ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಭಾರತದ ಹಳ್ಳಿ ಹಾಗೂ ಎರಡನೇ ದರ್ಜೆ ನಗರಗಳಲ್ಲಿ ಸರ್ಕಾರಿ ಬಸ್ಸುಗಳಿಗಿಂತ ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಹೀಗೆ ಸಂಚರಿಸುವ ಖಾಸಗಿ ಬಸ್ಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುತ್ತವೆ.

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಖಾಸಗಿ ಬಸ್ ವೊಂದಕ್ಕೆ ಸಾರಿಗೆ ಇಲಾಖೆ ಭಾರೀ ಪ್ರಮಾಣದ ದಂಡ ವಿಧಿಸಿರುವ ಬಗ್ಗೆ ವರದಿಯಾಗಿದೆ. ಈ ಖಾಸಗಿ ಬಸ್ ಸರಿಯಾದ ದಾಖಲಾತಿ ಹೊಂದಿಲ್ಲದೇ ಇರುವುದು ಹಾಗೂ ಅನುಮತಿ ಪಡೆಯದೇ ಇರುವುದೇ ಭಾರೀ ಪ್ರಮಾಣದ ದಂಡ ವಿಧಿಸಲು ಪ್ರಮುಖ ಕಾರಣವಾಗಿದೆ. ಈ ಬಗ್ಗೆ ನ್ಯೂಸ್ 18 ಇಂಗ್ಲಿಷ್ ವರದಿ ಮಾಡಿದೆ.

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಈ ಘಟನೆ ನಡೆದಿರುವುದು ಒಡಿಶಾದ ಭುವನೇಶ್ವರದಲ್ಲಿ. ಬಸ್ ಸಂಚಾರಕ್ಕೆ ಸಕಾಲದಲ್ಲಿ ಅನುಮತಿ ಪಡೆಯದೇ ಇರುವುದು, ತೆರಿಗೆ ಪಾವತಿಸದಿರುವುದು ಹಾಗೂ ಫಿಟ್‌ನೆಸ್ ಪ್ರಮಾಣಪತ್ರವನ್ನು ಹೊಂದದೇ ಇರುವ ಕಾರಣಕ್ಕೆ ದಂಡ ವಿಧಿಸಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಇದಕ್ಕಾಗಿ ಒಡಿಶಾದ ಆರ್‌ಟಿಒ ಅಧಿಕಾರಿಗಳು ರೂ.5.82 ಲಕ್ಷ ದಂಡ ವಿಧಿಸಿದ್ದಾರೆ. ಜೊತೆಗೆ ಬಸ್ ಅನ್ನು ಮುಟ್ಟುಗೋಲು ಹಾಕಿಕೊಂಡು , ಬಸ್ಸಿನ ರಿಜಿಸ್ಟ್ರೇಷನ್ ಅನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ. ಇದರಿಂದಾಗಿ ಬಸ್ ಮಾಲೀಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಭುವನೇಶ್ವರ ಆರ್‌ಟಿಒ 2 ಅಧಿಕಾರಿಗಳ ಕಾರ್ಯಾಚರಣೆ ವೇಳೆ ಈ ಬಸ್ ಸರಿಯಾದ ದಾಖಲಾತಿಗಳಿಲ್ಲದೆ ಸಂಚರಿಸುತ್ತಿರುವುದು ಕಂಡು ಬಂದಿದೆ. ತೆರಿಗೆ ಪಾವತಿಸದೇ ಇರುವುದಕ್ಕೆ ರೂ.5,66,981 ಹಾಗೂ ಫಿಟ್‌ನೆಸ್ ಪ್ರಮಾಣಪತ್ರವಿಲ್ಲದೇ ಇರುವುದಕ್ಕೆ ರೂ.15 ಸಾವಿರ ದಂಡ ವಿಧಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಭುವನೇಶ್ವರ ಆರ್‌ಟಿಒ 2 ಅಧಿಕಾರಿಗಳು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಭಾರೀ ಪ್ರಮಾಣದ ದಂಡವನ್ನು ಕಟ್ಟ ಬೇಕಿರುವ ಈ ಬಸ್ ಕೊರಪುತ್ - ಭುವನೇಶ್ವರ ಮಾರ್ಗದ ನಡುವೆ ಸಂಚರಿಸುತ್ತದೆ.

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಆರ್‌ಟಿಒ ಅಧಿಕಾರಿಗಳು ಬಸ್ ವಶಪಡಿಸಿಕೊಂಡಿರುವುದರಿಂದ ಈ ಭಾಗದ ಪ್ರಯಾಣಿಕರಿಗೆ ತೊಂದರೆಯಾಗುವುದು ಖಚಿತ. ಕರೋನಾ ವೈರಸ್‌ನಿಂದ ಸ್ಥಗಿತಗೊಂಡಿದ್ದ ಸಾರ್ವಜನಿಕ ಸಾರಿಗೆ ಕ್ಷೇತ್ರವು ನಿಧಾನವಾಗಿ ಚೇತರಿಕೆ ಕಾಣುತ್ತಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಅಷ್ಟರಲ್ಲಿಯೇ ಖಾಸಗಿ ಬಸ್ ವಿರುದ್ಧ ಭಾರೀ ಪ್ರಮಾಣದ ದಂಡ ವಿಧಿಸಲಾಗಿದೆ. ಮುಂಬರುವ ದಿನಗಳಲ್ಲಿ ಯಾವುದೇ ವಾಹನ ಮಾಲೀಕರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದಕ್ಕೆ ಸಾಧ್ಯವಾಗುವುದಿಲ್ಲವೆಂಬುದನ್ನು ಗಮನಿಸಬೇಕು.

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ವಾಹನ ಮಾಲೀಕರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಕೇಂದ್ರ ಸರ್ಕಾರವು ಆನ್ ಲೈನ್ ಪೋರ್ಟಲ್ ತೆರೆದಿರುವುದೇ ಇದಕ್ಕೆ ಕಾರಣ. ಈ ಪೋರ್ಟಲ್ ಚಾಲಕರ ಪರವಾನಗಿ ಸೇರಿದಂತೆ ಎಲ್ಲಾ ರೀತಿಯ ವಾಹನ ಸಂಬಂಧಿತ ದಾಖಲೆಗಳನ್ನು ಡಿಜಿಟಲ್ ಆಗಿ ಸಂಗ್ರಹಿಸುತ್ತದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಈ ಕಾರಣಕ್ಕೆ ವಾಹನ ಸವಾರರು ಪೊಲೀಸರ ವಾಹನ ತಪಾಸಣೆ ವೇಳೆಯಲ್ಲಿ ವಾಹನದ ಮೂಲ ದಾಖಲೆಗಳನ್ನು ಪೊಲೀಸರಿಗೆ ತೋರಿಸುವ ಅಗತ್ಯವಿಲ್ಲ. ಪೊಲೀಸರು ವಾಹನ ಸಂಬಂಧಿತ ದಾಖಲೆಗಳನ್ನು ಆನ್ ಲೈನ್ ನಲ್ಲಿಯೇ ಪರಿಶೀಲಿಸಬಹುದು.

ತೆರಿಗೆ ವಂಚನೆಗೆ ಭಾರೀ ಪ್ರಮಾಣದ ದಂಡ ತೆತ್ತ ಖಾಸಗಿ ಬಸ್

ಈ ಕಾರಣಕ್ಕೆ ಮುಂಬರುವ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಮಾಣವು ಕಡಿಮೆಯಾಗಬಹುದು ಎಂಬ ನಿರೀಕ್ಷೆಗಳಿವೆ.

Most Read Articles
 

Kannada
English summary
Private bus fined heavily for tax evasion. Read in Kannada.
Story first published: Saturday, October 17, 2020, 10:00 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X