ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಜರ್ಮನಿಯಲ್ಲಿರುವ ನೂರ್‌ಬರ್ಗ್‌ರಿಂಗ್ ರೌಂಡ್‌ಬೌಟ್ ಕಾರುಗಳಿಗೆ ಹಾಗೂ ಬೈಕ್‌ಗಳಿಗೆ ಹೊಸ ದಾಖಲೆಗಳನ್ನು ನಿರ್ಮಿಸಲು ಸೂಕ್ತ ಸ್ಥಳವಾಗಿದೆ. ನೂರ್‌ಬರ್ಗ್‌ರಿಂಗ್ ರೌಂಡ್‌ಬೌಟ್ 20.8 ಕಿ.ಮೀ ಸುತ್ತಳತೆಯನ್ನು ಹೊಂದಿದೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಈ ನೂರ್‌ಬರ್ಗ್‌ರಿಂಗ್ ರೌಂಡ್‌ಬೌಟ್ ರಸ್ತೆಯಲ್ಲಿ ಚಲಿಸುವ ಪರವಾನಗಿ ಪಡೆದ ಕಾರುಗಳ ಲ್ಯಾಪ್ ದಾಖಲೆಗಳು ಯಾವಾಗಲೂ ಬೆರಗುಗೊಳಿಸುತ್ತವೆ. ಇತ್ತೀಚಿಗೆ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು ಈ ರೌಂಡ್‌ಬೌಟ್'ನಲ್ಲಿ ಹೊಸ ಲ್ಯಾಪ್ ರೆಕಾರ್ಡ್ ಸೃಷ್ಟಿಸಿದೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಈ ಪೋರ್ಷೆ ಕಾರಿನ ಲ್ಯಾಪ್ ಸಮಯವನ್ನು 6: 43.300ಗಳಿಗೆ ನಿಗದಿಪಡಿಸಲಾಗಿದೆ. ವಿಶ್ವಾದ್ಯಂತ ಮಾರಾಟಕ್ಕೆ ಅನುಮತಿಸಲಾದ ಕಾರುಗಳಿಗೆ ಹೋಲಿಸಿದರೆ 911 ಜಿಟಿ 2 ಆರ್‌ಎಸ್ ಕಾರಿನ ಈ ಲ್ಯಾಪ್ ಅವಧಿ ಬಹಳ ಕಡಿಮೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಈ ನೂರ್‌ಬರ್ಗ್‌ರಿಂಗ್ ರೌಂಡ್‌ಬೌಟ್'ನ ಹಿಂದಿನ ಲ್ಯಾಪ್ ದಾಖಲೆ 6:48.047ಗಳಾಗಿತ್ತು. ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು 4.747 ಸೆಕೆಂಡುಗಳಿಂದ ಹಳೆಯ ಲ್ಯಾಪ್ ದಾಖಲೆಯನ್ನು ಮುರಿದಿದೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು ಸರಾಸರಿ 185.87 ಕಿ.ಮೀ ವೇಗವನ್ನು ಹೊಂದಿದೆ. ಈ ಹಿಂದಿನ ಲ್ಯಾಪ್ ದಾಖಲೆಯನ್ನು ಮರ್ಸಿಡಿಸ್-ಎಎಂಜಿ ಜಿಟಿ ಬ್ಲ್ಯಾಕ್ ಸೀರೀಸ್ ಕಾರು ಹೊಂದಿತ್ತು.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರ್ ಅನ್ನು ಪೋರ್ಷೆಯ ಅಭಿವೃದ್ಧಿ ಚಾಲಕ ಲಾರ್ಸ್ ಕೆರ್ನ್ ನಿರ್ವಹಿಸುತ್ತಿದ್ದಾರೆ. ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು ವಿಶೇಷವಾಗಿ ವಿನ್ಯಾಸಗೊಳಿಸಲಾದ ಚಾಸಿಸ್, ಏರೋಡೈನಾಮಿಕ್ ಹಾಗೂ ಬ್ರೇಕ್ ಯುನಿಟ್ ಸೇರಿದಂತೆ ಹಲವಾರು ಟೆಕ್ನಿಕಲ್ ಯುನಿಟ್'ಗಳನ್ನು ಹೊಂದಿದೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರಿನಲ್ಲಿ ಹಗುರವಾದ ಮ್ಯಾಂಗನೀಸ್ ಅಲಾಯ್ ವ್ಹೀಲ್‌, ಮಿಚೆಲಿನ್ ಪೈಲಟ್ ಸ್ಪೋರ್ಟ್ ಕಪ್ 2 ಆರ್ ಟಯರ್‌ಗಳನ್ನು ಸೇರಿದಂತೆ ವೈಸಾಜ್ ಪ್ಯಾಕೇಜ್‌ಗಳನ್ನು ನೀಡಲಾಗಿದೆ. ಈ ಪ್ಯಾಕೇಜ್'ನಿಂದ 11.4 ಕೆ.ಜಿ ತೂಕ ಉಳಿತಾಯವಾಗುತ್ತದೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರ್ ಅನ್ನು 2018ರಲ್ಲಿ ಭಾರತದಲ್ಲಿ ಬಿಡುಗಡೆಗೊಳಿಸಲಾಯಿತು. ಈ ಕಾರಿನ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ.3.88 ಕೋಟಿಗಳಾಗಿದೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಪೋರ್ಷೆ 911 ಜಿಟಿ 2 ಆರ್‌ಎಸ್ ಭಾರತದಲ್ಲಿ ಬಿಡುಗಡೆಯಾದ ಅತಿ ದುಬಾರಿ ಬೆಲೆಯ ಪೋರ್ಷೆ ಕಾರ್ ಆಗಿದೆ. ಈ ಕಾರಿನಲ್ಲಿ 3.8-ಲೀಟರ್, ಟರ್ಬೋಚಾರ್ಜ್ಡ್, ಫ್ಲಾಟ್-ಸಿಕ್ಸ್ ಎಂಜಿನ್‌ ಅಳವಡಿಸಲಾಗಿದೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಈ ಎಂಜಿನ್ 700 ಬಿಹೆಚ್‌ಪಿ ಪವರ್ ಹಾಗೂ 750 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಹಿಂದಿನ ವ್ಹೀಲ್'ಗಳಿಗೆ ಪವರ್ ಕಳುಹಿಸುತ್ತದೆ. ಈ ಎಂಜಿನ್'ನೊಂದಿಗೆ 7 ಸ್ಪೀಡ್ ಡ್ಯುಯಲ್ ಕ್ಲಚ್ ಆಟೋಮ್ಯಾಟಿಕ್ ಗೇರ್‌ಬಾಕ್ಸ್ ಜೋಡಿಸಲಾಗಿದೆ.

ಹೊಸ ಲ್ಯಾಪ್ ದಾಖಲೆ ಸೃಷ್ಟಿಸಿದ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು

ಸ್ಟ್ಯಾಂಡರ್ಡ್ ಪೋರ್ಷೆ 911 ಜಿಟಿ 2 ಆರ್‌ಎಸ್ ಕಾರು 2.8 ಸೆಕೆಂಡುಗಳಲ್ಲಿ 0-100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 340 ಕಿ.ಮೀಗಳಾಗಿದೆ.

Most Read Articles

Kannada
English summary
Porsche 911 GT2 RS creates new lap record in Nurburgring. Read in Kannada.
Story first published: Friday, June 25, 2021, 13:51 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X