ಮಳೆ ಅವಾಂತರ: JCB ಮೂಲಕ ಗಂಭೀರ್ಣಿ ಮಹಿಳೆ ರಕ್ಷಣೆ: ಮೆಚ್ಚಬೇಕು ಸ್ಥಳಯರ ಸಹಾಯ

ದೇಶದ ಹಲವೆಡೆ ವರುಣನ ಅಬ್ಬರ ಜೋರಾಗಿದೆ. ತೆಲಂಗಾಣದಲ್ಲಿ ಧಾರಾಕಾರ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಇತ್ತೀಚೆಗೆ ತೆಲಂಗಾಣದಲ್ಲಿ ಭಾರೀ ಮಳೆಯ ನಡುವೆ ಮಹಿಳೆಯೊಬ್ಬಳಿಗೆ ಹೆರಿಗೆ ನೋವು ಕಾಣಿಸಿಕೊಂಡಿತು. ಹೆರಿಗೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ಸ್ಥಳೀಯರ ಸಹಾಯದಿಂದ ಕಷ್ಟಪಟ್ಟು ಜೆಸಿಬಿ (JCB) ವಾಹನದ ಮೂಲಕ ನದಿ ದಾಟಿಸಿದ್ದಾರೆ.

ತೆಲಂಗಾಣದ ಜಗಿತ್ಯಾಲ ಜಿಲ್ಲೆಯ ಮೇಡಿಪಲ್ಲಿ ಮಂಡಲದ ರಾಜಲಿಂಗಂಪೇಟೆಯಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ಭಾರೀ ಮಳೆಯ ನಡುವೆ ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಕುಟುಂಬಸ್ಥರು ಆಕೆಯನ್ನು ಹತ್ತಿರದ ಕೋರುಟ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲು ಪ್ರಯತ್ನ ಮಾಡಿದರು. ಆದರೆ ಭಾರೀ ಮಳೆಯಿಂದ ಗ್ರಾಮದ ಸಮೀಪ ರಸ್ತೆ ಜಲಾವೃತವಾಗಿತ್ತು. ರಸ್ತೆಗೆ ಅಡ್ಡಲಾಗಿ ನೀರು ಹರಿಯುತ್ತಿದ್ದರಿಂದ ರಸ್ತೆ ದಾಟಲು ಸಾಧ್ಯವಾಗುವುದಿಲ್ಲ.

JCB

ಇದರಿಂದ ಕುಟುಂಬಸ್ಥರು ಆಕೆಯನ್ನು ರಸ್ತೆ ಏಕೆ ದಾಟಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹೇಗೆ ಎಂಬುವುದನ್ನು ಯೋಜಿಸಿ ಚಿಂತೆಗೀಡಾಗುತ್ತಾರೆ. ನಂತರ ಅಸಹಾಯಕರಾದ ಗ್ರಾಮ ಪಂಚಾಯತಿವರನ್ನು ಸಂಪರ್ಕಿಸಿದ್ದಾರೆ. ನಂತರ ಅವರು ಗಂಭೀರ್ಣಿ ಮಹಿಳೆಯನ್ನು ಹೇಗೆ ರಸ್ತೆ ದಾಟಿಸುವುದು ಎಂದು ಯೋಚನೆ ಮಾಡುತ್ತಾರೆ. ನಂತರ ಅವರು ಜೆಸಿಬಿ ವಾಹನದ ಮೂಲಕ ಗಂಭೀರ್ಣಿ ಮಹಿಳೆಯನ್ನು ಸಾಗಿಸಬಹುದು ಎಂದು ನಿರ್ಧರಿಸುತ್ತಾರೆ.

ನಂತರ ಜೆಸಿಬಿ ವಾಹನ ವ್ಯವಸ್ಥೆ ಮಾಡುವ ಮೂಲಕ ಮಹಿಳೆಗೆ ರಸ್ತೆ ದಾಟಲು ಸಹಾಯ ಮಾಡಿದರು. ಜಿಸಿಪಿ ವಾಹನದ ಮೂಲಕ ಸಾಗಿದ ಬಳಿಕ ರಸ್ತೆಯ ಇನ್ನೋಂದು ಬದಿಯಲ್ಲಿ ಕರೆದುಕೊಂಡು ಹೋಗಲು ಆಂಬ್ಯುಲೆನ್ಸ್ ಸಿಧವಾಗಿತ್ತು. ನಂತರಸಿ ದ್ಧವಾಗಿದ್ದ ಆಂಬ್ಯುಲೆನ್ಸ್‌ನಲ್ಲಿ ಆಕೆಯನ್ನು ಕೋರುಟ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ವರದಿಗಳ ಪ್ರಕಾರ, ಆಕೆಯು ಆಸ್ಪತ್ರೆಯಲ್ಲಿ ಸುರಕ್ಷಿತವಾಗಿದ್ದಾರೆ.

JCB

ಮಳೆಗಾಲದಲ್ಲಿ (Monsoon ) ವಾಹನ ಚಲಾಯಿಸುವುದು ಹೆಚ್ಚು ಕಷ್ಟಕರವಾಗಿದೆ. ಅಲ್ಲದೇ ಅಪಾಯಕಾರಿಯಾಗಿ ಕೂಡ ಹೌದು. ಕಡಿಮೆ ಗೋಚರತೆ, ಜಾರುವ ರಸ್ತೆಗಳು ಮತ್ತು ನೀರು ಜಲಾವೃತವಾದ ರಸ್ತೆಗಳಲ್ಲಿ ಚಲಿಸುವುದು ಅಪಾಯಕಾರಿ. ಆದ್ದರಿಂದ, ನೀವು ಮಳೆಗಾಲದಲ್ಲಿ ಸುರಕ್ಷಿತವಾಗಿ ವಾಹನ ಚಾಲನೆ ಮಾಡಲು ಇಲ್ಲಿ ಕೆಲವು ಟಿಪ್ಸ್ ಗಳಿವೆ.ನೀರಿನ ಆಳವನ್ನು ನಿರ್ಣಯಿಸಲು ಕಷ್ಟವಾಗುವುದರಿಂದ ಜಲ ಪ್ರವಾಹಕ್ಕೆ ಒಳಗಾದ ರಸ್ತೆಗಳ ಕಡೆ ಹೋಗಬೇಡಿ.

ನಿಮ್ಮ ಕಾರು ಪ್ರವಾಹಕ್ಕೆ ಸಿಲುಕಿದ ರಸ್ತೆಯಲ್ಲಿ ನಿಂತರೆ, ಎಂಜಿನ್ ಅನ್ನು ಸ್ಟ್ರಾಟ್ ಮಾಡುವುದನ್ನು ಪ್ರಯತ್ನಿಸಬೇಡಿ. ಏಕೆಂದರೆ ನೀರು ಎಂಜಿನ್‌ಗೆ ಪ್ರವೇಶಿಸಬಹುದು ಮತ್ತು ಕೆಲವು ಗಂಭೀರ ಹಾನಿಯನ್ನು ಉಂಟುಮಾಡಬಹುದು. ಇಂಥ ಸಂದರ್ಭದಲ್ಲಿ ವಾಹನಗಳ ರಿಪೇರಿ ನಿಜಕ್ಕೂ ದುಬಾರಿ. ಇನ್ನು ನೀವು ಪ್ರವಾಹಕ್ಕೆ ಒಳಗಾದ ಜಲ ರಸ್ತೆಯಲ್ಲಿ ಪ್ರಯಾಣಿಸಲು ನಿರ್ಧರಿಸಿದರೆ, ನೀವು ನಿಧಾನಗೊಳಿಸುತ್ತಿದ್ದರೂ ಸಹ ಎಕ್ಸಿಲೇಟರ್ ಪೆಡಲ್ ಮೇಲೆ ಕಾಲನ್ನು ಇರಿಸಿಕೊಳ್ಳಲು ನಾವು ಶಿಫಾರಸು ಮಾಡುತ್ತೇವೆ.

ಏಕೆಂದರೆ ಬೀಳುವ ರೆವ್‌ಗಳು ಎಕ್ಸಾಸೃ ನಿಂದ ನೀರನ್ನು ಹೀರಿಕೊಳ್ಳಬಹುದು. ಅಂತೆಯೇ, ರೆವ್‌ಗಳನ್ನು ಇಟ್ಟುಕೊಳ್ಳುವುದು ನೀರಿನಲ್ಲಿ ಸುರಕ್ಷಿತವಾಗಿ ವೇಡ್ ಮಾಡಲು ಸಹಾಯ ಮಾಡುತ್ತದೆ. ಇನ್ನು ಕೆಲವರು ಕಾರು ಡ್ರೈವರ್ ರಸ್ತೆಯಲ್ಲಿ ನೀರು ತುಂಬಿರುವುದನ್ನು ಕಂಡರೆ, ವೇಗವಾಗಿ ಹೋಗಿ ನೀರು ಹರಿಸುತ್ತಾರೆ. ಕೆಲವು ವರಿಗೆ ಇದೊಂದು ಥ್ರೀಲ್ ಆಗಿದೆ. ಆದರೆ ಸ್ಪ್ಲಾಶ್ ಮಾಡಿದಾಗ ಕಾರಿನ ಕೆಳಭಾಗದಲ್ಲಿ ಹೆಚ್ಚು ಕೊಳೆಯನ್ನು ಸಂಗ್ರಹಿಸುತ್ತದೆ.

ಇನ್ನು ನೀವು ಕಾರು ಚಲಾಯಿಸುವಾಗ ಸಡನ್ ಬ್ರೇಕ್ ಅನ್ನು ಹಾಕಬೇಡಿ. ಹೀಗೆ ಸಡನ್ ಬ್ರೇಕ್ ಹಾಕಿದಾಗ ಹಿಂಬದಿಯಲ್ಲಿರುವ ಬರುವ ವಾಹನವು ನಿಮ್ಮ ಕಾರಿಗೆ ಡಿಕ್ಕಿ ಹೊಡೆಯುವ ಸಾಧ್ಯೆತೆಗಳಿದೆ. ಇನ್ನು ನೀರು ಇದ್ದ ಸ್ಥಳವಾದರೆ, ನೀರು ಎಕ್ಸಾಸ್ಟ್ ಪೈಪ್ ಮೂಲಕ ಎಂಜಿನ್ ಪ್ರವೇಶಿಸುವ ಸಾಧ್ಯತೆ ಇದೆ. ಇನ್ನು ಸಡನ್ ಬ್ರೇಕ್ ಹಾಕಿದರೆ ಕಾರು ಪಲ್ಟಿ ಆಗುವ ಸಾಧ್ಯತೆಗಳು ಕೂಡ ಇದೆ. ಮಳೆಗಾಲದಲ್ಲಿ ಕಾರು ಹೆಚ್ಚು ಜಾರುತ್ತದೆ.

ಇನ್ನು ಮಳೆಗಾಲದಲ್ಲಿ ಅನಿವಾರ್ಯವಲ್ಲದ ಸಮಯದಲ್ಲಿ ಹೆಚ್ಚಾಗಿ ಪರಿಚಯವಿಲ್ಲದ ರಸ್ತೆಗಳಲ್ಲಿ ಹೋಗಬೇಡಿ. ಏಕೆಂದರೆ, ಕೆಲವು ಕಡೆಗಳಲ್ಲಿ ಮಳೆ ಬಂದು ರಸ್ತೆಗಳು ಜಲಾವೃತವಾಗುತ್ತದೆ. ಅದರಲ್ಲೂ ಗುಡ್ಡಕಾಡು ಪ್ರದೇಶಗಳಲ್ಲಿ ಭೂಕುಸಿತ ಮತ್ತು ಜಲಾವೃತವಾಗುತ್ತದೆ. ಇದರಿಂದ ಇಂತಹ ರಿಸ್ಕ್ ತೆಗೆದುಕೊಳ್ಳುವುದನ್ನು ತಪ್ಪಿಸಿ. ಭೂಕುಸಿತವಾಗುವ ಪ್ರದೇಶಗಳಲ್ಲಿ ಚಲಿಸುವುದು ತುಂಬಾ ಅಪಾಯಕಾರಿಯಾಗಿದೆ. ನೀವು ಎಷ್ಟೇ ಅನುಭವಿ ಡ್ರೈವರ್ ಆದರೂ ಮಳೆಗಳದಲ್ಲಿ ನಿಧಾನವಾಗಿ ಚಲಿಸುವುದು ಉತ್ತಮ.

Article Published On: Thursday, July 27, 2023, 18:54 [IST]
English summary
Pregnant woman taken to hospital on jcb flooded road details
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+