ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ದೇಶದ ಮೊದಲ ಸ್ವದೇಶಿ ನಿರ್ಮಿತ ವಿಮಾನವಾಹಕ ನೌಕೆಯಾದ INS ವಿಕ್ರಾಂತ್ ಅನ್ನು ಪ್ರಧಾನಿ ಮೋದಿ ಅವರು ಇಂದು ಭಾರತೀಯ ನೌಕಾಪಡೆಗೆ ಹಸ್ತಾಂತರಿಸಿದ್ದಾರೆ. ಈ ಮೂಲಕ ಭಾರತೀಯ ನೌಕಾಪಡೆಯ ಬಲ ಇನ್ನಷ್ಟು ಹೆಚ್ಚಾಗಿದೆ.

ಕೊಚ್ಚಿಯಲ್ಲಿ ನಡೆದ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಐಎನ್‌ಎಸ್ ವಿಕ್ರಾಂತ್ ಅನ್ನು ಶ್ಲಾಘಿಸಿದರು. ಅದರ ಪ್ರಮುಖ ಗುಣಲಕ್ಷಣಗಳ ಬಗ್ಗೆ ವಿವರಿಸಿದ ಅವರು, ಈ ವಿಮಾನವಾಹಕ ನೌಕೆಯನ್ನು ನಿರ್ಮಿಸಲು ಬಳಸುವ ಉಕ್ಕನ್ನು ಭಾರತದಲ್ಲೇ ತಯಾರಿಸಲಾಗಿದೆ, ಇದನ್ನು ಡಿಆರ್‌ಡಿಒ ವಿಜ್ಞಾನಿಗಳು ಅಭಿವೃದ್ಧಿಪಡಿಸಿದ್ದಾರೆ ಎಂದು ತಿಳಿಸಿದರು.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಭಾರತೀಯ ಕಂಪನಿಗಳಿಂದಲೇ ತಯಾರಿಗಿರುವ ಈ ಹಡಗನ್ನು ಸಣ್ಣ ನಗರವೆಂದನ್ನಬಹುದು. ಈ ಯುದ್ಧ ನೌಕೆ ಸುಮಾರು 5,000 ಮನೆಗಳಿಗೆ ವಿದ್ಯುತ್ ಒದಗಿಸುವ ಸಾಮರ್ಥ್ಯವನ್ನು ಹೊಂದಿದೆ. ಇದರ ಫ್ಲೈಟ್ ಡೆಕ್ ಎರಡು ಫುಟ್‌ಬಾಲ್ ಮೈದಾನಗಳಿಗೆ ಸಮನಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಈ ಯುದ್ಧ ಹಡಗನ್ನು ನಿಯೋಜಿಸುವ ಮೂಲಕ, ಭಾರತವು ವಿಮಾನವಾಹಕ ನೌಕೆಯನ್ನು ನಿರ್ಮಿಸುವ ಸಾಮರ್ಥ್ಯವನ್ನು ಹೊಂದಿರುವ ಕೆಲವೇ ಕಲವು ದೇಶಗಳ ಪಟ್ಟಿಗೆ ಸೇರ್ಪಡೆಗೊಂಡಿದೆ. ಇದು ಸ್ವಾತಂತ್ರ್ಯ ಭಾರತದ 76 ವರ್ಷಗಳಲ್ಲಿ ಭಾರತದ ದೊಡ್ಡ ಸಾಧನೆಯಾಗಿದೆ. ಇಲ್ಲಿಯವರೆಗೆ ಯುಎಸ್, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಮಾತ್ರ ತಮ್ಮದೇ ಆದ ವಿಮಾನವಾಹಕ ನೌಕೆಗಳನ್ನು ನಿರ್ಮಿಸಿವೆ. ಈ ಪಟ್ಟಿಗೆ ಈಗ ಭಾರತ ಸೇರ್ಪಡೆಯಾಗಿದೆ.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಹಡಗಿನ ವೆಚ್ಚ, ವೈಶಿಷ್ಟ್ಯಗಳು

ಇದು ಭಾರತದಲ್ಲಿ ನಿರ್ಮಾಣವಾಗಿರುವ ಎರಡನೇ ವಿಮಾನವಾಹಕ ನೌಕೆಯಾಗಿದೆ. 20,000 ಕೋಟಿ ರೂಪಾಯಿ ವೆಚ್ಚದಲ್ಲಿ ಹಡಗನ್ನು ನಿರ್ಮಿಸಲಾಗಿದೆ. ಈ ಹಡಗಿನ ನಿರ್ಮಾಣಕ್ಕಾಗಿ ಪ್ರತಿಯೊಂದು ಘಟಕವನ್ನು ಭಾರತದ ಪ್ರತಿಯೊಂದು ರಾಜ್ಯದಿಂದ ಸಂಗ್ರಹಿಸಲಾಗಿದೆ. ಈ ಹಡಗಿನ ನಿರ್ಮಾಣದಲ್ಲಿ ಭಾರತದ ಎಲ್ಲಾ ರಾಜ್ಯಗಳ ಪಾಲು ಇದೆ.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಪ್ರಸ್ತುತ ಭಾರತವು ತನ್ನ ಏಕೈಕ ವಿಮಾನವಾಹಕ ನೌಕೆಯಾಗಿ INS ವಿಕ್ರಮಾದಿತ್ಯವನ್ನು ಹೊಂದಿದೆ. ಈ ಹಡಗನ್ನು ರಷ್ಯಾದಲ್ಲಿ ನಿರ್ಮಿಸಲಾಗಿದೆ. ಹಡಗು ಬಂಗಾಳಕೊಲ್ಲಿ ಮತ್ತು ಹಿಂದೂ ಮಹಾಸಾಗರದಲ್ಲಿ ಭದ್ರತಾ ಕರ್ತವ್ಯದಲ್ಲಿದೆ. ಇದೀಗ ಸೇವೆಗೆ ಸಜ್ಜಾಗಿರುವ ಐಎನ್‌ಎಸ್ ವಿಕ್ರಾಂತ್ ಭಾರತದಲ್ಲಿ ನಿರ್ಮಿಸಲಾದ ಅತಿದೊಡ್ಡ ಯುದ್ಧನೌಕೆಯಾಗಿದೆ.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಈ ಹಡಗು 2,300 ವಿಭಾಗಗಳನ್ನು ಹೊಂದಿದ್ದು, ಒಂದೇ ಸಮಯದಲ್ಲಿ ಒಟ್ಟು 1,700 ಜನರು ಪ್ರಯಾಣಿಸಬಹುದು. ಅಷ್ಟೇ ಅಲ್ಲ ಮಹಿಳಾ ಅಧಿಕಾರಿಗಳಿಗೆ ತಂಗಲು ಹಡಗಿನಲ್ಲಿ ಸುರಕ್ಷಿತ ಸ್ಥಳವೂ ಇದೆ. ಹಡಗಿನ ಒಟ್ಟು ಉದ್ದ 262 ಮೀಟರ್, ಅಗಲ 62 ಮೀಟರ್ ಮತ್ತು ಎತ್ತರ 59 ಮೀಟರ್. ಹಡಗು 4 ಗ್ಯಾಸ್ ಟರ್ಬೈನ್‌ಗಳನ್ನು ಹೊಂದಿದ್ದು, ಒಟ್ಟು 88 ಮೆಗಾವ್ಯಾಟ್ ಶಕ್ತಿ ಹೊಂದಿದೆ.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಇದು ಒಂದೇ ಪ್ರಯಾಣದಲ್ಲಿ 7,500 ನಾಟಿಕಲ್ ಮೈಲುಗಳನ್ನು ಕ್ರಮಿಸುವ ಸಾಮರ್ಥ್ಯ ಹೊಂದಿದೆ. ಹಡಗಿನ ಒಟ್ಟು ತೂಕ 45,000 ಟನ್. ಕಳೆದ ವರ್ಷ ಆಗಸ್ಟ್‌ನಲ್ಲಿ ಇದರ ನಿರ್ಮಾಣ ಪೂರ್ಣಗೊಂಡಿತ್ತು. ಅಂದಿನಿಂದ ಪರೀಕ್ಷೆಗಳು ನಡೆಯುತ್ತಿದ್ದವು.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಹಡಗಿನಲ್ಲಿ ಒಟ್ಟು 30 ಫೈಟರ್ ಜೆಟ್‌ಗಳಿಗೆ ಸ್ಥಳಾವಕಾಶವಿದೆ. ಇದರಲ್ಲಿ MiG-29K ಫೈಟರ್ ಜೆಟ್ ಕೂಡ ಸೇರಿದೆ. ಇದರಲ್ಲಿ ಹೆಲಿಕಾಪ್ಟರ್‌ಗಳನ್ನೂ ಇಳಿಸಬಹುದು. ಬೋಯಿಂಗ್ ಮತ್ತು ಡಸ್ಸಾಲ್ಟ್ ವಿಮಾನಗಳನ್ನು ಅದರ ಮೇಲೆ ಇಳಿಸುವ ಬಗ್ಗೆಯೂ ಚರ್ಚಿಸಲಾಗುತ್ತಿದೆ.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಇತ್ತೀಚೆಗೆ ಚೀನಾ ತನ್ನ ಕಡಲ ಗಡಿಯನ್ನು ವಿಸ್ತರಿಸುತ್ತಿದೆ. ಅದರಲ್ಲೂ ಆಫ್ರಿಕಾದಲ್ಲಿ ಆ ದೇಶದ ಸರ್ಕಾರದೊಂದಿಗೆ ಒಪ್ಪಂದ ಮಾಡಿಕೊಂಡು ನೌಕಾನೆಲೆ ಸ್ಥಾಪಿಸಿದೆ. ಅಲ್ಲಿ ತನ್ನ ಯುದ್ಧನೌಕೆಗಳನ್ನೂ ನಿಲ್ಲಿಸಿದೆ. ಈ ಸಂದರ್ಭದಲ್ಲಿ, ಭಾರತದ ಜಲ ಪ್ರದೇಶದಲ್ಲಿ ತನ್ನ ಪ್ರಾಬಲ್ಯವನ್ನು ಪ್ರತಿಪಾದಿಸಲು ಭಾರತ ಸರಿಯಾದ ಸಮಯದಲ್ಲಿ ವಿಕ್ರಾಂತ್ ಹಡಗನ್ನು ರಂಗಕ್ಕಿಳಿಸಿದೆ.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ವಿಕ್ರಾಂತ್ ಇತಿಹಾಸ

ಭಾರತವನ್ನು ರಕ್ಷಿಸುವ ಪ್ರಮುಖ ಹಡಗು ಐಎನ್ಎಸ್ ವಿಕ್ರಾಂತ್ ಆಗಿದ್ದು, ಈ ಹಡಗನ್ನು ಭಾರತದ ಸಮುದ್ರ ಗಡಿಗಳನ್ನು ರಕ್ಷಣೆಗಾಗಿ 1961 ರಲ್ಲಿ ಮೊದಲ ಬಾರಿಗೆ ಪ್ರಾರಂಭಿಸಲಾಯಿತು. ಈ ಹಡಗು ಭಾರತದಲ್ಲಿ 1945 ರಲ್ಲಿ ಬ್ರಿಟಿಷ್ ಸರ್ಕಾರದಿಂದ ತಯಾರಿಸಲ್ಪಟ್ಟಿದೆ. ಆದರೆ ಯಾವುದೇ ಕಾರ್ಯಕ್ಕೆ ಇದನ್ನು ಬಳಸಲಿಲ್ಲ. 1957 ರಲ್ಲಿ, ಬ್ರಿಟಿಷ್ ಸರ್ಕಾರವು ಈ ಹಡಗನ್ನು ಭಾರತಕ್ಕೆ ಮಾರಾಟ ಮಾಡಿತು.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

1961 ರಿಂದ 1997 ರವರೆಗೆ, ಹಡಗು ಹಿಂದೂ ಮಹಾಸಾಗರದ ರಕ್ಷಣೆಯಲ್ಲಿತ್ತು. ಈ ಹಡಗಿನ ಪರ್ಯಾಯ ಹೆಸರು ಸಂಸ್ಕೃತದಲ್ಲಿ ಜಯಮ ಸಂಯುಕ್ತ ಸ್ಪಧ. ಇದರರ್ಥ ವಿರೋಧಿಗಳ ನಾಶಕ. ಅದಕ್ಕೆ ತಕ್ಕ ಹಾಗೆ ಈ ಹಡಗು 1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಶತ್ರುಗಳಿಗೆ ಭಾರಿ ಸವಾಲನ್ನು ನೀಡಿತ್ತು. ಅನೇಕ ಬಾರಿ ಶತ್ರುಗಳ ಯೋಜನೆಗಳು ವಿಫಲವಾದವು. ಈ ಹಡಗನ್ನು ನೋಡಿ ಶತ್ರುಗಳು ಭಯದಿಂದ ನಡುಗಿದ್ದರು.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

1997 ರಲ್ಲಿ, ಈ ಹಡಗು ತನ್ನ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿ ನಿವೃತ್ತಿ ಪಡೆಯಿತು. ಈ ಸಂದರ್ಭದಲ್ಲಿ 2014 ರಲ್ಲಿ, ಈ ಹಡಗನ್ನು ತುಂಡುಗಳಾಗಿ ವಿಂಗಡಿಸಿ ಅದರ ಬಿಡಿ ಭಾಗಗಳನ್ನು ಸ್ಕ್ರ್ಯಾಪ್ ಆಗಿ ಇತರ ಉದ್ದೇಶಗಳಿಗಾಗಿ ಬಳಸಲಾಯಿತು. ಈ ಸ್ಕ್ರ್ಯಾಪ್‌ಗಳಿಂದಲೇ ವಿಕ್ರಾಂತ್ ಬೈಕ್ ತಯಾರಿಸಿದ್ದೇವೆ ಎಂದು ಬಜಾಜ್ ಹೇಳಿಕೊಂಡಿರುವುದು ಎಲ್ಲರಿಗೂ ತಿಳಿದಿರುವ ವಿಷಯ.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಇದಾದ ಬಳಿಕ ಭಾರತೀಯ ನೌಕಾಪಡೆಯು ಸಂಪೂರ್ಣವಾಗಿ ಭಾರತದಲ್ಲಿಯೇ ವಿಮಾನವಾಹಕ ನೌಕೆಯನ್ನು ಸಿದ್ಧಪಡಿಸಲು ನಿರ್ಧರಿಸಿತು. ಇದಕ್ಕಾಗಿ ಭಾರತೀಯ ನೌಕಾಪಡೆ ಮತ್ತು ಕೊಚ್ಚಿ ಶಿಪ್ ಬಿಲ್ಡಿಂಗ್ ಕಂಪನಿ ನಡುವೆ 2007ರಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಅದರಂತೆ 2009ರಲ್ಲಿ ಈ ಹಡಗಿನ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಯಿತು. ಇದಾದ ಸುಮಾರು 13 ವರ್ಷಗಳ ನಂತರ ಈ ಹಡಗು ಸೇವೆಗೆ ಸಿದ್ಧವಾಗಿದೆ. ಇದಕ್ಕಾಗಿ ಪ್ರಾಯೋಗಿಕ ಚಾಲನೆಯೂ ಯಶಸ್ವಿಯಾಗಿ ಮುಗಿದಿದ್ದು, ಇದೀಗ ಹಡಗು ದೇಶಕ್ಕೆ ಸೇವೆ ಸಲ್ಲಿಸಲು ಸಿದ್ಧವಾಗಿದೆ.

ಸ್ವದೇಶಿ ನಿರ್ಮಿತ INS ವಿಕ್ರಾಂತ್ ಯುದ್ದ ನೌಕೆಯನ್ನು ಇಂದು ಲೋಕಾರ್ಪಣೆಗೊಳಿಸಿದ ಪ್ರಧಾನಿ ಮೋದಿ

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಇಲ್ಲಿಯವರೆಗೆ ಯುಎಸ್, ರಷ್ಯಾ, ಚೀನಾ ಮತ್ತು ಫ್ರಾನ್ಸ್ ಮಾತ್ರ ತಮ್ಮದೇ ಆದ ವಿಮಾನವಾಹಕ ನೌಕೆಗಳನ್ನು ನಿರ್ಮಿಸಿವೆ. ಈ ಪಟ್ಟಿಗೆ ಈಗ ಭಾರತ ಸೇರ್ಪಡೆಯಾಗಿದೆ. ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳ ಪಟ್ಟಿಗೆ ಭಾರತವೂ ಸೇರಿಕೊಂಡಿರುವುದು ಹೆಮ್ಮೆಯ ಸಂಗತಿ.

Most Read Articles

Kannada
English summary
Prime Minister Modi inaugurated the indigenously built warship INS Vikrant today
Story first published: Friday, September 2, 2022, 18:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X