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಕೇವಲ 10.4 ಸೆಕೆಂಡುಗಳಲ್ಲಿ 0 - 100 kmph ವೇಗವನ್ನು ಪಡೆಯಲಿದ್ದು, 193 kmph ಟಾಪ್ ಸ್ವೀಡ್ ಇದೆ.

ಸದ್ಯ, ದೇಶೀಯ ಮಾರುಕಟ್ಟೆಯಲ್ಲಿ ರೇಂಜ್ ರೋವರ್ 3 ರೂಪಾಂತರದ ಆಯ್ಕೆಯಲ್ಲಿ ದೊರೆಯುತ್ತದೆ. ಮೊದಲಿಗೆ ಲ್ಯಾಂಡ್ ರೋವರ್ ರೇಂಜ್ ರೋವರ್ ಬಗ್ಗೆ ಮಾತನಾಡೋಣ. ಈ ಕಾರು, ರೂ.2.39 ಕೋಟಿಯಿಂದ ರೂ.4.17ಕೋಟಿ ಎಕ್ಸ್ ಶೋರೂಂ ಬೆಲೆಯಲ್ಲಿ ಖರೀದಿಗೆ ದೊರೆಯುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಸಿಗಲಿದ್ದು, 14.01 kmpl ಮೈಲೇಜ್ ನೀಡುತ್ತದೆ. ಸುರಕ್ಷತೆಯ ದೃಷ್ಟಿಯಿಂದ ಗ್ಲೋಬಲ್ ಎನ್‌ಸಿಎಪಿ 5 ಸ್ಟಾರ್ ರೇಟಿಂಗ್ ಪಡೆದಿದೆ.

ಲ್ಯಾಂಡ್ ರೋವರ್ ಡಿಫೆಂಡರ್ ರೂ.93.55 ಲಕ್ಷದಿಂದ ರೂ.2.30 ಕೋಟಿ ಎಕ್ಸ್ ಶೋರೂಂ ದರದಲ್ಲಿ ಲಭ್ಯವಿದೆ. 2.0 - ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್, 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಒಳಗೊಂಡಿದೆ. 10 - ಇಂಚಿನ ಟಚ್‌ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್, ಆಂಡ್ರಾಯ್ಡ್ ಆಟೋ, ಆಪಲ್ ಕಾರ್ ಪ್ಲೇ, 12.3-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಹೊಂದಿದೆ.

ಲ್ಯಾಂಡ್ ರೋವರ್ ರೇಂಜ್ ರೋವರ್ ವೆಲಾರ್, ರೂ.94.30 ಲಕ್ಷ ಎಕ್ಸ್ ಶೋರೂಂ ದರದಲ್ಲಿ ಸಿಗುತ್ತದೆ. ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ದೊರೆಯುವ ಈ ಕಾರು, 8 - ಸ್ವೀಡ್ ಆಟೋಮೆಟಿಕ್ ಗೇರ್ ಬಾಕ್ಸ್ ಹೊಂದಿದೆ. ಜೊತೆಗೆ 210 kmph ಟಾಪ್ ಸ್ವೀಡ್ ಪಡೆಯಲಿದೆ. 12.3 - ಇಂಚಿನ ಡಿಜಿಟಲ್ ಡ್ರೈವರ್ ಡಿಸ್ಪ್ಲೇ, ವೈರ್‌ಲೆಸ್ ಫೋನ್ ಚಾರ್ಜಿಂಗ್ ಸೇರಿದಂತೆ ಹತ್ತಾರು ವೈಶಿಷ್ಟ್ಯಗಳನ್ನು ಒಳಗೊಂಡಿದೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Sunday, January 28, 2024, 11:00 [IST]
English summary
Pm modi bulletproof range rover car price rs 10 crore what are the features
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+