ಪೊಲೀಸ್ ಕಾರಿನಲ್ಲಿಯೇ ಮದುವೆ ಮನೆ ತಲುಪಿದ ಮದುಮಗ, ಕಾರಣವೇನು ಗೊತ್ತಾ?
ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎಂಬುದು ಮಹತ್ವವಾದ ಘಟನೆಯಾಗಿದೆ. ಜನರು ತಮ್ಮ ಮದುವೆಯ ಬಗ್ಗೆ ವಿಭಿನ್ನ ಕನಸುಗಳನ್ನು ಹೊಂದಿರುತ್ತಾರೆ. ಹೀಗೆಯೇ ಮದುವೆಯಾಗಬೇಕೆಂದು ಯೋಜನೆಗಳನ್ನು ಹೊಂದಿರುತ್ತಾರೆ. ಭಾರತದಲ್ಲಿ ಮದುವೆಗೆ ಹಲವಾರು ತಿಂಗಳ ಮುಂಚೆಯೇ ಸಿದ್ಧತೆಗಳನ್ನು ಮಾಡಲಾಗುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ, ಮದುವೆಗೆ ಸಂಬಂಧಿಸಿದಂತೆ ಅನೇಕ ಆಚರಣೆಗಳು ಹಾಗೂ ಪದ್ಧತಿಗಳಿವೆ. ಇವುಗಳಲ್ಲಿ ಮದುವೆ ಮೆರವಣಿಗೆ ಕೂಡ ಸೇರಿದೆ. ಮದುವೆ ಮೆರವಣಿಗೆಯಲ್ಲಿ ವರನೊಬ್ಬ ಸಾಗುವುದು ಆತನ ಜೀವನ ಪರ್ಯಂತ ಸ್ಮರಣೀಯವಾಗಿರುತ್ತದೆ. ಏನಾದರೂ ಯಡವಟ್ಟಾದರೆ ನಿಷ್ಪ್ರಯೋಜಕವಾಗುತ್ತದೆ.

ಕರೋನಾ ವೈರಸ್ ಹರಡದಿರಲಿ ಎಂಬ ಕಾರಣಕ್ಕೆ ದೇಶಾದ್ಯಂತ ಲಾಕ್‌ಡೌನ್ ಜಾರಿಗೊಳಿಸಲಾಗಿದೆ. ಏಪ್ರಿಲ್ - ಮೇ ತಿಂಗಳಿನಲ್ಲಿ ಭಾರತದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮದುವೆಗಳಾಗುತ್ತವೆ. ಕಳೆದ ವರ್ಷದವರೆಗೂ ಈ ವೇಳೆಯಲ್ಲಿ ಮದುವೆ ಮನೆಗಳು ತುಂಬಿ ತುಳುಕುತ್ತಿದ್ದವು. ಮದುವೆ ಮೆರವಣಿಗೆಯಲ್ಲಿ ನೂರಾರು ಜನರು ನೃತ್ಯ ಮಾಡಿ ಹಾಡುತ್ತಾರೆ.
MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ದೆಹಲಿಯಲ್ಲಿ ನಡೆಯುತ್ತಿದ್ದ ಮೆರವಣಿಗೆಯಲ್ಲಿ ವರ ದಿಬ್ಬಣದ ಕಾರಿನಲ್ಲಿ ಕುಳಿತು ಮದುವೆಗೆ ಹೋಗುತ್ತಿದ್ದ. ಆದರೆ ದಾರಿ ಮಧ್ಯದಲ್ಲಿ ವರ ಕುಳಿತಿದ್ದ ಕಾರಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಕಾಣಿಸಿಕೊಂಡ ತಕ್ಷಣ ಚಾಲಕ ಕಾರನ್ನು ನಿಲ್ಲಿಸಿದ್ದಾನೆ.

ಈ ಘಟನೆ ಆಗ್ನೇಯ ದೆಹಲಿಯ ಸರಿತಾ ವಿಹಾರ್ ಪ್ರದೇಶದಲ್ಲಿ ನಡೆದಿದೆ. ಈ ಘಟನೆಯಲ್ಲಿ ವರ ತನ್ನ ಮದುವೆಗಾಗಿ ಶೃಂಗಾರಗೊಂಡಿದ್ದ ಕಾರಿನಲ್ಲಿ ಹೋಗುತ್ತಿದ್ದ. ವರ ಭೂಪೇಂದ್ರ ತನ್ನ ಹ್ಯುಂಡೈ ಐ20 ಕಾರಿನಲ್ಲಿ ತನ್ನ ಸ್ನೇಹಿತನೊಡನೆ ಪ್ರಯಾಣಿಸುತ್ತಿದ್ದ ಎಂದು ತಿಳಿದು ಬಂದಿದೆ.
MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಕಾರಣಕ್ಕೆ ರಸ್ತೆಯಲ್ಲಿ ಬೇರೆ ಯಾವುದೇ ವಾಹನಗಳಿರಲಿಲ್ಲ. ಈ ವೇಳೆ ಗಸ್ತಿನಲ್ಲಿದ್ದ ಇಬ್ಬರು ಪೊಲೀಸ್ ಸಿಬ್ಬಂದಿ ರಸ್ತೆಯ ಮಧ್ಯದಲ್ಲಿ ಕಾರಿಗೆ ಬೆಂಕಿ ಬಿದ್ದಿರುವುದನ್ನು ಗಮನಿಸಿದ್ದಾರೆ.

ತಕ್ಷಣವೇ ಸ್ಥಳಕ್ಕೆ ಧಾವಿಸಿ ವರ ಭೂಪೇಂದ್ರ ಹಾಗೂ ಆತನ ಸ್ನೇಹಿತನನ್ನು ಹೊರಕ್ಕೆ ಕರೆತಂದಿದ್ದಾರೆ. ಕೆಲವೇ ಕ್ಷಣಗಳಲ್ಲಿ ಇಡೀ ಕಾರು ಬೆಂಕಿಗೆ ಆಹುತಿಯಾಗಿದೆ. ರಸ್ತೆಯಲ್ಲಿ ಯಾವುದೇ ವಾಹನ ಸಂಚಾರವಿಲ್ಲದ ಕಾರಣಕ್ಕೆ ಪೊಲೀಸರು ವೇಗವಾಗಿ ಈ ಕಾರಿನ ಬಳಿ ತಲುಪಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಭೂಪೇಂದ್ರ ವೆಡ್ಡಿಂಗ್ ಸೂಟ್, ಜೊತೆಗೆ ಮಾಸ್ಕ್ ಸಹ ಧರಿಸಿದ್ದನು. ಪೊಲೀಸರ ವಿಚಾರಣೆ ವೇಳೆ ಅವರು ಓಖ್ಲಾ ಪ್ರದೇಶದತ್ತ ಹೋಗುತ್ತಿರುವುದು ತಿಳಿದು ಬಂದಿದೆ. ಅಂದ ಹಾಗೆ ಈ ಕಾರಿಗೆ ಸರಿಟಾ ವಿಹಾರ್ ಬಳಿ ಬೆಂಕಿ ಬಿದ್ದಿದೆ.

ಪೊಲೀಸರು ವರ ಭೂಪೇಂದ್ರ ಹಾಗೂ ಆತನ ಸ್ನೇಹಿತನನ್ನು ತಮ್ಮ ಕಾರಿನಲ್ಲಿಯೇ ಮದುವೆ ಮನೆಗೆ ಕರೆದೊಯ್ದಿದ್ದಾರೆ. ಕಾರಿಗೆ ಬೆಂಕಿ ಬೀಳಲು ಕಾರಣವೇನು ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.


Click it and Unblock the Notifications