ಖಾಸಗಿ ಕಾರಿಗೆ ಪೊಲೀಸ್ ಸ್ಟಿಕರ್: ಮದ್ಯ ಖರೀದಿ, ಮನಬಂದಂತೆ ಓಡಾಟ... ಸಿಕ್ಕಿಬಿದ್ದವರು ಯಾರು ಗೊತ್ತಾ?
ಗೋವಾದ ಪ್ರಮುಖ ನಗರವಾದ ಕೆನಕೋನಾದಲ್ಲಿ ಪೊಲೀಸ್ ಲಾಂಛನ ಮತ್ತು ಸ್ಟಿಕ್ಕರ್ ಅನ್ನು ತಮ್ಮ ಎಸ್‌ಯುವಿಗೆ ಅಂಟಿಸಿಕೊಂಡು, ಮಾರ್ಗಮಧ್ಯೆ ಮದ್ಯವನ್ನು ಖರೀದಿಸಿ ಮನಬಂದಂತೆ ಓಡಾಡಿದ್ದಾರೆ. ಈ ಕಾರು ಅನುಮಾನಾಸ್ಪದವಾಗಿ ಓಡಾಡುತ್ತಿರುವುದು ಕಂಡು ಎಚ್ಚೆತ್ತ ಪೊಲಿಸರು ಒಬ್ಬ ಯುವಕ ಮೂವರು ಮಹಿಳೆಯರನ್ನು ಬಂಧಿಸಿದ್ದಾರೆ.
ಈ ಸಂಬಂಧ ಕಾರು ಮಾಲೀಕರ ವಿರುದ್ಧ ಪ್ರಕರಣವನ್ನು ದಾಖಲಿಸಲಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಗಮನಿಸಿ, ಕೆನಕೋನಾ ಪೊಲೀಸ್ ತಂಡವು ಕಾರಿನ ಜಾಡು ಹಿಡಿದು ವೈನ್ ಶಾಪ್ ಬಳಿ ವಾಹನವನ್ನು ಅಡ್ಡಗಟ್ಟಿದೆ. ಪೊಲೀಸರು ಕಾರಿನಲ್ಲಿ ಮೂವರು ಮಹಿಳೆಯರು ಮತ್ತು ಒಬ್ಬ ಯುವಕನನ್ನು ಪತ್ತೆ ಮಾಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಸಾಮಾನ್ಯವಾಗಿ ನಮ್ಮ ನಗರಗಳಲ್ಲಿ ಸಂಚರಿಸುವ ಪೊಲೀಸ್ ವಾಹನಗಳು ಹೇಗಿರುತ್ತವೆ ಎಂಬುದರ ಬಗ್ಗೆ ನಮಗೆ ತಿಳಿದಿರುತ್ತದೆ. ಆದರೆ ಇವರು ಖಾಸಗಿ ವಾಹನವೊಂದರ ಹಿಂಭಾಗ ಮತ್ತು ಬದಿಗಳಲ್ಲಿ ಪೊಲೀಸ್ ಲೋಗೋದ ಸ್ಟಿಕ್ಕರ್‌ಗಳನ್ನು ಅಂಟಿಸಿಕೊಂಡು ಓಡಾಡಿದ್ದಾರೆ. ಇಂತಹ ಹೊಸ ರೀತಿಯ ಪೊಲೀಸ್ ವಾಹನ (GA- 10 A- 3230) ಕಂಡು ಸ್ಥಳೀಯರು ಆಶ್ಚರ್ಯಗೊಂಡಿದ್ದಾರೆ.
ಇದೇ ಕಾರಣದಿಂದ ಇವರು ಸಿಕ್ಕಿಬಿದ್ದಿದ್ದಾರೆ. ನಕಲಿ ಪೊಲೀಸರು ಸಂಚಾರದಲ್ಲಿದ್ದಾರೆ ಎಂಬ ಅನುಮಾನಕ್ಕೆ ಕಾರಣವಾಗಿದ್ದು, ಸ್ಥಳಿಯರು ಖಾಸಗಿ ಕಾರನ್ನು ವಿಡಿಯೋ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ. ಈ ನಕಲಿ ಪೊಲೀಸ್ ಕಾರು ಇಲ್ಲಿನ ಅಗೋಂಡಾದಲ್ಲಿ ಹೆಚ್ಚಾಗಿ ಓಡಾಡುತ್ತಿರುವುದು ಕಂಡುಬಂದಿದೆ. ಒಮ್ಮೆ ಅಗೋಂಡಾ ಪೊಲೀಸ್ ಔಟ್‌ಪೋಸ್ಟ್ ಅನ್ನು ಸಹ ಹಾದುಹೋಗಿರುವುದಾಗಿ ತಿಳಿದುಬಂದಿದೆ.

ವಿಚಿತ್ರವೆಂದರೆ ಪೊಲೀಸ್ ಸ್ಟಿಕ್ಕರ್‌ನೊಂದಿಗೆ ಮದ್ಯ ಖರೀದಿಸಿರುವುದು, ಕಳೆದ ಶನಿವಾರ ಸಂಜೆ ವೈನ್ ಶಾಪ್ ಬಳಿ ಕಾರು ನಿಲ್ಲಿಸಿ ಅದರಲ್ಲಿದ್ದವರು ಮದ್ಯ ಖರೀದಿಸಿದ್ದಾರೆ ಎನ್ನಲಾಗಿದೆ. ಕೊನೆಗೆ ಕೆನಕೋನಾ ಪೊಲೀಸರು ಖಚಿತ ಮಾಹಿತಿಯ ಮೇರೆಗೆ ಕಾರಿನಲ್ಲಿದ್ದವರನ್ನು ಬಂಧಿಸಿದ್ದಾರೆ. ಈ ವೇಳೆ ಮೂವರು ಮಹಿಳೆಯರು ಒಬ್ಬ ಯುವಕ ಇದ್ದ. ಆದರೆ ಮಹಿಳೆಯರನ್ನು ಬಿಟ್ಟು ಕಳುಹಿಸಿದ್ದಾರೆ.
ಕಾರನ್ನು ಕೆನಕೋನಾದ ಮಿಲ್ತಿಯಾ ಶಿರ್ಖೆ ಎಂಬುವವರ ಹೆಸರಿನಲ್ಲಿ ನೋಂದಾಯಿಸಲಾಗಿದ್ದು, ಅವರು ಕಾರಿನಲ್ಲಿದ್ದರು ಎಂದು ವರದಿಯಾಗಿದೆ. ಇನ್ನೂ ಕೆಲ ಮಾಧ್ಯಮಗಳ ವರದಿ ಪ್ರಕಾರ, ಅವರು ಯೂಟ್ಯೂಬ್ ಗಾಗಿ ಷಾರ್ಟ್ ಫಿಲ್ಮ್ ಚಿತ್ರೀಕರಿಸುತ್ತಿದ್ದರು ಎನ್ನಲಾಗಿದೆ. ಇದಕ್ಕೆ ಅನುಮತಿ ಪಡೆಯಬೇಕು ಎಂಬುದು ತಮಗೆ ತಿಳಿದಿರಲಿಲ್ಲ ಎಂದು ಕಾರಿನಲ್ಲಿದ್ದ ಮಹಿಳೆಯರು ಹೇಳಿರುವುದಾಗಿ ವರದಿ ಮಾಡಿವೆ.
ಗೋವಾ ಪೊಲೀಸ್ ಲೋಗೋವನ್ನು ಕಾರಿನ ಮೇಲೆ ಅಂಟಿಸಲು ಇಎಸ್‌ಜಿ ಅಥವಾ ಗೋವಾ ಪೊಲೀಸರಿಂದ ಯಾವುದೇ ಅನುಮತಿಯನ್ನು ಪಡೆದಿಲ್ಲ ಎಂದು ಆರೋಪಿಸಿ ಕೆನಕೋನಾ ಪೊಲೀಸರು ಸಿಆರ್‌ಪಿಸಿಯ ಸೆಕ್ಷನ್ 41 ರ ಅಡಿಯಲ್ಲಿ ಕಾರು ಮಾಲೀಕರ ವಿರುದ್ಧ ದೂರು ದಾಖಲಿಸಿದ್ದಾರೆ ಎಂದು ತಿಳಿದುಬಂದಿದ್ದು, ಕೆನಕೋನ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬದಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications