ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಭಾರತದಲ್ಲಿ ಕರೋನಾ ವೈರಸ್‌ ಎರಡನೇ ಅಲೆಯ ಅಬ್ಬರ ಇನ್ನೂ ಪೂರ್ತಿಯಾಗಿ ಕಡಿಮೆಯಾಗಿಲ್ಲ. ಆದರೂ ರಾಜಕೀಯ ಮುಖಂಡರು ಸೇರಿದಂತೆ ಕೆಲವು ಗಣ್ಯ ವ್ಯಕ್ತಿಗಳು ಇದರ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಿಲ್ಲ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಇಂತಹ ವ್ಯಕ್ತಿಗಳು ಪದೇ ಪದೇ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸುತ್ತಲೇ ಇದ್ದಾರೆ. ಅಂತಹವರಲ್ಲಿ ಧರ್ಮೇಂದ್ರ ಯಾದವ್ ಸಹ ಒಬ್ಬರು. ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ಮುಖಂಡರಾದ ಅವರು ಜೂನ್ 4ರಂದು ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾದರು.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಈ ವೇಳೆ ಧರ್ಮೇಂದ್ರ ಯಾದವ್ ಅವರನ್ನು ಅವರ ನೂರಾರು ಬೆಂಬಲಿಗರು ಸ್ವಾಗತಿಸಿದರು. ಹಲವು ವಾಹನಗಳಲ್ಲಿ ಅವರಿದ್ದ ವಾಹನದ ಜೊತೆ ಸಾಗಿದರು. ಈ ಮೂಲಕ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿದರು.

MOST READ: ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಈ ಸಂಬಂಧ 34 ಜನರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇಷ್ಟು ಮಾತ್ರವಲ್ಲದೇ 24 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ವಶ ಪಡಿಸಿಕೊಂಡಿರುವ ವಾಹನಗಳಲ್ಲಿ ಆಡಿ ಕ್ಯೂ 3 ಸಹ ಸೇರಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಈ ಕಾರಿನಲ್ಲಿ ಧರ್ಮೇಂದ್ರ ಯಾದವ್ ಸಂಚರಿಸುತ್ತಿದ್ದರು. ಧರ್ಮೇಂದ್ರ ಯಾದವ್'ರವರ ವಿರುದ್ಧ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕಳೆದ ಭಾನುವಾರ ಈ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು.

MOST READ: ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಧರ್ಮೇಂದ್ರ ಯಾದವ್ ಜೈಲಿನಿಂದ ಬಿಡುಗಡೆಯಾದ ನಂತರ ಅವರ ನೂರಾರು ಬೆಂಬಲಿಗರು ವಾಹನಗಳಲ್ಲಿ ಸಾಗುತ್ತಿರುವ ಘಟನೆಯ ವೀಡಿಯೊ ಸಾಮಾಜಿಕಜಾಲತಾಣಗಳಲ್ಲಿ ವೈರಲ್ ಆಗಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ವೈರಲ್ ಆದ ವೀಡಿಯೊ ಗಮನಿಸಿದ ಪೊಲೀಸರು ಕೂಡಲೇ ಕ್ರಮ ಕೈಗೊಂಡಿದ್ದಾರೆ. ಧರ್ಮೇಂದ್ರ ಯಾದವ್ ಅವರು ಸಾಗುತ್ತಿದ್ದಾಗ ಅವರ ಬೆಂಬಲಿಗರು ಘೋಷಣೆಗಳನ್ನು ಕೂಗಿದ್ದಾರೆ.

MOST READ: 10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಮೆರವಣಿಗೆಯಲ್ಲಿ ಭಾಗಿಯಾಗಿದ್ದ ವಾಹನಗಳ ನೋಂದಣಿ ಸಂಖ್ಯೆಗಳು ವೀಡಿಯೊದಲ್ಲಿ ದಾಖಲಾಗಿದ್ದವು. ಇದರ ಆಧಾರದ ಮೇಲೆ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಭಾರತದಲ್ಲಿ ಕರೋನಾ ವೈರಸ್‌ ಎರಡನೇ ಅಲೆಯ ಅಬ್ಬರ ನಿಧಾನವಾಗಿ ಕಡಿಮೆಯಾಗುತ್ತಿದೆ. ಆದರೆ ಕರೋನಾ ವೈರಸ್ ಹರಡುವಿಕೆ ಪೂರ್ತಿಯಾಗಿ ಕಡಿಮೆಯಾಗಿಲ್ಲ ಎಂಬುದನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು.

MOST READ: ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ಈಗ ಭಾರತದ ಕೆಲವು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಲಾಕ್‌ಡೌನ್ ಜಾರಿಯಲ್ಲಿದೆ. ಇದರಿಂದ ರಸ್ತೆಗಳಲ್ಲಿ ವಾಹನ ದಟ್ಟಣೆ ಕಡಿಮೆಯಾಗಿದೆ. ಇದೇ ವೇಳೆ ಲಾಕ್‌ಡೌನ್ ನಿಯಮಗಳನ್ನು ಉಲ್ಲಂಘಿಸಿ ಅನಗತ್ಯವಾಗಿ ಹೊರಗೆ ತಿರುಗಾಡುವವರ ವಾಹನಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಿದ್ದಾರೆ.

ಲಾಕ್‌ಡೌನ್ ನಿಯಮ ಉಲ್ಲಂಘಿಸಿ ಮೆರವಣಿಗೆಯಲ್ಲಿ ಸಾಗಿದ ರಾಜಕೀಯ ಮುಖಂಡನ ಬೆಂಬಲಿಗರು

ಅನಗತ್ಯವಾಗಿ ವಾಹನಗಳಲ್ಲಿ ಹೊರಗೆ ಬರದೇ ಇದ್ದರೆ ಪೊಲೀಸರ ಕ್ರಮಗಳಿಂದ ಮಾತ್ರವಲ್ಲದೆ ಕರೋನಾ ವೈರಸ್‌ ಹರಡುವುದರಿಂದಲೂ ಪಾರಾಗಬಹುದು. ಒಂದು ವೇಳೆ ಹೊರ ಹೋಗುವ ಅಗತ್ಯ ಎದುರಾದರೆ ಸುರಕ್ಷತಾ ಕ್ರಮಗಳನ್ನು ಅನುಸರಿಸಿ.

ಚಿತ್ರಕೃಪೆ: ಎಂಎಸ್‌ಎಸ್ ನ್ಯೂಸ್ 24X7

Most Read Articles

Kannada
English summary
Politician followers conducts road show in UP, vehicles seized. Read in Kannada.
Story first published: Wednesday, June 9, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X