ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

ಬ್ರಿಟನ್ ರಾಜಕುಮಾರಿ ಡಯಾನಾ ವರ್ಣ ರಂಜಿತ ಜೀವನಕ್ಕೆ ಹೆಸರುವಾಸಿಯಾಗಿದ್ದರು. 1997ರಲ್ಲಿ ರಸ್ತೆ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ ಅವರು ಪರೋಪಕಾರಕ್ಕೂ ಹೆಸರುವಾಸಿಯಾಗಿದ್ದರು.

ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

ಅವರ ಬಳಿಯಿದ್ದ 1981ರ ಮಾದರಿಯ ಫೋರ್ಡ್ ಎಸ್ಕಾರ್ಟ್ ಗಿಯಾ ಸಲೂನ್ ಕಾರ್ ಅನ್ನು ಈಗ ಹರಾಜು ಹಾಕಲಾಗುತ್ತಿದೆ. ಈ ಕಾರು ಜೂನ್ 29ರಂದು ಎಸೆಕ್ಸ್‌ನ ರೀಮನ್ ಡ್ಯಾನ್ಸಿಯ ರಾಯಲ್ಟಿ, ಆಂಟಿಕ್ವಸ್ ಅಂಡ್ ಫೈನ್ ಆರ್ಟ್ ಸೇಲ್ಸ್‌ ಮೂಲಕ ಹರಾಜಿನಲ್ಲಿ ಮಾರಾಟವಾಗಲಿದೆ.

ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

ಅವರ ಮದುವೆಗೂ ಮುನ್ನ 1981ರ ಮೇ ತಿಂಗಳಿನಲ್ಲಿ ಪ್ರಿನ್ಸ್ ಚಾರ್ಲ್ಸ್'ರವರು ಈ ಕಾರನ್ನು ರಾಜಕುಮಾರಿ ಡಯಾನಾರವರಿಗೆ ಉಡುಗೊರೆಯಾಗಿ ನೀಡಿದ್ದರು.ಐದು ಡೋರುಗಳ ಈ ಹ್ಯಾಚ್‌ಬ್ಯಾಕ್ ಕಾರ್ ಅನ್ನು ರಾಜಕುಮಾರಿಯವರು ಮದುವೆಯಾದ ನಂತರವೂ ನಿಯಮಿತವಾಗಿ ಬಳಸುತ್ತಿದ್ದರು.

ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

40 ವರ್ಷ ಹಳೆಯದಾದ ಈ ಕಾರು ಸುಮಾರು 20 ವರ್ಷಗಳಿಂದ ಸಾರ್ವಜನಿಕರ ದೃಷ್ಟಿಯಿಂದ ಹೊರಗಿದೆ. ರಾಯಲ್ ಗ್ಯಾರೇಜ್‌ನಲ್ಲಿ ಉತ್ತಮ ವಾತಾವರಣದಲ್ಲಿದ್ದ ಕಾರಣಕ್ಕೆ ಇನ್ನೂ ಉತ್ತಮ ಸ್ಥಿತಿಯಲ್ಲಿದೆ. ಈ ಕಾರಿನ ಮೂಲ ನೋಂದಣಿ ಸಂಖ್ಯೆಯಾದ ಡಬ್ಲ್ಯುಇವಿ 297 ಡಬ್ಲ್ಯುವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ.

ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

ರೀಮನ್ ಡ್ಯಾನ್ಸಿ ಪ್ರಕಾರ, ಈ ಗಿಯಾ ಸಲೂನ್ ಕಾರು ತನ್ನ ಮೂಲ ಸ್ಥಿತಿಯಲ್ಲಿಯೇ ಇದ್ದು, ಮೂಲ ಬಣ್ಣ ಹಾಗೂ ಅಪ್ ಹೊಲೆಸ್ಟರಿಯನ್ನು ಹೊಂದಿದೆ. ಕಾರಿನಲ್ಲಿರುವ ಮೀಟರ್ ಪ್ರಕಾರ ಈ ಕಾರು 83,000 ಮೈಲಿ ಅಂದರೆ ಸುಮಾರು 1,33,575 ಕಿ.ಮೀಗಳಷ್ಟು ಸಂಚರಿಸಿದೆ.

ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

ಈ ಕಾರಿನಲ್ಲಿ ಅಳವಡಿಸಿದ್ದ ರೇಡಿಯೊ ಸಿಸ್ಟಂ ಹಾಗೇ ಉಳಿದಿದೆ. 1981ರ ಮಾದರಿಯ ಈ ಫೋರ್ಡ್ ಎಸ್ಕಾರ್ಟ್ ಗಿಯಾ ಸಲೂನ್ ಕಾರು ಹಳೆ ಕಾರುಗಳನ್ನುಸಂಗ್ರಹಿಸುವವರಿಗೆ ನಿಜಕ್ಕೂ ನಿಧಿಯಾಗಿದೆ. ರಾಜಕುಮಾರಿ ಡಯಾನಾರವರು ಈ ಕಾರನ್ನು ಚಾಲನೆ ಮಾಡುತ್ತಿರುವ ಹಲವಾರು ಫೋಟೋಗಳಿವೆ.

ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

ಅವುಗಳಲ್ಲಿ ಒಂದು ಫೋಟೋದಲ್ಲಿ ರಾಜಕುಮಾರಿರವರು ತಮ್ಮ ಕಾರಿನೊಳಗೆ ಪೋಲೊ ಆಡುತ್ತಿರುವುದನ್ನು ತೋರಿಸಲಾಗಿದೆ. ಈ ಕಾರು ಬಾನೆಟ್‌ ಮೇಲೆ ಬೆಳ್ಳಿಯ ಕಪ್ಪೆ ಚಿಹ್ನೆಯನ್ನು ಹೊಂದಿದೆ. ಈ ಚಿಹ್ನೆ ಡಯಾನಾರವರ ಸಹೋದರಿ ಲೇಡಿ ಸಾರಾ ಸ್ಪೆನ್ಸರ್ ನೀಡಿದ ಉಡುಗೊರೆಯ ಪ್ರತಿಯಾಗಿದೆ.

ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

ಗಿಯಾ ಸಲೂನ್‌ ಕಾರಿನಲ್ಲಿ ಅಳವಡಿಸಿರುವ 1.6 ಲೀಟರ್ ಪೆಟ್ರೋಲ್ ಎಂಜಿನ್ 6,000 ಆರ್‌ಪಿಎಂನಲ್ಲಿ 78 ಬಿಹೆಚ್‌ಪಿ ಪವರ್ ಹಾಗೂ 3,000 ಆರ್‌ಪಿಎಂನಲ್ಲಿ 125 ಎನ್‌ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಎಂಜಿನ್ ಅನ್ನು ನಾಲ್ಕು-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್'ನೊಂದಿಗೆ ಜೋಡಿಸಲಾಗಿದೆ.

ಹರಾಜಾಗಲಿದೆ ರಾಜಕುಮಾರಿ ಡಯಾನಾ ಬಳಸುತ್ತಿದ್ದ ಫೋರ್ಡ್ ಕಾರು

ಸಾರ್ವಕಾಲಿಕ ಜನಪ್ರಿಯ ವ್ಯಕ್ತಿಗಳಲ್ಲಿ ಒಬ್ಬರಾದ ರಾಜಕುಮಾರಿ ಡಯಾನಾ ಕಾರುಗಳ ಪ್ರೇಮಿಯಾಗಿದ್ದರು ಎಂದು ತಿಳಿದು ಬಂದಿದೆ. ಅವರ ಬಳಿಯಿದ್ದ ಆಡಿ ಕನ್ವರ್ಟಿಬಲ್ ಕಾರು ಕಳೆದ ವರ್ಷ 58,000 ಡಾಲರ್'ಗಳಿಗೆ ಮಾರಾಟವಾಯಿತು.

Most Read Articles

Kannada
English summary
Princess Diana's Ford Escort Ghia Saloon car to go for auction. Read in Kannada.
Story first published: Sunday, June 13, 2021, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X