Vande Bharat Express: ಪೊಲೀಸ್ ಇನ್‌ಸ್ಪೆಕ್ಟರ್‌ ಬೆವರಿಳಿಸಿದ ಟಿಟಿಇ, ವಿಡಿಯೋ ವೈರಲ್

ಕರ್ನಾಟಕವು ಸೇರಿದಂತೆ ದೇಶದ ಪ್ರಮುಖ ನಗರಗಳನ್ನು ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲುಗಳು ಸಂಪರ್ಕಿಸುತ್ತಿವೆ. ಪ್ರಯಾಣಿಕರ ಬೇಡಿಕೆಗೆ ತಕ್ಕಂತೆ ಪ್ರತಿತಿಂಗಳು ಹೊಸ ರೈಲುಗಳನ್ನು ಲೋಕಾರ್ಪಣೆ ಮಾಡಲಾಗುತ್ತಿದೆ. ಕೆಲವೇ ದಿನಗಳಲ್ಲಿ ರಾತ್ರಿ ಪ್ರಯಾಣಕ್ಕೆ ವಂದೇ ಭಾರತ್ ಸ್ಲೀಪರ್ ರೈಲುಗಳು ಬರಲಿವೆ.

ಸಾಮಾನ್ಯ ಸೇರಿದಂತೆ ಯಾವುದೇ ರೈಲುಗಳಲ್ಲಿ ಟಿಕೆಟ್ ರಹಿತವಾಗಿ ಪ್ರಯಾಣಿಸುವಂತಿಲ್ಲ. ಆದರೆ, ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರು ಟಿಕೆಟ್ ತೆಗೆದುಕೊಳ್ಳದೇ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹತ್ತಿದ್ದು, ಟಿಟಿಇ (ಟ್ರಾವೆಲಿಂಗ್ ಟಿಕೆಟ್ ಎಕ್ಸಾಮಿನರ್) ಸರಿಯಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

Vande Bharat Express: ಪೊಲೀಸ್ ಇನ್‌ಸ್ಪೆಕ್ಟರ್‌ ಬೆವರಿಳಿಸಿದ ಟಿಟಿಇ, ವಿಡಿಯೋ ವೈರಲ್

ಈ ವಿಡಿಯೋದಲ್ಲಿ ಇನ್‌ಸ್ಪೆಕ್ಟರ್‌ ಆಸನದಲ್ಲಿ ಕುಳಿತುಕೊಂಡಿದ್ದಾರೆ. ಟಿಟಿಇ ಬಂದು ಕೇಳಿದಾಗ, ತನ್ನ ಬಳಿ ಟಿಕೆಟ್ ಇಲ್ಲ. ತಾನು ಹೋಗಬೇಕಿದ್ದ ರೈಲು ಕಾರಣಾಂತರದಿಂದ ತಪ್ಪಿತು. ಅದಕ್ಕಾಗಿ ಈ ರೈಲು ಹತ್ತಿದ್ದೇನೆ. ಪ್ರಯಾಣಿಸಲು ಅವಕಾಶ ಕೊಡಿ ಎಂದು ಇನ್‌ಸ್ಪೆಕ್ಟರ್‌ ಕೇಳುತ್ತಾರೆ. ಅದಕ್ಕೆ ಟಿಟಿಇ, ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸಲು ಅವಕಾಶವಿಲ್ಲ ಎನ್ನುತ್ತಾರೆ.

ನೀವು ಏಕೆ ಈ ರೈಲನ್ನು ಹತ್ತಿದಿರಿ? ಅದೇ ರೈಲಿನಲ್ಲಿ ಹೋಗಬೇಕಿತ್ತು ಎಂದು ಟಿಟಿಇ ಹೇಳುತ್ತಾರೆ. ಮುಂದಿವರಿದು, ಬಸ್ಸಿನಲ್ಲಿ ಹೋಗಬಹುದಿತ್ತು. ಈ ರೈಲಿನಲ್ಲಿ ಪ್ರಯಾಣಿಸಲು ಅವಕಾಶ ನೀಡುವುದಿಲ್ಲ. ನಿಮಗೆ ತಮಾಷೆಯಾಗಿದೆಯೇ ಎಂದು ಟಿಟಿಇ, ಇನ್‌ಸ್ಪೆಕ್ಟರ್‌ ಗೆ ಪ್ರಶ್ನೆ ಮಾಡುತ್ತಾರೆ. ಈ ವಿಡಿಯೋ ಲಕ್ನೋಗೆ ತೆರಳುತ್ತಿದ್ದ ವಂದೇ ಭಾರತ್ ರೈಲಿನಲ್ಲಿ ಸೆರೆಯಿಡಿಯಲಾಗಿದೆ ಎಂದು ಹೇಳಲಾಗಿದೆ.

ಟಿಟಿಇ, ಪೊಲೀಸ್ ಇನ್‌ಸ್ಪೆಕ್ಟರ್‌ ರನ್ನು ಮುಂದಿನ ನಿಲ್ದಾಣದಲ್ಲಿ ಇಳಿಸಿದರೂ ಎಂದು ವರದಿಯಾಗಿದೆ. ಸದ್ಯ, ವೈರಲ್ ಆಗಿರುವ ವಿಡಿಯೋ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದಕ್ಕೆ ನೆಟ್ಟಿಗರು ಸಹ ತರಹೇವಾರಿ ಕಾಮೆಂಟ್ ಮಾಡಿದ್ದಾರೆ. ಅಂಕಿತ್ ಕುಮಾರ್ ಎಂಬುವವರೂ 'ನಾನು ಮಾತನಾಡುತ್ತಿರುವುದು ಇದನ್ನೇ, ಕಾಂಗ್ರೆಸ್ ಕಾಲದಲ್ಲಿ ಹಣವಿಲ್ಲದೆ ನೀವು ರೈಲು ಹತ್ತಬಹುದಿತ್ತು. ಆದರೆ, ಇಂದಿನ ಖಾಸಗೀಕರಣ ಯುಗದಲ್ಲಿ ಇದು ಸಾದ್ಯವಿಲ್ಲ' ಎಂದು ಬರೆದುಕೊಂಡಿದ್ದಾರೆ.

ಮತ್ತೊಬ್ಬ ರಂಜನ್ ಕುಮಾರ್ ಎನ್ನುವವರೂ, 'ಬಹಳ ಶ್ಲಾಘನೀಯ ಕೆಲಸ. ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು. ಟಿಟಿಇ ಮಾಡಿದ್ದು, ತುಂಬಾ ಒಳ್ಳೆಯ ಕಾರ್ಯ' ಎಂದು ಹೇಳಿದ್ದಾರೆ. ಸಭಾಶಂಕರ್ ಎಂಬುವವರೂ, 'ಉತ್ತರ ಪ್ರದೇಶದ ಮಾಜಿ ಡಿಜಿಪಿ ಪ್ರಕಾರ, ಪ್ರತಿವರ್ಷ ಸುಮಾರು 7000 ಸಿಬ್ಬಂದಿಯನ್ನು ಪೊಲೀಸ್ ಇಲಾಖೆಯಿಂದ ಅನುಚಿತ ವರ್ತನೆಯಿಂದ ವಜಾಗೊಳಿಸಲಾಗುತ್ತದೆ. ಈಗ ಪುರಾವೆಯನ್ನು ನೀವೇ ನೋಡಿ. ಧನ್ಯವಾದಗಳು' ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನು, ಆಂಧ್ರಪ್ರದೇಶದ ತಿರುಪತಿಯಿಂದ ಸಿಕಂದರಾಬಾದ್‌ಗೆ ಹೊರಟಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬ ಶೌಚಾಲಯದಲ್ಲಿ ಸಿಗರೇಟ್ ಸೇದಿ, ಕ್ಷಣಕಾಲ ರೈಲಿನ ಇತರೆ ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ್ದನು. ಮಾಡಿದ ತಪ್ಪಿಗೆ ಪೊಲೀಸರ ಅಥಿತಿಯಾಗಿದ್ದನು. ಕಳೆದ ಆಗಸ್ಟ್ ತಿಂಗಳಲ್ಲಿ ಈ ಘಟನೆ ವರದಿಯಾಗಿತ್ತು.

ಟಿಕೆಟ್ ಇಲ್ಲದೇ ಆ ವ್ಯಕ್ತಿ, ರೈಲಿನ ಸುಮ್ಮನೆ ಶೌಚಾಲಯದ ಬಾಗಿಲನ್ನು ಹಾಕಿಕೊಂಡು ಪ್ರಯಾಣಿಸಿದ್ದರೇ ಯಾವುದೇ ಸಮಸ್ಯೆ ಆಗುತ್ತಿರಲಿಲ್ಲವೇನೋ. ಆದರೆ, ಅಲ್ಲಿಯೇ ಸಿಗರೇಟ್ ಸೆದ್ದಿದ್ದಾನೆ. ತಕ್ಷಣವೇ ಫೈರ್ ಅಲಾರಾಂ ಶಬ್ದ ಮಾಡಿದ್ದು, ಸ್ವಯಂಚಾಲಿತ ಅಗ್ನಿನೀರೋಧಕ ಸಾಧನ 'ಏರೋಸಾಲ್' ಮಿಶ್ರಣವನ್ನು ಸಿಂಪಡಿಸಿದೆ. ತಕ್ಷಣ ರೈಲಿನ ಸಿಬ್ಬಂದಿ ಎಚ್ಛೆತ್ತುಕೊಂಡು ಶೌಚಾಲಯ ಕಿಟಕಿ ಗಾಜನ್ನು ಒಡೆದು, ಪರಿಶೀಲಿಸಿದಾಗ ಆತ ಅಡಗಿ ಕುಳಿತಿರುವುದು ಗೊತ್ತಾಗಿದೆ. ವಿಚಾರಣೆ ವೇಳೆಯಲ್ಲಿ ಟಿಕೆಟ್ ರಹಿತ ಪ್ರಯಾಣ ಮಾಡುತ್ತಿದ್ದನು ಎಂದು ತಿಳಿದುಬಂದಿತ್ತು.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Tuesday, October 10, 2023, 16:25 [IST]
English summary
Police inspector boarded vande bharat express without ticket video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+