ಲಾಕ್‌ಡೌನ್ ಎಫೆಕ್ಟ್: ನಿಯಮ ಉಲ್ಲಂಘಿಸಿದ ಜಿಲ್ಲಾಧಿಕಾರಿ ಕಾರನ್ನೇ ತಡೆದ ಕಾನ್ಸ್‌ಸ್ಟೆಬಲ್..!
ಲಾಕ್‌ಡೌನ್ ಸಮಯದಲ್ಲಿ ಅನಗತ್ಯವಾಗಿ ಸಂಚರಿಸುವುದನ್ನು ನಿಷೇಧಿಸಲಾಗಿದೆ. ಆದರೂ ಸಹ ಜನರು ಲಾಕ್‌ಡೌನ್ ನಿಯಮಗಳನ್ನು ಪಾಲಿಸುತ್ತಿಲ್ಲ. ಪೊಲೀಸರು ಈ ಬಗ್ಗೆ ಜನರಿಗೆ ವಿವರಿಸಿ, ಮನೆಯಲ್ಲಿ ಇರುವಂತೆ ಹೇಳುತ್ತಿದ್ದಾರೆ. ಇತ್ತೀಚೆಗೆ ಉತ್ತರಪ್ರದೇಶದಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನ ಸೆಳೆದಿದೆ.

ಉತ್ತರ ಪ್ರದೇಶದ ಬುಲಂದ್‌ಶಹರ್‌ನಲ್ಲಿ ಚಾಲಕ ಸೇರಿದಂತೆ ಮೂವರು ಕಾರಿನಲ್ಲಿ ಓಡಾಡುತ್ತಿದ್ದರು. ಕಾನ್‌ಸ್ಟೆಬಲ್ ಒಬ್ಬರು ಆ ಕಾರ್ ಅನ್ನು ತಡೆದು, ಅವರಿಗೆ ಕರೋನಾ ವೈರಸ್ ಬಗ್ಗೆ ಹಾಗೂ ಈ ಸಮಯದಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿವರಿಸಿದರು. ನಂತರ ಅವರನ್ನು ಬಿಟ್ಟು ಕಳುಹಿಸಿದ್ದಾರೆ.

ಆ ಕಾರಿನಲ್ಲಿ ಆ ಊರಿನ ಜಿಲ್ಲಾಧಿಕಾರಿಯೇ ಕುಳಿತಿದ್ದರು. ಕಾನ್‌ಸ್ಟೆಬಲ್‌ಗೆ ಈ ವಿಷಯ ತಿಳಿದಿರಲಿಲ್ಲ. ಜಿಲ್ಲಾಧಿಕಾರಿಗಳು ಲಾಕ್‌ಡೌನ್ ಸಮಯದಲ್ಲಿ ಹಠಾತ್ ತಪಾಸಣೆ ಮಾಡಲು ಹೊರಟಿದ್ದರು. ರವೀಂದ್ರ ಕುಮಾರ್‌ರವರೇ ಆ ಕಾರಿನಲ್ಲಿ ಕುಳಿತು ತಪಾಸಣೆಗೆ ಹೊರಟಿದ್ದ ಜಿಲ್ಲಾಧಿಕಾರಿ.
MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಸಂದರ್ಭದಲ್ಲಿ ಕರ್ತವ್ಯವನ್ನು ಸರಿಯಾಗಿ ನಿರ್ವಹಿಸಿದ ಕಾರಣಕ್ಕೆ ಜಿಲ್ಲಾಧಿಕಾರಿಗಳು ಕಾನ್‌ಸ್ಟೆಬಲ್ ಅರುಣ್ ಕುಮಾರ್‌ರವರಿಗೆ ಪ್ರಶಂಸನಾ ಪತ್ರ ಹಾಗೂ ರೂ.20 ಸಾವಿರ ಬಹುಮಾನ ನೀಡಿದ್ದಾರೆ. ಇದಾದ ನಂತರವೇ ಆ ಕಾರಿನಲ್ಲಿ ಜಿಲ್ಲಾಧಿಕಾರಿಗಳಿದ್ದ ವಿಷಯ ಕಾನ್‌ಸ್ಟೆಬಲ್‌ಗೆ ತಿಳಿದಿದೆ.

ಜಿಲ್ಲಾಧಿಕಾರಿಗಳು ಮಾತ್ರವಲ್ಲದೇ ಉಳಿದ ಅಧಿಕಾರಿಗಳು ಸಹ ಇದೇ ರೀತಿ ಹಠಾತ್ ತಪಾಸಣೆ ನಡೆಸುತ್ತಿದ್ದಾರೆ. ಲಾಕ್‌ಡೌನ್ ನಿಯಮಗಳು ಸರಿಯಾಗಿ ಪಾಲನೆಯಾಗುತ್ತಿವೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತಿದ್ದಾರೆ. ಕಾನ್‌ಸ್ಟೆಬಲ್ ಅರುಣ್ ಕುಮಾರ್‌ರವರು ಜಿಲ್ಲಾಧಿಕಾರಿಗಳ ಕಾರನ್ನು ತಪಾಸಣೆ ನಡೆಸಿ ಎಚ್ಚರಿಕೆ ನೀಡಿ ಬಿಟ್ಟಿದ್ದಾರೆ.
MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಈ ಘಟನೆಯ ಕುರಿತು ಮಾತನಾಡಿದ ಆ ಅಧಿಕಾರಿ ತಮ್ಮನ್ನು ತಡೆದು ನಿಲ್ಲಿಸಿದ ಕಾನ್‌ಸ್ಟೆಬಲ್ ಅನಗತ್ಯವಾಗಿ ತಿರುಗಾಡುವುದು ಅಪರಾಧ ಎಂದು ಹೇಳಿ, ಲಾಕ್‌ಡೌನ್ ನಿಯಮಗಳ ಬಗ್ಗೆಯೂ ವಿವರಿಸಿದ. ಕಾನ್‌ಸ್ಟೆಬಲ್‌ಗಳು ಸಮರ್ಪಿತ ಮನೋಭಾವದಿಂದ ಕೆಲಸ ಮಾಡುತ್ತಿರುವುದು ಖುಷಿ ನೀಡಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಹಾಗೂ ಎಎಸ್‌ಪಿರವರುಗಳು ಜೊತೆಯಾಗಿ ಅನೇಕ ಸ್ಥಳಗಳನ್ನು ಪರಿಶೀಲಿಸುತ್ತಿದ್ದಾರೆ. ಎಲ್ಲಾ ಕಡೆಯೂ ಪೊಲೀಸರು ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಲಾಕ್‌ಡೌನ್ ಅನ್ನು ಉಲ್ಲಂಘಿಸದಂತೆ ಸಲಹೆ ನೀಡುತ್ತಿದ್ದಾರೆ.
MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಒಂದು ಕಡೆ ನಿಯಮಗಳನ್ನು ಪಾಲಿಸುವವರಿದ್ದಾರೆ. ಮತ್ತೊಂದೆಡೆ ಅನಗತ್ಯವಾಗಿ ಲಾಕ್‌ಡೌನ್ ಉಲ್ಲಂಘನೆ ಮಾಡುವವರಿದ್ದಾರೆ. ಇತ್ತೀಚೆಗೆ, ಮಧ್ಯಪ್ರದೇಶದಲ್ಲಿ ನ್ಯಾಯಾಧೀಶರ ಪತ್ನಿಯೊಬ್ಬರು ಸರ್ಕಾರಿ ಕಾರಿನಲ್ಲಿ ಹೊರಬಂದು ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದ್ದರು.

ಮಹಾಮಾರಿ ಕರೋನಾ ವೈರಸ್ ತಡೆಗಟ್ಟಲು ದೇಶಾದ್ಯಂತ ಲಾಕ್‌ಡೌನ್ ವಿಧಿಸಲಾಗಿದ್ದು, ಅನಿವಾರ್ಯ ಪರಿಸ್ಥಿತಿಯಲ್ಲಿ ಪ್ರತಿಯೊಬ್ಬರು ಕೂಡಾ ಒಂದಿಲ್ಲಾ ಒಂದು ಸಂಕಷ್ಟದ ಪರಿಸ್ಥಿತಿಯಲ್ಲಿ ಸಿಲುಕುವಂತಾಗಿದೆ.

ಲಾಕ್‌ಡೌನ್ ವೇಳೆ ಅಗತ್ಯ ವಸ್ತುಗಳ ಕೊರತೆಯಿಂದಾಗಿ ಜನಸಾಮಾನ್ಯರು ಒಂದು ಕಡೆ ಪರದಾಟುವಂತಾಗಿದ್ದರೆ ಮತ್ತೊಂದು ಕಡೆಗೆ ಕರೋನಾ ವೈರಸ್ ಸೋಂಕಿತರನ್ನು ಹೊರತುಪಡಿಸಿ ಸಾಮಾನ್ಯ ರೋಗಿಗಳು ಸೂಕ್ತ ವೈದ್ಯಕೀಯ ಸೌಲಭ್ಯ ಮತ್ತು ಚಿಕಿತ್ಸೆ ಸಿಗದೆ ಕಂಗಾಲಾಗಿದ್ದಾರೆ.

ಇಂತಹ ಸಂಕಷ್ಟ ಪರಿಸ್ಥಿತಿಯಲ್ಲೂ ಕೂಡಾ ಮಾನವೀಯತೆ ಮೆರೆದಿರುವ ಬೆಂಗಳೂರು ನಗರ ಪೊಲೀಸ್ ಪೇದೆಯೊಬ್ಬರು ಸ್ಕೂಟರ್ ಮೂಲಕ ನೂರಾರು ಕಿ.ಮೀ ಪ್ರಯಾಣಿಸಿ ಕ್ಯಾನ್ಸರ್ ರೋಗಿರೊಬ್ಬರಿಗೆ ಸಮಯಕ್ಕೆ ಸರಿಯಾಗಿ ಔಷಧಿ ತಲುಪಿಸಿ ಜನ ಮೆಚ್ಚುಗೆಗೆ ಕಾರಣರಾಗಿದ್ದಾರೆ.

ವೈರಸ್ ಹರಡದಂತೆ ಕಟ್ಟುನಿಟ್ಟಿನ ಕ್ರಮ ಜಾರಿಗೆ ತಂದ ಹಿನ್ನಲೆಯಲ್ಲಿ ವಾಣಿಜ್ಯ ಚಟುವಟಿಕೆಗಳು ಸಂಪೂರ್ಣ ಬಂದ್ ಆಗಿದ್ದು, ಸಾರಿಗೆ ಸಂಪರ್ಕವಿಲ್ಲದೆ ಅಗತ್ಯ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದೆ.

ಈ ವೇಳೆ ಕ್ಯಾನ್ಸರ್ ರೋಗಿಯೊಬ್ಬರಿಗೆ ಸೂಕ್ತವಾದ ಔಷಧಿ ಸಿಗದೆ ಪರದಾಡುವಂತಾಗಿದ್ದು, ತುರ್ತು ಪರಿಸ್ಥಿತಿಯಲ್ಲೂ ಮಾನವೀಯತೆ ಮೆರೆದ ಪೊಲೀಸರೊಬ್ಬರು ಬೆಂಗಳೂರಿನಿಂದ ದೂರದ ಧಾರವಾಡಕ್ಕೆ ಸ್ಕೂಟರ್ ಮೂಲಕ ಪ್ರಯಾಣಿಸಿ ಔಷಧಿ ತಲುಪಿಸಿ ಬಂದಿದ್ದಾರೆ.

ಏಪ್ರಿಲ್ 10ರಂದು ಬೆಂಗಳೂರಿನಿಂದ ಧಾರವಾಡಕ್ಕೆ ಪ್ರಯಾಣ ಬೆಳೆಸಿದ್ದ ಪೊಲೀಸ್ ಪೇದೆ ಎಸ್ ಕುಮಾರಸ್ವಾಮಿ ಅವರು ಒಟ್ಟು 860 ಕಿಲೋ ಮೀಟರ್ ಸ್ಕೂಟರ್ ಚಾಲನೆ ಮಾಡಿದ್ದು, ಸೂಕ್ತವಾದ ಔಷಧಿ ಸಿಗದೆ ಪರದಾಡುತ್ತಿದ್ದ ಕ್ಯಾನ್ಸರ್ ರೋಗಿಯ ಪ್ರಾಣ ಉಳಿಸುವಲ್ಲಿ ನೆರವಾಗಿದ್ದಾರೆ.

ಬೆಂಗಳೂರಿನಲ್ಲಿ ಮಾತ್ರ ಲಭ್ಯವಿದ್ದ ಕ್ಯಾನ್ಸರ್ ಔಷಧಿಯನ್ನು ಧಾರವಾಡವಾಡಕ್ಕೆ ತರಿಸಿಕೊಳ್ಳಲು ಯತ್ನಿಸುತ್ತಿದ್ದಾಗ ರೋಗಿ ಸಹಾಯಕ್ಕೆ ಧಾವಿಸಿದ ಪೊಲೀಸ್ ಪೇದೆ ಕುಮಾರಸ್ವಾಮಿ ಅವರು, ಔಷಧಿಯ ಮಾಹಿತಿ ಪಡೆದುಕೊಂಡ ನಂತರ ಆನ್‌ಲೈನ್ ಮೂಲಕ ಖರೀದಿಸಿ ತಲುಪಿಸಿ ಬಂದಿದ್ದಾರೆ.

ಲಾಕ್‌ಡೌನ್ ನಡುವೆ ಜನರನ್ನು ಹೊರಗೆ ಹೋಗದಂತೆ ಎಚ್ಚರ ವಹಿಸುವುದರ ಜೊತೆಗೆ ಹಲವಾರು ಮಾನವೀಯತೆ ಕಾರ್ಯಗಳನ್ನು ಮಾಡಿರುವ ಬೆಂಗಳೂರು ಪೊಲೀಸರು ಕರ್ತವ್ಯ ಜೊತೆಗೆ ಅಗತ್ಯವಿರುವ ಜನರ ಸಹಾಯಕ್ಕೆ ಬಂದಿದ್ದನ್ನು ಮಾತ್ರ ಯಾರು ಮರೆಯುವಂತಿಲ್ಲ.

ಇದೇ ಕಾರಣಕ್ಕೆ ಪೊಲೀಸ್ ಪೇದೆ ಕುಮಾರಸ್ವಾಮಿಯವರ ಮಾನವೀಯ ಕಾರ್ಯವನ್ನು ಮೆಚ್ಚಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಕೂಡಾ ಮೆಚ್ಚುಗೆ ವ್ಯಕ್ತಪಡಿಸಿ ಜನಪರ ಕಾಳಜಿ ತೊರಿದ್ದಕ್ಕೆ ಸನ್ಮಾನ ಮಾಡಿದ್ದಾರೆ.

ಇನ್ನು ವೈರಸ್ ತೊಲಗಿಸಲು ಆಸ್ಪತ್ರೆಗಳಲ್ಲಿ ವೈದ್ಯರು ಹೋರಾಟ ನಡೆಸುತ್ತಿದ್ದರೆ ವೈರಸ್ ದಾಳಿಗೆ ಜನಸಾಮಾನ್ಯರು ತುತ್ತಾಗದಂತೆ ತಮ್ಮ ಪ್ರಾಣ ಪಣಕ್ಕಿಟ್ಟು ಎಚ್ಚರ ವಹಿಸಿರುವ ಪೊಲೀಸರು ಕರ್ತವ್ಯ ಜೊತೆಗೆ ಮಾನವೀಯ ಕಾರ್ಯಗಳನ್ನು ಸಹ ಮಾಡುತ್ತಿದ್ದು, ಈ ನಡುವೆ ಆರಕ್ಷರ ಮೇಲೆ ಹಲ್ಲೆ ಮಾಡುವ ಅಮಾನವೀಯ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ದುರಂತವೇ ಸರಿ.


Click it and Unblock the Notifications