ಸವಾಲೆಸೆದು ಪೊಲೀಸ್ ವಾಹನ ಕದ್ದ ವ್ಯಕ್ತಿ... ಸೆಲ್ಫಿ ಹಂಚಿಕೊಂಡು ಅಧಿಕಾರಿಗಳ ನಿದ್ದೆಗೆಡಿಸಿದ!
ಭಾರತದಲ್ಲಿ ವಾಹನ ಕಳ್ಳತನವು ಸಾಮಾನ್ಯ ಸಂಗತಿ, ಸಾಮಾಜಿಕ ಜಾಲತಾಣದಲ್ಲಿ ನಿತ್ಯ ಹಲವು ಕಳ್ಳತನದ ವೀಡಿಯೊಗಳನ್ನು ನೋಡುತ್ತಲೇ ಇರುತ್ತೇವೆ. ಆದರೆ ಈಗ ಹೇಳಲು ಹೊರಟಿರುವುದು ಗುಜರಾತ್‌ನ ಖತರ್ನಾಕ್ ಕಳ್ಳನ ಬಗ್ಗೆ, ಕಳ್ಳತನವಾದರೆ ಹುಡುಕಿಕೊಡುವ ಪೊಲೀಸರ ವಾಹನವನ್ನೇ ಕದ್ದು ಪರಾರಿಯಾಗಿದ್ದಾನೆ. ಠಾಣೆಯ ಆವರಣದೊಳಗೆ ನಿಲಿಸಿದ್ದ ಪೊಲೀಸ್ ವಾಹನವನ್ನು ಎಗರಿಸಿದ್ದಾನೆ.
ಈ ಘಟನೆಯು ಗುಜರಾತ್‌ನ ದ್ವಾರಕಾದಲ್ಲಿ ನಡೆದಿದೆ, ಮೋಹಿತ್ ಶರ್ಮಾ ಎಂಬ ಕಳ್ಳ ಕಳೆದ ಗುರುವಾರ ಬೆಳಿಗ್ಗೆ ಸ್ಟೇಷನ್ ಕಾಂಪೌಂಡ್ ನಿಂದ ಅಧಿಕೃತ ಪೊಲೀಸ್ ಕಾರಿನೊಂದಿಗೆ ಬೆಳಿಗ್ಗೆ 8:15 ರ ಸುಮಾರಿಗೆ ಪರಾರಿಯಾಗಿದ್ದಾನೆ. ಆದರೆ ಅಧಿಕಾರಿಗಳ ಚುರುಕು ಕಾರ್ಯಾಚರಣೆಯಿಂದಾಗಿ ಸುಮಾರು ಮಧ್ಯಾಹ್ನ 2:30 ಕ್ಕೆ ಜಾಮ್ ನಗರದ ಅಂಬರ್ ಚೋಕ್ಡಿ ಬಳಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.

ಪೋಲೀಸ್ ವರದಿಗಳ ಪ್ರಕಾರ, ಮೋಹಿತ್ ಮೋಟಾರ್ ಸೈಕಲ್‌ನಲ್ಲಿ ದ್ವಾರಕಾಗೆ ಆಗಮಿಸಿ, ಪ್ರಾರ್ಥನೆ ಸಲ್ಲಿಸುವಂತೆ ತನ್ನ ಕುಟುಂಬಕ್ಕೆ ಹೇಳಿದ್ದ. ಪಟ್ಟಣಕ್ಕೆ ಬಂದ ನಂತರ ಪೊಲೀಸ್ ಠಾಣೆ ಬಳಿ ಮೋಟಾರ್ ಸೈಕಲ್ ನಿಲ್ಲಿಸಿ, ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಮಹೀಂದ್ರಾ ಬೊಲೆರೋ ಸಮೇತ ಪರಾರಿಯಾಗಿದ್ದಾನೆ. ಠಾಣೆಯಲ್ಲಿ ಪೋಲೀಸ್ ಕಾರಿಗೆ ಜವಾಬ್ದಾರರಾಗಿರುವ ಚಾಲಕನಿಗೆ ಸ್ವಲ್ಪ ಸಮಯದ ನಂತರ ವಾಹನ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ.
ಎಸ್‌ಯುವಿಯ ಅನುಪಸ್ಥಿತಿಯನ್ನು ಅರಿತುಕೊಂಡ ಅವರು, ಪೋರ್‌ಬಂದರ್ ಮತ್ತು ಜಾಮ್‌ನಗರ ಪೊಲೀಸ್ ಠಾಣೆಗಳನ್ನು ಒಳಗೊಂಡಂತೆ ನೆರೆಯ ಪೊಲೀಸ್ ಠಾಣೆಗಳು ಮತ್ತು ಗಸ್ತು ಘಟಕಗಳಿಗೆ ಎಚ್ಚರಿಕೆ ನೀಡಿದರು. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಎಸ್‌ಯುವಿ ಇಲ್ಲಿನ ಕುರಂಗ ಮತ್ತು ಖಂಬಲಿಯಾದಲ್ಲಿ ಟೋಲ್ ಗೇಟ್‌ಗಳನ್ನು ದಾಟಿರುವುದು ಕಂಡುಬಂದಿದೆ.

ಕಳ್ಳ ಸುಮಾರು 200 ಕಿ.ಮೀ ಕಾರನ್ನು ಓಡಿಸಿರುವುದು ತಿಳಿದುಬಂದಿದೆ. ಕಾರನ್ನು ಕದಿಯುವುದು ಮಾತ್ರವಲ್ಲದೆ, ಬೊಲೆರೊ ಜೊತೆಗಿನ ಸೆಲ್ಫಿ ಚಿತ್ರಗಳನ್ನು ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾನೆ. ಪೋಲೀಸ್ ಬೊಲೆರೋ ಫುಲ್ ಟ್ಯಾಂಕ್ ಹೊಂದಿದ್ದರಿಂದ ಪ್ರಯಾಣದ ಸಮಯದಲ್ಲಿ ಇಂಧನ ತುಂಬಲು ಎಲ್ಲೂ ನಿಲ್ಲಿಸಿಲ್ಲ. ಕೊನೆಗೂ ಕಳ್ಳನನ್ನು ಬಂಧಿಸಿದ್ದಾರಾದರೂ ಆತನ ವಿರುದ್ಧ ಯಾವೆಲ್ಲಾ ಪ್ರಕರಣಗಳನ್ನು ದಾಖಲಿಸಿದ್ದಾರೆ ಎಂಬುದು ತಿಳಿದುಬಂದಿಲ್ಲ.
ಕಳ್ಳ ಮೋಹಿತ್ ಶರ್ಮಾ ಗಾಂಜಾ ಚಟ ಹೊಂದಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಗಾಂಜಾ ಪ್ರಭಾವದಿಂದ ಮೋಹಿತ್ ಈ ಕೃತ್ಯ ಎಸಗಿದ್ದಾನೆಯೇ ಎಂಬುದನ್ನು ವರದಿಗಳು ಉಲ್ಲೇಖಿಸಿಲ್ಲ. ಉಪ ಪೊಲೀಸ್ ವರಿಷ್ಠಾಧಿಕಾರಿ ಸಮೀರ್ ಸರ್ದಾ ಮಾತನಾಡಿ, "ದ್ವಾರಕಾ ಪೊಲೀಸ್ ಸಿಬ್ಬಂದಿ ಪ್ರವಾಸಿಗರ ನಿರಂತರ ಒಳಹರಿವನ್ನು ನೋಡುತ್ತದೆ, ಸಿಬ್ಬಂದಿ ತುರ್ತು ಸಂದರ್ಭಗಳಲ್ಲಿ ಕಾರುಗಳನ್ನು ಬಳಸುತ್ತಾರೆ.
ಆದ್ದರಿಂದ, ಪೊಲೀಸ್ ಠಾಣಾಧಿಕಾರಿ (ಪಿಎಸ್‌ಒ) ಗೆ ತಿಳಿಸದೆ ಕಾರನ್ನು ತೆಗೆದುಕೊಂಡು ಹೋದಾಗ ಏನಾದರೂ ತಪ್ಪಾದದ್ದನ್ನು ಗಮನಿಸದೇ ಇರಬಹುದು. ಇನ್ನು " ಕಳ್ಳ ಶರ್ಮಾ ಈ ಹಿಂದೆ ಗಾಂಧಿಧಾಮ್ ಪೊಲೀಸರೊಂದಿಗೆ ಗಲಾಟೆ ಮಾಡಿದ್ದ, ವಾಹನವನ್ನು ಕದಿಯುವುದಾಗಿ ತನಿಖಾಧಿಕಾರಿಗೆ ಬೆದರಿಕೆ ಹಾಕಿದ್ದ. ಕಾರನ್ನು ಕದ್ದು ಸ್ಕ್ರ್ಯಾಪ್‌ಗೆ ಮಾರಾಟ ಮಾಡುವುದು ಆತನ ಉದ್ದೇಶವಾಗಿತ್ತು ಎಂದು ನಾವು ಶಂಕಿಸಿದ್ದೇವೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸುದ್ದಿಗಳನ್ನು ಒದಗಿಸುತ್ತದೆ, ಎಲ್ಲಾ ಸಾಮಾಜಿಕ ಮಾಧ್ಯಮಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಹಂಚಿಕೊಳ್ಳುತ್ತದೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಪೇಜ್‌ಗಳೊಂದಿಗೆ ಸಂಪರ್ಕದಲ್ಲಿರಿ. ನಿಮಗೆ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.


Click it and Unblock the Notifications