ಟ್ರಂಪ್ ಸ್ವಾಗತಕ್ಕೆ ರೇಂಜ್ ರೋವರ್ ಕಾರಿನಲ್ಲಿ ಬಂದ ಪ್ರಧಾನಿ ಮೋದಿ
ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್‍ರವರು ನಿನ್ನೆಯಷ್ಟೇ 2 ದಿನಗಳ ಪ್ರವಾಸಕ್ಕಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಈ ಪ್ರವಾಸದಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಟ್ರಂಪ್‍ರವರ ಈ ಭಾರತ ಪ್ರವಾಸವು ಹಲವಾರು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ.

ಗುಜರಾತ್‍ನ ಅಹಮದಾಬಾದ್‍ನಲ್ಲಿ ಬಂದಿಳಿದ ಟ್ರಂಪ್ ಸ್ವಾಗತಕ್ಕೆ ಸ್ವತಃ ನರೇಂದ್ರ ಮೋದಿರವರೇ ವಿಮಾನ ನಿಲ್ದಾಣಕ್ಕೆ ತೆರಳಿದ್ದರು. ನರೇಂದ್ರ ಮೋದಿರವರು ವಿಮಾನ ನಿಲ್ದಾಣಕ್ಕೆ ಕಪ್ಪು ಬಣ್ಣದ ಬುಲೆಟ್ ಪ್ರೂಫ್ ರೇಂಜ್ ರೋವರ್ ಕಾರಿನಲ್ಲಿ ತೆರಳಿದ್ದರು.

ಅಂದ ಹಾಗೆ ನರೇಂದ್ರ ಮೋದಿರವರು ಈ ಎಸ್‍ಯುವಿಯನ್ನು ಬಳಸುತ್ತಿರುವುದು ಇದು ಮೊದಲ ಬಾರಿಯಲ್ಲ. 2017ರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನರೇಂದ್ರ ಮೋದಿರವರು ಮೊದಲ ಬಾರಿಗೆ ರೇಂಜ್ ರೋವರ್ ಕಾರಿನಲ್ಲಿ ತೆರಳಿದ್ದರು. ಅದಾದ ನಂತರ ಹಲವು ಬಾರಿ ಈ ಕಾರಿನಲ್ಲಿ ಕಾಣಿಸಿಕೊಂಡಿದ್ದಾರೆ.

ಮೋದಿರವರು ಇತ್ತೀಚಿಗೆ ಹೆಚ್ಚಾಗಿ ಈ ಕಾರಿನಲ್ಲಿಯೇ ಓಡಾಡುತ್ತಿದ್ದಾರೆ. ನರೇಂದ್ರ ಮೋದಿರವರು ಈ ಮೊದಲು ಬಿಎಂಡಬ್ಲ್ಯು 7 ಸೀರಿಸ್ ಕಾರ್ ಅನ್ನು ಬಳಸುತ್ತಿದ್ದರು. ಬಿಎಂಡಬ್ಲ್ಯು 7 ಸೀರಿಸ್ ಕಾರು ಪ್ರಧಾನಿಯವರ ಅಧಿಕೃತ ಕಾರ್ ಆಗಿತ್ತು.

ಈ ಕಾರು ಸಹ ಬುಲೆಟ್ ಪ್ರೂಫ್ ಆಗಿದೆ. ಪ್ರಧಾನಿಯವರು ಬಳಸುತ್ತಿದ್ದ ಕಾರಣಕ್ಕೆ ಈ ಕಾರಿನಲ್ಲಿ ಹಲವು ಮಾಡಿಫಿಕೇಷನ್‍ಗಳನ್ನು ಮಾಡಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಬಿಎಂಡಬ್ಲ್ಯು 7 ಸೀರಿಸ್ ಕಾರಿಗೆ ಬದಲಿಗೆ ನರೇಂದ್ರ ಮೋದಿರವರು ರೇಂಜ್ ರೋವರ್ ಎಸ್‍ಯುವಿಯನ್ನು ಹೆಚ್ಚಾಗಿ ಬಳಸುತ್ತಿದ್ದಾರೆ.

ಯಾವ ಕಾರಣಕ್ಕೆ ಬಿಎಂಡಬ್ಲ್ಯು ಕಾರ್ ಅನ್ನು ಬದಲಿಸಿದರು ಎಂಬುದು ತಿಳಿದು ಬಂದಿಲ್ಲವಾದರೂ ಸುರಕ್ಷತೆಯ ಕಾರಣಕ್ಕೆ ಬದಲಿಸಿರುವ ಸಾಧ್ಯತೆಗಳಿವೆ. ನರೇಂದ್ರ ಮೋದಿಯವರ ಬಳಿಯಿರುವ 2010ರ ರೇಂಜ್ ರೋವರ್ ಹೆಚ್‍ಎಸ್‍ಇ ಕಾರಿನಲ್ಲಿ 5.0 ಲೀಟರಿನ ವಿ8 ಎಂಜಿನ್ ಅಳವಡಿಸಲಾಗಿದೆ.

ಈ ಲಗ್ಷುರಿ ಎಸ್‍ಯುವಿಯಲ್ಲಿ ಸುರಕ್ಷತಾ ಫೀಚರ್‍ಗಳಿಗೇನು ಕೊರತೆಯಿಲ್ಲ. ಡೊನಾಲ್ಡ್ ಟ್ರಂಪ್‍ರವರ ಸ್ವಾಗತಕ್ಕೆ ನರೇಂದ್ರ ಮೋದಿರವರು ಯಾವ ಕಾರಿನಲ್ಲಿ ಬರಬಹುದು ಎಂಬ ಕುತೂಹಲ ಕಾರು ಪ್ರಿಯರಲ್ಲಿತ್ತು.

ರೇಂಜ್ ರೋವರ್ ಕಾರ್ ಅನ್ನು ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ತಯಾರಿಸಿದೆ. ಗಮನಿಸಬೇಕಾದ ಸಂಗತಿಯೆಂದರೆ ಜನಪ್ರಿಯ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯ ಮಾಲೀಕತ್ವವನ್ನು ಭಾರತದ ಟಾಟಾ ಮೋಟಾರ್ಸ್ ಹೊಂದಿದೆ.

ಇದು ಭಾರತೀಯರು ಹೆಮ್ಮೆ ಪಡುವ ವಿಷಯವಾಗಿದೆ. ಪ್ರಧಾನಿಯವರಿಗಾಗಿ ಜಾಗ್ವಾರ್ ಲ್ಯಾಂಡ್ ರೋವರ್ ಕಂಪನಿಯು ವಿಶೇಷವಾಗಿ ತಯಾರಿಸಿರುವ ಈ ಕಾರಿನ ನಿಖರವಾದ ಬೆಲೆಯ ಬಗ್ಗೆ ಮಾಹಿತಿಯಿಲ್ಲ.


Click it and Unblock the Notifications