ಆತುರ ಬಿದ್ದ 1.5 ಕೋಟಿಯ ಕಾರು ಮಾಲೀಕನಿಗೆ ಸರಿಯಾಗಿ ಬುದ್ದಿ ಕಲಿಸಿದ ಪೊಲೀಸರು!

ಭಾರತದಲ್ಲಿ ಸ್ಪೋರ್ಟ್ಸ್ ಕಾರುಗಳು ಮತ್ತು ಸೂಪರ್‌ ಕಾರುಗಳನ್ನು ಹೊಂದಿರುವ ಹೆಚ್ಚಿನ ಜನರು ಕಾಲ ಕಾಲಕ್ಕೆ ದಾಖಲೆಗಳನ್ನು ನವೀಕರಿಸುವಲ್ಲಿ ತುಂಬಾ ಜಾಗರೂಕತೆ ವಹಿಸುತ್ತಾರೆ. ಆದರೆ ಇಲ್ಲಿ ಸರಿಯಾದ ದಾಖಲೆಗಳಿಲ್ಲದೆ ಸಂಚರಿಸುತ್ತಿದ್ದ ಪೋರ್ಷೆ ಕೇಮನ್ ಸ್ಪೋರ್ಟ್ಸ್ ಕಾರನ್ನು ಸೂರತ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದರ ಬೆಲೆ 1.48 ಕೋಟಿ ರೂ. ಇದೆ.

ಕೆಲವು ದಿನಗಳ ಹಿಂದೆ, ಗುಜರಾತ್‌ನ ಸೂರತ್‌ನಲ್ಲಿ ಉಮ್ರಾ ಪೊಲೀಸರು ಹೊಚ್ಚ ಹೊಸ ಸ್ಪೋರ್ಟ್ಸ್ ಕಾರನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ನಂತರ ಸ್ಪೋರ್ಟ್ಸ್ ಕಾರನ್ನು ಪೊಲೀಸ್ ಠಾಣೆಯ ಹೊರಗೆ ನಿಲ್ಲಿಸಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಹಲವು ಬಾರಿ ನಿಯಮಗಳನ್ನು ಉಲ್ಲಂಘಿಸಿದ್ದ ಕಾರಣ ಹೊಚ್ಚ ಹೊಸ ಸ್ಪೋರ್ಟ್ಸ್ ಕಾರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದರು.

police-impounded-an-expensive-car-that-was-running-without-a-number-plate

ನಡೆದಿದ್ದೇನು?: ಫೆಬ್ರವರಿ 15 ರಂದು ಇಲ್ಲಿನ ಡುಮಾಸ್ ರಸ್ತೆಯಲ್ಲಿ ತಮ್ಮ ದಿನನಿತ್ಯದ ತಪಾಸಣೆಯ ಸಮಯದಲ್ಲಿ ಕಾರನ್ನು ಪೊಲೀಸರು ಗುರುತಿಸಿದ್ದಾರೆ. ವಾಹನದ ದಾಖಲೆಗಳನ್ನು ತೋರಿಸಲು ಕಾರಿನ ಚಾಲಕನನ್ನು ಕೇಳಿದಾಗ, ದಾಖಲೆಗಳು ಇಲ್ಲದಿರುವುದು ಬೆಳಕಿಗೆ ಬಂದಿದೆ. ನಂತರ ಪೊಲೀಸರು ಕಾರನ್ನು ವಶಪಡಿಸಿಕೊಂಡು ಠಾಣೆಗೆ ಕೊಂಡೊಯ್ದಿದ್ದರು.

ಇಂತಹ ಐಷಾರಾಮಿ ಕಾರನ್ನು ಖರೀದಿಸಿರುವ ಅವರು, ಅದರ ನಂಬರ್ ಪ್ಲೇಟ್‌ಗಳನ್ನು ಸರಿಪಡಿಸಲು ಮಾತ್ರ ತಲೆಕೆಡಿಸಿಕೊಂಡಿಲ್ಲ. ನಾವು ನೋಡಿದಾಗ ಕಾರು ನಂಬರ್‌ಪ್ಲೇಟ್ ಇಲ್ಲದೆ ಸಂಚರಿಸುತ್ತಿತ್ತು. ಅನುಮಾನ ಮತ್ತು ಹಲವು ಉಲ್ಲಂಘನೆಗಳ ಆಧಾರದ ಮೇಲೆ ಕಾರನ್ನು ವಶಪಡಿಸಿಕೊಂಡು ಮಾಲೀಕರಿಗೆ ಆರ್‌ಟಿಒ ಮೆಮೊ ಕೂಡ ನೀಡಿದ್ದೇವೆ ಎಂದು ಇನ್ಸ್‌ಪೆಕ್ಟರ್ ಜೆ.ಜಿ ಪಟೇಲ್ ತಿಳಿಸಿದ್ದರು.

police-impounded-an-expensive-car-that-was-running-without-a-number-plate

ಅಸಲಿ ಕಥೆ: ವೀಡಿಯೊದಲ್ಲಿ ನೋಡಿದಂತೆ, ಕಾರು ಹೊಚ್ಚ ಹೊಸದಾಗಿ ಕಾಣುತ್ತಿದೆ. ಕಾರ್ಬನ್ ಫೈಬರ್ ಕಪ್ಪು ಬಾನೆಟ್ ಹೊಂದಿರುವ ಹಳದಿ ಬಣ್ಣದ ಸ್ಪೋರ್ಟ್ಸ್ ಕಾರನ್ನು ಪೊಲೀಸ್ ಠಾಣೆಯ ಹೊರಭಾಗದಲ್ಲಿಯೇ ನಿಲ್ಲಿಸಲಾಗಿದೆ. ಕೆಲವು ದಿನಗಳ ಹಿಂದಷ್ಟೇ ನಿಖಿಲ್ ಪ್ರಜಾಪತಿ ಎಂಬುವವರ ಸಹೋದರ ಈ ಕಾರನ್ನು ಖರೀದಿಸಿದ್ದರು ಎಂದು ಪೊಲೀಸರು ಇದೀಗ ತಿಳಿಸಿದ್ದಾರೆ.

ದಾಖಲೆಗಳ ಸಮೇತ ಮಾಲೀಕತ್ವದ ವರ್ಗಾವಣೆ ಇನ್ನಷ್ಟೇ ಆಗಬೇಕಿದ್ದು, ಆಗ ನಿಖಿಲ್ ಕಾರನ್ನು ಡ್ರೈವ್ ಮಾಡಲು ನಿರ್ಧರಿಸಿ ಸಂಕಷ್ಟಕ್ಕೆ ಸಿಲುಕಿದ್ದ ಎಂಬುದು ತಿಳಿದುಬಂದಿದೆ. ಸರಿಯಾದ ನೋಂದಣಿ ನಂಬರ್ ಪ್ಲೇಟ್ ಇಲ್ಲದೆ ಸಾರ್ವಜನಿಕ ರಸ್ತೆಯಲ್ಲಿ ಕಾರು ಚಾಲನೆ ಮಾಡುವುದು ಅಪರಾಧ. 2015 ರಲ್ಲಿ, ಭಾರತದಲ್ಲಿನ ಎಲ್ಲಾ ವಾಹನಗಳು ಏಕರೂಪದ ನಂಬರ್ ಪ್ಲೇಟ್ ಅನ್ನು ಹೊಂದಲು ಮೋಟಾರು ವಾಹನ ಕಾಯಿದೆ ಸೆಕ್ಷನ್ 50 ಅನ್ನು ತಿದ್ದುಪಡಿ ಮಾಡಲಾಗಿತ್ತು.

police-impounded-an-expensive-car-that-was-running-without-a-number-plate

ಭಾರತದಲ್ಲಿನ ಎಲ್ಲಾ ವಾಹನಗಳು ಕಡ್ಡಾಯ ನೋಂದಣಿ ಫಲಕವನ್ನು ಪ್ರದರ್ಶಿಸಬೇಕು. ಖಾಸಗಿ ವಾಹನಗಳು ಬಿಳಿ ಹಿನ್ನೆಲೆಯೊಂದಿಗೆ ಕಪ್ಪು ಅಕ್ಷರಗಳನ್ನು ಹೊಂದಿರಬೇಕು ಮತ್ತು ವಾಣಿಜ್ಯ ವಾಹನಗಳು ಕಪ್ಪು ಅಕ್ಷರಗಳೊಂದಿಗೆ ಹಳದಿ ಹಿನ್ನೆಲೆಯನ್ನು ಹೊಂದಿರಬೇಕು. ಪ್ಲೇಟ್‌ನಲ್ಲಿರುವ ಎಲ್ಲಾ ವರ್ಣಮಾಲೆಗಳು ಮತ್ತು ಅಂಕಿಗಳು ಇಂಗ್ಲಿಷ್‌ನಲ್ಲಿರಬೇಕು ಮತ್ತು ಬೇರೆ ಯಾವುದೇ ಸ್ಥಳೀಯ ಭಾಷೆಯಲ್ಲಿರಬಾರದು.

ಮಾಲೀಕ ಕಾರನ್ನು ಓಡಿಸಲು ಬಯಸಿದರೆ, ಖಾಸಗಿ ಟ್ರ್ಯಾಕ್ ಅಥವಾ ತಮ್ಮ ಸ್ವಂತ ಸ್ಥಳಕ್ಕೆ ತೆಗೆದುಕೊಂಡು ಹೋಗಬೇಕಿತ್ತು. ನಂಬರ್ ಪ್ಲೇಟ್ ಇಲ್ಲದ ಕಾರನ್ನು ಚಾಲನೆ ಮಾಡುವುದು ಈ ರೀತಿಯ ಗಂಭೀರ ತೊಂದರೆಗೆ ಸಿಲುಕಿಸಬಹುದು. ವೀಡಿಯೊದಲ್ಲಿ ಕಂಡುಬರುವ ಪೋರ್ಷೆ ಕೇಮನ್ ಕಾರು, 2.0-ಲೀಟರ್, ಟರ್ಬೋಚಾರ್ಜ್ಡ್ ಪೆಟ್ರೋಲ್ ಎಂಜಿನ್‌ನಿಂದ ಚಾಲಿತವಾಗಿದ್ದು, 295 Bhp ಪವರ್ ಮತ್ತು 380 Nm ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Article Published On: Tuesday, February 20, 2024, 18:43 [IST]
English summary
Police impounded an expensive car that was running without a number plate
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+