ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ದೇಶದಲ್ಲಿ ತಂತ್ರಜ್ಞಾನ ಹೆಚ್ಚಾದಂತೆ ಜನರ ಜೀವನ ಶೈಲಿಯು ಬದಲಾಗುತ್ತಿದೆ. ಹಾಕುವ ಬಟ್ಟೆಯಿಂದ ಹಿಡಿದು ತಿನ್ನುವ ಆಹಾರದವರೆಗೆ ಎಲ್ಲವೂ ಕುಳಿತ ಜಾಗಕ್ಕೆ ಬರುತ್ತಿವೆ. ಆದರೆ ಅವುಗಳನ್ನು ತಲುಪಿಸುವ ಡೆಲಿವರಿ ಬಾಯ್ಸ್‌ಗಳ ಶ್ರಮ ಯಾರಿಗೂ ತಿಳಿದಿರುವುದಿಲ್ಲ. ಸಮಯಕ್ಕೆ ಸರಿಯಾಗಿ ಡೆಲಿವರಿ ನೀಡಲು ಸಾಕಷ್ಟು ಒತ್ತಡದಲ್ಲಿ ಕೆಲಸ ಮಾಡುತ್ತಿರುತ್ತಾರೆ.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ಇತ್ತೀಚೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ಆನ್ಲೈನ್ ಫುಡ್ ಡೆಲಿವರಿ ಸಂಸ್ಥೆಯ 22 ವರ್ಷದ ಉದ್ಯೋಗಿಯೊಬ್ಬರು ತನ್ನ ಸೈಕಲ್‌ನಲ್ಲಿ ಜನರ ಮನೆಗಳಿಗೆ ಫುಡ್ ಪಾರ್ಸೆಲ್‌ಗಳನ್ನು ತಲುಪಿಸಲು ಬೆವರು ಸುರಿಸುಕೊಂಡು ಶ್ರಮಿಸುತ್ತಿರುವುದನ್ನು ಕಂಡು ವಿಚಲಿತರಾದ ಇಂದೋರ್ ಪೊಲೀಸ್ ಸಿಬ್ಬಂದಿ, ಮೋಟಾರ್‌ ಸೈಕಲ್ ಖರೀದಿಸಿ ಡೆಲಿವರಿ ಬಾಯ್‌ಗೆ ಉಡುಗೊರೆಯಾಗಿ ನೀಡಿ ಮಾನವೀಯತೆ ಮೆರೆದಿದ್ದಾರೆ.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ಮಧ್ಯಪ್ರದೇಶದ ವಿಜಯ್ ನಗರ ಪೊಲೀಸ್ ಠಾಣೆಯ ಉಸ್ತುವಾರಿ ತೆಹಜೀಬ್ ಖಾಜಿ ಸೋಮವಾರ ರಾತ್ರಿ ಗಸ್ತು ತಿರುಗುತ್ತಿದ್ದಾಗ, ಜೇ ಹಲ್ಡೆ ಎಂಬ ಯುವಕ ಆಹಾರ ಪೊಟ್ಟಣಗಳ ಪಾರ್ಸಲ್‌ಗಳನ್ನು ತಲುಪಿಸಲು ವೇಗವಾಗಿ ಸೈಕ್ಲಿಂಗ್ ಮಾಡುವಾಗ ಬೆವರಿನಲ್ಲಿ ಒದ್ದೆಯಾಗಿರುವುದನ್ನು ನೋಡಿದ್ದಾರೆ. ಆ ವೇಳೆ ಡೆಲಿವರಿ ಬಾಯ್‌ ಜೊತೆಗೆ ಮಾತನಾಡಿ ವಿಷಯ ತಿಳಿದುಕೊಂಡಿದ್ದಾರೆ.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

"ಆ ಯುವಕನೊಂದಿಗೆ ಮಾತನಾಡಿದ ನಂತರ, ಅವರ ಕುಟುಂಬವು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದು, ತನ್ನ ಕುಟುಂಬ ನಿರ್ವಹಣೆಗೆ ಡೆಲಿವರಿ ಬಾಯ್‌ ಕೆಲಸ ಮಾಡುತ್ತಿರುವುದಾಗಿ ತಿಳಿದುಬಂದಿದೆ. ಮೋಟಾರ್‌ಸೈಕಲ್ ಖರೀದಿಸಲು ಅವರ ಬಳಿ ಹಣವಿಲ್ಲದ ಕಾರಣ ಸೈಕಲ್‌ ಮೂಲಕ ಫುಡ್‌ ಡೆಲಿವರಿ ಮಾಡುತ್ತಿರುವುದಾಗಿ ಯುವಕ ತಿಳಿಸಿರುವುದಾಗಿ ಪೊಲೀಸ್ ಅಧಿಕಾರಿ ಹೇಳಿದರು.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ಈ ವಿಷಯ ಕೇಳಿ ವಿಚಲಿತರಾದ ವಿಜಯನಗರ ಪೊಲೀಸ್ ಠಾಣೆಯ ಖಾಜಿ ಮತ್ತು ಇತರ ಕೆಲವು ಸಿಬ್ಬಂದಿ ಆಟೋಮೊಬೈಲ್ ಶೋ ರೂಂನಲ್ಲಿ ಆರಂಭಿಕ ಪಾವತಿ ಮಾಡಿ ಮೋಟಾರ್‌ಸೈಕಲ್ ಖರೀದಿಸಿದರು. ನಂತರ ಈ ಬೈಕ್‌ ಅನ್ನು ಡೆಲಿವರಿ ಬಾಯ್‌ಗೆ ಉಡುಗೊರೆಯಾಗಿ ನೀಡಿ ಕಷ್ಟದಲ್ಲಿ ಆಸರೆಯಾಗುವುದಾಗಿ ಹೇಳಿ ವಿಜಯನಗರ ಪೊಲೀಸ್ ಠಾಣೆ ಸಿಬ್ಬಂದಿ ಮಾನವೀಯತೆ ಮೆರೆದರು.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ವಾಹನದ ಉಳಿದ ಕಂತುಗಳನ್ನು ತಾನೇ ಪಾವತಿಸುವುದಾಗಿ ಡೆಲಿವರಿ ಬಾಯ್ ಹಾಲ್ಡೆ ಪೊಲೀಸರಿಗೆ ತಿಳಿಸಿದ್ದಾನೆ. ಪೋಲೀಸರ ಇಂಗಿತಕ್ಕೆ ಧನ್ಯವಾದ ಹೇಳಿದ ಹಾಲ್ಡೆ, ನನಗೆ ಸಹಾಯ ಮಾಡಿದ ಪೊಲೀಸ್ ಅಧಿಕಾರಿಗಳಿಗೆ ನಾನು ಆಭಾರಿಯಾಗಿದ್ದೇನೆ. "ಮೊದಲು ನಾನು ನನ್ನ ಸೈಕಲ್‌ನಲ್ಲಿ ಆರರಿಂದ ಎಂಟು ಆಹಾರ ಪೊಟ್ಟಣಗಳನ್ನು ತಲುಪಿಸುತ್ತಿದ್ದೆ, ಆದರೆ ಈಗ ನಾನು ಮೋಟಾರು ಬೈಕಿನಲ್ಲಿ ರಾತ್ರಿಯಲ್ಲೂ ಕೆಲಸ ಮಾಡಿಕೊಂಡು 15-20 ಆಹಾರ ಪೊಟ್ಟಣಗಳನ್ನು ತಲುಪಿಸುತ್ತಿದ್ದೇನೆ ಎಂದು ಹೇಳಿದನು.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ಪೊಲೀಸ್ ಸಿಬ್ಬಂದಿಯ ಈ ಉತ್ತಮ ಹೃದಯವಂತಿಕೆಯನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಶ್ಲಾಘಿಸಲಾಗುತ್ತಿದೆ. ಅನೇಕ ನೆಟ್ಟಿಗರು ಪೊಲೀಸರನ್ನು ಶ್ಲಾಘಿಸಿ ಸಾಮಾಜಿಕ ಮಾಧ್ಯಮದಲ್ಲಿ ಕಾಮೆಂಟ್‌ಳನ್ನು ಪೋಸ್ಟ್ ಮಾಡುತ್ತಿದ್ದಾರೆ. ಆದರೆ ಭಾರತದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಹಲವಾರು ಘಟನೆಗಳಲ್ಲಿ ಡೆಲಿವರಿ ಬಾಯ್ಸ್ ಪರ ನೆಟ್ಟಿಗರು ಸಹಾಯ ಮಾಡಿದ್ದಾರೆ.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ಈ ಹಿಂದೆ ಸುಡುವ ಬಿಸಿಲಿನಲ್ಲಿ ಆಹಾರ ಸಾಗಿಸುವ ಜನರಿಗಾಗಿ, ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳ ಮೂಲಕ ಹಣವನ್ನು ಸಂಗ್ರಹಿಸಿ ಮೋಟಾರ್‌ಸೈಕಲ್‌ಗಳನ್ನು ಖರೀದಿಸಿ ಡೆಲಿವರಿ ಬಾಯ್ಸ್ಗೆ ನೀಡಿರುವ ಉದಾಹರಣೆಗಳು ಇವೆ. ಈ ನಡುವೆ ಇತ್ತೀಚಿನ ಘಟನೆ ಕೂಡ ಎಲ್ಲರ ಗಮನ ಸೆಳೆದಿದೆ. ಸದ್ಯ ದೇಶದಾದ್ಯಂತ ಈ ವಿಷಯ ವೈರಲ್ ಆಗಿ ಜನಮನ್ನಣೆ ಪಡೆಯುತ್ತಿದೆ.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ಆದರೆ ಜೆ ಹಲ್ಡೆಗಾಗಿ, ಪೊಲೀಸರು ಹೀರೋ ಕಂಪನಿಯಿಂದ ಮೋಟಾರ್ಸೈಕಲ್ ಖರೀದಿಸಿದ್ದಾರೆ. ಆದರೆ ಇದಕ್ಕೆ ಎಷ್ಟು ಹಣ ಮುಂಗಡ ಪಾವತಿ ಮಾಡಿದ್ದಾರೆ ತಿಳಿದುಬಂದಿಲ್ಲ. ಅದೇನೇ ಇರಲಿ, ಸಾಮಾನ್ಯವಾಗಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ತೀವ್ರ ಟೀಕೆಗಳನ್ನು ಎದುರಿಸುತ್ತಿರುವ ಪೊಲೀಸರು ಈಗ ಹೊಗಳಿಕೆಯನ್ನು ಸ್ವೀಕರಿಸುತ್ತಿರುವುದು ದೇಶದ ಪೊಲೀಸರ ಹೆಮ್ಮೆಗೆ ಕಾರಣವಾಗಿದೆ.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ಅಲ್ಲದೇ ಪೊಲೀಸರ ಈ ವೈಖರಿಯು ದೇಶಾದ್ಯಂತ ಮೂಲೆ ಮೂಲೆಗೆ ವ್ಯಾಪಿಸಿ ಇದೇ ಮನಃಸ್ಥಿತಿ ಎಲ್ಲರಲ್ಲೂ ಬರಲಿ ಎಂದು ನಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ದೇಶದಲ್ಲಿ ಲಾಕ್‌ಡೌನ್‌ನಿಂದ ಹೆಚ್ಚಾದ ಈ ಪಾರ್ಸಲ್‌ ಸರ್ವಿಸ್ ಅದೆಷ್ಟೋ ಜನರ ಹೊಟ್ಟೆ ತುಂಬಿಸುತ್ತಿದೆ. ಇದಕ್ಕಾ ಡೆಲಿವರಿ ಬಾಯ್‌ಗಳು ಸಮಯಕ್ಕೆ ಆಹಾರವನ್ನು ತಲುಪಿಸುವಲ್ಲಿ ಸಾಕಷ್ಟು ಶ್ರಮವಿದೆ.

ಸೈಕಲ್‌ನಲ್ಲಿ ಆಹಾರ ಸಾಗಿಸಲು ಶ್ರಮಿಸುತ್ತಿದ್ದ ಡೆಲಿವರಿ ಬಾಯ್‌ಗೆ ಬೈಕ್ ಕೊಡಿಸಿದ ಪೊಲೀಸರು

ಈ ಹಿಂದೆಯೂ ಡೆಲಿವರಿ ಬಾಯ್‌ಗಳ ವಿರುದ್ಧ ಹಲವು ಪ್ರಕರಣಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಮಹಿಳೆ ವಿರುದ್ಧ ಅಸಭ್ಯ ವರ್ತನೆ, ಆಹಾರ ಪೊಟ್ಟಣಗಳನ್ನು ಮಾರ್ಗ ಮಧ್ಯದಲ್ಲಿ ತಿನ್ನುವುದು, ಮಹಿಳೆಯ ಮೇಲೆ ಹಲ್ಲೆಯಂತಹ ಹಲವು ಪ್ರಕರಣಗಳು ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಆದರೆ ಈ ಎಲ್ಲಾ ಪ್ರಕರಣಗಳಲ್ಲಿ ಡೆಲಿವರಿ ಬಾಯ್ಸ್ ಪರವಾಗಿ ನೆಟ್ಟಿಗರು ನಿಂತಿದ್ದು ವಿಶೇಷವಾಗಿತ್ತು.

Most Read Articles

Kannada
English summary
Police buy bike for 22 year old man delivering food parcels on cycle
Story first published: Tuesday, May 3, 2022, 12:57 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X