ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಭಾರತದಲ್ಲಿ ಹೆಚ್ಚಿನ ಜನರು ಸನ್‌ರೂಫ್ ಸೌಲಭ್ಯ ಹೊಂದಿರುವ ಕಾರುಗಳನ್ನು ಇಷ್ಟಪಡುತ್ತಾರೆ. ಮೊದಲೆಲ್ಲಾ ನಾವು ಕೇವಲ ದುಬಾರಿ ಕಾರುಗಳಲ್ಲಿ ಮಾತ್ರ ಸನ್‌ರೂಫ್‌ಗಳನ್ನು ನೋಡಬಹುದಾಗಿತ್ತು, ಆದರೆ ಇದೀಗ ಹ್ಯಾಚ್‌ಬ್ಯಾಕ್‌ ಮತ್ತು ಎಸ್‌ಯುವಿ ಕಾರುಗಳಲ್ಲಿ ಕೂಡ ಸನ್‌ರೂಫ್ ಸಾಮಾನ್ಯವಾಗಿದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಇತ್ತೀಚೆಗೆ ಅತ್ಯಾಧ್ಯುನಿಕ ಫಿಚರ್ಸ್ ಗಳೊಂದಿಗೆ ಕಾರುಗಳು ಬರುತ್ತಿದೆ. ತಮ್ಮ ಮೆಚ್ಚಿನ ಫೀಚರ್ ಹೊಂದಿರುವ ಮಾದರಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಸನ್‌ರೂಫ್ ಹೊಂದಿರುವ ವಾಹನವನ್ನು ಆಯ್ಕೆ ಮಾಡುವ ಹೆಚ್ಚಿನ ಜನರಿಗೆ ಅದರ ನಿಜವಾದ ಉದ್ದೇಶ ತಿಳಿದಿಲ್ಲ ಮತ್ತು ನೀವು ಅವರನ್ನು ಕೇಳಿದರೆ, ಅವರ ಉತ್ತರವು ಬಹುತೇಕ ಒಂದೇ ಆಗಿರುತ್ತದೆ. ವಾಹನ ಚಾಲನೆಯಲ್ಲಿರುವಾಗ ಹೊರಗೆ ನಿಲ್ಲಲು ಭಾರತದಲ್ಲಿ ಜನರು ಹೆಚ್ಚಾಗಿ ಸನ್‌ರೂಫ್ ಅನ್ನು ಬಳಸುತ್ತಾರೆ. ಆದರೆ ಅದು ಅಪಾಯಕಾರಿ ಆಗಿದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಇತ್ತೀಚೆಗೆ ಮಹಿಳೆಯೊಬ್ಬರು ಚಲಿಸುತ್ತಿರುವ ಕಾರಿನ ಸನ್‌ರೂಫ್‌ನಿಂದ ಹೊರಗೆ ನಿಂತಿರುವ ವೀಡಿಯೊ ಟ್ವಿಟರ್‌ನಲ್ಲಿ ಬಹುಬೇಗ ಸಖತ್ ವೈರಲ್ ಆಗಿದೆ. ಇದನ್ನು ಟ್ರಾಫಿಕ್ ಪೊಲೀಸರ ಪೇಜ್‌ಗೆ ಟ್ಯಾಗ್ ಮಾಡಲಾಗಿದೆ, ನಂತರ ಸ್ಥಳೀಯ ಬಾಂದ್ರಾ ಟ್ರಾಫಿಕ್ ಪೊಲೀಸರಿಗೆ ಕಠಿಣ ಕ್ರಮಕ್ಕೆ ಸೂಚಿಸಿದ್ದಾರೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಅನೇಕ ಜನರು ಸನ್‌ರೂಫ್‌ಗಳಿಗೆ ಸಂಬಂಧಿಸಿದಂತೆ ಸಂಚಾರ ನಿಯಮಗಳ ಬಗ್ಗೆ ತಿಳಿದಿಲ್ಲ ಮತ್ತು ಚಲಿಸುವ ಕಾರಿನ ಸನ್‌ರೂಫ್ ಮೂಲಕ ನಿಲ್ಲುವುದು ಕಾನೂನುಬದ್ಧವಾಗಿದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ನಿಮ್ಮನ್ನು ಕಾಡಬಹುದು. ಇದಕ್ಕೆ ಉತ್ತರ ಇಲ್ಲಿದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ದಿ ಫ್ರೀ ಪ್ರೆಸ್ ಜರ್ನಲ್‌ನೊಂದಿಗೆ ಬಾಂದ್ರಾ-ವರ್ಲಿ ಸೀ ಲಿಂಕ್ ಟ್ರಾಫಿಕ್ ಪೊಲೀಸ್ ಇನ್ಸ್‌ಪೆಕ್ಟರ್ ಪಿ ಕಾಂಬ್ಳೆ ಅವರು ಮಾತನಾಡಿ, ಮೋಟಾರ್ ವೆಹಿಕಲ್ಸ್ (ಎಂವಿ) ಕಾಯ್ದೆಯ ಪ್ರಕಾರ (ಚಲಿಸುವ) ಕಾರಿನ ಸನ್‌ರೂಫ್‌ನಿಂದ ತಲೆ ಅಥವಾ ದೇಹವನ್ನು ಹೊರಗೆ ಹಾಕುವುದು ಅಪರಾಧ ಮತ್ತು ಉಲ್ಲಂಘನೆ ಎಂದು ಪರಿಗಣಿಸಲಾಗುತ್ತದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಸಂಚಾರ ನಿಯಮಗಳ." ಈ ಬಗ್ಗೆ ಹೆಚ್ಚಿನವರಿಗೆ ತಿಳಿದಿಲ್ಲ, ಆದರೆ ಈ ನಿಯಮವು ಸಮುದ್ರ ಮಾರ್ಗ ಸಂಚರಿಸುವ ವಾಹನಗಳಿಗೆ ಮಾತ್ರವಲ್ಲದೆ ನಗರದ ರಸ್ತೆಗಳಲ್ಲಿ ವಾಹನ ಚಾಲಕರಿಗೂ ಅನ್ವಯಿಸುತ್ತದೆ, ಈ ಕಾಯ್ದೆಯು ದಂಡದ ಜೊತೆಗೆ ತನಿಖೆಗೆ ಕಾರಣವಾಗಬಹುದು ಎಂದು ಅವರು ಒತ್ತಿ ಹೇಳಿದರು.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಸೂರ್ಯನ ಬೆಳಕನ್ನು ಕಾರುಗಳಿಗೆ ಬಿಡುವುದು ಸನ್‌ರೂಫ್‌ನ ಮೂಲ ಬಳಕೆಯ ಉದ್ದೇಶವಾಗಿದೆ. ಆದರೆ ಜನರು ತಮ್ಮ ತಲೆ ಅಥವಾ ದೇಹವನ್ನು ಹೊರಗೆ ಹಾಕಿದಾಗ, ಅದು ಇತರರ ದೃಷ್ಟಿಯನ್ನು ತಡೆಯುತ್ತದೆ ಆದ್ದರಿಂದ ಯಾವುದೇ ಇತರ ಅಪಘಾತಗಳಿಗೆ ಕಾರಣವಾಗುತ್ತದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಈ ಹಿಂದೆ ಗಾಳಿಪಟದ ದಾರವು ಚಲಿಸುವ ನಾಲ್ಕು ಚಕ್ರದ ವಾಹನದಿಂದ ತಲೆಯನ್ನು ಹೊರಗೆ ಹಾಕುವ ಜನರ ಕುತ್ತಿಗೆಯನ್ನು ಆಕಸ್ಮಿಕವಾಗಿ ಸೀಳಿದ ಪ್ರಕರಣಗಳೂ ನಡೆದಿವೆ. ಇದೇ ರೀತಿ ಕಾರಿನಿಂದ ಹೊರಗೆ ತಲೆಹಾಕುವುದರಿಂದ ಹಲವಾರು ಅನಾಹುತಗಳು ಸಂಭವಿಸುತ್ತದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಚಲಿಸುವ ವಾಹನದ ಸನ್‌ರೂಫ್‌ನಿಂದ ಎದ್ದು ನಿಲ್ಲುವುದು ಏಕೆ ಮೂರ್ಖತನ ಎಂದು ತೋರಿಸುವ ಮತ್ತೊಂದು ವೀಡಿಯೊ ವೈರಲ್ ಆಗಿತ್ತು. ಈ ವೀಡಿಯೊದಲ್ಲಿ ಕಿಯಾ ಕಾರ್ನಿವಲ್ ಕಿರಿದಾದ ರಸ್ತೆಯಲ್ಲಿ ಕಂಡುಬರುತ್ತದೆ. ಸನ್‌ರೂಫ್‌ನಿಂದ ಹೊರಗೆ ಇಬ್ಬರು ನಿಂತಿದ್ದಾರೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಡ್ರೈವರ್ ಈ ಕಿಯಾ ಎಂಪಿವಿಯನ್ನು ಉತ್ತಮ ವೇಗದಲ್ಲಿ ಮುಂದಕ್ಕೆ ಓಡಿಸುತ್ತಾನೆ. ಸನ್‌ರೂಫ್‌ನಿಂದ ಹೊರಗೆ ನಿಂತಿರುವ ಇಬ್ಬರೂ ವೀಡಿಯೊ ಮತ್ತು ಫೋಟೋಗಳಿಗೆ ಫೋಸ್ ಕೊಡುತ್ತಾ ಹೊರಗೆ ನಿಂತಿದ್ದರು.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಎಂಪಿವಿ ಕಾರು ಕ್ಯಾಮೆರಾಗಳ ಬಳಿ ಸಮೀಪಿಸುತ್ತಿದ್ದಂತೆ, ಚಾಲಕ ವೇಗವನ್ನು ಹೆಚ್ಚಿಸುತ್ತಾನೆ ಮತ್ತು ಕ್ಯಾಮೆರಾವನ್ನು ದಾಟಿದ ನಂತರ ಇದ್ದಕ್ಕಿದ್ದಂತೆ ಬ್ರೇಕ್ ಹಾಕುತ್ತಾನೆ. ಸನ್‌ರೂಫ್‌ನ ಹೊರಗೆ ನಿಂತಿದ್ದ ಜನರು ಬ್ರೇಕ್ ಹಾಕುವುದನ್ನು ನಿರೀಕ್ಷಿಸಲಿಲ್ಲ ಮತ್ತು ಅವರು ವಾಹನದ ಯಾವುದೇ ಭಾಗವನ್ನು ಹಿಡಿದಿಲ್ಲದ ಕಾರಣ, ಆ ವ್ಯಕ್ತಿಯ ಮುಖ ಎಂಪಿವಿಯ ರೂಫ್ ಮೇಲೆ ಹೊಡೆಯುತ್ತದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ವೀಡಿಯೊ ಅಲ್ಲಿಗೆ ಕೊನೆಗೊಳ್ಳುತ್ತದೆ ಆದರೆ, ಅವರಿಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಈ ವೀಡಿಯೊ ಸನ್‌ರೂಫ್‌ನೊಂದಿಗೆ ಏನು ಮಾಡಬಾರದು ಎಂಬುದನ್ನು ತೋರಿಸುವ ಒಂದು ಪರಿಪೂರ್ಣ ಉದಾಹರಣೆಯಾಗಿದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಸನ್ ರೂಫ್ ನಲ್ಲಿ ನಿಂತಿರುವ ಜನರು ಯಾವುದೇ ರೀತಿಯಲ್ಲಿ ಗಂಭೀರವಾಗಿ ಗಾಯಗೊಂಡಿಲ್ಲ ಎಂದು ನಾವು ಭಾವಿಸುತ್ತೇವೆ. ಸನ್ ರೂಫ್ ಮೇಲೆ ಬಡಿದ ವ್ಯಕ್ತಿಗೆ ಏನಾಯಿತು ಎಂದು ಅವನು ಲೆಕ್ಕಾಚಾರ ಮಾಡುವಷ್ಟರಲ್ಲಿ ಆಘಾತಕ್ಕೊಳಗಾಗಿದ್ದಾನೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಇನ್ನು ಕಾರು ವೇಗವಾಗಿ ಚಲಿಸುತ್ತಿರುವಾಗ ಈ ರೀತಿ ನಡೆದರೆ ಗಂಭೀರ ಗಾಯವಾಗುತ್ತದೆ. ಅಲ್ಲದೇ ತಲೆಗೆ ಏಟು ಬೀಳುದಿರುವುದು ಹೆಚ್ಚಿನ ಅನಾಹುತ ಕೂಡ ನಡೆಯಬಹುದು. ಇನ್ನು ಕೆಲವಡೆ ತಂತಿಗಳು ಅಥವಾ ಇತರ ಎತ್ತರದ ಯಾವುದೇ ಕಂಬಗಳು ಇದ್ದರೆ ಗಮನಿಸದೆ ಇದ್ದರೆ ತಲೆಗೆ ತಗುತ್ತದೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಚಲಿಸುವ ವಾಹನದ ಸನ್‌ರೂಫ್ ಅನ್ನು ಹೊರಗಿಡುವುದು ನಿಜವಾಗಿ ಕಾನೂನುಬಾಹಿರ ಎಂದು ನೀವು ತಿಳಿದಿರಬೇಕು ಮತ್ತು ಪೊಲೀಸರು ನಿಜವಾಗಿ ನಿಮಗೆ ದಂಡ ವಿಧಿಸಬಹುದು. ಎಲೆಕ್ಟ್ರಿಕ್ ಸನ್‌ರೂಫ್‌ಗಳು ಈಗ ಅನೇಕ ಬಜೆಟ್ ಕಾರುಗಳಲ್ಲಿಯೂ ಕೂಡ ಬರುವ ವೈಶಿಷ್ಟ್ಯವಾಗಿವೆ.

ಚಲಿಸುವ ಕಾರಿನ ಸನ್‌ರೂಫ್‌ನಿಂದ ತಲೆ ಹೊರಗೆ ಹಾಕುವುದು ಅಪರಾಧ: ಈ ವಿಷಯಗಳು ನೆನಪಿರಲಿ

ಇದು ಖಂಡಿತವಾಗಿಯೂ ಉತ್ತಮ ಮತ್ತು ಪ್ರಯೋಜನಕಾರಿ ವೈಶಿಷ್ಟ್ಯವಾಗಿದೆ ಮತ್ತು ಕಾರಿನ ನೋಟವನ್ನು ಸಂಪೂರ್ಣವಾಗಿ ಬದಲಾಯಿಸುತ್ತದೆ. ವಿಂಡೋಗಳನ್ನು ತೆರೆಯದೆಯೇ ಕ್ಯಾಬಿನ್‌ಗೆ ಹೆಚ್ಚು ತಾಜಾ ಗಾಳಿಯನ್ನು ಬಿಡಲು ಇದು ಉತ್ತಮ ಮಾರ್ಗವಾಗಿದೆ.

Article Published On: Monday, November 14, 2022, 18:39 [IST]
English summary
Poking head out of car sunroof is offence details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+