ಕರೋನಾ ವೈರಸ್ ಆರ್ಭಟ ಹಿನ್ನೆಲೆ: ಎರಡು ಕಿ.ಮೀಗೂ ಹೆಚ್ಚಿನ ಪ್ರಯಾಣಕ್ಕೆ ಬಿತ್ತು ಬ್ರೇಕ್

ಮುಂಬೈ ನಿವಾಸಿಗಳಿಗೆ ಅಲ್ಲಿನ ಪೊಲೀಸ್ ಇಲಾಖೆ ಆಘಾತದ ಸುದ್ದಿಯನ್ನು ನೀಡಿದೆ. ಮುಂಬೈನಲ್ಲಿರುವವರು ಯಾವುದೇ ಪ್ರಮುಖ ಕೆಲಸವಿಲ್ಲದೇ 2 ಕಿ.ಮೀಗಿಂತ ಹೆಚ್ಚು ದೂರ ವಾಹನದಲ್ಲಿ ಪ್ರಯಾಣಿಸಿದರೆ ತೊಂದರೆಗೆ ಸಿಲುಕಲಿದ್ದಾರೆ.

ಕರೋನಾ ವೈರಸ್ ಆರ್ಭಟ ಹಿನ್ನೆಲೆ: ಎರಡು ಕಿ.ಮೀಗೂ ಹೆಚ್ಚಿನ ಪ್ರಯಾಣಕ್ಕೆ ಬಿತ್ತು ಬ್ರೇಕ್

ಮುಂಬೈ ಪೊಲೀಸರು ಭಾನುವಾರ ಕೆಲವು ಹೊಸ ಮಾರ್ಗಸೂಚಿಗಳನ್ನು ಹೊರಡಿಸಿದ್ದಾರೆ. ಈ ಮಾರ್ಗಸೂಚಿಗಳ ಅನ್ವಯ ಯಾವುದೇ ಸರಿಯಾದ ಕಾರಣವಿಲ್ಲದೆ ಚಾಲಕನು ತನ್ನ ಮನೆಯಿಂದ ಹೊರ ಬಂದರೆ, ಆತನ ವಾಹನವನ್ನು ಜಪ್ತಿ ಮಾಡಲಾಗುವುದು.

ಕರೋನಾ ವೈರಸ್ ಆರ್ಭಟ ಹಿನ್ನೆಲೆ: ಎರಡು ಕಿ.ಮೀಗೂ ಹೆಚ್ಚಿನ ಪ್ರಯಾಣಕ್ಕೆ ಬಿತ್ತು ಬ್ರೇಕ್

ಮಹಾರಾಷ್ಟ್ರದಲ್ಲಿ ಕರೋನಾ ವೈರಸ್ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಅದರಲ್ಲೂ ಮುಂಬೈ ಬೀಚ್, ಸಾರ್ವಜನಿಕ ವಾಕಿಂಗ್ ತಾಣ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ.

MOST READ:ಕರೋನಾದಿಂದ ಬೈಕ್ ಕಳೆದುಕೊಂಡ ಯುವಕನಿಗೆ ಸರ್ ಪ್ರೈಸ್ ಗಿಫ್ಟ್ ನೀಡಿದ ಟಿವಿಎಸ್

ಕರೋನಾ ವೈರಸ್ ಆರ್ಭಟ ಹಿನ್ನೆಲೆ: ಎರಡು ಕಿ.ಮೀಗೂ ಹೆಚ್ಚಿನ ಪ್ರಯಾಣಕ್ಕೆ ಬಿತ್ತು ಬ್ರೇಕ್

ಜನರು ಶಾಪಿಂಗ್‌ ಅಥವಾ ಇನ್ನಾವುದೇ ಕೆಲಸಗಳಿಗೆ ಹೋಗುತ್ತಿದ್ದರೆ, ತಮ್ಮ ಮನೆಯಿಂದ 2 ಕಿ.ಮೀ ವ್ಯಾಪ್ತಿಯಲ್ಲಿ ಅಂತಹ ಕೆಲಸಗಳನ್ನು ಮಾಡಬೇಕಾಗುತ್ತದೆಂದು ಪೊಲೀಸರು ಹೇಳಿದ್ದಾರೆ. ಯಾವುದೇ ವ್ಯಕ್ತಿ ಈ ಸೂಚನೆಗಳನ್ನು ಉಲ್ಲಂಘಿಸಿದರೆ, ಆತನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಕರೋನಾ ವೈರಸ್ ಆರ್ಭಟ ಹಿನ್ನೆಲೆ: ಎರಡು ಕಿ.ಮೀಗೂ ಹೆಚ್ಚಿನ ಪ್ರಯಾಣಕ್ಕೆ ಬಿತ್ತು ಬ್ರೇಕ್

ಇದರ ಜೊತೆಗೆ ಪೊಲೀಸರು ಇನ್ನೂ ಹಲವು ಸೂಚನೆಗಳನ್ನು ನೀಡಿದ್ದಾರೆ. ಇದರನ್ವಯ ಅಗತ್ಯ ಕಾರ್ಯಗಳನ್ನು ಹೊರತುಪಡಿಸಿ ಎಲ್ಲಾ ರೀತಿಯ ಹೊರಾಂಗಣ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮುಚ್ಚಬೇಕೆಂದು ಸೂಚನೆ ನೀಡಿದ್ದಾರೆ. ಮನೆಯಿಂದ ಹೊರ ಬರುವ ಮುನ್ನ ಫೇಸ್ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ಕರೋನಾ ವೈರಸ್ ಆರ್ಭಟ ಹಿನ್ನೆಲೆ: ಎರಡು ಕಿ.ಮೀಗೂ ಹೆಚ್ಚಿನ ಪ್ರಯಾಣಕ್ಕೆ ಬಿತ್ತು ಬ್ರೇಕ್

ಮಾರುಕಟ್ಟೆ, ಸಲೂನ್ ಗಳಿಗೂ ಇದು ಅನ್ವಯಿಸಲಿದ್ದು, ತಮ್ಮ ಮನೆಯಿಂದ 2 ಕಿ.ಮೀ ವ್ಯಾಪ್ತಿಯಲ್ಲಿರುವ ಮಾರುಕಟ್ಟೆ ಹಾಗೂ ಸಲೂನ್ ಗಳಿಗೆ ಮಾತ್ರ ಭೇಟಿ ನೀಡುವಂತೆ ಸೂಚಿಸಿದ್ದಾರೆ. ಈ ವ್ಯಾಪ್ತಿಯಿಂದ ಹೊರಗೆ ಖರೀದಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕರೋನಾ ವೈರಸ್ ಆರ್ಭಟ ಹಿನ್ನೆಲೆ: ಎರಡು ಕಿ.ಮೀಗೂ ಹೆಚ್ಚಿನ ಪ್ರಯಾಣಕ್ಕೆ ಬಿತ್ತು ಬ್ರೇಕ್

ಕಚೇರಿಗಳಿಗೆ ತೆರಳುವವರಿಗೆ ಹಾಗೂ ವೈದ್ಯಕೀಯ ತುರ್ತು ಸೇವೆಗಳಿಗೆ ಮಾತ್ರ 2 ಕಿ.ಮೀಗೂ ಹೆಚ್ಚು ದೂರದ ಪ್ರಯಾಣಕ್ಕೆ ಅನುಮತಿ ನೀಡಲಾಗುವುದೆಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಇವುಗಳ ಜೊತೆಗೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

Article Published On: Monday, June 29, 2020, 16:32 [IST]
English summary
Police to seize vehicles in Mumbai for travelling more than 2 kms without valid reason. Read in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+