ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ವಾಹನ ಸವಾರರು ಭಾರತದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ಸಾಮಾನ್ಯ ಸಂಗತಿಯಾಗಿದೆ. ಇವುಗಳಲ್ಲಿ ಕುಡಿದು ವಾಹನ ಚಾಲನೆ ಮಾಡುವುದು, ಮೊಬೈಲ್‍‍ನಲ್ಲಿ ಮಾತನಾಡುತ್ತಾ ವಾಹನ ಚಾಲನೆ ಮಾಡುವುದು, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಚಾಲನೆ ಮಾಡುವುದು, ಅತಿ ವೇಗದಲ್ಲಿ ಚಲಿಸುವುದು ಸೇರಿವೆ.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುತ್ತಿರುವುದೇ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ಭಾರತದಲ್ಲಿ ಪ್ರತಿವರ್ಷ 1.50 ಲಕ್ಷಕ್ಕೂ ಹೆಚ್ಚು ಜನರು ರಸ್ತೆ ಅಪಘಾತಗಳಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಇದನ್ನು ತಪ್ಪಿಸಲು ಸಂಚಾರಿ ಪೊಲೀಸರು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ಜನರು ಸಂಚಾರಿ ನಿಯಮಗಳು ಪಾಲಿಸುತ್ತಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದೆ. ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು, ನ್ಯಾಯಾಲಯಗಳಲ್ಲಿ ಪೊಲೀಸರ ವಿರುದ್ದವೇ ಸುಳ್ಳು ಕೇಸು ದಾಖಲಿಸುತ್ತಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ಸಮಸ್ಯೆಯನ್ನು ತಪ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ಅದರಂತೆ, ಉತ್ತರ ಪ್ರದೇಶದ ಬರೇಲಿ ವಿಭಾಗದಲ್ಲಿ, ಅಲ್ಲಿನ ಸರ್ಕಾರವು ಪೊಲೀಸರ ವಾಹನಗಳಲ್ಲಿ ಹೈ ರೆಸಲ್ಯೂಷನ್ ಕ್ಯಾಮೆರಾಗಳನ್ನು ಅಳವಡಿಸಲು ಆದೇಶಿಸಿದೆ. ಎಸ್‌ಎಚ್‌ಒ ಹಾಗೂ ಅದಕ್ಕಿಂತ ಹೆಚ್ಚಿನ ಪೊಲೀಸ್ ಅಧಿಕಾರಿಗಳ ಪೊಲೀಸ್ ವಾಹನಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ಎಲ್ಲಾ ಅನುಮಾನಾಸ್ಪದ ಚಟುವಟಿಕೆಗಳ ಮೇಲೆ ನಿಗಾವಹಿಸಲು ಈ ಕ್ಯಾಮೆರಾಗಳನ್ನು ಪೊಲೀಸ್ ವಾಹನಗಳಲ್ಲಿ ಅಳವಡಿಸಲಾಗುವುದು. ಈ ಕ್ಯಾಮೆರಾಗಳಿಂದ ಸಾಮಾಜಿಕ ವಿರೋಧಿ ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಅಧಿಕಾರಿಗಳಿಗೆ ಅನುಕೂಲವಾಗಲಿದೆ.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ಇದರ ಜೊತೆಗೆ, ನ್ಯಾಯಾಲಯದ ವಿಚಾರಣೆಯ ಸಮಯದಲ್ಲಿ ಈ ಕ್ಯಾಮರಾಗಳಲ್ಲಿರುವ ಫೂಟೇಜ್‍‍ಗಳನ್ನು ಸಾಕ್ಷಿಯಾಗಿ ಬಳಸಬಹುದು. ಈ ಕ್ಯಾಮೆರಾಗಳು 100 ಮೀಟರ್‌ಗಿಂತ ಹೆಚ್ಚು ದೂರದಿಂದ ಫೋಟೋ ಹಾಗೂ ವೀಡಿಯೊಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ಇದೇ ಮೊದಲ ಬಾರಿಗೆ ಬರೇಲಿ ವಲಯದಲ್ಲಿ ಇಂತಹ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಕ್ಯಾಮೆರಾಗಳ ಖರೀದಿಗೆ ರೂ.3 ಲಕ್ಷ ಖರ್ಚು ಮಾಡಲಾಗಿದೆ. ಸದ್ಯಕ್ಕೆ ಈ ಕ್ಯಾಮರಾಗಳನ್ನು ಪರೀಕ್ಷಿಸಲಾಗುತ್ತಿದ್ದು, ಯಶಸ್ವಿಯಾದರೆ, ಎಲ್ಲಾ ಸರ್ಕಾರಿ ವಾಹನಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ಇದರಿಂದಾಗಿ ಕುಡಿದು ವಾಹನ ಚಲಾಯಿಸುವವರು ಸಿಕ್ಕಿಬಿದ್ದರೆ ಸಾಕ್ಷ್ಯಗಳು ಸರಿಯಾಗಿರುತ್ತವೆ. ಚಾಲಕನ ವಿಡಿಯೋ ರೆಕಾರ್ಡ್ ಆದರೆ, ಪೊಲೀಸರು ನನ್ನ ವಿರುದ್ಧ ಉದ್ದೇಶಪೂರ್ವಕವಾಗಿ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ನ್ಯಾಯಾಲಯದಲ್ಲಿ ಹೇಳಲು ಸಾಧ್ಯವಾಗುವುದಿಲ್ಲ.

ಹೊಸ ಕ್ಯಾಮರಾಗಳನ್ನು ಹೊಂದಲಿವೆ ಪೊಲೀಸ್ ವಾಹನಗಳು

ಅಂತೆಯೇ, ಪೊಲೀಸರು ಅಪರಾಧಿಗಳ ವಾಹನಗಳನ್ನು ಬೆನ್ನಟ್ಟುವುದನ್ನೂ ಸಹ ರೆಕಾರ್ಡ್ ಮಾಡಲಾಗುತ್ತದೆ. ಇವುಗಳನ್ನು ನ್ಯಾಯಾಲಯದಲ್ಲಿ ಸಾಕ್ಷಿಯಾಗಿ ಸಲ್ಲಿಸಬಹುದು. ಈ ಕಾರಣಕ್ಕೆ ಸಂಚಾರಿ ಪೊಲೀಸರ ವಾಹನದ ಮುಂಭಾಗ ಹಾಗೂ ಹಿಂಭಾಗದಲ್ಲಿ ಕ್ಯಾಮೆರಾಗಳನ್ನು ಅಳವಡಿಸಲು ಆದೇಶಿಸಲಾಗಿದೆ.

ಸೂಚನೆ: ಈ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Police vehicles to have high resolution cameras. Read in Kannada.
Story first published: Wednesday, March 11, 2020, 12:45 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X