ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಚೀನಾದಿಂದ ಹರಡಿತು ಎಂದು ಹೇಳಲಾಗುವ ಕರೋನಾ ವೈರಸ್ ಜಗತ್ತನ್ನೇ ತತ್ತರಿಸುವಂತೆ ಮಾಡಿದೆ. ಈ ವೈರಸ್‌ನ ಕಪಿಮುಷ್ಟಿಯಿಂದ ಭಾರತವೂ ಹೊರತಾಗಿಲ್ಲ. ಕೋವಿಡ್ -19 ವೈರಸ್ ಹರಡದಂತೆ ತಡೆಯಲು ಭಾರತದಲ್ಲಿ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಮಾರ್ಚ್ 24ರಿಂದ ಏಪ್ರಿಲ್ 14ರವರೆಗೆ ಭಾರತದಲ್ಲಿ ಮೊದಲ ಹಂತದ ಲಾಕ್‌ಡೌನ್ ಜಾರಿಗೊಳಿಸಲಾಗಿತ್ತು. ನಂತರ ಮೇ 3ರವರೆಗೆ ವಿಸ್ತರಿಸಲಾಯಿತು. ಈಗ ಮೂರನೇ ಹಂತದ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಲಾಕ್‌ಡೌನ್ ಕಾರಣಕ್ಕೆ ಜನರು ತಮ್ಮ ಮನೆಗಳೊಳಗೆ ಬಂಧಿಯಾಗಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಲಾಕ್‌ಡೌನ್‌ನಿಂದಾಗಿ ಮದುವೆ ಸೇರಿದಂತೆ ಶುಭ ಸಮಾರಂಭಗಳು ಮುಂದೂಡಲ್ಪಟ್ಟಿವೆ. ಹುಟ್ಟುಹಬ್ಬಗಳನ್ನು ಸಹ ಆಚರಿಸುತ್ತಿಲ್ಲ. ಜನ್ಮದಿನಗಳು ಯಾವಾಗಲೂ ವಿಶೇಷವಾಗಿರುತ್ತವೆ. ಮಕ್ಕಳ ಮೊದಲ ಜನ್ಮದಿನವಾಗಿದ್ದರೆ, ಪೋಷಕರು ಅದನ್ನು ಆಚರಿಸಲು ಹಲವು ಯೋಜನೆಗಳನ್ನು ಹೊಂದಿರುತ್ತಾರೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಆದರೆ ಲಾಕ್‌ಡೌನ್ ಎಲ್ಲಾ ರೀತಿಯ ಸಂಭ್ರಮಕ್ಕೂ ಬ್ರೇಕ್ ಹಾಕಿದೆ. ಆದರೆ ಉತ್ತರ ಪ್ರದೇಶದಲ್ಲಿ ನಡೆದ ಘಟನೆಯೊಂದು ಎಲ್ಲರ ಗಮನವನ್ನು ತನ್ನತ್ತ ಸೆಳೆದಿದೆ. ಲಾಕ್‌ಡೌನ್ ಮಧ್ಯೆ ಮಗುವಿನ ಮೊದಲ ಹುಟ್ಟುಹಬ್ಬವನ್ನು ಆಚರಿಸಲು ಉತ್ತರ ಪ್ರದೇಶ ಪೊಲೀಸ್ ಇಲಾಖೆ ಬೆಂಗಾವಲು ಪಡೆಯನ್ನು ಕಳುಹಿಸಿದೆ.

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಈ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಬಾಲಕಿಯ ಮೊದಲ ಹುಟ್ಟುಹಬ್ಬವನ್ನು ಆಚರಿಸಲು ಪೊಲೀಸ್ ವಾಹನಗಳು ಮೆರವಣಿಗೆ ನಡೆಸುತ್ತಿರುವ ವೀಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ, ಉತ್ತರ ಪ್ರದೇಶ ಪೊಲೀಸರ ಅಧಿಕೃತ ವಾಹನಗಳನ್ನು ಕಾಣಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಈ ಬೆಂಗಾವಲು ಪಡೆಯಲ್ಲಿ ಮೊದಲು ಎರಡು ಬಜಾಜ್ ಪಲ್ಸರ್ ಬೈಕ್‌ಗಳು ನಂತರ ಮೂರು ಟೊಯೊಟಾ ಇನೊವಾ ಹಾಗೂ ಕೊನೆಯಲ್ಲಿ ಮತ್ತೆರಡು ಬಜಾಜ್ ಪಲ್ಸರ್ ಬೈಕ್‌ಗಳು ಬರುತ್ತವೆ. ಈ ಎಲ್ಲಾ ವಾಹನಗಳನ್ನು ವಿಭಿನ್ನ ಬಣ್ಣದ ಬಲೂನ್‌ಗಳಿಂದ ಅಲಂಕರಿಸಲಾಗಿದೆ.

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಈ ವಾಹನಗಳು ಸೈರನ್ ಮಾಡುತ್ತಾ ಮಗುವಿನ ಮನೆಗೆ ಬರುತ್ತವೆ. ಪೊಲೀಸರು ಫೇಸ್ ಶೀಲ್ಡ್ ಹಾಗೂ ಗ್ಲೌಸ್‌ಗಳನ್ನು ಧರಿಸಿ ಮಗುವಿಗೆ ಕೇಕ್ ನೀಡಿ ಮಗುವಿಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದರು.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಉತ್ತರ ಪ್ರದೇಶ ಪೊಲೀಸರ ಈ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈಗಾಗಲೇ ಹೇಳಿದಂತೆ, ಲಾಕ್‌ಡೌನ್ ಕಾರಣಕ್ಕೆ ಮದುವೆ ಸೇರಿದಂತೆ ಹಲವು ಸಮಾರಂಭಗಳನ್ನು ಮುಂದೂಡಲಾಗುತ್ತಿದೆ. ಈ ಕಾರಣಕ್ಕೆ ಈ ಮಗುವಿನ ಹುಟ್ಟುಹಬ್ಬವನ್ನು ಪೊಲೀಸರೇ ವಿಶಿಷ್ಟವಾಗಿ ಆಚರಿಸಿದ್ದಾರೆ.

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಸಾಮಾನ್ಯವಾಗಿ ರಾಜಕಾರಣಿಗಳು ಹಾಗೂ ವಿವಿಐಪಿಗಳು ಓಡಾಡುವ ವಾಹನಗಳ ಜೊತೆಯಲ್ಲಿ ಬೆಂಗಾವಲು ಪಡೆಗಳು ಸೈರನ್ ಮಾಡುತ್ತಾ ಸಾಗುತ್ತವೆ. ಈ ಘಟನೆಯಲ್ಲಿ ಮಗುವಿನ ಹುಟ್ಟುಹಬ್ಬವನ್ನು ಆಚರಿಸಲು ಬೆಂಗಾವಲು ಪಡೆಗಳು ಬಂದಿವೆ.

MOST READ:ಮನೆ ತಲುಪಲು 1800 ಕಿ.ಮೀ ಸೈಕಲ್ ತುಳಿದ ಯುವಕ..!

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಭಾರತದಲ್ಲಿ ಕೋವಿಡ್ -19 ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಕಾರಣಕ್ಕೆ ಲಾಕ್‌ಡೌನ್ ಅನ್ನು ಮೇ 17ರವರೆಗೆ ವಿಸ್ತರಿಸಲಾಗಿದೆ. ಆದರೆ ಕೆಲವು ವಿನಾಯಿತಿಗಳನ್ನು ನೀಡಿ ಕೆಲವು ವ್ಯವಹಾರಗಳನ್ನು ನಡೆಸಲು ಅನುಮತಿ ನೀಡಲಾಗಿದೆ.

ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದ್ದರೂ ಸಾಧ್ಯವಾದಷ್ಟು ಮನೆಯಲ್ಲಿರುವುದು ಉತ್ತಮ. ಕೋವಿಡ್ -19 ವೈರಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಏಕೈಕ ಮಾರ್ಗವೆಂದರೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು. ಲಾಕ್‌ಡೌನ್‌ಗಳನ್ನು ಸಡಿಲಗೊಂಡಿದೆ ಎಂದು ಅನಗತ್ಯವಾಗಿ ಹೊರಬಂದರೆ ಪೊಲೀಸರು ಕ್ರಮಕೈಗೊಳ್ಳುವುದು ಖಚಿತ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಲಾಕ್‌ಡೌನ್ ಎಫೆಕ್ಟ್: ವಿಶಿಷ್ಟ ರೀತಿಯಲ್ಲಿ ಮಗುವಿನ ಹುಟ್ಟುಹಬ್ಬ ಆಚರಿಸಿದ ಪೊಲೀಸರು..!

ಈ ಹಿಂದೆ ಪೊಲೀಸರು ವಿನಾಕಾರಣ ಹೊರ ಬಂದ ವಾಹನಗಳ ಮೇಲೆ ಕಠಿಣ ಕ್ರಮಗಳನ್ನು ಕೈಗೊಂಡಿದ್ದರು. ವಾಹನ ಚಾಲಕರಿಗೆ ದಂಡ ವಿಧಿಸುವುದು, ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸೇರಿದಂತೆ ಹಲವು ಕ್ರಮಗಳನ್ನು ಕೈಗೊಂಡಿದ್ದರು.

Most Read Articles

Kannada
English summary
Police sends a convoy to celebrate 1st birthday of a baby girl during Covid 19 Lockdown. Read in Kannada.
Story first published: Tuesday, May 5, 2020, 15:10 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X