ನಡುರಸ್ತೆಯಲ್ಲಿ ಪೊಲೋ ಜಿಟಿ ಮತ್ತು ಮಿನಿ ಕೂಪರ್ ರೇಸ್ ವಿಡಿಯೋ ವೈರಲ್‌: ಹೊತ್ತಿ ಉರಿದ ಪೋಲೋ!

ಸಾರ್ವಜನಿಕ ರಸ್ತೆಗಳಲ್ಲಿ ಬೈಕ್‌ ಅಥವಾ ಕಾರ್‌ ಯಾವುದೇ ವಾಹನವಾಗಿರಬಹುದು, ರೇಸ್‌ ಮಾಡುವುದು ತಪ್ಪು ಮತ್ತು ಇದು ಶಿಕ್ಷಾರ್ಹ ಅಪರಾಧವೂ ಹೌದು. ನಮ್ಮಲ್ಲಿ ಬಹಳ ಮಂದಿ ಈ ವಿಷಯ ಗೊತ್ತಿದ್ದರೂ ಬೇಕು ಬೇಕು ಎಂದೇ ಈ ತಪ್ಪನ್ನು ಮಾಡುತ್ತಿರುತ್ತಾರೆ ಎಂಬುದು ಕಹಿಯಾದ ಸತ್ಯ.

ಇಲ್ಲೊಂದು ಕಡೆ ಇದೇ ರೀತಿ ಎರಡು ಕಾರುಗಳ ನಡುವೆ ರೇಸ್‌ ನಡೆಸಿದ ಘಟನೆಯೊಂದು ನಡೆದಿದ್ದು, ಅದು ದುರಂತದಲ್ಲಿ ಅಂತ್ಯಗೊಂಡಿದೆ. ಕೇರಳದ ಕೊಚ್ಚಿ ಎಂಬಲ್ಲಿ ಈ ಘಟನೆ ನಡೆದಿದ್ದು ಫೋಕ್ಸ್‌ವ್ಯಾಗನ್‌ ಪೋಲೋ ಜಿಟಿ ಮತ್ತು ಮಿನಿ ಕೂಪರ್‌ (Mini Cooper) ನಡುವೆ ರೇಸ್‌ ನಡೆದಿದೆ ಎಂದು ತಿಳಿದು ಬಂದಿದೆ.

Polo GT Catches Fire In A Race

ಘಟನೆಯಲ್ಲಿ ಪೋಲೋ ಜಿಟಿ ಕಾರಿಗೆ ಬೆಂಕಿ ತಗುಲಿ ಸುಟ್ಟು ಕರಕಲಾಗಿದ್ದು, ಪೊಲೀಸರು ಮತ್ತು ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸುವ ಕೆಲಸವನ್ನು ಮಾಡಿದ್ದಾರೆ. ಏಶಿಯಾನೆಟ್‌ ಎಂಬ ನ್ಯೂಸ್‌ ಚಾನೆಲ್‌ ಘಟನೆಗೆ ಸಂಭಂಧಿಸಿದಂತೆ ತಮ್ಮ ಯ್ಯೂಟ್ಯೂಬ್‌ ಚಾನಲ್‌ನಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ವರದಿಗಳ ಪ್ರಕಾರ ಘಟನೆಯು ಕೊಚ್ಚಿಯ ಮನಂಪಲ್ಲಿ ನಗರದಲ್ಲಿ ಘಟನೆ ಸಂಭವಿಸಿದ್ದು, ಘಟನೆಯ ವಿಡಿಯೋ ರಸ್ತೆ ಬದಿಯಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದು, ಕಾರುಗಳು ಶರವೇಗದಲ್ಲಿ ಸಣ್ಣ ಹೆದ್ದಾರಿಯಲ್ಲಿ ಮುನ್ನುಗ್ಗುತ್ತಿರುವುದನ್ನು ಕಾಣಬಹುದಾಗಿದೆ. ಇನ್ನು ಎರಡೂ ಕಾರುಗಳ ಡ್ರೈವರ್‌ಗಳು ಅಪರಿಚಿತರಾಗಿದ್ದು ವಿನಾಃ ಕಾರಣ ರೇಸ್‌ ಮಾಡಿದ್ದಾರೆ ಎಂದು ವರದಿಗಳು ತಿಳಿಸಿವೆ.

Polo GT Catches Fire In A Race

ರೇಸ್‌ ವೇಳೆ ಮಿನಿ ಕೂಪರ್‌ ಕಾರನ್ನು ಹಿಂದೊತ್ತಲು ವೇಗವಾಗಿ ಚಲಿಸುತ್ತಿದ್ದ ಪೋಲೋ ಜಿಟಿ, ರಸ್ತೆ ಮೂಲೆಯಲ್ಲಿ ಟರ್ನ್‌ ತೆಗೆದುಕೊಳ್ಳುವ ವೇಳೆ ಗುದ್ದಿ, ಬೆಂಕಿ ಹಿಡಿದಿದೆ. ಅದೃಷ್ಟವಶಾತ್‌ ಕಾರಿನಲ್ಲಿದ್ದ, ಡ್ರೈವರ್‌ ಮತ್ತು ಸಹ ಪ್ರಯಾಣಿಕರು ಕಾರಿಗೆ ಸಂಪೂರ್ಣವಾಗಿ ಬೆಂಕಿ ಹಿಡಿದು ಸುಟ್ಟು ಕರಕಲಾಗುವ ಮುನ್ನ ಕಾರಿನಿಂದ ಹೊರಬರುವಲ್ಲಿ ಸಫಲರಾಗಿದ್ದಾರೆ.

ಪನಂಪಳ್ಳಿ ನಗರದ ಪಕ್ಕದಲ್ಲಿರುವ ಸೇತುವೆಗೆ ಪೊಲೋ ಜಿಟಿ ಕಾರು ಗುದ್ದಿದ್ದು, ಕಾರಿನ ಮಾಲೀಕನನ್ನು ಪನಂಪಳ್ಳಿ ಮೂಲದವರಾದ ಅಬ್ದುಲ್‌ ಎಂದು ಗುರುತಿಸಲಾಗಿದೆ. ಸೇತುವೆಗೆ ಗುದ್ದಿದ ಕೂಡಲೇ ಕಾರಿನ ಬೋನೆಟ್‌ನಿಂದ ಹೊಗೆ ಸಹಿತ ಬೆಂಕಿ ಕಾಣಿಸಿಕೊಂಡಿದ್ದು ಕಾರಿಗೆ ಕ್ಷಣ ಮಾತ್ರದಲ್ಲಿ ಬೆಂಕಿ ಹಿಡಿದಿದೆ ಎಂದು ವರದಿಗಳು ತಿಳಿಸಿವೆ.

ಇನ್ನು ಘಟನೆಗೆ ಸಂಭಂಧಿಸಿದಂತೆ ಪೊಲೀಸ್‌ ಕೇಸ್ ದಾಖಲಿಸಿಕೊಂಡಿದ್ದು ತನಿಖೆ ಆರಂಭಿಸಿದ್ದಾರೆ. ತನಿಖೆಯ ಪ್ರಕಾರ ಮಿನಿ ಕೂಪರ್‌ ಮತ್ತು ಪೊಲೋ ಜಿಟಿ, ಈ ಎರಡೂ ಕಾರಿನ ಡ್ರೈವರ್‌ಗಳು ಸಂಪೂರ್ಣವಾಗಿ ಅಪರಿಚಿತರಾಗಿದ್ದಾರೆ. ಇವರುಗಳು ಓವರ್‌ ಟೇಕ್‌ ಮಾಡಲು ಮತ್ತೊಬ್ಬ ಡ್ರೈವರ್‌ ನಿರಾಕರಿಸಿದ್ದೇ ಘಟನೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತವಾಗಿ ಆಟೋಮೊಬೈಲ್ ಸಂಬಂಧಿಸಿದ ಸುದ್ದಿಗಳನ್ನು ನೀಡುತ್ತದೆ. ಜೊತೆಗೆ ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ನಿಮಗೆ ನಮ್ಮ ಯಾವುದೇ ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಮರೆಯದಿರಿ.

Article Published On: Monday, June 19, 2023, 10:49 [IST]
English summary
Polo gt catches fire in a race between polo gt and mini cooper
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+