Just In
- 11 hrs ago
ಹೊಸ ನವೀಕರಣಗಳೊಂದಿಗೆ ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಜನಪ್ರಿಯ ಕಿಯಾ ಸೆಲ್ಟೋಸ್
- 13 hrs ago
ಇವಿಗಳ ಅಬ್ಬರ... 2023 ಜನವರಿಯಲ್ಲಿ ಅತಿ ಹೆಚ್ಚು ಮಾರಾಟ ಕಂಡ ಎಲೆಕ್ಟ್ರಿಕ್ ಸ್ಕೂಟರ್ಗಳಿವು!
- 13 hrs ago
ಕಡಿಮೆ ಬೆಲೆಯ ಟಾಟಾ ಎಲೆಕ್ಟ್ರಿಕ್ ಕಾರಿನ ವಿತರಣೆ ಪ್ರಾರಂಭ: 2,000 ಕಾರುಗಳ ಹಸ್ತಾಂತರ
- 14 hrs ago
ಮಾರುತಿ, ಟಾಟಾ ಕಾರುಗಳ ಪ್ರಾಬಲ್ಯದ ನಡುವೆ ದಾಖಲೆ ಮಟ್ಟದ ಮಾರಾಟವಾದ ಹ್ಯುಂಡೈ ಕ್ರೆಟಾ
Don't Miss!
- News
World Cancer Day 2023: ವಿಶ್ವ ಕ್ಯಾನ್ಸರ್ ದಿನ- ನಿಮ್ಮ ಜೀವನಶೈಲಿಯಲ್ಲಿರಲಿ ಈ ಬದಲಾವಣೆಗಳು
- Technology
ನಿಮ್ಮ ಮೊಬೈಲ್ನಲ್ಲಿ ಹೀಗೆ ಮಾಡಿ, ಸುಲಭವಾಗಿ ತಿಂಗಳ ಆದಾಯ ಗಳಿಸಿ!
- Movies
Lakshana Seria: ಶ್ವೇತಾಗೆ ಎಚ್ಚರಿಕೆ ಕೊಟ್ಟ ಭೂಪತಿ, ನಕ್ಷತ್ರ ಜೊತೆ ಚೆಲ್ಲಾಟ
- Sports
ಭಾರತ vs ಆಸ್ಟ್ರೇಲಿಯಾ: ಸುಂದರ್ ಸೇರಿ ನಾಲ್ವರು ಸ್ಪಿನ್ನರ್ಗಳು ನೆಟ್ ಬೌಲರ್ಗಳಾಗಿ ತಂಡಕ್ಕೆ ಸೇರ್ಪಡೆ
- Lifestyle
Horoscope Today 4 Feb 2023: ಶನಿವಾರ : ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅದಾನಿ ಕಳೆದುಕೊಂಡಿದ್ದು ಎಷ್ಟು ಲಕ್ಷ ಕೋಟಿ? ಕುಸಿಯುತ್ತಿವೆ ಷೇರುಗಳು- ಭಾರತದ ಶ್ರೀಮಂತನಿಗೆ ಮಂದೇನು ಕಾದಿದೆ?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮುಖ್ಯಮಂತ್ರಿ ವಿರುದ್ದ ಪ್ರತಿಭಟನೆ: ನಾಯಕಿ ಕಾರಿನಲ್ಲಿರುವಾಗಲೇ ಎತ್ತಾಕೊಂಡು ಹೋದ ಪೊಲೀಸರು
ವೈಎಸ್‌ಆರ್ ಪಕ್ಷದ ಅಧ್ಯಕ್ಷೆ ಮತ್ತು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರ ಸಹೋದರಿ ಶರ್ಮಿಳಾ ಅವರು ತಮ್ಮ ಟೊಯೋಟಾ ಫಾರ್ಚ್ಯೂನರ್ ಕಾರ್‌ನಲ್ಲಿ ಇರುವಾಗಲೇ ಪೊಲೀಸರು ಆ ಕಾರನ್ನು ಟೋ ಮಾಡಿಕೊಂಡು ಹೊತ್ತೊಯ್ದ ಘಟನೆ ತೆಲಂಗಾಣ ರಾಜಧಾನಿ ಹೈದರಾಬಾದ್‌ನಲ್ಲಿ ನಡೆದಿದೆ.
ಶರ್ಮಿಳಾ ಅವರ ವೈಎಸ್‌ಆರ್ ಪಕ್ಷವು, ತೆಲಂಗಾಣದ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರ ವಿರುದ್ಧ ಪಾದಯಾತ್ರೆಯನ್ನು ಕೈಗೊಂಡಿತ್ತು. ಕೆ.ಚಂದ್ರಶೇಖರ್ ರಾವ್ ನೇತೃತ್ವದ ಸರ್ಕಾರವು ಭ್ರಷ್ಟಾಚಾರ ನಡೆಸುತ್ತಿದೆ ಎಂದು ಆರೋಪಿಸಿ ಶರ್ಮಿಳಾ ಅವರು ತಮ್ಮ ಪಕ್ಷ ಮತ್ತು ಕಾರ್ಯಕರ್ತರೊಂದಿಗೆ ಪಾದಯಾತ್ರೆ ನಡೆಸುತ್ತಿದ್ದಾರೆ. ಇದೇ ಕಾರಣವಾಗಿ ಕೆಸಿಆರ್ ನಿವಾಸವಾದ ಪ್ರಗತಿ ಭವನದ ಕಡೆ ಮಂಗಳವಾರ ಆಯೋಜಿಸಲಾಗಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಶರ್ಮಿಳಾ ಅವರು ಸಹ ಪಾಲ್ಗೊಂಡಿದ್ದರು ಎಂದು ತಿಳಿದು ಬಂದಿದೆ.
ಇದಾದ ಬಳಿಕ ಶರ್ಮಿಳಾ ತಮ್ಮ ಕಾರು ಚಾಲನೆ ಮಾಡಲು ಪ್ರಾರಂಭಿಸಿದ ಕೂಡಲೇ ತೆಲಂಗಾಣ ಪೊಲೀಸರು ಅವರ ಕಾರನ್ನು ಟೋ ಮಾಡಿದ್ದಾರೆ. ಕಾರನ್ನು ಟೋ ಮಾಡಿ ಎಳೆದುಕೊಂಡು ಹೋಗುತ್ತಿರುವಾಗ ಶರ್ಮಿಳಾ ಅವರು ಕಾರಿನ ಒಳಗಡೆ ಇರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಜೊತೆಗೆ ಅವರ ಬೆಂಬಲಿಗರು ಘೋಷಣೆಗಳೊಂದಿಗೆ ಕಾರನ್ನು ಹಿಂಬಾಲಿಸುತ್ತಿರುವುದು ಸಹ ಕಾಣಬಹುದು. ಶರ್ಮಿಳಾ ಬೆಂಬಲಿಗರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಕೆಲವೇ ಕ್ಷಣದಲ್ಲಿ ವೈರಲ್ ಆಗಿದೆ.
ನಡೆದಿದ್ದೇನು?
ಮಾಹಿತಿ ಪ್ರಕಾರ ಪೊಲೀಸರು ಶರ್ಮಿಳಾ ಅವರನ್ನು ಅರೆಸ್ಟ್ ಮಾಡಲು ಬಂದಾಗ ವೈಎಸ್‌ಆರ್ ಪಕ್ಷದ ಬೆಂಬಲಿಗರು ಅವರನ್ನು ಸುತ್ತುವರೆದಿದ್ದರು. ಈ ಸಂಧರ್ಭದಲ್ಲಿ ಶರ್ಮಿಳಾ ಅವರು ಕಾರಿನ ಒಳಹೋಗಿ ಕುಳಿತ ನಂತರದಲ್ಲಿ ಕಾರಿನ ಡೋರನ್ನು ಲಾಕ್ ಮಾಡಿದರು. ಈ ಕಾರಣದಿಂದಾಗಿಯೇ ಪೊಲೀಸರು ಟೋಯಿಂಗ್ ವಾಹನವನ್ನು ಕರೆಸಿ ಶರ್ಮಿಳಾರ ಟೊಯೋಟಾ ಫಾರ್ಚ್ಯುನರ್ ಕಾರನ್ನು ಎತ್ತಾಕಿಕೊಂಡು ಹೋಗಿದ್ದಾರೆ. ಇನ್ನು ಘಟನೆಯಲ್ಲಿ ಕಾರಿನ ಗಾಜು ಸಹ ಹಾನಿಯಾಗಿರುವುದು ಕಾಣಬಹುದು.
ಕಾರ್ ಟೋ ಆಗುವುದಕ್ಕೂ ಮುನ್ನ ಶರ್ಮಿಳಾ, ತಮ್ಮ ಭಧ್ರತಾ ಸಿಬ್ಬಂದಿ ಮತ್ತು ಡ್ರೈವರನ್ನು ಕಾರಿನಿಂದ ಇಳಿಸಿದ್ದಾರೆ. ಎಸ್‌ಆರ್ ನಗರ ಪೊಲೀಸ್ ಸ್ಟೇಷನ್ ತಲುಪಿದ ನಂತರವೂ ಶರ್ಮಿಳಾ ಕಾರಿನಿಂದ ಕೆಳಗಿಳಿಯಲು ಪೊಲೀಸರು ಮನವೊಲಿಸಿದ್ದಾರೆ ಎಂದು ತಿಳಿದು ಬಂದಿದೆ. ನಾನು ಮತ್ತು ನಮ್ಮ ಪಕ್ಷದ ಕಾರ್ಯಕರ್ತರು ವಿವಿಧ ವರ್ಗಗಳ ಜನರು ಎದುರಿಸುತ್ತಿರುವ ತೊಂದರೆಗಳನ್ನು ಬಿಂಬಿಸಲು ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದೇವೆ. ಆದರೆ ಕೆಸಿಆರ್ ಮತ್ತು ಅವರ ಪಕ್ಷ ನಮ್ಮನ್ನು ತಡೆಯಲು ಪ್ರಯತ್ನಿಸುತ್ತಿದೆ ಎಂದು ಶರ್ಮಿಳಾ ಕಿಡಿ ಕಾರಿದ್ದಾರೆ.
ಡ್ರೈವರ್ ಇದ್ದಾಗ ಕಾರ್ ಟೋಯಿಂಗ್ ಕಾನೂನು ಬಾಹಿರ:
ಹೌದು, ಡ್ರೈವರ್ ಒಳಗಿರುವ ಸಂಧರ್ಭದಲ್ಲಿ ಟೋಯಿಂಗ್ ಮಾಡುವುದು ಭಾರತದಲ್ಲಿ ಕಾನೂನು ಬಾಹಿರವಾಗಿದೆ. ಈಗ ನಡೆದಿರುವ ಶರ್ಮಿಳಾ ಅವರ ಘಟನೆ ಇದೇ ಮೊದಲೇನಲ್ಲ. ಇದಕ್ಕೂ ಮುನ್ನ ದೇಶದ ಹಲವೆಡೆ ಇದೇ ರೀತಿಯ ಹಲವಾರು ಘಟನೆಗಳು ನಡೆದಿವೆ. ಈ ಹಿಂದೆ ಮುಂಬೈನಲ್ಲಿ ನಡೆದ ಘಟನೆಯೊಂದರಲ್ಲಿ ಕಾರಿನೊಳಗಡೆ ತಾಯಿ ತನ್ನ ಮಗುವಿಗೆ ಎದೆಹಾಲು ಉಣಿಸುತ್ತಿರುವಾಗಲೇ ಟ್ರಾಫಿಕ್ ಪೊಲೀಸ್ ಒಬ್ಬ ಆ ಕಾರನ್ನು ಟೋಯಿಂಗ್ ಮಾಡಿದ ಘಟನೆ ನಡೆದಿದೆ.
ಡ್ರೈವ್‌ಸ್ಪಾರ್ಕ್ ಅಭಿಪ್ರಾಯ:
ವೈಎಸ್ಆರ್ ಪಕ್ಷದ ನಾಯಕಿ ಕಾರಿನೊಳಗೆ ಇದ್ದಂತೆಯೇ ಕಾರನ್ನು ಟೋ ಮಾಡಿರುವುದು ನಿಜಕ್ಕೂ ಖಂಡನೀಯವಾದದ್ದು. ಈ ರೀತಿಯ ಘಟನೆ ಭಾರತದಲ್ಲಿ ಸಾಮಾನ್ಯವಾಗಿರಬಹುದು. ಆದರೆ ಒಬ್ಬ ಪಕ್ಷದ ನಾಯಕ/ನಾಯಕಿಯ ಬಳಿ ಈ ರೀತಿಯ ಕಾನೂನು ಬಾಹಿರ ರಾಜಕೀಯ ಘಟನೆ ನಡೆದಿರುವುದು ಭಾರತದಲ್ಲಿ ಇದೇ ಮೊದಲು. ಸಾಮಾನ್ಯವಾಗಿ ಬಹುತೇಕ ಎಲ್ಲಾ ಟೋ ಟ್ರಕ್ ಚಾಲಕರು ಮತ್ತು ಪೊಲೀಸರು ಈ ರೀತಿಯ ಘಟನೆಯನ್ನು ಸಾಧ್ಯವಾದಷ್ಟು ತಪ್ಪಿಸಲು ಪ್ರಯತ್ನಿಸುತ್ತಾರೆ.