ಕಾರುಗಳ್ಳತನ ತಡೆಗೆ ಹೊಸ ಹೆಜ್ಜೆ ಇಟ್ಟ ಪೊಲೀಸರು

ಲಾಕ್‌ಡೌನ್‌ ಕಾರುಗಳ್ಳರಿಗೆ ವರವಾಗಿ ಪರಿಣಮಿಸಿದ್ದು, ದೇಶಾದ್ಯಂತ ಕಾರು ಕಳ್ಳತನದ ಘಟನೆಗಳು ಹೆಚ್ಚುತ್ತಿವೆ. ಇತ್ತೀಚೆಗಷ್ಟೇ ಲಕ್ನೋ ಪೊಲೀಸರು ದೇಶದ ಅತಿದೊಡ್ಡ ಕಾರುಗಳ್ಳರ ಗ್ಯಾಂಗ್ ಅನ್ನು ಬಂಧಿಸಿದ್ದರು.

ಕಾರುಗಳ್ಳತನ ತಡೆಗೆ ಹೊಸ ಹೆಜ್ಜೆ ಇಟ್ಟ ಪೊಲೀಸರು

ಕಾರುಗಳ್ಳತನ ಪ್ರಕರಣಗಳು ಪೊಲೀಸರಿಗೆ ತಲೆ ನೋವು ತಂದಿಟ್ಟಿವೆ. ಕಾರುಗಳ್ಳತನವನ್ನು ತಡೆಯಲು ಅನೇಕ ರಾಜ್ಯಗಳ ಪೊಲೀಸರು ಹೊಸ ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ತಿರುಚಿ ಪೊಲೀಸರು ಕಾರುಗಳ್ಳತನವನ್ನು ತಡೆಯಲು ಹೊಸ ಹೆಜ್ಜೆ ಇಟ್ಟಿದ್ದಾರೆ. ವಾಹನ ಕಳ್ಳತನವಾದರೆ ವಾಹನಗಳನ್ನು ಸುಲಭವಾಗಿ ಪತ್ತೆಹಚ್ಚಲು ಅಥವಾ ಕಾರುಗಳ್ಳತನವಾಗುವುದನ್ನು ತಡೆಯಲು ಗ್ರಾಹಕರು ಕಾರಿನಲ್ಲಿ ಜಿಪಿಎಸ್ ಅಳವಡಿಸಿಕೊಳ್ಳಲು ಸಲಹೆ ನೀಡುವಂತೆ ತಿರುಚಿ ಪೊಲೀಸರು ಕಾರು ಡೀಲರ್ ಗಳನ್ನು ಕೋರಿದ್ದಾರೆ.

ಕಾರುಗಳ್ಳತನ ತಡೆಗೆ ಹೊಸ ಹೆಜ್ಜೆ ಇಟ್ಟ ಪೊಲೀಸರು

ಶನಿವಾರ ಈ ಬಗ್ಗೆ ಸುಮಾರು 16 ಕಾರು ಡೀಲರ್ ಗಳ ಜೊತೆ ಸಭೆ ನಡೆಸಿದ ತಿರುಚಿ ಪೊಲೀಸರು ಕಾರನ್ನು ಖರೀದಿಸುವ ಸಮಯದಲ್ಲಿ, ಗ್ರಾಹಕರಿಗೆ ಜಿಪಿಎಸ್ ಅಳವಡಿಸಿ ಕೊಳ್ಳುವಂತೆ ಸಲಹೆ ನೀಡಬೇಕು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಕಾರುಗಳ್ಳತನ ತಡೆಗೆ ಹೊಸ ಹೆಜ್ಜೆ ಇಟ್ಟ ಪೊಲೀಸರು

ಜಿಪಿಎಸ್‌ ಅಳವಡಿಸಿಕೊಳ್ಳುವುದರಿಂದ ಕಾರು ಕಳ್ಳತನವಾದ ಕೆಲವೇ ಗಂಟೆಗಳಲ್ಲಿ ಕಾರನ್ನು ಟ್ರ್ಯಾಕ್ ಮಾಡಬಹುದು ಎಂಬುದನ್ನು ಗ್ರಾಹಕರಿಗೆ ತಿಳಿಸುವಂತೆ ಪೊಲೀಸರು ಡೀಲರ್ ಗಳನ್ನು ಕೋರಿಕೊಂಡರು. ಜಿಪಿಎಸ್ ಮಹತ್ವವನ್ನು ಗ್ರಾಹಕರಿಗೆ ತಿಳಿಸುವಂತೆ ಪೊಲೀಸರು ಮನವಿ ಮಾಡಿಕೊಂಡರು.

ಕಾರುಗಳ್ಳತನ ತಡೆಗೆ ಹೊಸ ಹೆಜ್ಜೆ ಇಟ್ಟ ಪೊಲೀಸರು

ಇದೇ ವೇಳೆ ಮಾತನಾಡಿದ ತಿರುಚಿ ನಗರದ ಡಿಸಿಪಿ ಕದ್ದ ಕಾರುಗಳನ್ನು ಮರುಪಡೆಯುವುದರಲ್ಲಿರುವ ಸವಾಲುಗಳ ಬಗೆ ಹೇಳಿದರು. ಕಾರುಗಳಲ್ಲಿ ಈಗ ಜಿಪಿಎಸ್ ಗಳನ್ನು ಸ್ಟಾಂಡರ್ಡ್ ಫೀಚರ್ ಆಗಿ ನೀಡಲಾಗುತ್ತಿದೆ. ಜಿಪಿಎಸ್ ಕಾರುಗಳಿರುವ ಸ್ಥಳವನ್ನು ನಿಖರವಾಗಿ ಸೂಚಿಸುತ್ತವೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಕಾರುಗಳ್ಳತನ ತಡೆಗೆ ಹೊಸ ಹೆಜ್ಜೆ ಇಟ್ಟ ಪೊಲೀಸರು

ಶೋ ರೂಂಗಳ ಮಾಲೀಕರು ಕಾರಿನಲ್ಲಿ ಜಿಪಿಎಸ್ ಅಳವಡಿಸುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸಿಬೇಕೆಂದು ಅವರು ಹೇಳಿದರು. ಜಿಪಿಎಸ್ ಸಾಧನಗಳ ಬೆಲೆ ಸುಮಾರು ರೂ.5000ಗಳಾಗುತ್ತದೆ. ಇದರಿಂದ ಲಕ್ಷಾಂತರ ರೂಪಾಯಿ ಬೆಲೆಯ ಕಾರು ಕಳ್ಳತನವಾಗುವುದನ್ನು ತಡೆಯಬಹುದು.

ಕಾರುಗಳ್ಳತನ ತಡೆಗೆ ಹೊಸ ಹೆಜ್ಜೆ ಇಟ್ಟ ಪೊಲೀಸರು

ಮತ್ತೊಬ್ಬ ಪೊಲೀಸ್ ಅಧಿಕಾರಿ ಮಾತನಾಡಿ, ಜಿಪಿಎಸ್ ಸಹಾಯದಿಂದ ಕೆಲವೇ ಗಂಟೆಗಳಲ್ಲಿ ಕಾರನ್ನು ಟ್ರ್ಯಾಕ್ ಮಾಡಬಹುದು. ಜಿಪಿಎಸ್ ಕಾರುಗಳ್ಳರನ್ನು ಎಮಾರಿಸುತ್ತದೆ. ಕೆಲವೊಮ್ಮೆ ಕಾರು ಕಳ್ಳತನವಾಗುವ ಸಮಯದಲ್ಲಿಯೇ ಕಾರುಗಳನ್ನು ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಕಾರುಗಳ್ಳತನ ತಡೆಗೆ ಹೊಸ ಹೆಜ್ಜೆ ಇಟ್ಟ ಪೊಲೀಸರು

ದುಬಾರಿ ಬೆಲೆಯ ಐಷಾರಾಮಿ ಕಾರುಗಳಲ್ಲಿ ಜಿಪಿಎಸ್ ಫೀಚರ್ ಗಳನ್ನು ಸ್ಟಾಂಡರ್ಡ್ ಆಗಿ ನೀಡಲಾಗುತ್ತದೆ. ಆದರೆ ಸಣ್ಣ ಕಾರುಗಳಲ್ಲಿ ಈ ಫೀಚರ್ ನೀಡುತ್ತಿಲ್ಲ. ಕಾರುಗಳ್ಳರು ಕಾರುಗಳ ಹೊರಗಿರುವ ಜಿಪಿಎಸ್ ಗಳನ್ನು ತೆಗೆದುಹಾಕುತ್ತಾರೆ. ಈ ಕಾರಣಕ್ಕೆ ಹೆಚ್ಚಿನ ಸಂಖ್ಯೆಯ ಕಾರುಗಳಲ್ಲಿ ಕಾರಿನ ಒಳಭಾಗದಲ್ಲಿ ಜಿಪಿಎಸ್ ಅಳವಡಿಸಲಾಗುತ್ತದೆ.

Most Read Articles

Kannada
English summary
Police advise car dealers to install GPS in new cars. Read in Kannada.
Story first published: Monday, August 10, 2020, 14:35 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X