ಅಪ್ರಾಪ್ತ ತಮ್ಮನಿಗೆ ಬೈಕ್ ನೀಡಿದ ಅಣ್ಣನನ್ನು ಜೈಲಿಗಟ್ಟಿ 34000 ರೂ ದಂಡ ವಿಧಿಸಿದ ಪೊಲೀಸ್!
ಲೈಸೆನ್ಸ್ ಬರುವ ಮೊದಲೇ ಕಾರು ಬೈಕ್‌ಗಳನ್ನು ಓಡಿಸುವುದು ಭಾರತದಲ್ಲಿ ಒಂದು ಗಂಭೀರ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇಂದಿನ ದಿನಗಳಲ್ಲಿ ತಮ್ಮ ಸಣ್ಣ ಮಕ್ಕಳಿಗೆ ಬೈಕ್ ಕಾರುಗಳನ್ನು ಓಡಿಸಲು ಕಳಿಸಿ, ಅವರ ಕೈಯಲ್ಲಿ ವಾಹನಗಳನ್ನು ಓಡಿಸುವುದು ನಮ್ಮ ನಡುವೆ ಒಂದು ಟ್ರೆಂಡ್ ಆಗಿ ಬಿಟ್ಟಿದೆ.
ಪ್ರಾಯ ಪೂರ್ತಿಯಾಗದ, ಲೈಸೆನ್ಸ್ ಇಲ್ಲದೇ ಸಣ್ಣ ಮಕ್ಕಳ ಕೈಯಲ್ಲಿ ವಾಹನಗಳನ್ನು ಓಡಿಸುವ ಮಕ್ಕಳ ಪೋಷಕರ ಮೇಲೆ ಪೊಲೀಸರು ಕೇಸ್ ದಾಖಲಿಸಿಕೊಳ್ಳಬೇಕು. ಇದಕ್ಕೆ ಕಾರಣವೇನೆಂದರೆ ಹಲವು ಬಾರಿ ಸರಿಯಾಗಿ ವಾಹನ ಓಡಿಸಲು ಬರದೇ ಇತರರ ಮೇಲೆ ವಾಹನಗಳನ್ನು ಗುದ್ದಿ (Traffic Rules) ಅಪಘಾತ ಮಾಡಿ ಅಲ್ಲಿ ಅಮಾಯಕರ ಜೀವಕ್ಕೂ ಸಂಚಕಾರ ತಂದೊಡ್ಡುವ ಅನೇಕ ಸನ್ನಿವೇಶಗಳು ನಮ್ಮ ಮುಂದಿದೆ.

ಇಲ್ಲೊಂದು ಕಡೆ ಇದೇ ರೀತಿ ಪ್ರಕರಣ ನಡೆದಿದೆ. ಅಪ್ರಾಪ್ತ ಬಾಲಕನ ಬಳಿ ಬೈಕ್ ಓಡಿಸಲು ಕೊಟ್ಟ ಕಾರಣಕ್ಕಾಗಿ ಆ ಬೈಕ್‌ನ ಮಾಲೀಕನಾದ ಅಪ್ರಾಸಪ್ತ ಬಾಲಕನ ಅಣ್ಣನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿ ಸುಮಾರು 34 ಸಾವಿರ ರೂಗಳ ದಂಡವನ್ನು ವಿಧಿಸಿರುವ ಘಟನೆಯೊಂದು ವರದಿಯಾಗಿದೆ.
ಮಾಹಿತಿಗಳ ಪ್ರಕಾರ ನಮ್ಮ ನೆರೆ ರಾಜ್ಯವಾದ ಕೇರಳದಲ್ಲಿ ಈ ಘಟನೆ ನಡೆದಿದ್ದು, ಘಟನೆಯಲ್ಲಿ ತನ್ನ ಅಪ್ರಾಪ್ತ ತಮ್ಮನ ಬಳಿ ಬೈಕ್ ನೀಡಿ ಅದನ್ನು ಓಡಿಸಲು ಉತ್ತೇಜಿಸಿದ ಅಣ್ಣನನ್ನು ಬಂಧಿಸಿದ್ದು ಆತನ ಮೇಲೆ ಕೇರಳ ಪೊಲೀಸ್‌ಕೇಸ್ ದಾಖಲಿಸಿ ಜೈಲಿಗಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇಷ್ಟು ಮಾತ್ರವಲ್ಲದೇ ಕೇರಳ ಹೈಕೋರ್ಟ್ ಆತನ ಮೇಲೆ ಸುಮಾರು 34000 ರೂಗಳ ದಂಡವನ್ನು ವಿಧಿಸಿದೆ. ಇನ್ನು ಎರ್ನಾಕುಳಂನ ಅಡಿಷನಲ್ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನೈನಾ ಕೆವಿ ಈ ಪ್ರಕರಣವನ್ನು ಸಮಗ್ರವಾಗಿ ಪರಿಶೀಲಿಸಿ ಅಪ್ರಾಪ್ತ ಬಾಲಕ ಚಲಾಯಿಸುತ್ತಿದ್ದ ಬೈಕ್‌ನ ರಿಜಿಸ್ಟ್ರೇಷನ್ ಅನ್ನು ಸುಮಾರು12 ತಿಂಗಳುಗಳ ಕಾಲ ಕ್ಯಾನ್ಸಲ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಅಪ್ರಾಪ್ತ ಓಡಿಸುತ್ತಿದ್ದ ಬೈಕ್‌ನ ಮುಂಭಾಗ ಮತ್ತು ಹಿಂಭಾಗದ ಎರಡೂ ಕಡೆಯ ನಂಬರ್ ಪ್ಲೇಟ್‌ಗಳನ್ನು ಸಹ ಮುಚ್ಚಿಡಲಾಗಿದ್ದು, ಇದರಿಂದ ವಾಹನ ಯಾವುದು ಎಂದು ಪೊಲೀಸರಿಗೆ ತಿಳಿಯದೇ ಇರುವಂತೆ ಮಾಡಲು ಪೂರ್ವ ನಿಯೋಜಿತವಾಗಿಯೇ ಯೋಜನೆಗಳನ್ನು ರೂಪಿಸಲಾಗಿತ್ತು ಎಂದು ಸಹ ಪೊಲೀಸರು ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದಾರೆ.
ಈ ಕಾರಣದಿಂದಾಗಿ ಅಪ್ರಾಪ್ತನಿಗೆ ಓಡಿಸಲು ಬೈಕ್ ಅನ್ನು ನೀಡಿದ ಮಾಲೀಕನ ಡ್ರೈವಿಂಗ್ ಲೈಸೆನ್ಸ್ ಅನ್ನು ಸಹ ಮೂರು ತಿಂಗಳುಗಳ ಕಾಲ ರದ್ದುಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಜೊತೆಗೆ ಬೈಕ್‌ಗೆ ಇನ್ನೂ ಹಲವಾರು ಅಗತ್ಯವಾಗಿ ಇರಬೇಕಾದ ವಸ್ತುಗಳು ಇರಲಿಲ್ಲ ಎಂದು ತಿಳಿದು ಬಂದಿದೆ.
ಅದರಲ್ಲಿ ಪ್ರಮುಖವಾದವು ಬೈಕ್‌ನ ರೇರ್ ವ್ಯೂವ್ ಮಿರರ್‌ಗಳು, ಸಾರೀ ಗಾರ್ಡ್, ಟರ್ನ್ ಇಂಡಿಕೇಟರ್‌ಗಳು. ಇವ್ಯಾವುದೂ ಸಹ ಈ ಬೈಕ್‌ಗೆ ಇರಲಿಲ್ಲ ಎಂದು ತಿಳಿದು ಬಂದಿದೆ. ಇವು ಭಾರತದ ರಸ್ತೆಗಳಲ್ಲಿ ವಾಃನಗಳನ್ನು ಓಡಿಸಲು ಅಗತ್ಯವಾಗಿ ಇರಬೇಕಾದ ಸೇಫ್ಟಿ ಫೀಚರ್‌ಗಳಾಗಿದ್ದು, ಅವೇ ಈ ಬೈಕ್‌ನಲ್ಲಿ ಇರಲಿಲ್ಲ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.
Note: Images are representative purpose only.


Click it and Unblock the Notifications