ಕಾರಿನಲ್ಲಿ ತುರ್ತು ವಾರ್ಡ್‌ಗೆ ನುಗ್ಗಿ ರೋಗಿಗಳಿಗೆ ತೊಂದರೆ ಕೊಟ್ಟ ಪೊಲೀಸರು!
ನರ್ಸಿಂಗ್ ಅಧಿಕಾರಿಯೊಬ್ಬರು ಕರ್ತವ್ಯದಲ್ಲಿದ್ದ ಮಹಿಳಾ ವೈದ್ಯರಿಗೆ ಕಿರುಕುಳ ನೀಡಿದ್ದಾರೆಂಬ ಆರೋಪದಡಿ, ಪೊಲೀಸರು ಮಹೀಂದ್ರಾ ಬೊಲೆರೊವನ್ನು ಆಸ್ಪತ್ರೆಯ ತುರ್ತು ವಾರ್ಡ್ ಒಳಗೆ ನುಗ್ಗಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರಾಖಂಡದ ರಿಷಿಕೇಶದ ಏಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಲೈಂಗಿಕ ಕಿರುಕುಳ ನೀಡಿದ್ದಾನೆ ಎನ್ನಲಾದ ಆರೋಪಿಯನ್ನು ಬಂಧಿಸಲು ಮಹೀಂದ್ರಾ ಬೊಲೆರೊ ಕಾರಿನಲ್ಲಿ ಪೊಲೀಸ್ ಅಧಿಕಾರಿಗಳು ಏಮ್ಸ್‌ನ ತುರ್ತು ವಾರ್ಡ್‌ಗೆ ಪ್ರವೇಶಿಸಿದ್ದಾರೆ. ರಿಷಿಕೇಶ್‌ನ ಏಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ವೈದ್ಯರಿಗೆ, ನರ್ಸಿಂಗ್ ಅಧಿಕಾರಿ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ವೀಡಿಯೊದಲ್ಲಿ ನೋಡಿದಂತೆ, ಪೊಲೀಸರ ಕಾರು ಬಂದಾಗ ರೋಗಿಗಳು ತುರ್ತು ವಾರ್ಡ್‌ನಲ್ಲಿ ಹಾಸಿಗೆಗಳ ಮೇಲೆ ಮಲಗಿದ್ದರು. ಬೊಲೆರೊಗೆ ಚಾಲನೆ ಮಾಡಲು ಸಾಕಷ್ಟು ಸ್ಥಳಾವಕಾಶವಿಲ್ಲದ ಕಾರಣ, ಆಸ್ಪತ್ರೆ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿಗಳು ಕಾರಿಗೆ ಸ್ಥಳಾವಕಾಶ ಕಲ್ಪಿಸಲು ಹಾಸಿಗೆಗಳನ್ನು ಪಕ್ಕಕ್ಕೆ ಸರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ವಿಡಿಯೋವನ್ನು ದಿವ್ಯಾ ಗಂಡೋತ್ರಾ ಟಂಡನ್ ತಮ್ಮ X (ಟ್ವಿಟ್ಟರ್)ನಲ್ಲಿ ಹಂಚಿಕೊಂಡಿದ್ದಾರೆ. ಬೊಲೆರೊ ರಾಜ್ಯ ಪೊಲೀಸರಿಗೆ ಸೇರಿದ್ದು, ಅವರು ವೈದ್ಯಕೀಯ ಕಾಲೇಜಿನ ತುರ್ತು ವಾರ್ಡ್‌ಗೆ ನುಗ್ಗಿರುವುದನ್ನು ಹಲವರು ಖಂಡಿಸಿದ್ದಾರೆ. ಆಸ್ಪತ್ರೆಯ ತುರ್ತು ವಾರ್ಡ್ ಇರುವುದು ವಾಹನಗಳಿಗೆ ಅಲ್ಲ. ಸಾಮಾನ್ಯವಾಗಿ ಹೋಗಿ ಆರೋಪಿಯನ್ನು ಬಂಧಿಸಬಹುಗಿತ್ತು, ರೋಗಿಗಳಿಗೆ ತೊಂದರೆ ಕೊಡುವ ಅಗತ್ಯವಿರಲಿಲ್ಲ ಎಂದು ಆಗ್ರಹಿಸಿದ್ದಾರೆ.
ಆರೋಪಿಯ ಅಮಾನತು: ನರ್ಸಿಂಗ್ ಅಧಿಕಾರಿ ವೈದ್ಯರ ಫೋನ್‌ಗೆ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿತ್ತು. ಇದಾದ ಬಳಿಕ ಆಡಳಿತ ಮಂಡಳಿ ಕಠಿಣ ಕ್ರಮ ತೆಗೆದುಕೊಳ್ಳಬೇಕು ಮತ್ತು ಅವರನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ವೈದ್ಯರು ಪ್ರತಿಭಟನೆ ನಡೆಸಿದ ಬಳಿಕ ಆರೋಪಿಯನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.

ಪೋಲೀಸರ ವಿರುದ್ಧ ಆಕ್ರೋಶ: ಪೊಲೀಸರು ಏನು ಮಾಡುತ್ತಿದ್ದಾರೆ? "ವ್ಯವಸ್ಥೆಯಲ್ಲಿ ಏನೋ ತಪ್ಪಾಗುತ್ತಿದೆ. ಪೊಲೀಸರ ಕಾರಿಗೆ ದಾರಿ ಮಾಡಿಕೊಡಲು ರೋಗಿಗಳಿದ್ದ ಸ್ಟ್ರೆಚರ್‌ಗಳನ್ನು ಸಹ ಪಕ್ಕಕ್ಕೆ ತಳ್ಳುವುದು ಎಷ್ಟು ಸರಿ. ಪೊಲೀಸ್ ಅಧಿಕಾರಿಗಳ ವಾಹನವಾದರೇ ಎಲ್ಲಿಗೆ ಬೇಕಾದರೂ ಓಡಿಸಬಹುದೇ ಎಂಬ ಪ್ರಶ್ನೆಗಳು ಎದ್ದಿವೆ. ನಮ್ಮ ಪ್ರಕಾರ ಅಪರಾಧಿಯನ್ನು ಬಂಧಿಸಲು ಆಸ್ಪತ್ರೆಯ ತುರ್ತು ವಾರ್ಡ್‌ಗೆ ಬೊಲೆರೊವನ್ನು ಓಡಿಸುವುದು ಸರಿಯಲ್ಲ. ತುರ್ತು ವಾರ್ಡ್' ತುರ್ತು ಆರೈಕೆ ಅಗತ್ಯವಿರುವ ಜನರನ್ನು ಹೆಚ್ಚಾಗಿ ಕರೆದೊಯ್ಯುವ ಸ್ಥಳವಾಗಿದೆ. ಈ ವಾರ್ಡ್‌ನಲ್ಲಿ ಅನೇಕರು ಆಮ್ಲಜನಕ ಸಿಲಿಂಡರ್‌ಗಳೊಂದಿಗೆ ಚಿಕಿತ್ಸೆ ಪಡೆಯುತ್ತಿರುತ್ತಾರೆ. ಇಂತಹ ಸ್ಥಳಕ್ಕೆ ಡೀಸೆಲ್ ಕಾರನ್ನು ಕೊಂಡೊಯ್ಯುವುದು ಸರಿಯಲ್ಲ.
ಪೊಲೀಸರು ಜೀಪನ್ನು ಹೊರಗೆ ನಿಲ್ಲಿಸಿ ಅಪರಾಧಿಯ ಬಳಿಗೆ ಹೋಗಬೇಕಿತ್ತು. ಜನಸಮೂಹದ ಪ್ರತಿಕ್ರಿಯೆಯ ಬಗ್ಗೆ ಅಧಿಕಾರಿಗಳು ಚಿಂತಿತರಾಗಿದ್ದರೆ, ಒಂದು ವೇಳೆ ಆರೋಪಿ ತಪ್ಪಿಸಿಕೊಳ್ಳುವ ಅನುಮಾನವಿದ್ದಾಗ ಹೆಚ್ಚಿನ ಬಲವನ್ನು ತರಬೇಕಾಗಿತ್ತು. ಆಸ್ಪತ್ರೆಯ ವಾರ್ಡ್ ಮೂಲಕ ಕಾರನ್ನು ಓಡಿಸುವುದನ್ನು ಯಾವುದೇ ರೀತಿಯಲ್ಲಿ ಬೆಂಬಲಿಸಲಾಗುವುದಿಲ್ಲ, ಏಕೆಂದರೆ ಅದು ರೋಗಿಗಳಿಗೆ ಅನಾನುಕೂಲತೆಯನ್ನು ಸೃಷ್ಟಿಸುತ್ತದೆ.

ಈ ವೀಡಿಯೊದಲ್ಲಿ ನಾವು ನೋಡುವ ಮಹೀಂದ್ರಾ ಬೊಲೆರೊ ಪೊಲೀಸ್ ಇಲಾಖೆಯ ಅಧಿಕೃತ ವಾಹನಗಳಲ್ಲಿ ಒಂದಾಗಿದೆ. ಕರ್ನಾಟಕ ಪೊಲೀಸ್ ಅಧಿಕಾರಿಗಳು ಸಹ ಮಹೀಂದ್ರಾ ಬೊಲೆರೊವನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಾರೆ. ಪೊಲೀಸ್ ಅಧಿಕಾರಿಗಳು ಮಾತ್ರವಲ್ಲ, ತಹಶೀಲ್ದಾರರಂತಹ ಸರ್ಕಾರಿ ಅಧಿಕಾರಿಗಳು ಸಹ ಮಹೀಂದ್ರಾ ಬೊಲೆರೊ ಕಾರುಗಳನ್ನು ಬಳಸುತ್ತಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ತಪ್ಪದೆ ಶೇರ್ ಮಾಡಿ.


Click it and Unblock the Notifications








