ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಕಳೆದ ವರ್ಷ ಮರ್ಸಿಡಿಸ್ ಮೇಬ್ಯಾಕ್ ಡಬ್ಲ್ಯು 222 ಎಸ್ 600 ಪುಲ್ಮನ್ ಕ್ವಾರ್ಟ್ಜ್ ಐಷಾರಾಮಿ ಉನ್ನತ ಭದ್ರತೆಯ ಕಾರ್ ಅನ್ನು ತಮ್ಮ ಪ್ರಯಾಣಕ್ಕಾಗಿ ಖರೀದಿಸಲು ನಿರ್ಧರಿಸಿದ್ದರು. ಆದರೆ ಕರೋನಾ ವೈರಸ್ ಕಾರಣದಿಂದಾಗಿ ಈ ನಿರ್ಧಾರವನ್ನು ಕೈ ಬಿಟ್ಟಿದ್ದರು.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಕರೋನಾ ವೈರಸ್ ಹರಡುವುದನ್ನು ತಡೆಯಲು ಕಳೆದ ವರ್ಷ ಮಾರ್ಚ್ ತಿಂಗಳಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು. ಲಾಕ್ ಡೌನ್ ಕಾರಣದಿಂದಾಗಿ ದೇಶಾದ್ಯಂತ ಬಹುತೇಕ ಎಲ್ಲಾ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಇದರಿಂದ ದೇಶದ ಆರ್ಥಿಕ ವ್ಯವಸ್ಥೆ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರಪತಿಗಳು ಹೊಸ ಕಾರು ಖರೀದಿಸುವ ನಿರ್ಧಾರದಿಂದ ಹಿಂದೆ ಸರಿದಿದ್ದರು.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈಗ ಪರಿಸ್ಥಿತಿ ತುಸು ಸುಧಾರಿಸಿರುವ ಕಾರಣ ರಾಷ್ಟ್ರಪತಿಗಳು ಹೊಸ ಕಾರು ಖರೀದಿಸಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ. ರಾಷ್ಟ್ರಪತಿಗಳಿಗಾಗಿ ದುಬಾರಿ ಬೆಲೆಯ ಮರ್ಸಿಡಿಸ್ ಮೇಬ್ಯಾಕ್ ಡಬ್ಲ್ಯು 222 ಎಸ್ 600 ಪುಲ್ಮನ್ ಕ್ವಾರ್ಟ್ಜ್ ಕಾರ್ ಅನ್ನು ಖರೀದಿಸಲು ನಿರ್ಧರಿಸಲಾಗಿದೆ.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈ ಕಾರ್ ಅನ್ನು ಈ ವರ್ಷದ ಜನವರಿ ತಿಂಗಳಿನಲ್ಲಿಯೇ ಖರೀದಿಸಲು ನಿರ್ಧರಿಸಲಾಗಿತ್ತು. ಆದರೆ ಈಗ ಈ ಕಾರ್ ಅನ್ನು ಖರೀದಿಸಲಾಗಿದೆ. ಇದುವರೆಗೂ ರಾಷ್ಟ್ರಪತಿಗಳು ಮರ್ಸಿಡಿಸ್ ಮೇಬ್ಯಾಕ್ ಡಬ್ಲ್ಯು 221 ಎಸ್ 600 ಪುಲ್ಮನ್ ಕ್ವಾರ್ಟ್ಜ್ ಕಾರನ್ನು ಪ್ರಯಾಣಕ್ಕಾಗಿ ಬಳಸುತ್ತಿದ್ದರು.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಮರ್ಸಿಡಿಸ್ ಮೇಬ್ಯಾಕ್ ಡಬ್ಲ್ಯು 221 ಎಸ್ 600 ಪುಲ್ಮನ್ ಕ್ವಾರ್ಟ್ಜ್ ಸುರಕ್ಷಿತ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ಮರ್ಸಿಡಿಸ್ ಕಂಪನಿಯು ಮೊದಲ ಬಾರಿಗೆ 2011 ರಲ್ಲಿ ಪರಿಚಯಿಸಿತು. ಈ ಕಾರನ್ನು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿರವರ ಬಳಕೆಗಾಗಿ ಖರೀದಿಸಲಾಗಿತ್ತು.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈ ಕಾರು ಸುರಕ್ಷಿತವಾಗಿದ್ದರೂ ಸಹ ಹಲವು ಕಾರಣಗಳಿಗಾಗಿ ಕೇಂದ್ರ ಸರ್ಕಾರವು ಈ ಕಾರ್ ಅನ್ನು ಬದಲಿಸಲು ನಿರ್ಧರಿಸಿದೆ. ವರದಿಗಳ ಪ್ರಕಾರ ಹೊಸ ಮರ್ಸಿಡಿಸ್ ಮೇಬ್ಯಾಕ್ ಡಬ್ಲ್ಯು 222 ಎಸ್ 600 ಕ್ವಾರ್ಟ್ಜ್ ಕಾರು ಈಗಾಗಲೇ ದೆಹಲಿಗೆ ಆಗಮಿಸಿದೆ.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈ ಕಾರಿನಲ್ಲಿ ಹೆಚ್ಚುವರಿ ಸುರಕ್ಷತಾ ಫೀಚರ್ ಗಳನ್ನು ಅಳವಡಿಸಲು ಈ ಕಾರ್ ಅನ್ನು ಎಸ್‌ಪಿ‌ಜಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ. ಹೊಸ ಮರ್ಸಿಡಿಸ್ ಮೇ ಬ್ಯಾಕ್ ಡಬ್ಲ್ಯು 222 ಎಸ್ 600 ಪುಲ್ಮನ್ ಕ್ವಾರ್ಟ್ಜ್ ಕಾರು ಆರು ಮೀಟರ್ ಉದ್ದವನ್ನು ಹೊಂದಿದೆ.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈ ಕಾರು ರಸ್ತೆಯಲ್ಲಿ ಚಲಿಸುವ ಇತರ ಕಾರುಗಳಿಗಿಂತ ಹೆಚ್ಚು ಉದ್ದವಾಗಿದೆ. ಈ ಕಾರನ್ನು ಖರೀದಿಸ ಬಯಸುವವರು ಕನಿಷ್ಠ 1.5 ವರ್ಷದಿಂದ ಎರಡು ವರ್ಷಗಳವರೆಗೆ ಕಾಯ ಬೇಕಾಗುತ್ತದೆ. ಈ ಕಾರನ್ನು ನಿರ್ಮಿಸಲು ಮರ್ಸಿಡಿಸ್ ಕಂಪನಿಯು ಹೆಚ್ಚು ಸಮಯವನ್ನು ತೆಗೆದು ಕೊಳ್ಳುತ್ತದೆ ಎಂಬುದೇ ಸುದೀರ್ಘ ಕಾಯುವಿಕೆಗೆ ಕಾರಣ.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ರಾಷ್ಟ್ರಪತಿಗಳ ಬಳಕೆಗಾಗಿ ಈ ಕಾರ್ ಅನ್ನು ಖರೀದಿಸಲು ಎರಡು ವರ್ಷಗಳ ಹಿಂದೆಯೇ ಆದೇಶ ನೀಡಲಾಗಿತ್ತು. ಇದರ ಆಧಾರದ ಮೇಲೆ ಈ ಕಾರು ಈಗ ಭಾರತಕ್ಕೆ ಬಂದಿಳಿದಿದೆ. ಈ ಕಾರ್ ಅನ್ನು ವಿಆರ್ 9 ಎಂದು ಕರೆಯಲಾಗುತ್ತದೆ. ಈ ಕಾರು ಹೆಚ್ಚಿನ ಮಟ್ಟದ ಸುರಕ್ಷತಾ ಫೀಚರ್ ಗಳನ್ನು ಹೊಂದಿದೆ.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈ ಕಾರಿನ ಮೇಲೆ ಬಂದೂಕಿನಿಂದ ದಾಳಿ ನಡೆದರೂ ಅಥವಾ ಬಾಂಬ್ ದಾಳಿ ನಡೆದರೂ ಸಹ ಕಾರಿನಲ್ಲಿರುವವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ರಾಷ್ಟ್ರಪತಿಗಳ ಬಳಕೆಗಾಗಿ ಖರೀದಿಸಲಾಗಿರುವ ಮರ್ಸಿಡಿಸ್ ಮೇಬ್ಯಾಕ್ ಎಸ್ 600 ಪುಲ್ಮನ್ ಕ್ವಾರ್ಟ್ಜ್ ಕಾರ್ ಅನ್ನು ಶೀಘ್ರದಲ್ಲೇ ಬಿಡುಗಡೆಗೊಳಿಸುವ ನಿರೀಕ್ಷೆಗಳಿವೆ.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈ ಕಾರಿನ ಚಾಸಿಸ್, ಬಾಡಿ ಪ್ಯಾನಲ್ ಹಾಗೂ ಗ್ಲಾಸ್ ಎಲ್ಲವೂ ಗಟ್ಟಿ ಮುಟ್ಟಾಗಿವೆ. ಎಷ್ಟೇ ಎಂಎಂ ಗುಂಡುಗಳಿಂದ ಈ ಕಾರಿನ ಮೇಲೆ ದಾಳಿ ಮಾಡಿದರೂ ಕಾರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಈ ಕಾರಿನಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಶೀಘ್ರದಲ್ಲೇ ತಮ್ಮ ಸಂಚಾರವನ್ನು ಆರಂಭಿಸಲಿದ್ದಾರೆ.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈ ಕಾರಿನಲ್ಲಿ ಟ್ವಿನ್ ಟರ್ಬೊ ವಿ 12 ಎಂಜಿನ್ ಅಳವಡಿಸಲಾಗಿದೆ ಎಂದು ನಿರೀಕ್ಷಿಸಲಾಗಿದೆ. ಈ ಎಂಜಿನ್ ಗರಿಷ್ಠ 520 ಬಿ‌ಹೆಚ್‌ಪಿ ಪವರ್ ಹಾಗೂ 900 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಕಾರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 160 ಕಿ.ಮೀಗಳಾಗಿದೆ. ಈ ಕಾರಿನ ಎಲ್ಲಾ ಡೋರುಗಳು ಎಲೆಕ್ಟ್ರಾನಿಕ್ ಕಂಟ್ರೋಲ್ ಅನ್ನು ಹೊಂದಿವೆ.

ರಾಷ್ಟ್ರಪತಿಗಳ ಪ್ರಯಾಣಕ್ಕಾಗಿ ಬಂದಿಳಿದ ದುಬಾರಿ ಬೆಲೆಯ ಮರ್ಸಿಡಿಸ್ ಕಾರು

ಈ ಕಾರಿನಲ್ಲಿ ರೆಫ್ರಿಜರೇಟರ್, ಪಾನೀಯವನ್ನು ಬಿಸಿ ಅಥವಾ ತಣ್ಣಗೆ ಇರಿಸುವ ಕಪ್ ಹೋಲ್ಡರ್‌ಗಳು ಹಾಗೂ ಎಂಟರ್ ಟೆನ್ ಮೆಂಟ್ ಸ್ಕ್ರೀನ್ ಗಳನ್ನು ನೀಡಲಾಗಿದೆ. ಈ ಕಾರಿನ ಬೆಲೆ ರೂ. 10 ಕೋಟಿಗಳಿಗೂ ಹೆಚ್ಚು. ಈ ಗರಿಷ್ಠ ಬೆಲೆಯ ಕಾರಣಕ್ಕೆ ಕಳೆದ ವರ್ಷ ಈ ಕಾರಿನ ಖರೀದಿಯನ್ನು ಮುಂದೂಡಲಾಗಿತ್ತು ಎಂಬುದು ಗಮನಾರ್ಹ. ರಾಷ್ಟ್ರಪತಿಗಳು ಭಾರತದ ಮೊದಲ ಪ್ರಜೆಯಾಗಿದ್ದು, ಅವರಿಗೆ ಗರಿಷ್ಠ ಮಟ್ಟದ ಭದ್ರತೆಯ ಅವಶ್ಯಕತೆ ಇರುತ್ತದೆ. ಈ ಕಾರಣಕ್ಕೆ ಅವರಿಗೆ ಉನ್ನತ ಮಟ್ಟದ ಭದ್ರತೆ ಹೊಂದಿರುವ ಕಾರ್ ಅನ್ನು ಒದಗಿಸಲಾಗುತ್ತದೆ.

Most Read Articles

Kannada
English summary
President of india to get new mercedes maybach s600 pullman car soon details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X