2 ಕೋಟಿ ರೂ. ಕಾರು ಸುಟ್ಟು ಭಸ್ಮ... ಈ ಸ್ಪೋರ್ಟ್ಸ್ ಕಾರುಗಳನ್ನು ನಿಭಾಯಿಸುವುದೇ ಕಷ್ಟ
ವೇಗವಾಗಿ ಬಂದ ಐಷಾರಾಮಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡು ಸುಟ್ಟು ಭಸ್ಮವಾಗಿರುವ ಘಟನೆ ಹರಿಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ನಡೆದಿದೆ. ಮರಕ್ಕೆ ಡಿಕ್ಕಿಯಾದ ಕೂಡಲೇ ಚಾಲಕ, ಪ್ರಯಾಣಿಕ ಸ್ಥಳದಿಂದ ಪರಾರಿಯಾಗಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು ವರದಿಯಾಗಿದೆ.
ಕಾರು ಗಾಲ್ಫ್ ಕೋರ್ಸ್ ರಸ್ತೆಯ ಸೆಕ್ಟರ್ 56 ರಿಂದ ಬಂದು ಸಿಕಂದರಪುರ ಕಡೆಗೆ ಹೋಗುತ್ತಿತ್ತು. ಸೆಕ್ಟರ್ 27ರಲ್ಲಿ ಡಿವೈಡರ್‌ಗೆ ಮೊದಲು ಡಿಕ್ಕಿ ಹೊಡೆದ ಬಳಿಕವೇ ಸರ್ವೀಸ್ ಲೇನ್ ಮೇಲೆ ಬಿದ್ದಿದೆ. ಸರ್ವಿಸ್ ಲೇನ್ ಮೇಲೆ ಬಿದ್ದ ವಾಹನ ಮರಕ್ಕೆ ಡಿಕ್ಕಿ ಹೊಡೆದು ದೂರ ಹೋಗಿದ್ದು, ಪಕ್ಕಕ್ಕೆ ಹೋದ ತಕ್ಷಣ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ.

ಬಳಿಕ ಕೆಂಪು ಬಣ್ಣದ ಪೋರ್ಷೆ ಕಾರು ಸಂಪೂರ್ಣ ಬೆಂಕಿಗೆ ಆಹುತಿಯಾಗಿದೆ. ಪೋರ್ಷೆ ಜರ್ಮನಿ 911 ಕಾರು ಸ್ಪೋರ್ಟ್ಸ್ ಕಾರ್ ಆಗಿದ್ದು, ಇದರ ಬೆಲೆ ಸುಮಾರು 2 ಕೋಟಿ ರೂ. (ಎಕ್ಸ್ ಶೋರೂಂ) ಎಂದು ಅಂದಾಜಿಸಲಾಗಿದೆ. ಘಟನೆ ಸ್ಥಳಕ್ಕೆ ಭೇಟಿ ನೀಡಿದ ಅಗ್ನಿಶಾಮಕ ಸಿಬ್ಬಂದಿ, ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಪೋರ್ಷೆ ಜರ್ಮನಿ 911 ಅಪಘಾತದ ಘರ್ಷಣೆಯು ತೀರಾ ಭೀಕರವಾಗಿದ್ದ ಕಾರಣ, ಕಾರಿನ ಭಾಗಗಳು ಹಾರಿಹೋಗಿವೆ. ಅವುಗಳಲ್ಲಿ ಹಲವು ಅಪಘಾತದ ಸ್ಥಳದಿಂದ ದೂರದಲ್ಲಿ ಬಿದ್ದಿದ್ದವು. ಅಪಘಾತದ ಸಮಯದಲ್ಲಿ ಪೋರ್ಷೆ 911 ರ ಚಾಲಕ ಕುಡಿದು ಅನಿಯಂತ್ರಿತ ವೇಗದಲ್ಲಿ ಚಾಲನೆ ಮಾಡಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿರುವುದಾಗಿ ಸ್ಥಳೀಯ ಮಾಧ್ಯಗಳು ವರದಿ ಮಾಡಿವೆ.

ಮದ್ಯದ ಅಮಲಿನಲ್ಲಿ ಅಪಘಾತ: ಅಪಘಾತದ ಸಮಯದಲ್ಲಿ, ಪೋರ್ಷೆ 911 ರೊಳಗೆ ಇಬ್ಬರು ವ್ಯಕ್ತಿಗಳಿದ್ದರು, ಇಬ್ಬರೂ ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರೂ ಬೆಂಕಿ ಹೊತ್ತಿಕೊಂಡ ಕೂಡಲೇ ಕಾರಿನಿಂದ ತಪ್ಪಿಸಿಕೊಂಡು ಅಪಘಾತ ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಘಾತ ಸ್ಥಳದಲ್ಲಿ ಪತ್ತೆಯಾದ ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ, ಕಾರು ಚಂಡೀಗಢದಲ್ಲಿ ನೋಂದಾಯಿಸಲ್ಪಟ್ಟಿದೆ ಎಂದು ತಿಳಿದುಬಂದಿದೆ.
ಅಪಘಾತ ಸಂಭವಿಸುವ ಮೊದಲು ಸಿಕಂದರ್ ಪುರ ಕಡೆಗೆ ಹೋಗುತ್ತಿತ್ತು ಎಂದು ನಿರ್ಧರಿಸಲಾಗಿದೆ. ಕಾರಿನಲ್ಲಿ ಪ್ರಯಾಣಿಸಿದ್ದ ಇಬ್ಬರು ವ್ಯಕ್ತಿಗಳು ಎಲ್ಲಿದ್ದಾರೆ ಎಂಬುದು ತಿಳಿದಿಲ್ಲ, ಆದರೆ ಗುರುಗ್ರಾಮ್ ಪೊಲೀಸರು ಕಾರಿನ ನೋಂದಣಿ ಸಂಖ್ಯೆಯನ್ನು ಆಧರಿಸಿ ಪ್ರಕರಣವನ್ನು ತನಿಖೆ ನಡೆಸುತ್ತಿದ್ದಾರೆ. ಕಾರಿನ ವಿಷಯಕ್ಕೆ ಬಂದರೆ ವಿವಿಧ ಕಾರಣಗಳಿಂದಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡಿರಬಹುದು ಎಂದು ಹೇಳಲಾಗುತ್ತದೆ.
ನಮ್ಮ ಅನಿಸಿಕೆಯ ಪ್ರಕಾರ ಹೆಚ್ಚಿನ ವೇಗದಲ್ಲಿ ಅಪಘಾತ ನಡೆದಾಗ ಇಂಧನ ಮಾರ್ಗದಲ್ಲಿ ಸೋರಿಕೆಯನ್ನು ಉಂಟುಮಾಡಬಹುದು. ಇದರಿಂದ ಬೆಂಕಿ ತಗುಲಲು ಕಾರಣವಾಗಬಹುದು. ಅಪಘಾತದ ಬಗ್ಗೆ ಪೊಲೀಸರು ಇನ್ನೂ ತನಿಖೆ ನಡೆಸುತ್ತಿದ್ದು, ಅಪಘಾತದ ಹಿಂದಿನ ನಿಖರವಾದ ಕಾರಣ ತಿಳಿದುಬರಬೇಕಿದೆ. ಆದರೆ ದುಬಾರಿ ಕಾರುಗಳನ್ನು ಹೊಂದಿರುವವರ ಪ್ರಕರಣಗಳಲ್ಲಿ, ಸಂಪೂರ್ಣ ವಿವರಗಳು ಹೊರಬರುವುದು ಅನುಮಾನವಿದೆ.
ಡ್ರೈವ್‌ಸ್ಪಾರ್ಕ್ ಕನ್ನಡ ವೆಬ್‌ಸೈಟ್ ತ್ವರಿತ ಆಟೋಮೊಬೈಲ್ ಸಂಬಧಿಸಿದ ಸುದ್ದಿಗಳನ್ನು ಒದಗಿಸುತ್ತದೆ. ಇನ್ನು ಸೋಷಿಯಲ್ ಮೀಡಿಯಾಗಳ ಮೂಲಕ ತಕ್ಷಣವೇ ಓದುಗರೊಂದಿಗೆ ಸುದ್ದಿಗಳನ್ನು ಶೇರ್ ಮಾಡುತ್ತೇವೆ. ಡ್ರೈವ್ ಸ್ಪಾರ್ಕ್ ಕನ್ನಡ ವೆಬ್ ಸೈಟ್‌ನಲ್ಲಿ ಪ್ರಚಾರವಾಗಿರುವ ಇತ್ತೀಚಿನ ಕಾರು, ಬೈಕ್ ಸುದ್ದಿ, ಟೆಸ್ಟ್ ಡ್ರೈವ್ ವರದಿಗಳು ಮತ್ತು ವೀಡಿಯೊಗಳನ್ನು ಪಡೆಯಲು ನಮ್ಮ ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ಯೂಟ್ಯೂಬ್ ಪೇಜ್‌ಗಳೊಂದಿಗೆ ಫಾಲೋ ಮಾಡಿ. ಸುದ್ದಿ ಇಷ್ಟವಾದರೆ ಲೈಕ್, ಕಾಮೆಂಟ್ ಮಾಡುವುದನ್ನು ಕೂಡ ಮರೆಯದಿರಿ. ಜೊತೆಗೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.


Click it and Unblock the Notifications